ಆಗ “ಕೌನ್ ಬನೇಗಾ ಪಿಎಂ’; ಈಗ “ಕಣ್ಣಾಮುಚ್ಚಾಲೆ’
Team Udayavani, May 1, 2019, 6:04 AM IST
ಚುನಾವಣೆ ಆರಂಭಕ್ಕೂ ಮೊದಲು ವಿಪಕ್ಷಗಳೆಲ್ಲ “ಕೌನ್ ಬನೇಗಾ ಪಿಎಂ'(ಪ್ರಧಾನಿ ಯಾರಾಗುತ್ತಾರೆ) ಎಂಬ ಆಟ ಆಡುತ್ತಿದ್ದರು. ಆದರೆ 4 ಹಂತದ ಮತದಾನ ಮುಗಿದ ಬಳಿಕ ಈಗ ಅವರೆಲ್ಲ “ಹೈಡ್ ಆ್ಯಂಡ್ ಸೀಕ್’ (ಕಣ್ಣಾಮುಚ್ಚಾಲೆ) ಆಡುತ್ತಿದ್ದಾರೆ. ಹೀಗೆಂದು ವಿಪಕ್ಷಗಳನ್ನು ವ್ಯಂಗ್ಯವಾಡಿದ್ದು ಪ್ರಧಾನಿ ನರೇಂದ್ರ ಮೋದಿ.
ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಕೈಗೊಂಡ ಅವರು, 4 ಹಂತದ ಮತದಾನ ಮುಗಿಯುತ್ತಿದ್ದಂತೆ ವಿಪಕ್ಷಗಳ ನಾಯಕರು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಸಂಸತ್‌ನಲ್ಲಿ ವಿಪಕ್ಷ ನಾಯಕನ ಸ್ಥಾನ ಪಡೆಯುವಷ್ಟು ಸಂಖ್ಯಾಬಲ ಹೊಂದಿರದವರು ಕೂಡ ಪ್ರಧಾನಮಂತ್ರಿಯಾಗಲು ಬಟ್ಟೆಗಳನ್ನು ಹೊಲಿದು ಇಟ್ಟುಕೊಳ್ಳುತ್ತಿದ್ದಾರೆ ಎಂದು ಮೋದಿ ಕಟಕಿಯಾಡಿದ್ದಾರೆ. ಈಗಾಗಲೇ ನಡೆದಿರುವ 4 ಹಂತಗಳ ಮತದಾನವು ಎನ್‌ಡಿಎ ಪರ ಅಲೆಯಿರುವುದನ್ನು ಸ್ಪಷ್ಟಪಡಿಸಿದೆ. ಇನ್ನು ನಡೆಯಲಿರುವ ಕೊನೆಯ 3 ಹಂತಗಳು ವಿಪಕ್ಷಗಳ ಸೋಲಿನ ಪ್ರಮಾಣವನ್ನು ಸ್ಪಷ್ಟಪಡಿಸಲಿದೆ ಎಂದೂ ಹೇಳಿದ್ದಾರೆ.
ಬಿಹಾರದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್‌ಗೆ ಟಾಂಗ್ ನೀಡಿದ ಮೋದಿ, “ಜೈಲಿನಲ್ಲಿರುವವರು ಮತ್ತು ಕಂಬಿ ಎಣಿಸಲು ಮುಂದಾಗಿರುವವರಿಗೆ ದಿಲ್ಲಿಯಲ್ಲಿ ಬಲಿಷ್ಠ ಸರಕಾರ ಬೇಕಾಗಿಲ್ಲ. ಅವರಿಗೆ ದುರ್ಬಲ, ಅಸಹಾಯಕ ಸರಕಾರ ಬೇಕು. ಅವರು ಹೇಳಿದಂತೆ ಕೇಳುವವರು ಬೇಕು’ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಸರ್ಜಿಕಲ್ ದಾಳಿ ಬಗ್ಗೆ ಪ್ರಸ್ತಾಪಿಸಿದ ಮೋದಿ, “ಎಲ್ಲಿಗೆ ಬೇಕಿದ್ದರೂ ನುಗ್ಗಿ ಕೊಲ್ಲುತ್ತೇವೆ’ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.