“ಹಣೆ ಮೇಲೆ ಕುಂಕುಮ ಹಚ್ಚಿಕೊಳ್ಳದ ಪ್ರಿಯಾಂಕ’
Team Udayavani, Apr 21, 2019, 3:00 AM IST
ಕಾರಟಗಿ: “ಕಣ್ಣೀರು ಸುರಿಸುವ ಮುಖ್ಯಮಂತ್ರಿಯಿಂದ ದೇಶ ಬದಲಾಗುವುದಿಲ್ಲ. ಬಡ ಹಾಗೂ ಮಧ್ಯಮ ವರ್ಗದವರ ಕಣ್ಣೀರು ಒರೆಸುವ ಪ್ರಧಾನಿ ನರೇಂದ್ರ ಮೋದಿಯಂತಹ ವ್ಯಕ್ತಿ ಮತ್ತೂಮ್ಮೆ ಪ್ರಧಾನಿಯಾಗಬೇಕು ಎನ್ನುತ್ತಾರೆ ದೇಶದ ಜನತೆ’ ಎಂದು ಬಿಜೆಪಿ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.
ಬಿಜೆಪಿ “ಯುವಶಕ್ತಿ ಜಾಗೃತಿ ಸಭೆ’ಯಲ್ಲಿ ಮಾತನಾಡಿ, ಮೋದಿ ದೇಶಕ್ಕಾಗಿ ಕುಟುಂಬ ದೂರವಿಟ್ಟಿದ್ದಾರೆ. ಆದರೆ ಕಾಂಗ್ರೆಸ್, ಜೆಡಿಎಸ್‌ನವರು ಕುಟುಂಬಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಪಂಚೆ ಕಟ್ಟಿಕೊಂಡು ದೇವಸ್ಥಾನಕ್ಕೆ ಹೋದರೆ ಜೋಕರ್ ಹೋದಂಗೆ ಕಾಣಿಸುತ್ತದೆ ಎಂದರು.
ಕೆಲ ದಿನಗಳ ಹಿಂದಿನ ಫೋಟೋ ನೋಡಿದಾಗ ಪ್ರಿಯಂಕಾ ಗಾಂಧಿ ಗಂಡ ಇದ್ದರೂ ಕೂಡ ಹಣೆ ಮೇಲೆ ಕುಂಕುಮ ಹಚ್ಚಿಕೊಂಡಿರಲಿಲ್ಲ. ಚುನಾವಣೆ ಪ್ರಚಾರಕ್ಕಾಗಿ ಬಂದಾಗ ಹಣೆ ಮೇಲೆ ತಿಲಕ ಕಾಣುತ್ತಿದೆ. ಅಕ್ಕ, ತಮ್ಮ ಚುನಾವಣಾ ಭಕ್ತರು, ಮೋದಿ ಶ್ರೇಷ್ಠ ದೇಶಭಕ್ತ.
ಅಂತಾರಾಷ್ಟ್ರೀಯ ಬಾಂಧವ್ಯ ಬೆಳೆಸುವಲ್ಲಿ ಮೋದಿ ಕೊಡುಗೆ ಅಪಾರ. 2014ರಲ್ಲಿ ಅಧಿ ಕಾರಕ್ಕೆ ಬಂದ ನರೇಂದ್ರ ಮೋದಿ ಪ್ರಧಾನಿಯಾಗಿ ಹೇಗೆ ಆಡಳಿತ ನಡೆಸಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಜಗತ್ತು ಕೂಡ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಬಯಸುತ್ತಿದೆ ಎಂದರು.
ಬಿಜೆಪಿಯವು ಏನೋ ಹೇಳ್ತಾವೆ, ಸಂತೋಷ್‌ಗೆ ಬುದ್ಧಿ ಇಲ್ಲ. ಸೋಲಿನ ಹತಾಶೆಯಿಂದ ಏನೇನೊ ಮಾತಾಡ್ತಾವೆ. ಕರ್ನಾಟಕದಲ್ಲಿ ಅವರು ಸಿಂಗಲ್ ಡಿಜಿಟ್ ಅಷ್ಟೇ, ಡಬಲ್ ಡಿಜಿಟ್ ದಾಟಲ್ಲ.
-ಸಿದ್ದರಾಮಯ್ಯ, ಮಾಜಿ ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
MUST WATCH
ಹೊಸ ಸೇರ್ಪಡೆ
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.