ಸಂಘಕ್ಕಿಂತ ಎಡರಂಗ ಉತ್ತಮ ಎಂದ ರಾಹುಲ್!
Team Udayavani, Apr 20, 2019, 6:00 AM IST
ದಿನದಿಂದ ದಿನಕ್ಕೆ ತೀವ್ರ ಕುತೂಹಲ ಕೆರಳಿಸುತ್ತಿರುವ ವಯನಾಡ್ ಲೋಕಸಭಾ ಕ್ಷೇತ್ರದ ಚುನಾವಣೆಗೆ ಇನ್ನು 3 ದಿನ ಅಷ್ಟೇ ಬಾಕಿ ಇದೆ. ಮೂರನೇ ಹಂತದ ಚುನಾವಣೆಯಲ್ಲಿ ಕೇರಳದ ವಯ ನಾಡ್ ಮಾತ್ರ ಹೈ ವೋಲ್ಟೆಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ.
ವಿಶೇಷವಾಗಿ ವಯನಾಡ್ ಚುನಾ ವಣೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಭರ್ಜರಿ ಯಾಗಿಯೇ ತಯಾ ರಾಗಿ ದ್ಧಾರೆ. ಎರಡು ದಿನಗಳ ಕಾಲ ವಯನಾಡಿನಲ್ಲೇ ಪ್ರಚಾರ ನಡೆಸಿ, ಪ್ರಾದೇಶಿಕ ನಾಯಕರ ಜತೆ ಚರ್ಚೆ ಯಲ್ಲಿ ಭಾಗಿ ಯಾದರು. ಈ ಭೇಟಿಯಲ್ಲಿ ಸರ್ವ ಧರ್ಮೀಯರ ಶ್ರದ್ಧಾ ಕೇಂದ್ರಗಳನ್ನು ಸಂದರ್ಶಿಸಿ ದ್ದಾರೆ. ಕೇರಳದ ಜೀವನ ಶೈಲಿಯಲ್ಲೇ ತಮ್ಮ ಎರಡು ದಿನ ಗಳನ್ನು ವ್ಯಯಿ ಸಿರುವ ರಾಹುಲ್ ಉತ್ತರ ಮತ್ತು ದಕ್ಷಿಣ ಭಾರತದ ಜೀವನ ಶೈಲಿ ಯನ್ನು ಸ್ಪಷ್ಟವಾಗಿ ಅರಿತು ಕೊಳ್ಳಲು ಪ್ರಯತ್ನಿ ಸಿದ್ದಾರೆ. ರಾಹುಲ್ ವಯನಾಡ್ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದರಿಂದ ರಾಜ್ಯದ ಇತರ ಲೋಕಸಭಾ ಕ್ಷೇತ್ರಗಳಲ್ಲಿ ಮತದ ಪ್ರಮಾಣವನ್ನು ಹೆಚ್ಚಿಸಲಿದೆ.
ರಾಹುಲ್ ತಂತ್ರಗಾರಿಕೆ
ಕೇರಳದಲ್ಲಿ ರಾಹುಲ್ ಗಾಂಧಿ ಓರ್ವ ಅನು ಭವಿ ರಾಜ ಕಾರಣಿಯಾಗಿ ಬದಲಾಗಿದ್ದಾರೆ. ತಮ್ಮ ಹಾಗೂ ಪಕ್ಷದ ಗೆಲುವಿಗಾಗಿ ರಾಜಕೀಯ ತಂತ್ರ ಗಾರಿಕೆಯ ಮೊರೆ ಹೋಗಿದ್ದು, ದೇವರನಾಡಿನಲ್ಲಿ ಎಚ್ಚರಿಕೆ ಹೆಜ್ಜೆ ಯನ್ನಿಡುತ್ತಿದ್ದಾರೆ. ಎಲ್ಲೂ ಬಿಜೆಪಿಗೆ ಅನುಕೂಲವಾಗದ ರೀತಿಯಲ್ಲಿ ಪ್ರಚಾರ ನಡೆಸುತ್ತಿರುವ ರಾಹುಲ್, ಮುಂಬರುವ ಚುನಾ ವಣೆ ಫಲಿತಾಂಶವನ್ನು ಗಮನದಲ್ಲಿ ಟ್ಟುಕೊಂಡು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ತಮ್ಮ ಎಲ್ಲಾ ಪ್ರಚಾರ ಸಭೆಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾ ರವನ್ನು ಟೀಕಿಸಿ, ಸಂಘ ಪರಿವಾರಕ್ಕಿಂತ ಎಡರಂಗ ಉತ್ತಮ ಎಂದು ಹೇಳಿದ್ದಾರೆ. ತಮ್ಮ ರ್ಯಾಲಿ ಯುದ್ದಕ್ಕೂ ಅಪ್ಪಿ ತಪ್ಪಿಯೂ ಎಡರಂಗದ ಕುರಿತು ಆಕ್ರೋಶದ ಮಾತುಗಳನ್ನು ಆಡಲಿಲ್ಲ.
ಎಡದತ್ತ ಸಾಫ್ಟ್
ರಾಜ್ಯದಲ್ಲಿ ತಮ್ಮ ಪ್ರಬಲ ಪ್ರತಿಸ್ಪರ್ಧಿ ಸಿಪಿಐ ಎಂಬ ಅರಿವಿದ್ದರೂ ಅವರು ಬಿಜೆಪಿಯನ್ನೇ ಹೆಚ್ಚು ಗುರಿ
ಮಾಡಿದ್ದು, ರಾಷ್ಟ್ರ ಮಟ್ಟದಲ್ಲೇ ಚರ್ಚೆ ಯಾಗುತ್ತಿದೆ. ಈ ಮೂಲಕ ಎಡರಂಗದ ಒಂದಷ್ಟು ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಿಸಿದ್ದಾರೆ. ರಾಹುಲ್‌ನ ಈ ತಂತ್ರಗಾರಿಕೆ ಸಿಪಿಐನ ರಾಜ್ಯ ನಾಯಕರು ಮಾತ್ರವಲ್ಲದೇ ಕೇಂದ್ರ ನಾಯಕರೂ ತಲೆಕೆಡಿ ಸಿಕೊಳ್ಳುವಂತಾಗಿದೆ. ಇದಕ್ಕಾಗಿ ಸಿಪಿಐಎಂ ವರಿಷ್ಠ ನೇತಾರ ಸೀತಾರಂ ಯೆಚೂರಿ, ರಾಹುಲ್ ಸ್ಪರ್ಧೆ ಬಿಜೆಪಿಯ ವಿರುದ್ಧವೋ? ಅಥವ ಎಡ ರಂಗದ ವಿರುದ್ಧವೋ? ಎಂದು ಬಹಿರಂಗ ಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ವಯನಾಡ್ ಮಾತ್ರವಲ್ಲದೇ ರಾಜ್ಯದ ಇತರ ಲೋಕಸಭಾ ಕ್ಷೇತ್ರಗಳಲ್ಲಿಯೂ ರಾಹುಲ್ ಸಿಪಿಐ ಅನ್ನು ನೇರವಾಗಿ ಟಾಗೇìಟ್ ಮಾಡಿಲ್ಲ.
ಎಲ್‌ಡಿಎಫ್ಗೆ ಮತ ಕಳೆದುಕೊಳ್ಳುವ ಆತಂಕ
ರಾಜ್ಯ ಆಡಳಿತಾರೂಢ ಸಿಪಿಐ ಅಂತೂ ರಾಹುಲ್ ಸ್ಪರ್ಧೆಯಿಂದ ಮೊದಲೇ ತಲ್ಲಣಕ್ಕೆ ಒಳಗಾಗಿದೆ. ಇನ್ನು ರ್ಯಾಲಿಯುದ್ದಕೂ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ಮಾತ್ರ ದೂಷಿಸಿ ಎಡರಂಗದತ್ತ ಮೃದು ಧೋರಣೆ ತಳೆದಿರುವುದನ್ನು ನೋಡಿ ಸಿಪಿಐ ನಾಯಕರು ದಂಗಾಗಿ ಹೋಗಿದ್ದಾರೆ. ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿದ್ದರೂ, ಮತಗಳು ಕಾಂಗ್ರೆಸ್ ಪರವಾಗಿ ಚಲಾವಣೆಗೊಳ್ಳುವ ಆತಂಕ ನಾಯಕರಲ್ಲಿ ಮನೆಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.