ರಾಹುಲ್‌ಗೆ ಗೆಲ್ಲಲೇ ಬೇಕಾದ ಒತ್ತಡ!


Team Udayavani, Apr 13, 2019, 6:00 AM IST

RG

ವಯನಾಡ್‌ನ‌ಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ಸ್ಪರ್ಧೆ ಕೇರಳದಲ್ಲಿ ಕಾಂಗ್ರೆಸಿಗರಿಗೆ ಹೊಸ ಹುಮ್ಮಸ್ಸು ತುಂಬಿದಂತೆ, ದಕ್ಷಿಣ ಭಾರತದಲ್ಲೂ ಗರಿಷ್ಠ ಸಂಖ್ಯೆಯಲ್ಲಿ ಗೆಲುವು ಅತೀವ ಅಗತ್ಯವಾಗಿದೆ.

ಒಂದೊಮ್ಮೆ ದ. ಭಾರತ ಎಂದರೆ ಕಾಂಗ್ರೆಸ್‌ ಪಾಲಿಗೆ ಓಟ್‌ ಬ್ಯಾಂಕ್‌ ಎಂಬಂತಿದ್ದು ಆದರೀಗ ಅದು ಪ್ರಾದೇಶಿಕ ಪಕ್ಷಗಳು, ಬಿಜೆಪಿಯ ಬೇರು ತಳಮಟ್ಟದಲ್ಲಿ ವಿಸ್ತರಿ ಸುತ್ತಿರುವುದರಿಂದ ಶಿಥಿಲ ಗೊಳ್ಳುವತ್ತ ಸಾಗಿದೆ.

ಗೆಲ್ಲಲೇಬೇಕು
ಕೇಂದ್ರದಲ್ಲಿ ಪುನರ್‌ಸ್ಥಾಪನೆಯಾಗಬೇಕು ಮತ್ತು ಕಾಂಗ್ರೆಸ್‌ ತಳ ಮಟ್ಟದಲ್ಲಿ ಬಲವಾಗಲು ವಯನಾಡ್‌ನ‌ಲ್ಲಿ ರಾಹುಲ್‌ ಅವರ ಗೆಲುವು ಎಷ್ಟು ಅಗತ್ಯವಿದೆಯೋ ಅಷ್ಟೇ ಅಗತ್ಯ ದ.ಭಾರತದಲ್ಲಿ ಪಕ್ಷದ ಸಂಖ್ಯಾವೃದ್ಧಿಯೂ ಅಗತ್ಯವಿದೆ.
ಕರ್ನಾಟಕದಲ್ಲಿ ಮತ್ತು ಕೇರಳ ದಲ್ಲಿ ಕಾಂಗ್ರೆಸ್‌ ಸಂಘಟನೆ ಒಂದಷ್ಟು ಸಕ್ರಿಯವಾಗಿದ್ದರೆ, ಬೇರಾವುದೇ ರಾಜ್ಯಗಳಲ್ಲಿ ಅದರ ಪರಿಸ್ಥಿತಿ ಉತ್ತಮವಾಗಿಲ್ಲ. ತನ್ನ ಮರು ಸ್ಥಾಪನೆಗೆ ಹೆಣಗಾಡುವಂತೆ ಆಗಿದೆ. ತಳ ಮಟ್ಟದ ಕಾರ್ಯಕರ್ತರು ಬೇರೆ ಪಕ್ಷಗಳಿಗೆ ವಲಸೆ ಹೋಗಿದ್ದರೆ, ಹಿರಿಯ ಮುಖಂಡರು ಹೊಸ ತಲೆ ಮಾರಿನ ಯುವಕರನ್ನು ಸೆಳೆಯು ವಲ್ಲಿ ವಿಫ‌ಲವಾಗಿದ್ದಾರೆ.

1975ರಲ್ಲಿ ಇಂದಿರಾ ಅವರಿಗೆ ಚಿಕ್ಕಮಗಳೂರು ಮರುಹುಟ್ಟು ನೀಡಿತ್ತು. ಇಂದು ಕಾಂಗ್ರೆಸ್‌ ರಾಜ್ಯ ದಲ್ಲಿ ಬಲಗೊಳ್ಳಲೂ ಕಾರಣ ವಾಗಿತ್ತು. ಹಾಗೆಯೇ 1999ರ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್‌ ಅವರನ್ನು ಮಣಿಸಿ ಸೋನಿಯಾ ಗಾಂಧಿಯವರು ಬಳ್ಳಾರಿಯಲ್ಲಿ ವಿಜಯ ಪತಾಕೆ ಹಾರಿಸಿದ್ದರು.

543 ಲೋಕಸಭಾ ಸ್ಥಾನಗಳಲ್ಲಿ ದ.ಭಾರತದ ಪಾಲು 130. ಇದರಲ್ಲಿ ಕಾಂಗ್ರೆಸ್‌ ಗರಿಷ್ಠ ಮಟ್ಟದಲ್ಲಿ ಸ್ಪರ್ಧಿಸುತ್ತ ಬಂದರೂ, 2014ರಲ್ಲಿ ಅದು 19 ಸೀಟುಗಳಲ್ಲಿ ಮಾತ್ರ
ಗೆಲ್ಲಲು ಶಕ್ತವಾಗಿತ್ತು. 2019ರಲ್ಲಿ ತಮಿಳುನಾಡು ಮತ್ತು ಪುದುಚೇರಿ ಗಳಲ್ಲಿ 10 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಕರ್ನಾಟಕದಲ್ಲಿ 20 ಮತ್ತು ಕೇರಳದಲ್ಲಿ 15 ಸ್ಥಾನಗಳಲ್ಲಿ ಅದು ಸ್ಪರ್ಧೆ ನಡೆಸುತ್ತಿದೆ.

ತಿಂಗಳಿಂದ ಪ್ಲಾನ್‌
ರಾಜಕೀಯ ಮೂಲ ಗಳ ಪ್ರಕಾರ ವಯನಾಡ್‌ನ‌ಲ್ಲಿ ರಾಹುಲ್‌ ಅವರ ಸ್ಪರ್ಧೆಯ ಆಲೋ ಚನೆ ಇಂದು ನಿನ್ನೆಯದ್ದಲ್ಲ. ಅಲ್ಲಿ ಸ್ಪರ್ಧೆ ಮೂಲಕ ದ.ಭಾರತದಲ್ಲಿ ಕಾಂಗ್ರೆಸ್‌ ಪರ ಹೊಸ ಅಲೆ ಸೃಷ್ಟಿ ಮತ್ತು ಹಿಂದಿನ ವೋಟ್‌ಬ್ಯಾಂಕ್‌ ಪ್ರದೇಶಗಳನ್ನು ಗಟ್ಟಿಗೊಳಿಸುವ ಆಲೋಚನೆ ಇತ್ತು. ಇದಕ್ಕಾಗಿ ಕಾಂಗ್ರೆಸ್‌ನ ಅತ್ಯುತ್ತನ್ನತ ವಲಯ ಮೂರ್‍ನಾಲ್ಕು ತಿಂಗಳ ಹಿಂದಿನಿಂದಲೇ ಯೋಜನೆ ರೂಪಿಸಿತ್ತು.

ರಾಹುಲ್‌ ಅವರಿಗೆ ಒಂದು “ಪ್ರಬಲ’ ಮತ್ತು “ಸುರಕ್ಷಿತ’ ಕ್ಷೇತ್ರ ವನ್ನು ನಿಗದಿಗೊಳಿಸಲಾಗಿತ್ತು. ಈ ಮೂಲಕ ಎಡಪಕ್ಷಗಳತ್ತ ಹೊರಳಿದ ಮತದಾರರನ್ನು ಮತ್ತೆ ಸೆಳೆಯುವುದು ಮತ್ತು ಶಬರಿಮಲೆ ವಿವಾದದಿಂದ ಲಾಭ ಪಡೆಯುವ ಹವಣಿಕೆಯಲ್ಲಿರುವ ಬಿಜೆಪಿ ಪ್ಲಾನ್‌ ಮಣಿಸುವುದು ಕಾಂಗ್ರೆಸ್‌ ಲೆಕ್ಕಾಚಾರವಾಗಿತ್ತು.

ರಾಹುಲ್‌, ರಾಹುಲ್‌
ಮತ್ತು ರಾಹುಲ್‌ ಮಧ್ಯೆ ಸ್ಪರ್ಧೆ!
ವಯನಾಡ್‌ ಲೋಕಸಭಾ ಕ್ಷೇತ್ರದಲ್ಲೀಗ ರಾಹುಲ್‌ ವರ್ಸಸ್‌ ರಾಹುಲ್‌, ರಾಹುಲ್‌ರ ಮಧ್ಯೆ ಸ್ಪರ್ಧೆ ಎಂಬಂತಾಗಿದೆ. ರಾಹುಲ್‌ ಅವರನ್ನು ಮಣಿಸಲು ವಿವಿಧ ಪಕ್ಷಗಳು, ಪಕ್ಷೇತರರು ಮುಗಿಬಿದ್ದಿದ್ದು, ಅದರಂತೆ ಇನ್ನಿಬ್ಬರು ರಾಹುಲ್‌ ಗಾಂಧಿಗಳು ಕಣಕ್ಕಿಳಿದಿದ್ದಾರೆ. ರಾಹುಲ್‌ ವಿರುದ್ಧ ಸ್ಪರ್ಧಿಸುವವರಲ್ಲಿ 33 ವರ್ಷದ ಕೊಟ್ಟಾಯಂ ಮೂಲದ ಕೆ.ಇ. ರಾಹುಲ್‌ ಗಾಂಧಿ ಮತ್ತು ಕೊಯಮತ್ತೂರು ಮೂಲದ ಅಖೀಲ ಭಾರತ ಮಕ್ಕಳ್‌ ಕಳಗಂ ಪಕ್ಷದ, 30 ವಯಸ್ಸಿನ ಕೆ.ರಾಹುಲ್‌ ಗಾಂಧಿ, ಇನ್ನೊಬ್ಬರು ಕೆ.ಎಂ. ಶಿವಪ್ರಸಾದ್‌ ಗಾಂಧಿ ಎಂಬವರೂ ಸ್ಪರ್ಧಿಸಿದ್ದಾರೆ. ಕೆ.ಇ.ರಾಹುಲ್‌ ಗಾಂಧಿ ತಮ್ಮ ಅಫಿಡವಿಟ್‌ನಲ್ಲಿ ಹೇಳಿದಂತೆ ಅವರು ಎಂಫಿಲ್‌ ಡಿಗ್ರಿ ಪಡೆದಿದ್ದಾರೆ. ಅವರ ಬಳಿ ಪ್ಯಾನ್‌ ಇಲ್ಲ. ಅವರ ಪತ್ನಿ ಗೃಹಿಣಿಯಾಗಿದ್ದು, ಅವರ ಬಳಿ ಪ್ಯಾನ್‌ ಇದೆ ಎಂದು ಹೇಳಿದ್ದಾರೆ.

ಹಾಗೆಯೇ ಕೆ.ರಾಹುಲ್‌ ಗಾಂಧಿಯವರು ಹೇಳಿದ ಪ್ರಕಾರ ಅವರು ಪತ್ರಕರ್ತರಂತೆ. ಅವರ ಪತ್ನಿ ಡೆಂಟಲ್‌ ಟೆಕ್ನೀಶಿಯನ್‌ ಆಗಿದ್ದಾರೆ. ಅವರ ಒಟ್ಟು ಆದಾಯ 1.99 ಲಕ್ಷ ರೂ. ಅವರ ಪತ್ನಿ ಆದಾಯ 2 ಲಕ್ಷ ರೂ. ಆಗಿದೆ. ಶಿವಪ್ರಸಾದ್‌ ಗಾಂಧಿ ಸಂಸ್ಕೃತ ಅಧ್ಯಾಪಕರಾಗಿದ್ದು, ಅವರ ಪತ್ನಿ ಕಂಪ್ಯೂಟರ್‌ ಆಪರೇಟರ್‌ ಆಗಿದ್ದಾರೆ.

ಟಾಪ್ ನ್ಯೂಸ್

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.