ಕೈಗೆ ಬಿಸಿ ತುಪ್ಪವಾದ ಬಂಡಾಯ
ಜೆಡಿಎಸ್ ವಿರುದ್ಧ ತಿರುಗಿಬಿದ್ದ ನಾಯಕರು
Team Udayavani, Mar 27, 2019, 7:28 AM IST
ಬೆಂಗಳೂರು: “ಪಕ್ಷದಲ್ಲಿ ಯಾವುದೇ ಕಾರಣಕ್ಕೂ ಅಶಿಸ್ತು ಸಹಿಸುವುದಿಲ್ಲ’ ಎಂದು ಗಂಭೀರ ಎಚ್ಚರಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಪಕ್ಷದ
ನಾಯಕರಿಗೆ ಸದ್ಯದ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಯಿಂದ ಉಂಟಾಗಿರುವ ಬಂಡಾಯ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡ ಸಂದರ್ಭದಲ್ಲಿ ಹಾಗೂ ದೇವೇಗೌಡರು ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡಿದ ಪಕ್ಷದ ಮುಖಂಡರಿಗೆ ತಕ್ಷಣವೇ ನೋಟಿಸ್ ನೀಡಲಾಗಿತ್ತು. ಅಲ್ಲದೇ ಅವರಿಂದ ವಿವರಣೆಯನ್ನೂ ಪಡೆದು ಮತ್ತೆ ಮೈತ್ರಿ ಸರ್ಕಾರದ ವಿರುದಟಛಿ ಹೇಳಿಕೆ ನೀಡದಂತೆ ಕೆಪಿಸಿಸಿ ವತಿಯಿಂದ ಎಚ್ಚರಿಕೆಯನ್ನೂ ನೀಡಲಾಗಿತ್ತು.
ಈಗ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಯಿಂದ ಪಕ್ಷದ ನಾಯಕರ ವಿರುದಟಛಿ ಮುನಿಸಿಕೊಂಡಿರುವ ಮಂಡ್ಯ, ಹಾಸನ, ತುಮಕೂರು ಕ್ಷೇತ್ರಗಳಲ್ಲಿ ಹಿರಿಯ
ನಾಯಕರೇ ಜೆಡಿಎಸ್ ವಿರುದಟಛಿ ಬಹಿರಂಗವಾಗಿ ಹೇಳಿಕೆನೀಡುತ್ತಿರು ವುದಲ್ಲದೇ ಜೆಡಿಎಸ್ ಅಭ್ಯರ್ಥಿ ವಿರುದ್ಧ ಬಂಡಾಯ ಅಭ್ಯರ್ಥಿಗಳಾಗಿಯೂ ಸ್ಪರ್ಧೆಗೆ ಮುಂದಾಗಿ
ದ್ದಾರೆ. ಪಕ್ಷದಲ್ಲಿನ ಆಂತರಿಕ ಬಂಡಾಯ ಪಕ್ಷದ ಮೇಲಿನ ವಿರೋಧಕ್ಕಿಂತ ಜೆಡಿಎಸ್ ಮೇಲಿನ ವಿರೋಧಕ್ಕಾಗಿ ಅಸಮಾಧಾನ ಹೊರ ಹಾಕುತ್ತಿರುವುದರಿಂದ ಶಿಸ್ತು ಕ್ರಮ
ಕೈಗೊಂಡರೆ, ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಸ್ಥಳೀಯವಾಗಿ ಹೊಡೆತ ಬೀಳುತ್ತದೆಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ಅಸಹಾಯಕರಾಗಿದ್ದಾರೆ.
ಮಂಡ್ಯದಲ್ಲಿ ಮಾಜಿ ಶಾಸಕರು ಹಾಗೂ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದವರು ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿನಿಖೀಲ್ ಕುಮಾರ್ ವಿರುದಟಛಿ ಚಟುವಟಿಕೆ ನಡೆಸುತ್ತಿದ್ದರೂ, ಅವರನ್ನು ಕರೆದು ಮನವೊಲಿಸುವ ಪ್ರಯತ್ನ
ಮಾಡುತ್ತಿರುವ ರಾಜ್ಯ ನಾಯಕರ ಮಾತಿಗೆ ಬೆಲೆ ಕೊಡುತ್ತಿಲ್ಲವಾದರೂ, ಸದ್ಯದ ಸ್ಥಿತಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗದ ಸ್ಥಿತಿ ರಾಜ್ಯ ನಾಯಕರಿಗೆ ಉಂಟಾಗಿದೆ.
ಹಾಸನದಲ್ಲಿಯೂ ವಿರೋಧ ವ್ಯಕ್ತಪಡಿಸುವ ನಾಯಕರನ್ನು ಸ್ವತಃ ಸಿದ್ದರಾಮಯ್ಯ ಅವರೇ ಕರೆದು ಮನವೊಲಿಸುವ ಕಸರತ್ತು ನಡೆಸಿದ್ದಾರೆ. ತುಮಕೂರಿನಲ್ಲಿ
ಹಾಲಿ ಸಂಸದ ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ಕೆ.ಎನ್. ರಾಜಣ್ಣ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಕೂಡ ಸಲ್ಲಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳು ಇರುವಲ್ಲಿ ಬಂಡಾಯ
ಕಾಂಗ್ರೆಸ್‌ನಲ್ಲಿ ಬಂಡಾಯ ಹೆಚ್ಚಾಗಿರುವುದು ಬಹುತೇಕ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿದ ಕ್ಷೇತ್ರಗಳಲ್ಲಿ. ಆ ಕ್ಷೇತ್ರಗಳಲ್ಲಿ ಬಂಡಾಯ ಸಾರಿರುವ ನಾಯಕರು ಕಾಂಗ್ರೆಸ್
ವಿರೋಧಿ ಚಟುವಟಿಕೆ ಮಾಡದಿರುವುದರಿಂದ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಪಕ್ಷಕ್ಕೆ ನಷ್ಟ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ. ಆದರೆ,
ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಜೆಡಿಎಸ್ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸದಿದ್ದರೂ, ಪಕ್ಷದ ಆದೇಶ ಉಲ್ಲಂಘನೆ ಆರೋಪದಡಿ ಕ್ರಮ ಕೈಗೊಳ್ಳದಿದ್ದರೆ, ಜೆಡಿಎಸ್‌ನವರ ವಕ್ರದೃಷ್ಟಿಗೆ ಕಾರಣವಾಗಬೇಕಾಗುತ್ತದೆ ಎಂಬ
ಕಾರಣಕ್ಕೆ ಪಕ್ಷದ ನಾಯಕರು ಸ್ಥಳೀಯ ಮಟ್ಟದ ಕಾರ್ಯಕರ್ತರನ್ನು ಉಚ್ಚಾಟನೆ ಮಾಡುವ ಮೂಲಕ ಜೆಡಿಎಸ್‌ನವರನ್ನು ಸಮಾಧಾನ ಪಡಿಸುವ ಕಸರತ್ತು ನಡೆಸಿದ್ದಾರೆ ಎನ್ನಲಾಗುತ್ತಿದೆ.
ಮನವೊಲಿಕೆ ಯತ್ನಕ್ಕೆ ಆದ್ಯತೆ
ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳು ಬಹಿರಂಗವಾಗಿಯೇ
ನಡೆಯುತ್ತಿದ್ದರೂ, ಬಂಡಾಯ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಬಂಡಾಯದ
ಧ್ವನಿ ಎತ್ತುವವರ ವಿರುದಟಛಿ ನೋಟಿಸ್ ನೀಡಿ ಶಿಸ್ತು ಕ್ರಮ ಕೈಗೊಳ್ಳುವ ಬದಲು
ಮನವೊಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಚುನಾವಣೆ ಮುಗಿಯುವವರೆಗೂ ಬಂಡಾಯಗಾರರ ವಿರುದ್ಧ ಕ್ರಮಕ್ಕಿಂತ ಸಮಾಧಾನ ಪಡಿಸುವುದೇ ಉತ್ತಮ ಎಂಬ ಕಾರಣಕ್ಕೆ ಪಕ್ಷದ ನಾಯಕರು ಮನವೊಲಿಕೆ ಕಸರತ್ತಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆಂದು ತಿಳಿದು ಬಂದಿದೆ.
ದೇವೇಗೌಡರು ಚೆನ್ನಮ್ಮ ಅವರನ್ನೇ ಚುನಾವಣಾ ಕಣಕ್ಕಿಳಿಸಬಹುದಿತ್ತು’
ಬೆಂಗಳೂರು: ತುಮಕೂರು ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರು ನಾಮಪತ್ರ ಸಲ್ಲಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ಮನವೊಲಿಕೆ ಪ್ರಯತ್ನ ನಡೆಸಿದರು.
ದಿನೇಶ್ ಗುಂಡೂರಾವ್ ಭೇಟಿ ನಂತರ ಮಾತ ನಾಡಿದ ಕೆ.ಎನ್. ರಾಜಣ್ಣ, “ಮುದ್ದ
ಹನುಮೇಗೌಡರು ಹಾಲಿ ಸಂಸದರಾಗಿದ್ದರೂ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ. ಅವರ ಮನ ನೋಯಿಸಿದ್ದು ಪಾಪದ ಕೆಲಸ. ತುಮಕೂರಿನಲ್ಲಿ ದೊಡ್ಡ ಮೀನು ಹೋಗಿ ಚಿಕ್ಕ ಮೀನನ್ನು ನುಂಗಿದಂತಾಗಿದೆ’ ಎಂದರು. “ದೇವೇಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದರು. ಅದನ್ನು ಬಿಟ್ಟು ತುಮಕೂರಿಗೆ ಬಂದು ಸ್ಪರ್ಧಿಸಿದ್ದಾರೆ. ದೇವೇಗೌಡರು ತಾವು ನಿಲ್ಲುವ ಬದಲು ತಮ್ಮ ಪತ್ನಿ ಚೆನ್ನಮ್ಮ
ಅವರನ್ನು ಕಣಕ್ಕಿಳಿಸಬಹುದಿತ್ತು. ಪಾಪ ಅವರು ಎಲ್ಲರನ್ನೂ ಸಲಹಿ ಸೇವೆ
ಮಾಡಿದ್ದಾರೆ. ಅವರು ಸ್ಪರ್ಧಿಸಿದ್ದರೆ ನಾವು ಅವರ ಪರ ಕೆಲಸ ಮಾಡುತ್ತಿದ್ದೆವು. ಮುದ್ದ
ಹನುಮೇ ಗೌಡರ ಮನನೋಯಿಸಿದ್ದೇಕೆ? ಅವರು ಒಕ್ಕಲಿಗರಲ್ಲವೇ’ ಎಂದು
ಪ್ರಶ್ನಿಸಿದರು. ಮುದ್ದ ಹನುಮೇಗೌಡರನ್ನೂ ಮಾತುಕತೆಗೆ ಕರೆದಿದ್ದರು. ಅವರು ಪಾಲ್ಗೊಂಡಿಲ್ಲ. ಅವರು ನಾಮಪತ್ರ ವಾಪಸ್ ಪಡೆದರೆ, ನಾನೂ ವಾಪಸ್ ಪಡೆಯುತ್ತೇನೆ ಎಂದು ರಾಜಣ್ಣ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.