ಹಾವೇರಿ ಕ್ಷೇತ್ರದ ತಿರಸ್ಕೃತ ಮತ 1.80 ಲಕ್ಷ!
Team Udayavani, Mar 22, 2019, 2:25 AM IST
ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ನಡೆದ 16 ಲೋಕ ಸಭಾ ಚುನಾವಣೆಗಳನ್ನು ಅವಲೋಕಿಸಿ ದರೆ ಕ್ಷೇತ್ರದಲ್ಲಿ ಒಟ್ಟು 1.80 ಲಕ್ಷಕ್ಕೂ ಅ ಧಿಕ ಮತಗಳು ತಿರಸ್ಕೃತಗೊಂಡಿವೆ. ಇದು ಅಚ್ಚರಿ ಎನಿಸಿದರೂ ಸತ್ಯ. ಲೋಕಸಭಾ ಚುನಾವಣೆಯ ದಾಖಲೀಕೃತ ಕಡತಗಳು ಈ ಮಾಹಿತಿಯನ್ನು ಸ್ಪಷ್ಟಪಡಿಸುತ್ತಿವೆ. ಮತಪತ್ರಗಳನ್ನು ತೆಗೆದು, ಮತಯಂತ್ರಗಳು ಬಂದಾಗಿ ನಿಂದ ತಿರಸ್ಕೃತ ಮತಗಳು ಕಡಿಮೆಯಾ ಗಿವೆ. ಮತದಾನದ ಬಗೆಗಿನ ಜಾಗೃತಿ ಜತೆಗೆ, ಮತದಾನ ಮಾಡುವ ಬಗೆಗಿನ ಜಾಗೃತಿ ಕ್ಷೇತ್ರದಲ್ಲಿ ಈ ಹಿಂದೆ ಬಹಳ ಕಡಿಮೆ ಇತ್ತು.
2004ಕ್ಕಿಂತ ಮೊದಲು ಮತದಾನವನ್ನು ಮತಪತ್ರದಲ್ಲಿ ಗುರುತು ಹಾಕುವ ಮೂಲಕ ಮಾಡಲಾ ಗುತ್ತಿತ್ತು. ಜನರು ಎರಡೆರಡು ಅಭ್ಯರ್ಥಿಗಳ ಎದುರು ಗುರುತು ಹಾಕುವುದು, ಎರಡು ಅಭ್ಯರ್ಥಿಗಳ ಹೆಸರಿನ ನಡುವೆ ಗುರುತು ಹಾಕುವುದು, ಕೆಲವೊಮ್ಮೆ ಗುರುತು ಹಾಕದೆ ಚೀಟಿ ಮಡಚಿ ಡಬ್ಬಿಗೆ ಹಾಕುವುದು, ಕೆಲವು ಬಾರಿ ಇಂಕ್ ಹಚ್ಚಿಕೊಳ್ಳದೆ ಗುರುತು ಹಾಕುವುದು… ಸೇರಿದಂತೆ ನಾನಾ ಕಾರಣಗಳಿಂದ ಮತಎಣಿಕೆ ಸಂದರ್ಭದಲ್ಲಿ ತಿರಸ್ಕೃತ ಮತಗಳ ಸಂಖ್ಯೆ ಸಾವಿರ ಮೀರುತ್ತಿದ್ದವು. ಇವುಗ ಳನ್ನು ಲೆಕ್ಕ ಹಾಕಿದರೆ ತಿರಸ್ಕೃತ ಮತಗಳ ಸಂಖ್ಯೆ ಒಂದೂ ವರೆ ಲಕ್ಷ ದಾಟುತ್ತದೆ. ಆರಂಭದ ಎರಡು ವರ್ಷ ಅಂದರೆ 1952 ಹಾಗೂ 1957ರ ಚುನಾವಣೆ ಯಲ್ಲಿನ ದಾಖಲೆ ಸಿಕ್ಕಿಲ್ಲ. ಈ ಎರಡು ಚುನಾವಣೆ ಹೊರತು ಪಡಿಸಿ ಉಳಿದ ಚುನಾ ವಣೆಗಳಲ್ಲಿ ಲೆಕ್ಕ ಹಾಕಿದರೆ 1,83,680 ಮತಗಳು ತಿರಸ್ಕೃತಗೊಂಡಿವೆ.
1962ರಲ್ಲಿ 10,972 ಮತಗಳು, 1967ರಲ್ಲಿ 14,830 ಮತಗಳು, 1971ರಲ್ಲಿ 10,770 ಮತಗಳು, 1977ರಲ್ಲಿ 13,333 ಮತಗಳು, 1980ರಲ್ಲಿ 14,286 ಮತಗಳು, 1984ರಲ್ಲಿ 15,176 ಮತಗಳು, 1989ರಲ್ಲಿ 28,478 ಮತಗಳು, 1991ರಲ್ಲಿ 14,980 ಮತಗಳು, 1996ರಲ್ಲಿ 16,748 ಮತ ಗಳು, 1998ರಲ್ಲಿ 13,508 ಮತಗಳು, 1999ರಲ್ಲಿ 30,287 ಮತಗಳು ತಿರಸ್ಕೃತ ಗೊಂಡಿವೆ. 2004ರಿಂದ ಮತಯಂತ್ರ ಬಂದಿದ್ದು, ತಿರಸ್ಕೃತ ಮತಗಳಿಗೆ ಕಡಿವಾಣ ಬಿದ್ದಿದೆ.
ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.