40 ಕೋಟಿ ರೂ. ಅಕ್ರಮ ಹಣ ಜಪ್ತಿ
Team Udayavani, Apr 23, 2019, 3:37 AM IST
ಬೆಂಗಳೂರು: 2ನೇ ಹಂತದಲ್ಲಿ ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ಹಣ ಮತ್ತು ಹೆಂಡದ ಹೊಳೆ ಹರಿದಿದ್ದು, ವಿವಿಧ ನೀತಿ ಸಂಹಿತೆ ಜಾರಿ ತಂಡಗಳು ಈ ಕ್ಷೇತ್ರಗಳಲ್ಲಿ 39.78 ಕೋಟಿ ರೂ. ಅಕ್ರಮ ಹಣವನ್ನು ಜಪ್ತಿ ಮಾಡಿಕೊಂಡಿರುವುದು ಮತದಾರರಿಗೆ ಆಮಿಷ ಒಡ್ಡಲು ರಾಜಕೀಯ ಪಕ್ಷಗಳು ನಡೆಸಿದ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ.
ಚುನಾವಣಾ ಅಕ್ರಮಗಳಲ್ಲಿ ಶಿವಮೊಗ್ಗ ಕ್ಷೇತ್ರ ಮುಂದಿದ್ದು, ಇಲ್ಲಿ ಅತಿ ಹೆಚ್ಚು 8.70 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಎಲ್ಲ 14 ಕ್ಷೇತ್ರಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಮಾ.10 ರಿಂದ ಏ.21 ರವರೆಗೆ ಫ್ಲೈಯಿಂಗ್ ಸ್ಕ್ವಾಡ್, ಸ್ಟ್ರಾಟಿಕ್ ಸರ್ವೆಲೆನ್ಸ್ ಟೀಮ್, ಅಬಕಾರಿ ತಂಡಗಳು, ಆದಾಯ ತೆರಿಗೆ ಇಲಾಖೆಗಳು ಸೇರಿ ಒಟ್ಟು 16.64 ಕೋಟಿ ನಗದು, 15.80 ಕೋಟಿ ಮೊತ್ತದ ಮದ್ಯ 8.14 ಲಕ್ಷ ರೂ. ಮೊತ್ತದ ಮಾದಕ ಪದಾರ್ಥ, 6.46 ಕೋಟಿ ಮೌಲ್ಯದ ಚಿನ್ನಾಭರಣ, 78.73 ಲಕ್ಷ ಮೊತ್ತದ ಗೃಹಬಳಕೆ ವಸ್ತುಗಳು ಸೇರಿದಂತೆ ಒಟ್ಟಾರೆ 39.78 ಕೋಟಿ ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಸಾವಿರ ಪ್ರಕರಣಗಳು: ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ ವಿವಿಧ 1,011 ಚುನಾವಣಾ ನೀತಿ ಸಂಹಿತೆ ಪ್ರಕರಣಗಳು ದಾಖಲಾಗಿದೆ. ಅಲ್ಲದೇ ಅಕ್ರಮ ಮದ್ಯ ಮಾರಾಟ, ಪರವಾನಿಗೆ ಉಲ್ಲಂಘನೆ ಸೇರಿ ಅಬಕಾರಿ ಇಲಾಖೆಯ ಅಧಿಕಾರಿಗಳು 7,679 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಈ ಎಲ್ಲ ಪ್ರಕರಣಗಳು ತನಿಖಾ ಹಂತದಲ್ಲಿವೆ.
ಕ್ಷೇತ್ರ ನಗದು ಮದ್ಯ ಒಟ್ಟು
ಚಿಕ್ಕೋಡಿ- 1.68 ಕೋಟಿ — 1.68 ಕೋಟಿ
ಬೆಳಗಾವಿ- 1.68 ಕೋಟಿ 48 ಲಕ್ಷ 2.70 ಕೋಟಿ
ಬಾಗಲಕೋಟೆ- 53.69 ಲಕ್ಷ 54.61 ಲಕ್ಷ 1.08 ಕೋಟಿ
ವಿಜಯಪುರ- 60.33 ಕೋಟಿ 25.66 ಲಕ್ಷ 86 ಲಕ್ಷ
ಕಲಬುರಗಿ- 18.37 ಲಕ್ಷ 95.47 ಲಕ್ಷ 1.19 ಕೋಟಿ
ರಾಯಚೂರು- 18.08 ಲಕ್ಷ 12.64 ಲಕ್ಷ 32.21 ಲಕ್ಷ
ಬೀದರ್- 3.18 ಲಕ್ಷ 3.59 ಕೋಟಿ 3.70 ಕೋಟಿ
ಕೊಪ್ಪಳ- 2.00 ಲಕ್ಷ 49.64 ಲಕ್ಷ 52.36 ಲಕ್ಷ
ಬಳ್ಳಾರಿ- 22.60 ಲಕ್ಷ 1.96 ಕೋಟಿ 3.31 ಕೋಟಿ
ಹಾವೇರಿ- 22.41 ಲಕ್ಷ 5.40 ಲಕ್ಷ 31.73 ಲಕ್ಷ
ಧಾರವಾಡ- 1.74 ಕೋಟಿ 12.42 ಲಕ್ಷ 4.92 ಕೋಟಿ
ಉತ್ತರ ಕನ್ನಡ- 32.45 ಲಕ್ಷ 58.85 ಲಕ್ಷ 3.20 ಕೋಟಿ
ದಾವಣಗೆರೆ- 34.68 ಲಕ್ಷ 2.88 ಕೋಟಿ 3.28 ಕೋಟಿ
ಶಿವಮೊಗ್ಗ- 8.70 ಕೋಟಿ 1.70 ಕೋಟಿ 10.41 ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.