ಚಕ್ಕಡಿಗೆ 525 ರೂ., ಟ್ಯೂಬ್‌ಲೈಟ್‌ಗೆ 20 ರೂ.
Team Udayavani, Apr 3, 2019, 6:00 AM IST
ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಕಡೆ
ಅಭ್ಯರ್ಥಿಗಳ ಪ್ರಚಾರ ಹೈಟೆಕ್ ಆಗಿ ನಡೆಯುತ್ತಿದ್ದರೂ, ಕೆಲವೆಡೆ ಚಕ್ಕಡಿ, ಕುದುರೆ ಗಾಡಿ ಬಳಸಿ, ಮತದಾರರ ಒಲವುಗಳಿಸುವ ತಂತ್ರವನ್ನು ಅಭ್ಯರ್ಥಿಗಳು ಮಾಡುತ್ತಿದ್ದಾರೆ. ಆದರೆ, ಚಕ್ಕಡಿ, ಕುದುರೆ ಗಾಡಿ ಬಳಸಿದರೆ ಅದಕ್ಕೂ ಪ್ರತಿನಿತ್ಯ ತಲಾ 525 ರೂ. ಗಳನ್ನು ಚುನಾವಣಾ ಆಯೋಗ ನಿಗದಿ ಮಾಡಿದೆ. ಚುನಾವಣಾ ಪ್ರಚಾರದ ನಿಟ್ಟಿನಲ್ಲಿ ಅಭ್ಯರ್ಥಿಯ ಪ್ರತಿ ಖರ್ಚು-ವೆಚ್ಚದ ಬಗ್ಗೆ ಆಯೋಗ ಕಣ್ಣಿಟ್ಟೇ ಇಟ್ಟಿರುತ್ತದೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿ ಯು ಒಟ್ಟಾರೆ 70 ಲಕ್ಷ ರೂ.ವರೆಗೆ ಮಾತ್ರ ವೆಚ್ಚ ಮಾಡಲು ಅವಕಾಶವಿದೆ. ಇದಕ್ಕಿಂತ ಹೆಚ್ಚು ವೆಚ್ಚ ಮಾಡಿದರೆ ಚುನಾವಣಾ ಆಯೋಗ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಿದೆ.
ಗಿಮಿಕ್ ಮಾಡಿದ್ರೂ ವೆಚ್ಚ
ಪ್ರಚಾರ ಅಥವಾ ನಾಮಪತ್ರ ಸಲ್ಲಿಕೆ ವೇಳೆ 5-10 ಕಲಾವಿದರು ಸಂಗೀತ ನೃತ್ಯ ಮಾಡಿದರೆ 4 ಸಾವಿರ ರೂ., ಜಾನಪದ ನೃತ್ಯ ಗುಂಪಿನ 15-25 ಕಲಾವಿದರಿಗೆ 6 ಸಾವಿರ ರೂ., ಬೀದಿಗಳಲ್ಲಿ ನೃತ್ಯ ಮಾಡುವ ತಂಡಕ್ಕೆ 7 ಸಾವಿರ ರೂ., ಕರಡಿ ಮಜಲು 3 ಸಾವಿರ ರೂ., ಡೊಳ್ಳು 5000 ರೂ., ಜಾಂಜ್ ಪಥಕ 2500 ರೂ.ಗಳ ವೆಚ್ಚ ಅಭ್ಯರ್ಥಿಯ ಖಾತೆಗೆ ಬೀಳಲಿದೆ.
ಸಭೆ, ಸಮಾರಂಭ, ರ್ಯಾಲಿ ಲೌಡ್ ಸ್ಪೀಕರ್‌ಗೆ 1200 ರೂ. ಸೌಂಡ್ ಸಿಸ್ಟಮ್, ಸ್ಪೀಕರ್ ಬಾಕ್ಸ್, ಕಾರ್ಡ್‌ಲೆಸ್ ಮೈಕ್‌ಗೆ 25 ಸಾವಿರ ರೂ. 10 ಗಿ 10 ಅಡಿಯ ಪೆಂಡಾಲ್‌ಗೆ 1200 ರೂ. ಜನರೇಟರ್ 30 ಕೆ.ವಿ.ಗೆ 10 ಸಾವಿರ ರೂ. ಟ್ಯೂಬ್‌ಲೈಟ್‌ಗೆ 20 ರೂ. ಹಾಲೋಜನ್ ಬಲ್ಬ್ಗೆ 40 ರೂ. 2ಗಿ4 ಅಡಿಯ ಬಟ್ಟೆಯ ಬ್ಯಾನರ್‌ಗೆ 250 ರೂ. 1ಗಿ1 ಅಡಿಯ ಬಟ್ಟೆ ಧ್ವಜಕ್ಕೆ 12 ರೂ.
1 ಸಾವಿರ ಹ್ಯಾಂಡ್‌ಬಿಲ್ಸ್‌ಗೆ 600 ರೂ. 8ಗಿ5 ಅಡಿಯ ಕಟೌಟ್‌ಗೆ 1 ಸಾವಿರ ರೂ. ವಿಡಿಯೋ ರೆಕಾರ್ಡಿಂಗ್‌ಗೆ 150 ರೂ.
ಯಾವ ವಸ್ತುವಿಗೆ, ಎಷ್ಟು ಮೌಲ್ಯ ನಿಗದಿ
ದ್ವಿಚಕ್ರ ವಾಹನಕ್ಕೆ 525 ರೂ.
ಇನ್ನೋವಾ ಕಾರಿಗೆ 4200 ರೂ.
ಸುಮೋ ವಾಹನಕ್ಕೆ 2950 ರೂ.
ಫಾರ್ಚುನರ್ ಕಾರಿಗೆ 4200 ರೂ.
ಸಾದಾ ಕಾರಿಗೆ 1890 ರೂ.
ಟ್ರಾಕ್ಸ್, ಕ್ರೂಸರ್‌ಗೆ 3675 ರೂ.
ಮೂರು ಚಕ್ರ ವಾಹನಕ್ಕೆ 840 ರೂ.
ವಾಹನ ಚಾಲಕನ ವೇತನ ನಿತ್ಯ 260 ರೂ.
ಪ್ರತಿ ಚದರ ಅಡಿಗೆ
ಶಾಮಿಯಾನ 5 ರೂ.,
ಪೆಂಡಾಲ್ 7 ರೂ.
ವೇದಿಕೆ 30 ರೂ.
ಬಟ್ಟೆ ಟೋಪಿ ಒಂದಕ್ಕೆ 25 ರೂ.
ಕಾಗದ ಟೋಪಿ 3 ರೂ.
ಮಜ್ಜಿಗೆ ಪ್ಯಾಕೆಟ್‌ಗೆ 6 ರೂ.
ನೀರಿನ ಬಾಟಲ್, ಒಂದು ಲೀಟರ್ 20 ರೂ.
ನೀರಿನ ಟ್ಯಾಂಕರ್ 500 ರೂ.
ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.