ಇರಾನಿ ಬಗ್ಗೆ ಅನುಚಿತ ಹೇಳಿಕೆ: ಕಾಂಗ್ರೆಸ್ ಮೈತ್ರಿ ನಾಯಕನ ಬಂಧನ
Team Udayavani, Apr 4, 2019, 9:53 AM IST
ನಾಗಪುರ: ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಅನುಚಿತ ಹೇಳಿಕೆಗಳನ್ನು ನೀಡಿರುವ ಪೀಪಲ್ಸ್ ರಿಪಬ್ಲಿಕನ್ ಪಾರ್ಟಿ(ಪಿಆರ್‌ಪಿ) ನಾಯಕ ಜಯದೀಪ್ ಕವಾಡೆಯನ್ನು ಪೊಲೀಸರು ಬುಧವಾರ ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.
ಸೋಮವಾರ ನಾಗಪುರದಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯೊಂದಲ್ಲಿ ಕವಾಡೆ ಇರಾನಿ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈ ಭಾಷಣದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವೀಡಿ ಯೋದಲ್ಲಿ ಸೋಮವಾರ ನಾಗಪುರದ ಲಕಡ್‌ಗಂಜ್ ಪ್ರದೇಶದಲ್ಲಿ ಚುನಾವಣಾ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುವಾಗ ಕವಾಡೆ ಅವರು ಸ್ಮೃತಿ ಇರಾನಿ ಅವರ ಬಗ್ಗೆ ಅನುಚಿತ ಹೇಳಿಕೆಯನ್ನು ನೀಡುತ್ತ, ಇರಾನಿ ಅವರು ಗಡ್ಕರಿ ಅವರ ಬಳಿ ಕುಳಿತುಕೊಂಡು ಸಂವಿಧಾನವನ್ನು ಬದಲಿಸುವ ಮಾತುಗಳನ್ನಾಡುತ್ತಾರೆ. ನಾನು ಸ್ಮೃತಿ ಇರಾನಿ ಅವರ ಬಗ್ಗೆ ನಿಮಗೆ ಒಂದು ವಿಷಯವನ್ನು ತಿಳಿಸಲು ಬಯಸುತ್ತೇನೆ. ಅವರು ತಮ್ಮ ಹಣೆಗೆ ದೊಡ್ಡ ಬಿಂದಿ ಇಡುತ್ತಾರೆ. ಆದರೆ, ಪತಿಯನ್ನು ಬದಲಿಸುವ ಮಹಿಳೆಯ ಬಿಂದಿ ಕೂಡ ದೊಡ್ಡದಾಗಿರುತ್ತದೆ ಎಂದು ನನಗೆ ಯಾರೋ ಹೇಳಿದ್ದಾರೆ ಎಂದು ಹೇಳುತ್ತಿರುವುದು ಕಾಣ ಸಿಕ್ಕಿದೆ.
ನಾಗಪುರದಿಂದ ಕಾಂಗ್ರೆಸ್ ಅಭ್ಯರ್ಥಿ ನಾನಾ ಪಟೋಲೆ ಅವರ ಪ್ರಚಾರದ ವೇಳೆ ಕವಾಡೆ ಅವರು ಈ ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವುದಾಗಿದೆ. ಪಿಆರ್‌ಪಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಮಿತ್ರಪಕ್ಷವಾಗಿದೆ. ಕವಾಡೆ ಅವರು ಮುಂದೆಗೆ ತಮ್ಮ ಭಾಷಣದಲ್ಲಿ, ಪತಿಯನ್ನು ಬದಲಾಯಿಸುವುದು ಸುಲಭ ಆದರೆ ಭಾರತೀಯ ಸಂವಿಧಾನವನ್ನು ಬದಲಿಸುವುದು ಅಷ್ಟು ಸುಲಭವಿಲ್ಲ ಎಂದೂ ಹೇಳಿದ್ದರು.
ಈ ಸಂಬಂಧ ಚುನಾವಣಾ ಅಧಿಕಾರಿ ಮದನ್ ಸುಭೇದರ್ ಅವರು ಕವಾಡೆ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ಐಪಿಸಿ ಕಾಯಿದೆಯ ಪರಿಚ್ಛೇದ 295 (ಎ) , 500 ಮತ್ತು 294 ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಕವಾಡೆ ವಿರುದ್ಧ ಲಕಡ್‌ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಯದೀಪ್ ಕವಾಡೆ ವಿರುದ್ಧ ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕರ್ತರು ಮಂಗಳವಾರ ನಾಗಪುರ ಲೋಕಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಬಳಿ ದೂರು ನೀಡಿದ್ದರು.
ಜಯದೀಪ್ ಕವಾಡೆ ಅವರು ಈ ಹೇಳಿಕೆಗಳನ್ನು ನೀಡುತ್ತಿದ್ದಾಗ ಅವರ ಹಿಂದೆ ಹಲವು ನಾಯಕರು ಕುಳಿತಿದ್ದರು. ಆದರೆ ಅವರಲ್ಲಿ ಯಾರೂ ಕವಾಡೆಯನ್ನು ತಡೆಯಲು ಪ್ರಯತ್ನಿಸಿಲ್ಲ. ಅದಕ್ಕೆ ಬದಲಿಗೆ ವೀಡಿಯೋದಲ್ಲಿ ಕೆಲವು ನಾಯಕರು ನಗುತ್ತಿರುವುದು ಕಾಣಲು ಸಿಕ್ಕಿದೆ.
ಹಣೆಗೆ ದೊಡ್ಡ ಬಿಂದಿ ಇಡುವ ಮಹಿಳೆಯರು ನಿರಂತರವಾಗಿ ತಮ್ಮ ಪತಿಯನ್ನು ಬದಲಾಯಿಸುತ್ತಾರೆ ಎಂದು ಜಯದೀಪ್ ಕವಾಡೆ ಹೇಳಿದ್ದಾರೆ. ಸ್ಮೃತಿ ಇರಾನಿ ಅವರ ಬಗ್ಗೆ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಇದೆಲ್ಲಾ ಮಹಿಳೆಯರ ಅವಮಾನವಾಗಿದೆ. ಕವಾಡೆ ಮತ್ತು ಕಾಂಗ್ರೆಸ್‌ನ ಇತರ ನಾಯಕರು ಸ್ಮೃತಿ ಇರಾನಿ ಅವರ ನಡತೆಯ ಮೇಲೆ ಬೆರಳು ತೋರಿಸಿ ದ್ದಾರೆ. ಹಾಗಾಗಿ, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಬಿಜೆವೈಎಂ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ಹೇಳಿದೆ.
ಇದು ಒಂದು ರೀತಿಯಲ್ಲಿ ಮಹಿಳೆಯರಿಗೆ ಅವಮಾನವಾಗಿದೆ. ಮಹಿಳೆಯರು ಪಟೋಲೆ ವಿರುದ್ಧ ಮತ ಚಲಾಯಿಸಬೇಕು. ಅದಕ್ಕಾಗಿ, ಜಯದೀಪ್ ಅವರ ಅನುಚಿತ ಭಾಷಣದ ವೀಡಿಯೋ ವಾಟ್ಸ್‌ಆ್ಯಪ್ ಗ್ರೂಪ್‌ಗ್ಳಲ್ಲಿ ಹರಡಿಸಲಾಗುತ್ತಿದೆ ಎಂದು ಬಿಜೆಪಿ ನಾಯಕರೊಬ್ಬರು ಸುದ್ದಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.