“ಅಂತ್ಯಕ್ರಿಯೆ ರಾಜಕಾರಣ’ಕ್ಕೆ ಸುಮಲತಾ ಆಕ್ರೋಶ

Team Udayavani, Apr 17, 2019, 3:00 AM IST

antyakriy

ಮಂಡ್ಯ: ಬಹಿರಂಗ ಪ್ರಚಾರದ ಕೊನೆಯ ದಿನವಾದ ಮಂಗಳವಾರ ಹೈವೋಲ್ಟೆàಜ್‌ ಕ್ಷೇತ್ರ ಮಂಡ್ಯದಲ್ಲಿ ಚುನಾವಣಾ ಪ್ರಚಾರ ತಾರಕಕ್ಕೇರಿತು. “ಸ್ವಾಭಿಮಾನ ಸಮ್ಮಿಲನ ಸಮಾವೇಶ’ದಲ್ಲಿ ಪಾಲ್ಗೊಂಡ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌, “ಅಂಬರೀಶ್‌ ಸಮಾಧಿ ಮೇಲೆ ಪುತ್ರನಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡಲು ಸಿಎಂ ಕುಮಾರಸ್ವಾಮಿ ಅಂತ್ಯಕ್ರಿಯೆ ರಾಜಕಾರಣ ಮಾಡುತ್ತಿದ್ದಾರೆ’ ಎಂದು ತೀವ್ರ ವಾಗ್ಧಾಳಿ ನಡೆಸಿದರು.

ಮಂಗಳವಾರ ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಜನತೆಯನ್ನುದ್ದೇಶಿಸಿ ಮಾತನಾಡಿದ ಸುಮಲತಾ ಹೇಳಿದ್ದಿಷ್ಟು:

* ಅಂಬರೀಶ್‌ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತಂದಿದ್ದು ನಾನು ಎಂದು ಪದೇಪದೆ ಹೇಳುತ್ತಿದ್ದಾರೆ. ಅದಕ್ಕೂ ಮುನ್ನ ಅಂಬರೀಶ್‌ ಏನಾಗಿದ್ದರು? ಮಂಡ್ಯದಲ್ಲಿ ಝೀರೋ ಆಗಿದ್ದರಾ? ಅಂಬರೀಶ್‌ ಈ ಮಣ್ಣಿನ ಮಗ. 3 ಬಾರಿ ಸಂಸದರಾಗಿ, ಶಾಸಕರಾಗಿ, ಸಚಿವರಾಗಿ ಮಂಡ್ಯಕ್ಕೆ ಸೇವೆ ಸಲ್ಲಿಸಿ ಜನರ ಹೃದಯ ಗೆದ್ದಿದ್ದರು. ಅವರ ಪಾರ್ಥಿವ ಶರೀರ ಈ ಮಣ್ಣಿಗೆ ಬರುವುದಕ್ಕೆ ಅಂಬರೀಶ್‌ಗೆ ಯೋಗ್ಯತೆ, ಅರ್ಹತೆ ಇರಲಿಲ್ಲವಾ?

* ಕನ್ನಡ ಚಿತ್ರರಂಗ ಅಂಬರೀಶ್‌ಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ನಾನು ನಿಮ್ಮ ಸಹೋದರ, ನಿಮ್ಮ ಕುಟುಂಬಕ್ಕೆ ಆಧಾರವಾಗಿರುತ್ತೇನೆ ಎಂದಿದ್ದ ನೀವು (ಕುಮಾರಸ್ವಾಮಿ) ಇಂದು ಅಂಬರೀಶ್‌ ಸಮಾಧಿ ಮೇಲೆ ಮಗನ ರಾಜಕೀಯ ಭವಿಷ್ಯ ಕಟ್ಟಲು ಹೊರಟಿದ್ದೀರಲ್ಲಾ ಇದೆಂಥಾ ರಾಜಕಾರಣ?

* ನಾನು ಈ ಮಣ್ಣಿನ ಸೊಸೆ. ನನ್ನ ಪತಿ ರಾಜಕಾರಣಿಯಾಗಿದ್ದ ಕ್ಷೇತ್ರ. ನನಗೆ ಇಲ್ಲಿ ಸ್ಪರ್ಧಿಸುವ ಹಕ್ಕಿದೆ. ಅದಕ್ಕಾಗಿ ನಿಮ್ಮ ಸರ್ಟಿಫಿಕೇಟ್‌ ನನಗೆ ಬೇಕಾಗಿಲ್ಲ. ಸ್ವಾರ್ಥ, ಜಾತಿ, ಹಣ, ಮೋಸ, ದ್ವೇಷದ ರಾಜಕಾರಣ ಮಾಡುತ್ತಿದ್ದೀರಿ. ನಾನು ಸ್ವಾರ್ಥ ರಾಜಕಾರಣ ಮಾಡಲು ಇಲ್ಲಿಗೆ ಬಂದಿಲ್ಲ.

* ನಿಮ್ಮ ಮಗನ ಪರ ತಾತ, ತಾಯಿ, ಚಿಕ್ಕಪ್ಪ ಸೇರಿ ರಾಷ್ಟ್ರ, ರಾಜ್ಯ ನಾಯಕರೆಲ್ಲ ಬರಬಹುದು. ನಾವು ಅವರ ಬಗ್ಗೆ ಎಲ್ಲಾದರೂ ಒಂದೇ ಒಂದು ಮಾತನಾಡಿದ್ದೇವಾ? ಅದು ನಮ್ಮ ಸಭ್ಯತೆ ಅಲ್ಲ. ನನಗೆ ಸಭ್ಯತೆ, ಸಂಸ್ಕಾರ ನನ್ನ ಬೆಳವಣಿಗೆಯಿಂದಲೇ ಬಂದಿದೆ. ನನ್ನ ಸ್ವಭಾವವೇ ಅದು.

ಸಾಬೀತಾದ್ರೆ ರಾಜ್ಯ ಬಿಟ್ಟು ತೊಲಗುವೆ: ಯಶ್‌
* ಜೆಡಿಎಸ್‌ ಪಕ್ಷವನ್ನು ಕಳ್ಳರ ಪಕ್ಷ ಎಂದು ಹೇಳಿರುವುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಿದರೆ ಮಂಡ್ಯ ಮಾತ್ರವಲ್ಲ, ಈ ರಾಜ್ಯವನ್ನೇ ಬಿಟ್ಟು ಹೋಗುತ್ತೇನೆ.

* ಧರ್ಮಸ್ಥಳ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಾನು ಎಂದೂ, ಎಲ್ಲಿಯೂ ಆ ಮಾತನ್ನು ಹೇಳಿಲ್ಲ. ನಾನು ಹೇಳಿದ್ದನ್ನು ಸಾಕ್ಷಿ ಸಹಿತ ತೋರಿಸಿದರೆ ಕರ್ನಾಟಕವನ್ನೇ ಬಿಟ್ಟು ತೊಲಗುತ್ತೇನೆ.

* ಮುಖ್ಯಮಂತ್ರಿ ಅವರು ತಮ್ಮ ಸ್ಥಾನ, ಘನತೆಗೆ, ಕುಟುಂಬಕ್ಕೆ ಶೋಭೆ ತರುವಂತಹ ಮಾತುಗಳನ್ನಾಡಬೇಕು. ಸುಳ್ಳು ಹೇಳಬಾರದು. ನಾವು ಸ್ವಾರ್ಥ ಇಟ್ಟುಕೊಂಡು ಅಥವಾ ಬೇರಾವುದೋ ಉದ್ದೇಶಕ್ಕಾಗಿ ಇಲ್ಲಿಗೆ ಬಂದಿಲ್ಲ. ಅಂಬರೀಶ್‌ ಕುಟುಂಬದ ಮೇಲಿನ ಅಭಿಮಾನ ಇಲ್ಲಿಗೆ ಎಳೆದು ತಂದಿದೆ. ಅಂಬರೀಶಣ್ಣ ಬದುಕಿದ್ದಾಗಲೂ ಮನೆ ಮಕ್ಕಳಂತೆ ಇದ್ದೇವೆ. ಸತ್ತಾಗಲೂ ಆ ಕುಟುಂಬದ ಜತೆ ಇದ್ದೇವೆ.

* ಮಂಡ್ಯದ ಜನರು ಮನಸ್ಸಾಕ್ಷಿಯನ್ನು ಕೇಳಿಕೊಂಡು ಮತ ಹಾಕಬೇಕು. ಸುಮಲತಮ್ಮನಿಗೆ ಒಂದೇ ಒಂದು ಅವಕಾಶ ಕೊಡಿ. ಸ್ವಾಭಿಮಾನವನ್ನು ಎಂದಿಗೂ ಬಿಟ್ಟುಕೊಡಬೇಡಿ. ಅಂಬರೀಶ್‌ ಕುಟುಂಬ ನಿಮ್ಮ ಸ್ವತ್ತು. ಅದನ್ನು ಕಾಪಾಡಿ.

ರೈತನ ಮಗನಾಗಿ ಒಂದು ಲೋಟ ಹಾಲು ಕರೆಯಲಿ: ದರ್ಶನ್‌
*ನಮಗೆ ರಾಜಕಾರಣ ಗೊತ್ತಿಲ್ಲ. ಆದರೆ, ಕಷ್ಟದಲ್ಲಿರುವವರಿಗೆ ಹೇಗೆ ಸಹಾಯ ಮಾಡಬೇಕೆನ್ನುವುದು ಗೊತ್ತಿದೆ. ನನಗೆ ವರ್ಷಕ್ಕೆ 2 ಕೋಟಿ ರೂ. ಹಣ ಬೇಕು. ಎಲ್‌ಕೆಜಿಯಿಂದ ಹಿಡಿದು ಮೆಡಿಕಲ್‌ ಸೀಟಿಗೆ ಹಣ ಕೇಳಿಕೊಂಡು ಬರುತ್ತಾರೆ. ಅವರೆಲ್ಲರಿಗೂ ನಾನು ನನ್ನ ದುಡಿಮೆಯ ಹಣ ನೀಡುತ್ತಿದ್ದೇನೆ. ಅದೇ ರೀತಿ ಅನುದಾನದ ಹಣವನ್ನು ನಮಗೆ ಕೊಟ್ಟು ನೋಡಲಿ ನಾವೇನು ಮಾಡ್ತೇವೆ ಅನ್ನೋದನ್ನು ತೋರಿಸ್ತೇವೆ.

* ನಮ್ಮನ್ನು ರೈತರ ಮಕ್ಕಳಾ, ರೈತರ ಕಷ್ಟ ಗೊತ್ತಿದೆಯಾ ಎಂದು ಪ್ರಶ್ನಿಸುವ ಅವರು (ಕುಮಾರಸ್ವಾಮಿ) ರೈತನ ಮಗನಾಗಿ ಒಂದೇ ಒಂದು ಲೋಟ ಹಾಲು ಕರೆಯಲಿ. ಅದೂ ಬೇಡ. ಹಸು ಕರು ಹಾಕಿದ ಹತ್ತು ದಿನ ಏನು ಮೇವು ಕೊಡಬೇಕು ಎನ್ನುವುದನ್ನಾದರೂ ಹೇಳಲಿ.

* ನನಗೂ ಎರಡು ಮುಖವಿದೆ. ಒಳ್ಳೆಯತನದಿಂದ ಇರುವವರ ಜತೆ ಹೇಗಿರುತ್ತೇನೋ, ಕೆಟ್ಟವರ ಜತೆ ನಿಂತಾಗಲೂ ಅಷ್ಟೇ ಕೆಟ್ಟವನಾಗಿರುತ್ತೇನೆ. ಆದರೆ, ಈ ಚುನಾವಣೆಯಲ್ಲಿ ನನ್ನ ಮಧ್ಯದ ಮುಖವನ್ನು ತೋರಿಸಬೇಕಾಯಿತು. ಅಂಬರೀಶಣ್ಣನ ಜತೆ ಸುಖದಲ್ಲೂ ಇದ್ದೆವು. ಸತ್ತ ನಂತರವೂ ಅವರ ಮನೆ ಮಕ್ಕಳಂತೆ ಇದ್ದೇವೆ. ನಾವೇನು ಕಳ್ಳತನ, ದರೋಡೆ, ಅತ್ಯಾಚಾರ ಮಾಡಿ ಬಂದಿದ್ದೇವಾ, ನಮ್ಮನ್ನ ಅಪರಾಧಿಗಳಂತೆ ನೋಡುವುದೇಕೆ?

*ನೀವು (ಕುಮಾರಸ್ವಾಮಿ) ನಿಮ್ಮ ಮಗನ ಸಿನಿಮಾಗೆ 50 ಕೋಟಿ ಹಣ ಖರ್ಚು ಮಾಡುವ ಬದಲು ಮಂಡ್ಯ ಅಭಿವೃದ್ಧಿ ಮಾಡಿ ತೋರಿಸಿದ್ದರೆ ಇವತ್ತು ನೀವು ಬಂದು ಪ್ರಚಾರ ಮಾಡಬೇಕಿತ್ತಾ? ನಿಮ್ಮ ಕೊಡುಗೆಯನ್ನು ನೋಡೇ ಜನರು ಮತ ಹಾಕುತ್ತಿದ್ದರು.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.