ಮಂಡ್ಯ ವಿವಾದ: ವಿಚಾರಣೆ ಶುರು
ಡಿಸಿ ರಾಜೀನಾಮೆಗೆ ಸುಮಲತಾ ಆಗ್ರಹ
Team Udayavani, Apr 1, 2019, 5:55 AM IST
ಮಂಡ್ಯ: ಪ್ರಭಾವಿಗಳನ್ನು ಪಣ ಕ್ಕೊಡ್ಡಿರುವ ಕಣ ವಾದ ಮಂಡ್ಯ ಲೋಕ ಸಭಾ ಕ್ಷೇತ್ರ ಈಗ ವಿವಾದ ದಿಂದ ಸುದ್ದಿ ಮಾಡು ತ್ತಿದೆ. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಕ್ರಮಬದ್ಧವಾಗಿಲ್ಲ ಎಂಬ ಆರೋಪದ ಬಗ್ಗೆ ಚುನಾವಣ ಆಯೋಗ ವಿಚಾರಣೆ ಆರಂಭಿಸಿದೆ. ರವಿವಾರ ಮೈಸೂರಿನ ಪ್ರಾದೇಶಿಕ ಆಯುಕ್ತ ಟಿ.ಕೆ.ಅನಿಲ್ ಕುಮಾರ್ ಅವರು ವಿಚಾರಣೆ ನಡೆಸಿದ್ದು, ಜಿಲ್ಲಾಧಿಕಾರಿಗಳ ಇತ್ತೀಚಿನ ನಡವಳಿಕೆಗಳು, ನಾಮಪತ್ರ ಪರಿಶೀಲನೆ ವೇಳೆ ಆಗಿರುವ ಲೋಪ ದೋಷಗಳು, ಅಫಿದವಿತ್‌ನಲ್ಲಿ ಆದ ತಪ್ಪುಗಳ ಕುರಿತಂತೆ ವಿವರಣೆ ಪಡೆದರು. ಈ ಬಗ್ಗೆ ದಿಲ್ಲಿ ಚುನಾವಣ ಆಯೋಗದ ಕೇಂದ್ರ ಕಚೇರಿಗೆ ವರದಿ ನೀಡುವುದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರವಿವಾರ ಸುದ್ದಿಗೋಷ್ಠಿ ನಡೆಸಿದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ , ಜಿಲ್ಲಾ ಚುನಾ ವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಎನ್. ಮಂಜುಶ್ರೀ ಮುಖ್ಯಮಂತ್ರಿಗಳ ಒತ್ತಡಕ್ಕೆ ಒಳಗಾಗಿ ಕಾರ್ಯನಿರ್ವಹಿಸುತ್ತಿದ್ದು, ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡ ಬೇಕು ಎಂದು ಒತ್ತಾಯಿಸಿದ್ದಾರೆ. ನಿಖಿಲ್ ನಾಮಪತ್ರ ದಲ್ಲಿನ ನ್ಯೂನತೆ ಬಗ್ಗೆ ತಮ್ಮ ಚುನಾವಣ ಏಜೆಂಟ್ ಸಲ್ಲಿಸಿದ್ದ ಆಕ್ಷೇಪಣೆಯನ್ನು ಪರಿಗಣಿಸಿಲ್ಲ. ನಾಮಪತ್ರ ಪರಿಶೀಲನೆ ಪ್ರಕ್ರಿಯೆಯ ಸಂಪೂರ್ಣ ವೀಡಿಯೋ ನೀಡುವಂತೆ ಮನವಿ ಸಲ್ಲಿಸಿದ್ದರೂ ಅರ್ಧ ಮಾತ್ರ ನೀಡಿದ್ದಾರೆ ಎಂದು ದೂರಿದರು. ನಿಖೀಲ್‌ಗೆ ನಾಮಪತ್ರ ಸಲ್ಲಿಕೆ ದಿನವೇ ಕ್ರಮ ಸಂಖ್ಯೆ 1 ಎಂದು ಹೇಗೆ ಪ್ರಕಟಿಸಲಾಯಿತು. ಇದರಲೆಲ್ಲ ಸಂಶಯ ಕಾಣಿಸುತ್ತಿದೆ ಎಂದರು.
ಕ್ರಮಬದ್ಧವಾಗಿರಲಿಲ್ಲ
ನಿಖಿಲ್ ಪರಿಷ್ಕೃತ ಅಫಿದವಿತ್ ಅನ್ನು ಮಾ.27 ರಂದು ಬೆಳಗ್ಗೆ 10 ಗಂಟೆಗೆ ಸಲ್ಲಿಸಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ಹೇಳಿದ್ದಾರೆ. ಹೊಸ ಅಫಿದವಿತ್‌ನಲ್ಲಿ ಮಾ.27ರ ದಿನಾಂಕ ನಮೂದಿಸದೆ ಮಾ.21ರ ದಿನಾಂಕವನ್ನೇ ಉಲ್ಲೇಖೀಸಲಾಗಿದೆ. ಆ ದಿನ ಅಭ್ಯರ್ಥಿ ಕ್ಷೇತ್ರ ದಲ್ಲಿಲ್ಲದಿದ್ದರೂ ಅವರು ಪರಿಷ್ಕೃತ ಅಫಿದವಿತ್‌ನಲ್ಲಿ ಸಹಿ ಇರುವುದು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ಇಂದಿನಿಂದ ಮತ್ತಷ್ಟು ರಂಗು
ಮಂಡ್ಯ ಕ್ಷೇತ್ರದ ಪ್ರಚಾರ ಅಖಾಡಕ್ಕೆ ಸುಮಲತಾ ಪರ ಸೋಮವಾರ ದಿಂದ ಚಿತ್ರ ನಟ ದರ್ಶನ್ ಇಳಿಯಲಿದ್ದರೆ, ಮಂಗಳವಾರ (ಎ.2)ದಿಂದ ಮತ್ತೂಬ್ಬ ನಟ ಯಶ್ ಪ್ರಚಾ ರ ಆರಂಭಿಸುತ್ತಾರೆ. ಎ.4ರಂದು ಮಾಜಿ ಮುಖ್ಯ ಮಂತ್ರಿ ಎಸ್.ಎಂ. ಕೃಷ್ಣ ಅವರು ಮಂಡ್ಯ ಕದನ ಕಣ ವನ್ನು ಪ್ರವೇಶಿಸಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮ ಲತಾ ಅಂಬ ರೀಷ್ ಪರ ಪ್ರಚಾ ರ ನಡೆಸಲಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಆಗಿದೆ ಎನ್ನಲಾದ ಆಡಳಿತಾತ್ಮಕ ಲೋಪಗಳ ಬಗ್ಗೆ ತನಿಖೆ ಕೈಗೊಳ್ಳಲು ವಲಯ ಆಯುಕ್ತರಿಗೆ ಸೂಚಿಸಲಾಗಿದೆ. ಅವರಿಂದ ವರದಿ ಬಂದ ಬಳಿಕ ಚುನಾವಣ ಆಯೋಗ ಕ್ರಮ ಕೈಗೊಳ್ಳಲಿದೆ.
– ಸಂಜೀವ ಕುಮಾರ್
ರಾಜ್ಯ ಮುಖ್ಯ ಚುನಾವಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.