ತಮ್ಮಣ್ಣ , ಸುಮಲತಾ ನೀರೆರಚಾಟ
Team Udayavani, Mar 8, 2019, 12:30 AM IST
ಸುಮಲತಾ ರಂಗಪ್ರವೇಶದಿಂದ ಮಂಡ್ಯ ಲೋಕಸಭಾ ಕ್ಷೇತ್ರ ರಂಗೇರಿದ್ದು, ಮೈತ್ರಿ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಈ ಮಧ್ಯೆ, ಇದೇ ಮೊದಲ ಬಾರಿಗೆ ಸಚಿವ ತಮ್ಮಣ್ಣ ಅವರು ಬಹಿರಂಗವಾಗಿ ಸುಮಲತಾ ವಿರುದ್ಧ ಹರಿಹಾಯ್ದಿದ್ದು, ಇದಕ್ಕೆ ಅಷ್ಟೇ ತೀಕ್ಷ್ಣ ಮಾತುಗಳಲ್ಲಿ ಸುಮಲತಾ ಕೂಡಾ ತಿರುಗೇಟು ನೀಡಿದ್ದಾರೆ. ಇವರಿಬ್ಬರ ನಡುವಿನ ವಾಕ್ಸಮರದ ಝಲಕ್ ಇಲ್ಲಿದೆ.
ಅಂಬರೀಶ್ ಬದುಕಿದ್ದಾಗ ಲೋಟ ನೀರಾದರೂ ಕೊಟ್ಟಿದ್ದಾಳಾ?
ಅಂಬರೀಶ್ ಶಾಸಕ, ಸಚಿವರಾಗಿದ್ದ ವೇಳೆ ಅವರ ಮನೆಗೆ ಹೋದ ಎಷ್ಟು ಜನರನ್ನು ಈಯಮ್ಮ (ಸುಮಲತಾ)
ಮಾತನಾಡಿಸಿದ್ದಾರೆ. ಎಷ್ಟು ಜನಕ್ಕೆ ಕುಡಿಯಲು ನೀರು ಕೊಟ್ಟು, ನೀನು ಯಾವೂರಪ್ಪ, ಏನಪ್ಪ ನಿನ್ನ ಎಂದು ಕೇಳಿದ್ದಾರೆ?. ಅಂದು ಜನರ ಕಷ್ಟ-ಸುಖಗಳಿಗೆ ಸ್ಪಂದಿಸದವರು ಇವತ್ತು ಅಂಬರೀಶ್ ಹೆಸರೇಳಿಕೊಂಡು ಬಂದು, ನಾನೇನೋ ಉದ್ಧಾ ರ ಮಾಡ್ತೀನಿ ಅಂತಿದ್ದಾರೆ.
ಮಂಡ್ಯ ಜಿಲ್ಲೆಯ ಜನರು ಬಣ್ಣದವರ ಮಾತಿಗೆ ಮರುಳಾಗಬಾರದು. ಮೋಜು ಮಾಡಿಕೊಂಡು ಮಲೇಷ್ಯಾ, ಸಿಂಗಾಪುರ ಅಂತ ತಿರುಗಿಕೊಂಡು ಬಣ್ಣದ ಬದುಕು ಮಾಡುವ ಜನರು ನಮಗೆ ಬೇಡ. ಯಾರಿಗೆ ರೈತರ ಬಗ್ಗೆ ಕಾಳಜಿ ಇದೆಯೋ ಅವರನ್ನು ಬೆಂಬಲಿಸಬೇಕು.
ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ನಾವೇನು ಸುಮಲತಾ ಮನವೊಲಿಸುವುದಿಲ್ಲ.
ಯಾರೋ ನೂರು ಜನ ನಾಲ್ಕು ಬಸ್‌ನಲ್ಲಿ ಬೆಂಗಳೂರಿಗೆ ಹೋಗಿ ನೀವೆ ಚುನಾವಣೆಗೆ ನಿಲ್ಲಿ ಎಂದು ಕರೆದ ಮಾತ್ರಕ್ಕೆ ಅವರನ್ನು ಉದ್ಧಾರ ಮಾಡಲು ಸಾಧ್ಯವೇ?.
ನಿಖೀಲ್‌ಕುಮಾರಸ್ವಾಮಿಗೆ ರಕ್ತದಿಂದಲೇ ರಾಜಕೀಯ ಹುಟ್ಟು ಬೆಳೆದು ಬಂದಿದೆ. ನಿಖೀಲ್‌ರನ್ನು ಲೋಕಸಭೆಗೆ ಆಯ್ಕೆ ಮಾಡಿದರೆ ಜಿಲ್ಲೆಗೆ ಮತ್ತಷ್ಟು ಅನುದಾನಗಳು ಹರಿದು ಬರಲಿವೆ.
ಇಂದು ಸಿದ್ಧರಾಮಯ್ಯ, ಕುಮಾರಸ್ವಾಮಿ ಜೊತೆಗೂಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಹಾಗಾಗಿ, ಸಿದ್ದರಾಮಯ್ಯಗೆ ಗೌರವ ನೀಡುವ ಕೆಲಸ ಮಾಡಬೇಕು.
ತಮ್ಮಣ್ಣ ನಮ್ಮನೇಲಿ ನೀರು ಕುಡಿದದ್ದನ್ನು ನೆನಪಿಸಿಕೊಳ್ಳಲಿ
ಅತಿಥಿ ಸತ್ಕಾರ ಏನು ಅಂತ ಅಂಬಿ ಕುಟುಂಬಕ್ಕೆ ಯಾರೂ ಹೇಳಿಕೊಡಬೇಕಿಲ್ಲ. ತಮ್ಮಣ್ಣನವರು ನಮ್ಮ ಮನೆಗೆ ಎಷ್ಟು ಬಂದಿದ್ದಾರೆ, ಎಷ್ಟು ಸಲ ನೀರು ಕುಡಿದಿದ್ದಾರೆ, ಊಟ ದ್ದಾರೆ. ಅವರ ಮನೆಗೆ ನಾವೆಷ್ಟು ಸಲ ಹೋಗಿದ್ದೇವೆ.ಇದೆಲ್ಲವನ್ನೂ ಅವರ ಕುಟುಂಬದವರೇ ಹೇಳಲಿ.
ಬಣ್ಣ ಹಚ್ಚಿರುವವರು ಇನ್ಯಾರೂ ಸ್ಪರ್ಧೆ ಯಲ್ಲಿ ಇಲ್ಲವೇ?. ನಿಖೀಲ್ ಕೂಡಾ ಸಿನಿಮಾ ದವರು. ತಮ್ಮಣ್ಣನವರ ಹೇಳಿಕೆ ನಿಖೀಲ್‌ಗೂ ಅನ್ವಯಿಸಬಹುದು. ದರ್ಶನ್ ಹಾಗೂ ಯಶ್ ಇಬ್ಬರೂ ನನ್ನ ಮನೆಯ ಮಕ್ಕಳು. ದರ್ಶನ್ ನನ್ನ ದೊಡ್ಡ ಮಗ ಇದ್ದಂತೆ. ಯಾರು ಏನೇ ಹೇಳಿದರೂ ದರ್ಶನ್ ನನ್ನ ಜೊತೆ ಇರುತ್ತಾರೆ.
ಕಾಂಗ್ರೆಸ್ ನಾಯಕರು ನನಗೆ ಟಿಕೆಟ್ ನೀಡದಿದ್ದರೂ ಸ್ಥಳೀಯವಾಗಿ ಕಾಂಗ್ರೆಸ್ ಕಾರ್ಯಕರ್ತರು ನಮಗೆ ಬೆಂಬಲ ನೀಡುತ್ತಿದ್ದಾರೆ. ನನ್ನ ಹಿಂದೆ ಯಾವ ಪಕ್ಷವೂ ಇಲ್ಲ, ಅಧಿಕಾರವೂ ಇಲ್ಲ. ಜನರ ಬೆಂಬಲ ಇಟ್ಟುಕೊಂಡು ಮುಂದೆ ಹೋಗುತ್ತೇನೆ. ಬಿಜೆಪಿಯಿಂದ ಆಫರ್ ಬಂದಿಲ್ಲ. ಬಂದರೆ ಜನರನ್ನು ಕೇಳಿ ನಿರ್ಧಾರ ಮಾಡುವೆ
ನಾನು ಅಂಬರೀಶ್ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇನೆ. ಅಂಬರೀಶ್‌ಅಧಿಕಾರದಲ್ಲಿದ್ದ ಸಮಯದಲ್ಲಿ ಭ್ರಷ್ಟಾಚಾರ ಮಾಡಲಿಲ್ಲ. ಒಂದು ರೂ.ಲಂಚ ತಿಂದಿಲ್ಲ. ಪ್ರತಿಯೊಬ್ಬರಿಗೂ ಸಹಾಯ ಮಾಡಿದ ಕೈ ಅದು. ಅಂಬರೀಶ್ ಹೆಸರೇಳಿ ರಾಜಕಾರಣದಲ್ಲಿ ಯಾರ್ಯಾರು ಏನೇನಾಗಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು. ಆ ವಿಚಾರ ಇಲ್ಲಿ ಮಾತನಾಡಲ್ಲ. ಮಾತನಾಡದೆ ಸುಮ್ಮನಿರೋದು ನನ್ನ ಸಂಸ್ಕಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.