ಬಾರಾಮತಿ ಕೋಟೆ ಉಳಿಸಲು ಸುಪ್ರಿಯಾ ಸುಳೆ ಕಸರತ್ತು
Team Udayavani, Apr 2, 2019, 10:48 AM IST
ಪುಣೆ: 2014ರಲ್ಲಿ ಮೋದಿ ಅಲೆಯ ಹೊರತಾಗಿಯೂ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿದ್ದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ನಾಯಕಿ ಸುಪ್ರಿಯಾ ಸುಳೆ ಅವರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲೂ ತನ್ನ ತಂದೆ ಶರದ್ ಪವಾರ್ ಅವರ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿರುವ ಬಾರಾಮತಿ ಲೋಕಸಭಾ ಕ್ಷೇತ್ರಕ್ಕೆ ಸ್ವಲ್ಪವೂ ಹಾನಿಯಾಗದಂತೆ ಅದನ್ನು ಉಳಿಸಿಕೊಳ್ಳಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
2014ರಲ್ಲಿ ಅವರು ಬಿಜೆಪಿಯ ಮಿತ್ರಪಕ್ಷ ರಾಷ್ಟ್ರೀಯ ಸಮಾಜ ಪಕ್ಷದ (ಆರ್‌ಎಸ್‌ಪಿ) ಮಹಾದೇವ್ ಜಾನ್ಕರ್ ಅವರನ್ನು 70 ಸಾವಿರ ಮತಗಳ ಅಂತರದಿಂದ ಸೋಲಿಸಿ ದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ ಒಟ್ಟು 48 ಸ್ಥಾನಗಳ ಪೈಕಿ 45 ಸ್ಥಾನಗಳಲ್ಲಿ ಗೆಲುವು ದಾಖಲಿಸುವ ಗುರಿಯನ್ನು ಹೊಂದಿದ್ದಾರೆ. ಇವುಗಳಲ್ಲಿ ಪವಾರ್ ಕುಟುಂಬದ ಬಾರಾಮತಿ ಕೋಟೆ ಕೂಡ ಸೇರಿದೆ. ಕೇಸರಿ ಪಕ್ಷವು ಬಾರಾಮತಿಯಿಂದ ಈ ಬಾರಿ ತನ್ನ ಚುನಾವಣಾ ಚಿಹ್ನೆಯ ಮೇಲೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಎನ್‌ಸಿಪಿಗೆ ಕಠಿ ಸ್ಪರ್ಧೆಯನ್ನು ನೀಡುವ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದೆ. ಎನ್‌ಸಿಪಿ 1999 ರಿಂದಲೂ ಈ ಕ್ಷೇತ್ರದಲ್ಲಿ ಪ್ರಬಲ ಬಹುಮತದೊಂದಿಗೆ ಗೆಲ್ಲುತ್ತಿದೆ. 2014ರಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಜಾನ್ಕರ್ ಅವರನ್ನು 70 ಸಾವಿರ ಮತಗಳಿಂದ ಸೋಲಿಸಿದ್ದರು. ಇದು ಹೇಳಲು ಉತ್ತಮ ಗೆಲುವು ಆದರೂ 2009ಕ್ಕೆ ಹೋಲಿಸಿದರೆ ಈ ಅಂತರವು ಬಹಳ ಚಿಕ್ಕದಾಗಿದೆ. 2009ರಲ್ಲಿ ಎನ್‌ಸಿಪಿಯ ಗೆಲುವಿನ ಅಂತರವು 3 ಲಕ್ಷ ಮತಗಳಿಗಿಂತಲೂ ಅಧಿಕವಾಗಿತ್ತು. ಈ ಬಾರಿ ಬಿಜೆಪಿ ದೌಂಡ್‌ನ ಆರ್‌ಎಸ್‌ಪಿ ಶಾಸಕ ರಾಹುಲ್ ಕುಲ್ ಅವರ ಪತ್ನಿ ಕಂಚನ್ ಕುಲ್ ಅವರನ್ನು ಬಾರಾಮತಿಯಿಂದ ಪಕ್ಷದ ಅಭ್ಯರ್ಥಿಯಾಗಿ ಸುಳೆ ವಿರುದ್ಧ ಕಣಕ್ಕಿಳಿಸಿದೆ. ಈ ಬಾರಿ ಕ್ಷೇತ್ರದಾದ್ಯಂತ ಜನರನ್ನು ತಲುಪಲು ಹಾಗೂ ತಮ್ಮ ಕೋಟೆಯನ್ನು ಉಳಿಸಿಕೊಳ್ಳಲು ಸುಪ್ರಿಯಾ ಸುಳೆ ಸರ್ವಯತ್ನ ನಡೆಸುತ್ತಿದ್ದಾರೆ. ಈ ಕ್ಷೇತ್ರವು ಬಾರಾಮತಿ, ದೌಂಡ್, ಇಂದಾಪುರ್, ಭೋರ್, ಖಡಕ್‌ವಾಸ್ಲಾ ಮತ್ತು ಪುರಂದರ್ ವಿಧಾನಸಭಾ ಸ್ಥಾನಗಳನ್ನು ಒಳಗೊಂಡಿದೆ. ಕ್ಷೇತ್ರದ ಮುಖ್ಯ ಭಾಗವು ಗ್ರಾಮೀಣ ಪ್ರದೇಶಗಳಿಂದ ರೂಪಿಸಲ್ಪಟ್ಟಿದೆಯಾದರೂ, ಪುಣೆ ನಗರದ ಭಾಗಗಳಾಗಿರುವ ಖಡಕ್‌ವಾಸ್ಲಾ, ಬಾಲೆವಾಡಿ, ಐಟಿ ಕೇಂದ್ರ ಹಿಂಜಾವಾಡಿ ಮತ್ತು ಧಾನಕ್‌ವಾಡಿ ಹಾಗೂ ಚಾಂದನಿ ಚೌಕ್ ಪ್ರದೇಶಗಳು ನಗರ ಮತದಾರರನ್ನು ಹೊಂದಿವೆ.
ಎನ್‌ಸಿಪಿಯ ಪುಣೆ ಜಿಲ್ಲಾ ಘಟಕದ ಮುಖ್ಯಸ್ಥ ಪ್ರದೀಪ್ ಗರತ್ಕರ್ ಮಾತನಾಡುತ್ತಾ, 2014ರಲ್ಲಿ ಮೋದಿ ಅಲೆ ಮತ್ತು ಅಧಿಕಾರ ವಿರೋಧಿ ಪ್ರಚಾರವು ಪ್ರದೇಶದಲ್ಲಿ ಸ್ವಲ್ಪಮಟ್ಟಿಗೆ ಪರಿಣಾಮವನ್ನು ಬೀರಿದೆಯಾದರೂ ಈಗ ಜನರಿಗೆ ಬಿಜೆಪಿ ಆಳ್ವಿಕೆಯ ಅನುಭವವಾಗಿದೆ ಮತ್ತು ಅವರು ನಿರಾಶೆಗೊಂಡಿ¨ªಾರೆ ಎಂದರು. ರೈತರು ದೊಡ್ಡ ಮಟ್ಟಿನಲ್ಲಿ ತೊಂದರೆಯಲ್ಲಿ¨ªಾರೆ. ರಾಜ್ಯ ಮತ್ತು ಕೇಂದ್ರದ ವಿರುದ್ಧ ಜನರಲ್ಲಿ ಸಾಕಷ್ಟು ಕೋಪಗಳಿವೆ ಎಂದವರು ನುಡಿದಿದ್ದಾರೆ.
ಸುಪ್ರಿಯಾ ಸುಳೆ ಅವರು ಕಳೆದ ಐದು ವರ್ಷಗಳಲ್ಲಿ ಬಹಳ ಕಠಿಣ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ ಅವರು, ನಾವು ಬಲವಾದ ಸಂಘಟನೆಯನ್ನು ಹೊಂದಿದ್ದೇವೆ. ಎನ್‌ಸಿಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪ್ರಬಲ ಉಪಸ್ಥಿತಿಯನ್ನು ಹೊಂದಿದ್ದಾರೆ ಎಂದು ಪ್ರತಿಪಾದಿಸಿದರು. ತನ್ನದೇ ಆದ ‘ಕಮಲ’ ಚಿಹ್ನೆಯ ಮೇಲೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಿಜೆಪಿಯ ತಂತ್ರವು ಪಕ್ಷಕ್ಕೆ ಯಾವುದೇ ವ್ಯತ್ಯಾಸವನ್ನು ಉಂಟುಮಾಡಲಿದೆ ಎಂಬುದನ್ನು ಗರತ್ಕರ್ ತಳ್ಳಿಹಾಕಿದ್ದಾರೆ.
ಅತ್ಯುತ್ತಮ ಸಂಸದೆ ಪ್ರಶಸ್ತಿಯನ್ನು ಸ್ವೀಕರಿಸಿರುವ ಸುಳೆ ಅವರು ಜನರ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಮತ್ತು ವಿವಿಧ ಯೋಜನೆಗಳ ಅನುಷ್ಠಾನವನ್ನು ಖಾತ್ರಿಪಡಿಸುವ ಕ್ಷೇತ್ರದ ಮತದಾರರ ನಡುವೆ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಅವರು ಕನಿಷ್ಠ 3 ಲಕ್ಷ ಮತಗಳಿಂದ ಗೆಲ್ಲಲಿದ್ದಾರೆ ಎಂದು ಗರತ್ಕರ್ ಪ್ರತಿಪಾದಿಸಿದ್ದಾರೆ.
ಮತ್ತೂಂದೆಡೆಯಲ್ಲಿ ಶಾಸಕ ರಾಹುಲ್ ಕುಲ್ ಅವರು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರಗಳು ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದಾಗಿ ಮತಗಳು ತನ್ನ ಪತ್ನಿಯ ಕಡೆಗೆ ಬಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಬೇರೆ ಕಡೆಗಳಲ್ಲಿ ಆಗಿರುವ ಅಭಿವೃದ್ಧಿಯು ಇಲ್ಲಿಯೂ ಆಗಬೇಕೆಂಬುದು ನಮ್ಮ ಬಯಕೆಯಾಗಿದೆ ಮತ್ತು ಇದು ಬಿಜೆಪಿ ಅಭ್ಯರ್ಥಿಯ ಗೆಲುವಿನಿಂದ ಮಾತ್ರ ಸಾಧ್ಯವಾಗಿದೆ ಎಂದು ರಾಹುಲ್ ಕುಲ್ ನುಡಿದಿದ್ದಾರೆ. ಪ್ರಸ್ತುತ ಅಭಿವೃದ್ಧಿ ಬಾರಾಮತಿ ಪಟ್ಟಣ ಮತ್ತು ಪಕ್ಕದ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ ಎಂದವರು ಪ್ರತಿಪಾದಿಸಿದ್ದಾರೆ.
ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ, ತ್ಯಾಜ್ಯ ನಿರ್ವಹಣೆ, ಕೆಟ್ಟ ರಸ್ತೆಗಳು ಮತ್ತು ಇತರ ನಗರ ವಿಷಯಗಳು ನಮ್ಮ ಆದ್ಯತೆಯಾಗಲಿವೆ. ಅದೇ, ಗ್ರಾಮೀಣ ಪ್ರದೇಶಗಳಲ್ಲಿ ನೀರಾವರಿ ನಮ್ಮ ಮುಖ್ಯ ಆದ್ಯತೆಯಾಗಿರಲಿದೆ ಎಂದವರು ಹೇಳಿದ್ದಾರೆ. ಪ್ರಧಾನಮಂತ್ರಿ ಮೋದಿ ಅವರು 2014ರಲ್ಲಿ ಬಾರಾಮತಿಯಲ್ಲಿ ಯಾವುದೇ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿರಲಿಲ್ಲ.ಆದರೆ ಈ ಬಾರಿ ರಾಜ್ಯ ನಾಯಕರು ಕ್ಷೇತ್ರದಲ್ಲಿ ಮೋದಿ ಅವರ ರ್ಯಾಲಿಯನ್ನು ಆಯೋಜಿಸಲು ಪ್ರಯತ್ನಿಸುತ್ತಿ¨ªಾರೆ ಎಂದು ಕುಲ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.