ಪ್ರಧಾನಿಯಿಂದ ಗುರಿಯಿಟ್ಟು ಸಾಧನೆ: ಸುರೇಶ್ ಕುಮಾರ್
Team Udayavani, Apr 11, 2019, 6:00 AM IST
ವಿಟ್ಲದ ಹನುಮಗಿರಿ ಶ್ರೀರಾಮ ಮಂದಿರದಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್ ಕೃಷಿಕರೊಂದಿಗೆ ಸಂವಾದ ನಡೆಸಿದರು.
ವಿಟ್ಲ: ದೇಶದ ಪ್ರಧಾನಿ ಮೋದಿಯವರು ಗುರಿ ಇಟ್ಟುಕೊಂಡು ಸಾಧನೆ ಮಾಡುತ್ತಿದ್ದಾರೆ. ಕೃಷಿಕರಿಗಾಗಿ ಹಲವಾರು ಸಮಾಜಮುಖೀ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇನ್ನೂ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದ್ದಾರೆ ಎಂದು ಮಾಜಿ ಸಚಿವ, ಬಿಜೆ.ಪಿಯ ಹಿರಿಯ ಧುರೀಣ ಸುರೇಶ್ ಕುಮಾರ್ ಹೇಳಿದರು.
ಎ. 9ರಂದು ವಿಟ್ಲ ಹನುಮಗಿರಿ ಶ್ರೀರಾಮ ಮಂದಿರದಲ್ಲಿ ಬಿಜೆಪಿ ವಿಟ್ಲ ನಗರ ಸಮಿತಿ ವತಿಯಿಂದ ನಡೆದ ಕೃಷಿಕರೊಂದಿಗೆ ಸಂವಾದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಇತರ ಪಕ್ಷಗಳು ಸಾಲಮನ್ನಾ ಮಾಡಿದ್ದೇವೆ ಎನ್ನುತ್ತಿರುವುದು ಕೇವಲ ಮಿಠಾಯಿ ಆಸೆ ತೋರಿಸುವ ಪ್ರಯತ್ನವಾಗಿದೆ. ಕೃಷಿಕರು ಸ್ವಾವಲಂಬಿಯಾಗಬೇಕು. ಬ್ಯಾಂಕ್‌ನವರು ಸಾಲ ವಸೂಲಾತಿಗಾಗಿ ಕೃಷಿಕನ ಮನೆಬಾಗಿಲಿಗೆ ಬರು ವಂತಾಗಬಾರದು. ಕೃಷಿಕ ಸಾಲ ಮಾಡಿ ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡುವಂತಹ ಕೃತ್ಯಕ್ಕೆ ಹೋಗಬಾರದು ಎನ್ನುವ ಸದುದ್ದೇಶ ದಿಂದ ಪ್ರಧಾನಿಯವರು ಕೆಲವೊಂದು ಅಂಕಿಅಂಶಗಳನ್ನು ಹಾಕಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವೆಲ್ಲವನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಲಿದ್ದಾರೆ ಎಂದರು.
ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೃಷಿ ಯಿಂದ ನೆಮ್ಮದಿ, ಸುಭಿಕ್ಷೆ ಸಿಗಲಿದೆ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿಯವರು ಸಾಬೀತು ಮಾಡಿದ್ದಾರೆ. ಪ್ರಧಾನಿಯವರು ಕೃಷಿಕರಿಗಾಗಿ ಹಲವಾರು ಸವಲತ್ತು ಗಳನ್ನು ನೀಡುತ್ತಿದ್ದಾರೆ ಎಂದರು.
ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಕಾರ್ಯದರ್ಶಿ ಕೇಶವ ಬಜತ್ತೂರು, ರೈತ ಮೋರ್ಚಾದ ಜಿಲ್ಲಾಧ್ಯಕ್ಷ ರಾಜೀವ ಭಂಡಾರಿ, ವಿಟ್ಲ ನಗರ ಬಿಜೆಪಿ ಅಧ್ಯಕ್ಷ ಮೋಹನದಾಸ್ ಉಕ್ಕುಡ, ಬಿಜೆಪಿ ಮುಖಂಡರಾದ ರಾಮಚಂದ್ರ ಬೈಕಂಪಾಡಿ ಮತ್ತಿತರರಿದ್ದರು. ವಿಟ್ಲ ಪ.ಪಂ. ಮಾಜಿ ಅಧ್ಯಕ್ಷ ಅರುಣ್ ವಿಟ್ಲ ಸ್ವಾಗತಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.