ತೇಜಸ್ವಿಯ ಸಂಪರ್ಕ, ನಾಯಕರಲ್ಲಿ ಆತಂಕ
Team Udayavani, Apr 4, 2019, 6:15 AM IST
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಜೊತೆ ನೇರ ಸಂಪರ್ಕ ಬೆಳೆಸಿ ಬಿಜೆಪಿ ಟಿಕೆಟ್ ಪಡೆದಿರುವ ತೇಜಸ್ವಿ ಸೂರ್ಯ ಅವರ ವೇಗ ಕಂಡು ಬಿಜೆಪಿ ನಾಯಕರು ಭಯಭೀತರಾಗಿದ್ದಾರಂತೆ. ಅದರಲ್ಲೂ ಸ್ವತ: ಅಮಿತ್ ಶಾ ಅವರೇ ಬಂದು, ಅಭ್ಯರ್ಥಿ ಪರ ರೋಡ್ ಶೋ ನಡೆಸಿ, ತೇಜಸ್ವಿಯನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಫರ್ಮಾನ್ ಹೊರಡಿಸಿ ಹೋಗಿರುವುದನ್ನು ಕಂಡು ನಾಯಕರು ದಿಗಿಲಿಗೆ ಒಳಗಾಗಿದ್ದಾರಂತೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಪಕ್ಷದ ಹಿರಿಯ ನಾಯಕರಾದ ವಿ.ಸೋಮಣ್ಣ , ಆರ್.ಅಶೋಕ್ ಸೇರಿ ಇತರರಲ್ಲಿ ಇದು ಭಯಕ್ಕೆ ಕಾರಣವಾಗಿದೆಯಂತೆ. ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ತಪ್ಪಿಸಿದವರು, ನಾಳೆ ನಮಗೂ ಟಿಕೆಟ್ ತಪ್ಪಿಸಲ್ಲ ಎಂಬ ಖಾತರಿಯೇನು?. ಹೊಸ ಮುಖಗಳ ಹೆಸರಿನಲ್ಲಿ ತಮ್ಮನ್ನೆಲ್ಲಾ ಶೆಡ್‌ಗೆ ತಳ್ಳಿ ವಿಧಾನಸಭೆ ಹಾಗೂ ಪಾಲಿಕೆ ಚುನಾವಣೆಯಲ್ಲಿ ಪರ್ಯಾಯ ಅಭ್ಯರ್ಥಿಗಳ ಮೂಲಕ ತಮ್ಮದೇ ಆದ ಬ್ರಿಗೇಡ್ ಕಟ್ಟಿಕೊಂಡರೆ ಏನು ಮಾಡುವುದು ಎಂಬ ಆತಂಕ ಈ ಕ್ಷೇತ್ರದ ಬಿಜೆಪಿ ಶಾಸಕರು ಮತ್ತು ಪಾಲಿಕೆ ಸದಸ್ಯರಿಗೆ ಕಾಡುತ್ತಿದೆಯಂತೆ.
ಜತೆಗೆ, ಈಗಾಗಲೇ ನಾನು ಗೆದ್ದು ಆಗಿದೆ, ಈಗೇನಿದ್ದರೂ ಮತದಾನ ಮಾಡಲು ಬರುವವರನ್ನು ಕರೆ ತರುವುದಷ್ಟೇ ಉಳಿದಿರುವ ಕೆಲಸ ಎಂದು ಅಭ್ಯರ್ಥಿ ಹೇಳಿರುವ ಮಾತು ವೈರಲ್ ಆಗಿದೆಯಂತೆ. ಈ ಎಲ್ಲ ಅಂಶಗಳೂ ಫಲಿತಾಂಶದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ವಾಖ್ಯಾನ ಇಡೀ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.