ಕರಾವಳಿಗೆ ಬಂದಾಗ ದೇವಾಲಯಕೆ ಬಂದಂತಾಗುವುದು: ತಾರಾ
Team Udayavani, Apr 6, 2019, 3:48 PM IST
ಗುರುಪುರ: ಕರಾವಳಿಗೆ ಬಂದಾಗ ನನಗೆ ದೇವಾಲಯಕ್ಕೆ ಆಗಮಿಸಿದಂತೆ ಭಾಸವಾಗುತ್ತದೆ. ಯಾಕೆಂದರೆ ಈ ಭಾಗ ದೇವಾಲಯಗಳಿಂದ ಕೂಡಿದ್ದು, ಇಲ್ಲಿನ ಜನತೆ ಸಂಸ್ಕಾರವಂತರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ ಹೇಳಿದರು.
ಅವರು ಗುರುಪುರ ಕೈಕಂಬದಲ್ಲಿ ಗುರುವಾರ ಸಂಜೆ ಬಿಜೆಪಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿಯೊಬ್ಬರು ಒಂದು ಕಡೆ ನನಗೆ ಕುಂಕುಮ ಹಾಕುವವರನ್ನು ಕಂಡರೆ ಭಯವಾಗುತ್ತದೆಎಂದಿದ್ದರು. ಆದರೆ ದಕ್ಷಿಣ ಕನ್ನಡದವರು ಹಣೆ ತುಂಬಾ ಕುಂಕುಮ ಇಡುವ ಸಂಪ್ರದಾಯವನ್ನು ಹೊಂದಿದ್ದಾರೆ. ಹಣೆಯಲ್ಲಿರುವ ಚಿಕ್ಕ ಕುಂಕುಮವನ್ನು ಕಂಡಾಗ ಭಯ ಪಡುವ ಅವರು ಇಲ್ಲಿನವರ ಹಣೆ ತುಂಬಾ ಕುಂಕುಮವನ್ನು ಕಂಡು ಖಂಡಿತಾ ಮೂಛೆ ಹೋಗಬಹುದು ಎಂದರು.
ಮಹಿಳೆಯರಿಗೆ ಶೇ.33 ಮೀಸಲಾತಿ ಕೊಡಬೇಕು ಎಂದ ಕಾಂಗ್ರೆಸಿಗರ ಪ್ರಣಾಳಿಕೆಯಲ್ಲಿ ಪ್ರಸ್ತಾಪವೇ ಇಲ್ಲ. ಮುಸ್ಲಿಮರ ಹೆಸರು ಹೇಳಿಕೊಂಡು ಓಟು ಕೇಳುವ ಕಾಂಗ್ರೆಸ್ ಮುಸ್ಲಿಮರಿಗೆ ಮೋಸ ಮಾಡಿದೆ. ಈ ಬಗ್ಗೆ ಅರ್ಥೈಸಿಕೊಂಡ ಮುಸ್ಲಿಂ ಮೌಲ್ವಿಗಳು ಬೆಂಗಳೂರಿನಲ್ಲಿ ಸಭೆ ನಡೆಸಿ ಬಿಜೆಪಿಗೆ ಸಹಾಯ ಮಾಡುವಂತೆ ಆಗ್ರಹಿಸಿದ್ದಾರೆ.ತ್ರಿವಳಿ ತಲಾಖ್‌ನಂತ ಅನಿಷ್ಠ ಪದ್ಧತಿಯನ್ನು
ಮೋದಿ ಸರಕಾರ ರದ್ದು ಮಾಡಿದೆ. ಮೇಲ್ವರ್ಗದವರಿಗೂ ಮೀಸಲಾತಿ ಕಲ್ಪಿಸಿದ್ದು ಮೋದಿ ಸರಕಾರ ಎಂದರು.
ಶಾಸಕ ಭರತ್ ಶೆಟ್ಟಿ ಮಾತನಾಡಿ, ಭಿನ್ನಾಭಿಪ್ರಾಯ ಏನೇ ಇದ್ದರೂ ದೇಶದ
ಭದ್ರತೆ ವಿಷಯಕ್ಕೆ ಬಂದಾಗ ವಿರೋಧ ಪಕ್ಷಗಳು ಭಿನ್ನಾಭಿಪ್ರಾಯ ಮರೆತು ಸರಕಾರದ ಪರ ನಿಂತಿದ್ದರು. ಬಾಂಗ್ಲಾ ವಿಮೋಚನೆಯ ಸಂದರ್ಭದಲ್ಲಿ ಮಾಜಿ ಪ್ರಧಾನಿ ಅಟಲ್ ಅವರು ಇಂದಿರಾ ಅವರನ್ನು ದುರ್ಗೆ ಎಂದು ಕರೆದು
ಸರಕಾರವನ್ನು ಹೊಗಳಿದ್ದರು. ಆದರೆ ಇಂದು ವಿರೋಧ ಪಕ್ಷಗಳು ದೇಶದ್ರೋಹಿಗಳ ಪರ ನಿಂತಿದ್ದಾರೆ ಎದರು.
ಕರಾವಳಿ ಜನವರಿಗೆ ತಿಳುವಳಿಕೆ ಇಲ್ಲ ಎಂದು ಹೇಳಿದ ಕುಮಾರ ಸ್ವಾಮಿಯವರಿಗೆ ಕಷ್ಟಬಂದಾಗ ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರಿಗೆ ಓಡಿಕೊಂಡು ಬರುತ್ತಾರೆ. ಈ ಬಗ್ಗೆ ದ.ಕ. ಜಿಲ್ಲೆಯವರೇ ಆದ ಮೊಯ್ದಿನ್ ಬಾವಾ, ಮಿಥುನ್ ರೈ ಅವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಸಭೆಯಲ್ಲಿ ಬಿಜೆಪಿ ಮುಖಂಡರಾದ ಸುಲೋಚನಾ ಜಿ.ಕೆ. ಭಟ್, ಪೂಜಾ ಪೈ, ರೂಪಾ ಡಿ. ಬಂಗೇರಾ, ರೂಪೇಶ್ ಕುಮಾರ್ ಅದ್ಯಪಾಡಿ, ಶಿವಪ್ಪ ಬಂಗೇರಾ, ಅಮೃತ್‌ಪಾಲ್ ಡಿ’ಸೋಜಾ ಮತ್ತಿತರರಿದ್ದರು. ಸೋಹನ್ ಅಥಿಕಾರಿ ಸ್ವಾಗತಿಸಿದರು. ಶೋಭಾ ದಾಮೋದರ್ ಅವರು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.