ಕೈ ಕೋಟೆಯಾದರೂ ಕಮಲಕ್ಕೆ ಒಲವು
Team Udayavani, Mar 17, 2019, 6:39 AM IST
ಕ್ಷೇತ್ರದ ವಸ್ತುಸ್ಥಿತಿ: ಕಳೆದ ಎರಡು ಅವಧಿಯಲ್ಲೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೂ, 2014ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನರು ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತ ನೀಡಿದ್ದರು. ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಒಟ್ಟು 2,14,275 ಮತಗಳು ಚಲಾವಣೆಯಾಗಿದ್ದು, ಬಿಜೆಪಿಯ ಪಿ.ಮುನಿರಾಜು ಗೌಡ 1,05,395 ಮತ ಪಡೆದಿದ್ದರು. ಹಾಲಿ ಸಂಸದ ಡಿ.ಕೆ.ಸುರೇಶ್ 73,626 ಮತ ಗಳಿಸಿದ್ದರು. ಜೆಡಿಎಸ್‌ನ ಪ್ರಭಾಕರ್ ರೆಡ್ಡಿ ಪರ 27,656 ಮತ ಚಲಾವಣೆಯಾಗಿದ್ದವು.
ಹಿಂದಿನ ಚುನಾವಣೆಗಳ ಅಂಕಿ-ಅಂಶ ಗಮನಿಸಿದರೆ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಪೈಪೋಟಿಯಿದೆ. ಆದರೆ, ಜೆಡಿಎಸ್ ಬೆಂಬಲ ಕಾಂಗ್ರೆಸ್‌ಗೆ ದೊರೆಯುವುದರಿಂದ ಕಾಂಗ್ರೆಸ್ ಹಿಡಿತ ಹೆಚ್ಚಾಗಿದೆ. ಜತೆಗೆ ಕ್ಷೇತ್ರದ 9 ವಾರ್ಡ್‌ಗಳ ಪೈಕಿ 5ರಲ್ಲಿ ಕಾಂಗ್ರೆಸ್ ಹಾಗೂ 3ರಲ್ಲಿ ಬಿಜೆಪಿ ಸದಸ್ಯರಿದ್ದು, ಉಳಿದೊಂದು ವಾರ್ಡ್‌ನ ಜೆಡಿಎಸ್ ಸದಸ್ಯೆ, ಬಿಜೆಪಿ ಬೆಂಬಲಿಸುತ್ತಿದ್ದಾರೆ.
ಬಿಜೆಪಿ ಕಳೆದ ಎರಡು ಚುನಾವಣೆಗಳಲ್ಲಿ ಹೆಚ್ಚು ಮತ ಪಡೆದಿರುವುದರಿಂದ ಈ ಬಾರಿಯೂ ಅದೇ ನಿರೀಕ್ಷೆಯಲ್ಲಿದೆ. ಆದರೆ, ಸಂಸದರು ಐದು ವರ್ಷಗಳಲ್ಲಿ ಹೆಚ್ಚು ಅನುದಾನ ತಂದು ಮೂಲ ಸೌಕರ್ಯ ಕಲ್ಪಿಸಿರುವುದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬುದು ಕಾಂಗ್ರೆಸ್ ಭರವಸೆ. ಆದರೆ, ಕಾಂಗ್ರೆಸ್ ಪಾಲಿಕೆ ಸದಸ್ಯೆ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಮಹಿಳಾ ಸದಸ್ಯರು, ಶಾಸಕರು ಕಿರುಕುಳ ನೀಡುತ್ತಿದ್ದಾರೆ ಎಂದು ಹಲವು ಬಾರಿ ಆರೋಪಿಸಿದ್ದಾರೆ. ಇದೇ ವಿಚಾರವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಂಡು ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನಕ್ಕೆ ಕೈಹಾಕಿದರೂ ಅಚ್ಚರಿಯಿಲ್ಲ.
ಸಂಸದರ ಪ್ರಮುಖ ಕೊಡುಗೆಗಳು
-20ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕ
-ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಸ್ಮಾರ್ಟ್ ಕ್ಲಾಸ್‌ರೂಂ ನಿರ್ಮಾಣಕ್ಕೆ ಅನುದಾನ
-ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆಯಲ್ಲಿ ಪ್ರಮುಖ ಪಾತ್ರ
ನಿರೀಕ್ಷೆಗಳು
-ವೃಷಭಾವತಿ ನೀರುಗಾಲುವೆ ಪುನಶ್ಚೇತನ
-ಮೈಸೂರು ರಸ್ತೆ ಹಾಗೂ ಹೊರ ವರ್ತುಲ ರಸ್ತೆಗಳ ಅಭಿವೃದ್ಧಿ
-ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ
-ವಾರ್ಡ್‌ಗಳು- 9
-ಬಿಜೆಪಿ- 5
-ಕಾಂಗ್ರೆಸ್- 3
-ಜೆಡಿಎಸ್- 1
-ಜನಸಂಖ್ಯೆ- 6,54,545
-ಮತದಾರರ ಸಂಖ್ಯೆ- 4,45,839
-ಪುರುಷರು- 3,38,686
-ಮಹಿಳೆಯರು- 3,15,859
2014ರ ಚುನಾವಣೆಯಲ್ಲಿ
-ಚಲಾವಣೆಯಾದ ಮತಗಳು- 2,14,275 (ಶೇ.56.13)
-ಬಿಜೆಪಿ ಪಡೆದ ಮತಗಳು- 1,05,395 (ಶೇ. 49.2)
-ಕಾಂಗ್ರೆಸ್ ಪಡೆದ ಮತಗಳು- 73,626 (ಶೇ. 34.4)
-ಜೆಡಿಎಸ್ ಪಡೆದ ಮತಗಳು- 27,656 (ಶೇ. 12.9)
2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಕಾಂಗ್ರೆಸ್ ಶಾಸಕ
-ಪಾಲಿಕೆಯಲ್ಲಿ ಕಾಂಗ್ರೆಸ್ ಸದಸ್ಯರು- 5
-ಬಿಜೆಪಿ ಸದಸ್ಯರು- 4
-ಜೆಡಿಎಸ್- 0
ಮಾಹಿತಿ: ವೆಂ.ಸುನೀಲ್‌ಕುಮಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.