ಅಮಾಯಕರ ಗೋರಿ ಮೇಲೆ ಅನಂತ ಸಾಮ್ರಾಜ್ಯ
Team Udayavani, Apr 19, 2019, 11:34 AM IST
ಕುಮಟಾ: “ಅನಂತಕುಮಾರ ಹೆಗಡೆ ದೇಶಾಭಿಮಾನದ ಹೆಸರಿನಲ್ಲಿ ಅಮಾಯಕ ಯುವಕರನ್ನು ಬಲಿತೆಗೆದುಕೊಂಡು ತಮ್ಮ ರಾಜಕೀಯ ಭವಿಷ್ಯ ಕಟ್ಟಿಕೊಳ್ಳುತ್ತಿದ್ದಾರೆ.
ಇಂತಹ ಕೀಳು ಅಭಿರುಚಿಯ ಸಂಸದರನ್ನು ಬದಲಾಯಿಸುವ ಅಗತ್ಯತೆ ಜಿಲ್ಲೆಯ ಜನತೆಗಿದೆ. ಕೋಮುಗಲಭೆ ಸೃಷ್ಟಿಸುವಂತಹ ಭಾಷಣ ಮಾಡು ವವರಿಗೆ ಮತ ಹಾಕುವ ಬದಲು ಅಭಿವೃದ್ಧಿ ಕೆಲಸ ಮಾಡುವವರಿಗೆ ಮತ ಹಾಕಿ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಮಣಕಿ ಮೈದಾನದಲ್ಲಿ ನಡೆದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದರು.”ನಾನು ಈ ಹಿಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಉತ್ತರಕನ್ನಡ ಅತಿಕ್ರಮ ಣದಾರರ ಸಮಸ್ಯೆ ಬಗೆಹರಿಸುವ ನಿಟ್ಟಿ ನಲ್ಲಿ ಗ್ರಾಮ ವಾಸ್ತವ್ಯ ಕೈಗೊಳ್ಳುವ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಆದರೆ ಚುನಾವಣೆ ನಂತರ ಮೈತ್ರಿ ಸರ್ಕಾ ರ ಆಡಳಿತಕ್ಕೆ ಬಂತು. ಅದೇ ಸಂದರ್ಭದಲ್ಲಿ ಬಿಜೆಪಿಯವರು ಮುಖ್ಯಮಂತ್ರಿ ಆಸನಕ್ಕಾಗಿ ಅಪಪ್ರಚಾರದಂತಹ ಹಲವು ಸಮಸ್ಯೆ ತಂದೊಡ್ಡಿದರು. ಆದರೆ ರೈತರ ಹಾಗೂ ರಾಜ್ಯದ ಹಲವು ಯುವಕರ ಸಮಸ್ಯೆಗೆ ಸ್ಪಂದಿಸದೇ ಸುಮ್ಮನೆ ಕುಳಿತಿಲ್ಲ. ನನ್ನ ಅಧಿಕಾರಾವಧಿಯಲ್ಲಿ ರಾಜ್ಯಾದ್ಯಂತ 16 ಲಕ್ಷ ರೈತ ಕುಟುಂಬದ ಸಾಲಮ ನ್ನಾ ಮಾಡಿದ್ದೇನೆ.
ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ 46,000 ಕುಟುಂಬದ ಸಾಲಮನ್ನಾ ಮಾಡ ಲಾಗಿದೆ’ ಎಂದರು.
ಭಟ್ಕಳದ ಡಾಣ ಚಿತ್ತರಂಜನ್, ತಿಮ್ಮಪ್ಪ ನಾಯ್ಕರ ಸಾವಿಗೆ ನ್ಯಾಯ ದೊರೆತಿಲ್ಲ. ಆರೋಪಿಗಳ ಪತ್ತೆಯಾಗಿಲ್ಲ. ಪರೇಶ ಮೇಸ್ತಾ ಸಾವನ್ನು ಸಿಬಿಐಗೆ ಒಪ್ಪಿಸಿದರೂ ಇತ್ಯರ್ಥವಾಗಿಲ್ಲ. ಈ ಮೂವರ ಸಾವಿಗೂ ನ್ಯಾಯ ದೊರೆಯುವುದಿಲ್ಲ. ಆದರೆ ಬಿಜೆಪಿ ಇವರ ಸಾವನ್ನು ಬಂಡವಾಳವನ್ನಾಗಿಸಿಕೊಂಡಿದೆ. ಇವೆಲ್ಲ ಸಮಸ್ಯೆ ಇತ್ಯರ್ಥವಾಗಬೇಕಾದರೆ ಕೆನರಾ ಲೋಕಸಭಾ ಕ್ಷೇತ್ರದಿಂದ ಆನಂದ ಅಸ್ನೋಟಿಕರ್ ಅವರನ್ನು ಬಹುಮತದಿಂದ ಗೆಲ್ಲಿಸಿ ಎಂದು ವಿನಂತಿಸಿಕೊಂಡರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.