ಲೋಕಸಭೆ ಆದ್ಯತೆಯೇ ವಿಭಿನ್ನ
Team Udayavani, Mar 16, 2019, 6:33 AM IST
ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ಹಾಗೂ ಗ್ರಾಮಾಂತರ ಕ್ಷೇತ್ರಗಳಲ್ಲಿ 2014 ರ ಚುನಾವಣೆಗೂ ಈಗಿನ ಚುನಾವಣೆಗೂ ರಾಜಕೀಯ ಚಿತ್ರಣ ಬದಲಾಗಿದೆ. ಬೆಂಗಳೂರಿನ ನಾಲ್ಕೂ ಲೋಕಸಭೆ ಕ್ಷೇತ್ರಗಳಿಗೆ ಸೇರುವ 28 ವಿಧಾನಸಭೆ ಕ್ಷೇತ್ರಗಳು ಹಾಗೂ ಅಲ್ಲಿನ ಬಿಬಿಎಂಪಿ ವಾರ್ಡ್‌ಗಳಲ್ಲಿ ಮೂರೂ ಪಕ್ಷಗಳ ಬಲಾಬಲ, ಕಳೆದ ಚುನಾವಣೆಯಲ್ಲಿ ವಿಧಾನಸಭೆ ಕ್ಷೇತ್ರವಾರು ಮತ ಗಳಿಕೆ ವಿವರ ಹಾಗೂ ಈಗಿನ ವಸ್ತುಸ್ಥಿತಿ ಕುರಿತು ಮಾಹಿತಿ ನೀಡುವ ಪ್ರಯತ್ನ ಇದಾಗಿದೆ.
ಕ್ಷೇತ್ರದ ವಸ್ತುಸ್ಥಿತಿ: ಕಳೆದೆರಡು ವಿಧಾನಸಭಾ ಚುನಾವಣೆಗಳಲ್ಲಿ ಚಾಮರಾಜಪೇಟೆ ಕ್ಷೇತ್ರ ಪಕ್ಷದ ವಿಷಯದಲ್ಲಿ ಭಿನ್ನ ಫಲಿತಾಂಶ ನೀಡಿದ್ದರೂ, ಎರಡೂ ಬಾರಿ ಜಮೀರ್ ಅಹ್ಮದ್ ಖಾನ್ ಅವರೇ ಶಾಸಕರಾಗಿ ಆಯ್ಕೆಯಾಗಿರುವುದು ವಿಶೇಷ. ಲೋಕಸಭಾ ಚುನಾವಣೆಯಲ್ಲೂ ಇಲ್ಲಿನ ಮತದಾರರ ಆಯ್ಕೆ 2009 ಹಾಗೂ 2014ರಲ್ಲಿ ಕಾಂಗ್ರೆಸ್ಸೇ ಆಗಿತ್ತು.
2014ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಅರ್ಧಕ್ಕೂ ಹೆಚ್ಚು ಮತಗಳು ಕಾಂಗ್ರೆಸ್‌ಗೆ ಲಭಿಸಿವೆ. ಒಟ್ಟಾರೆ ಚಲಾವಣೆಯಾದ 1,07,366 ಮತಗಳ ಪೈಕಿ 59,589 (ಶೇ.56.2) ಮತಗಳು ಕಾಂಗ್ರೆಸ್ ಅಭ್ಯರ್ಥಿ ಪರ ಚಲಾವಣೆಯಾಗಿವೆ. ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ 38,361 (ಶೇ.36.2) ಮತ ಪಡೆದಿದ್ದರು. ಮಧ್ಯಮವರ್ಗ ಮತ್ತು ಬಡವರು ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಅಲ್ಪಸಂಖ್ಯಾತ ಮತದಾತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಬಿಎಂಪಿಯ ಏಳು ವಾರ್ಡ್‌ಗಳ ಪೈಕಿ ಕಾಂಗ್ರೆಸ್ 3, ಬಿಜೆಪಿ 2, ಜೆಡಿಎಸ್ 2 ಸ್ಥಾನ ಗೆದ್ದಿವೆ. ಹಿಂದಿನ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಣಾಹಣಿ ಏರ್ಪಟಿದ್ದು, ಈ ಬಾರಿ ಆ ಪಕ್ಷಗಳೇ ಒಂದಾಗಿ ಬಿಜೆಪಿಯನ್ನು ಎದುರಿಸಬೇಕಾದ ಅನಿವಾರ್ಯತೆ ಈ ಕ್ಷೇತ್ರದಲ್ಲಿ ಎದುರಾಗಿದೆ. ಈ ಬಾರಿಯೂ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಜಿದ್ದಾಜಿದ್ದಿ ಸಾಧ್ಯತೆಯಿದೆ.
ಸಂಸದರಿಂದ ಬಂದ ಪ್ರಮುಖ ಕೊಡುಗೆಗಳು
ಒಟ್ಟಾರೆ ನೀಡಿದ ಅನುದಾನ 5.6 ಕೋಟಿ ರೂ.
-8 ಕುಡಿಯುವ ನೀರಿನ ಯೋಜನೆಗಳು
-3 ಅಂಗನವಾಡಿ ಕೇಂದ್ರಗಳು ಹಾಗೂ ಗ್ರಂಥಾಲಯ,
-3 ಯೋಗ ಕೇಂದ್ರ ಹಾಗೂ ಜಿಮ್‌ಗಳು
-140ನೇ ವಾರ್ಡ್‌ನಲ್ಲಿ ಹಿರಿಯ ನಾಗರೀಕರ ವಿಶ್ರಾಂತಿ ಹಾಗೂ ಸೇವಾಕೇಂದ್ರ
-ವಾಣಿವಿಲಾಸ ಆಸ್ಪತ್ರೆ ಅಭಿವೃದ್ಧಿಗೆ 1.67ಕೋಟಿ ರೂ. ಅನುದಾನ
ನಿರೀಕ್ಷೆ: ಸ್ಮಾರ್ಟ್‌ಸಿಟಿ ಯೋಜನೆಯಡಿ ಕಲಾಸಿಪಾಳ್ಯ ಮಾರುಕಟ್ಟೆ ಅಭಿವೃದ್ಧಿ
ವಿಧಾನಸಭಾ ಕ್ಷೇತ್ರ- ಚಾಮರಾಜಪೇಟೆ
-ವಾರ್ಡ್‌ಗಳು- 7
-ಬಿಜೆಪಿ- 2
-ಕಾಂಗ್ರೆಸ್- 3
-ಜೆಡಿಎಸ್-2
-ಜನಸಂಖ್ಯೆ- 3,42,171
-ಮತದಾರರ ಸಂಖ್ಯೆ- 2,15,384
-ಪುರುಷರು- 1,11,556
-ಮಹಿಳೆಯರು- 1,03,828
2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳು- 1,07,366(ಶೇ. 54.50)
-ಬಿಜೆಪಿ ಪಡೆದ ಮತಗಳು- 38,361 (ಶೇ. 36.2)
-ಕಾಂಗ್ರೆಸ್ ಪಡೆದ ಮತಗಳು- 59,589 (ಶೇ. 56.2)
-ಜೆಡಿಎಸ್ ಪಡೆದ ಮತಗಳು- 2,224 (ಶೇ. 2.1)
2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಜೆಡಿಎಸ್ ಶಾಸಕ (ಜಮೀರ್ ಅಹ್ಮದ್ ಖಾನ್)
-ಪಾಲಿಕೆಯಲ್ಲಿ ಕಾಂಗ್ರೆಸ್ ಸದಸ್ಯರು- 2
-ಬಿಜೆಪಿ ಸದಸ್ಯರು- 2
-ಜೆಡಿಎಸ್- 2
-ಇತರೆ-1
* ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.