ಬೇಸತ್ತ ಜನರಿಂದ ಮೋದಿ ಸರಕಾರ ಪತನ
Team Udayavani, May 6, 2019, 6:00 AM IST
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿಯು ದೇಶದ ಯುವಜನರಿಗೆ, ರೈತರಿಗೆ, ವ್ಯಾಪಾ ರಸ್ಥರಿಗೆ ಹಾಗೂ ಸಾಂವಿಧಾನಿಕ ಸಂಸ್ಥೆಗಳಿಗೆ ಆಘಾತಕಾರಿ ಯಾಗಿತ್ತು. ಹಾಗಾಗಿ, ಪ್ರಸಕ್ತ ಚುನಾವಣೆ ಯಲ್ಲಿ ಮೋದಿಯವರನ್ನು ಜನರು ಅಧಿಕಾರದಿಂದ ಕೆಳಗಿಳಿಸಲಿ ದ್ದಾರೆ ಎಂದು ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಮನಮೋಹನ್ ಸಿಂಗ್ ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಈ ಆಗ್ರಹ ಮಾಡಿರುವ ಅವರು, ”ಕಳೆದೈದು ವರ್ಷದ ಮೋದಿಯವರ ಆಡಳಿತದಲ್ಲಿ ಗರಿಷ್ಠ ಪ್ರಮಾಣದ ಹಗರಣಗಳಾಗಿವೆ. ದೂರದೃಷ್ಟಿತ್ವದ ಕೊರತೆಯಿಂದಾಗಿ ದೇಶದ ಆರ್ಥಿಕತೆ ಹದಗೆಟ್ಟಿದೆ. ನೋಟು ಅಮಾನ್ಯವು ಪ್ರಾಯಶಃ ದೇಶದ ಇತಿಹಾಸ ದಲ್ಲೇ ಅತಿ ದೊಡ್ಡ ಭ್ರಷ್ಟಾಚಾರವಾಗಿದೆ” ಎಂದು ಆರೋಪಿಸಿದ್ದಾರೆ.
ರಾಜತಾಂತ್ರಿಕವಾಗಿಯೂ ಹಲವಾರು ತಪ್ಪುಗಳನ್ನು ಮೋದಿ ಮಾಡಿದ್ದಾರೆ ಎಂದಿರುವ ಅವರು, ಅದಕ್ಕೆ ಉದಾಹರಣೆಯಾಗಿ, ಆಹ್ವಾನವಿರದಿದ್ದರೂ ಮೋದಿ ಪಾಕಿಸ್ಥಾನಕ್ಕೆ ಹೋಗಿದ್ದು ಹಾಗೂ ಪಠಾಣ್‌ಕೋಟ್ ಸೇನಾ ನೆಲೆ ಮೇಲೆ ಉಗ್ರರ ದಾಳಿಯಾ ದಾಗ ಅಪಾಯಕಾರಿ ಎನಿಸಿರುವ ಪಾಕ್ ಐಎಸ್‌ಐ ಪ್ರತಿನಿಧಿಗಳನ್ನು ತನಿಖೆಯ ಹೆಸರಿನಲ್ಲಿ ನಮ್ಮ ಸೇನಾ ನೆಲೆಯೊಳಗೆ ಬಿಟ್ಟುಕೊಂಡಿದ್ದನ್ನು ಹೆಸರಿಸಿದ್ದಾರೆ.
ದೇಶದಲ್ಲಿ ಮೋದಿ ಅಲೆಯಿದೆ ಎಂಬ ಮಾತನ್ನು ತಿರಸ್ಕರಿಸಿದ ಅವರು, ”ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಮೂಲಕವೇ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ ಧೋರಣೆಯಿಂದ ಜನರು ಬೇಸತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮೋದಿ ಸರಕಾರವನ್ನು ಅಧಿಕಾರದಿಂದ ಕಿತ್ತೂಗೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.