ಮನಸ್ಸಿದ್ದಲ್ಲಿ ಮಾರ್ಗ: ನಮಗೂ ಬಿಜೆಪಿಗೂ ಇರುವ ವ್ಯತ್ಯಾಸವಿದು!


Team Udayavani, Apr 15, 2019, 6:00 AM IST

Jyotiraditya-Scindia,

ಕಾಂಗ್ರೆಸ್‌ನಲ್ಲಿ ಸಣ್ಣ ವಯಸ್ಸಿನಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ ಜ್ಯೋತಿರಾಧಿತ್ಯ ಸಿಂಧಿಯಾ. ಲೋಕಸಭೆ ಸದಸ್ಯರಾಗಿದ್ದ ಅವರು ಈಗ ಮಧ್ಯಪ್ರದೇಶದಲ್ಲಿ  ಉಪ ಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಸಹಾಯಕ ಸಚಿವರಾಗಿಯೂ ದುಡಿದಿದ್ದರು.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಯಾವ ರೀತಿಯಲ್ಲಿ ಅನುಕೂಲವಾಗಲಿದೆ?
ಒಂದೂವರೆ ತಿಂಗಳ ಅವಧಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಹುರುಪುಗೊಳಿಸಿ, ಚುನಾವಣೆ ಎದುರಿಸಲು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದೆವು. ಎರಡನೆಯದಾಗಿ ನಮ್ಮ ನಿಲುವಿಗೆ ಹೊಂದಾಣಿಕೆಯಾಗುವ ರೀತಿಯ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದೇವೆ. ಇಷ್ಟು ಮಾತ್ರವಲ್ಲ ಜನ ಅಧಿಕಾರ ಪಾರ್ಟಿ (ಜೆಎಪಿ), ಅಪ್ನಾ ದಳ ಅಥವಾ ಇತರ ಸಮಾನ ಮನಸ್ಕ ಪಕ್ಷಗಳ ಜತೆಗೆ ಮೈತ್ರಿಗೆ ಮುಂದಾಗಿದ್ದೇವೆ. ತಳಮಟ್ಟದ ಕಾರ್ಯ ಕರ್ತರು ಮತ್ತು ಜನರ ಜತೆಗೆ ಬೆರೆಯುವ ಅವತಾರ್‌ ಸಿಂಗ್‌ ಭದನಾಜಿ, ರಾಮ್‌ ಲಾಲ್‌ ರಹಿಜಿ, ಸಾವಿತ್ರಿ ಬಾಯಿ ಫ‌ುಲೆ, ರಾಕೇಶ್‌ ಸಂಚನ್‌ ಸೇರಿದಂತೆ ಹಲವಾರು ಮಂದಿ ನಾಯಕರನ್ನು ಆಯ್ಕೆ ಮಾಡಿ ಕಣಕ್ಕೆ ಇಳಿಸಿದ್ದೇವೆ.

ಚುನಾವಣೆ ಬಳಿಕ ಎಸ್‌ಪಿ-ಬಿಎಸ್‌ಪಿ ಜತೆಗೆ ಮೈತ್ರಿಗೆ ಅವಕಾಶ ಇದೆಯೇ?
ಮುಂದೆ ಹೀಗೆ ಆಗಬಹುದೇ ಎಂಬ ಪ್ರಶ್ನೆಗೆ ಉತ್ತರ ನೀಡುವುದಿಲ್ಲ. ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಮ್ಮ ಕಡೆಯಿಂದ ಹಲವಾರು ಬಾರಿ ಪ್ರಸ್ತಾಪ ಮಾಡಲಾಗಿತ್ತು. ಆದರೆ ಅವರ ಕಡೆಯಿಂದ ಸಕಾರಾತ್ಮಕ ಉತ್ತರ ಬರಲಿಲ್ಲ. ಆದರೆ ಮುಂದೆ, ಅಂದರೆ ಫ‌ಲಿತಾಂಶ ಪ್ರಕಟವಾದ ಬಳಿಕ ಉಂಟಾಗಲಿರುವ ಪರಿಸ್ಥಿತಿ ಅವಲಂಬಿಸಿಕೊಂಡು ಚುನಾವಣೋತ್ತರ ಮೈತ್ರಿ ಏರ್ಪಡಬಾರದು ಎಂದೇನು ಇಲ್ಲವಲ್ಲ? ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ನಮ್ಮದೇ ಪೂರ್ಣ ಪ್ರಮಾಣದ ಶಕ್ತಿಯೊಂದಿಗೆ ಅಖಾಡದಲ್ಲಿ ಹೋರಾಡುತ್ತಿದ್ದೇವೆ. ಜತೆಗೆ 2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಪಕ್ಷವನ್ನು ಸಿದ್ಧಗೊಳಿಸಲಿದ್ದೇವೆ.

ಹಾಗಿದ್ದರೆ ಕಾಂಗ್ರೆಸ್‌ , ಎಸ್‌ಪಿ ಮತ್ತು ಬಿಎಸ್‌ಪಿ ಒಂದೇ ಮತಗಳಿಗಾಗಿ ಹೋರಾಡುತ್ತಿವೆಯೇ?
ಇದು ಕೇವಲ ಮತಗಳಿಗಾಗಿ ಅಲ್ಲ. ಸಿದ್ಧಾಂತಕ್ಕಾಗಿ ನಡೆಯುವ ಹೋರಾಟ. ಲೋಕಸಭೆ ಚುನಾವಣೆಯಲ್ಲಿ “ನಮ್ಮ ಯೋಚನೆಯ ಭಾರತ’ ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ಜನರ ಬಳಿಗೆ ಪ್ರಚಾರಕ್ಕಾಗಿ ತೆರಳಿದ್ದೇವೆ. ಪ್ರಜಾಪ್ರಭುತ್ವವೆಂಬ ವ್ಯವಸ್ಥೆಯಲ್ಲಿ ಜನರೆಂಬ ದೇವರು ಈ ಯೋಚನೆಯನ್ನು ಸ್ವೀಕರಿಸುತ್ತಾರೋ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕು.

ಹಲವು ವರ್ಷಗಳಿಂದ ಪ್ರಿಯಾಂಕಾರನ್ನು ಸಕ್ರಿಯ ರಾಜಕೀಯಕ್ಕೆ ತರಬೇಕು ಮತ್ತು ಅಮೇಠಿ ಹಾಗೂ ರಾಯ್‌ಬರೇಲಿಗೆ ಅವರನ್ನು ಸೀಮಿತಗೊಳಿಸದೆ ರಾಷ್ಟ್ರ ವ್ಯಾಪಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಯೋಚನೆ ಇತ್ತು. ಈಗ ಅವರು ಬಂದ ಮೇಲೆ ಹೇಗಿದೆ?
ಅವರು ಸಕ್ರಿಯ ರಾಜಕೀಯಕ್ಕೆ ಬಂದದ್ದು  ನಮ್ಮ ಪಕ್ಷಕ್ಕೆ ಮಾತ್ರವಲ್ಲ; ದೇಶದ ರಾಜಕೀಯ ವ್ಯವಸ್ಥೆಗೆ ಕೊಡುಗೆ. ಅವರು ಬಂದಿರುವುದರಿಂದ ನಮ್ಮ ಪಕ್ಷದ ಹುರುಪು, ಶಕ್ತಿ ಹೆಚ್ಚಾಗಿದೆ.

– ಪುಲ್ವಾಮಾ ದಾಳಿಯ ಬಳಿಕ ದೇಶಾದ್ಯಂತ, ವಿಶೇಷವಾಗಿ ಹಿಂದಿ ಭಾಷಿಕ ರಾಜ್ಯಗಳ ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರೀಯತೆಯ ಭಾವನೆ ಎಚ್ಚೆತ್ತುಕೊಂಡಿದೆ. ನಿಮ್ಮ ಪ್ರಕಾರ ಈ ಸಂಗತಿ ಚುನಾವಣೆಯ ಮೇಲೆ ಪ್ರಭಾವ ಬೀರಬಹುದೇ?
         ದಾಳಿಯಲ್ಲಿ ಜೀವ ಕಳೆದುಕೊಂಡ ಯೋಧರಿಗೆ ಹುತಾತ್ಮ ಸ್ಥಾನಮಾನ ನೀಡಿಲ್ಲ. ಹೀಗಿರುವಾಗ ಇಲ್ಲಿ ರಾಷ್ಟ್ರೀಯತೆಯ ಪ್ರಶ್ನೆ ಎಲ್ಲಿದೆ? ಬಿಜೆಪಿಯ ಮಾತು ಮತ್ತು ಕೃತಿಯ ನಡುವೆ ಭಾರಿ ವ್ಯತ್ಯಾಸ ಇದೆ. ಅದು ಆ ಪಕ್ಷದ ಪ್ರಮುಖ ಗುಣ. ಅದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ರಾಷ್ಟ್ರೀಯತೆ, ಆರ್ಥಿಕ ಬೆಳವಣಿಗೆ, ಉದ್ಯೋಗ, ನೋಟು ಅಮಾನ್ಯ, ಜಿಎಸ್‌ಟಿ ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ಅದೇ ಧೋರಣೆ. ಮಾತೇ ಬೇರೆ, ಕೃತಿಯೇ ಬೇರೆ. ಆದರೆ ಕಾಂಗ್ರೆಸ್‌ ಭಿನ್ನವಾಗಿದೆ.ನಮ್ಮ ಪಕ್ಷದ ಚಿಂತನೆ, ಧೋರಣೆ ಎಲ್ಲವೂ ಸ್ಪಷ್ಟವಾಗಿಯೇ ಇದೆ. ದೇಶದ ಜನರ ಹಿತದೃಷ್ಟಿಗೆ ಅನುಗುಣವಾಗಿ ದೇಶದ ಅಭಿವೃದ್ಧಿಯನ್ನು ಕಾಂಗ್ರೆಸ್‌ ಮಾಡುತ್ತದೆ. 2004ರಿಂದ 2014ರವರೆಗಿನ ಆಡಳಿತದಲ್ಲಿ ಅದನ್ನು ಗಮನಿಸಿದ್ದಿರಬಹುದು.

– ಮಧ್ಯಪ್ರದೇಶದಲ್ಲಿನ ಕೆಲ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆ ಜತೆಗೆ ಲೋಕಸಭೆಗೆ ನಡೆಯಲಿರುವ ಚುನಾವಣೆಯಲ್ಲಿಯೂ ಪಕ್ಷ ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆಯೇ?
ಉಪ-ಚುನಾವ‌ಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆ ಮಾಡಲಿದೆ ಎಂಬ ವಿಶ್ವಾಸ ನನಗಿದೆ.

– ಮಧ್ಯಪ್ರದೇಶದಲ್ಲಿ ಹಲವು ಬಾರಿ ಕಾಂಗ್ರೆಸ್‌ ಮತ್ತು ನಿಮ್ಮ ಸರ್ಕಾರದ ಜತೆಗೆ ಗುರುತಿಸಿಕೊಂಡಿರುವವರ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿಯಾಗಿದೆಯಲ್ಲ?
ಬಿಜೆಪಿ ನೇತೃತ್ವದ ಸರ್ಕಾರವು ಪ್ರತಿಕಾರದ ಮನೋಭಾವನೆ ಹೊಂದಿದೆ. ಅದು ದೇಶವನ್ನು ರೈತ, ದಲಿತ, ಆದಿವಾಸಿ ಮುಕ್ತ ಭಾರತವಾಗಿಸಬೇಕು ಎಂಬ ಧೋರಣೆ ಹೊಂದಿದೆ. ಕಾಂಗ್ರೆಸ್‌ ಮುಕ್ತ ಭಾರತದ  ಜತೆಗೆ ಪ್ರತಿಪಕ್ಷ ರಹಿತ ಭಾರತವೂ ಬೇಕು ಎಂಬ ಧೋರಣೆ ಹೊಂದಿದೆ. ಆದರೆ ದೇಶದ ಜನರು ಸತ್ಯ ಮತ್ತು ನ್ಯಾಯದ ಕಡೆಗೆ ಇದ್ದಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸೋಲಲಿದೆ ಎನ್ನುವುದು ನನ್ನ ನಂಬುಗೆ.

– ಗ್ವಾಲಿಯರ್‌ನಿಂದ ನಿಮ್ಮ ಪತ್ನಿ ಪ್ರಿಯದರ್ಶಿನಿ ರಾಜೆಗೆ ಟಿಕೆಟ್‌ ನಿರಾಕರಿಸಿದ್ದೀರಿ. ಯಾಕೆ?
ಯಾರಿಗೆ ಆಗಲಿ ಟಿಕೆಟ್‌ ನೀಡುವ ಮತ್ತು ನಿರಾಕರಿಸುವ ವ್ಯಾಪ್ತಿ ನನ್ನದಲ್ಲ. ಒಂದು ವೇಳೆ ಪುರುಷ ಅಭ್ಯರ್ಥಿಗಳಿಗಿಂತ ಮಹಿಳೆಯರು ಸೂಕ್ತರಾಗಿದ್ದರೆ ಅವರಿಗೆ ಅವಕಾಶ ನೀಡಬಹುದು. ನನ್ನ ಪತ್ನಿ ಎಂಬ ಕಾರಣಕ್ಕಾಗಿ ಮಾತ್ರವಲ್ಲ, ಯಾರಿಗೇ ಆಗಲಿ ಟಿಕೆಟ್‌ ನಿರಾಕರಿಸುವ ಅಧಿಕಾರ ನನ್ನಲ್ಲಿಲ್ಲ.

– ನಿಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖೀಸಲಾಗಿರುವ “ನ್ಯಾಯ್‌’ ಜಾರಿ ಮಾಡಲು ಸಾಧ್ಯವೇ?
ಅದನ್ನು ಹೇಗೆ ಜಾರಿ ಮಾಡುತ್ತೇವೆ ಮತ್ತು ಹೇಗೆ ಮಾಡಲಿದ್ದೇವೆ ಎನ್ನುವದನ್ನು ನೋಡಿ- ಈ ಯೋಜನೆ ಜಾರಿಗೆ ನಮಗೆ 3.6 ಲಕ್ಷ ಕೋಟಿ ರೂ. ಬೇಕಾಗುತ್ತದೆ ಮತ್ತು ಅದಕ್ಕೆ ಬೇಕಾದ ಸಂಪನ್ಮೂಲ ಸಂಗ್ರಹಿಸಲಿದ್ದೇವೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಭಾರತ್‌ ನಿರ್ಮಾಣ್‌ ಮತ್ತು ರಾಜೀವ್‌ ಗಾಂಧಿ ಗ್ರಾಮ ವಿದ್ಯುದೀಕರಣ ಯೋಜನೆಯನ್ನು ಜಾರಿಗೆ ತಂದಾಗ ಇದೇ ರೀತಿಯ ಪ್ರಶ್ನೆಗಳನ್ನು ಕೇಳಲಾಗಿತ್ತು. ಉದ್ಯೋಗ ಖಾತರಿ ಯೋಜನೆಗೆ 40 ಸಾವಿರ ಕೋಟಿ ರೂ., 72 ಸಾವಿರ ಕೋಟಿ ರೂ. ವೆಚ್ಚದಲ್ಲಿ ರೈತರ ಸಾಲ ಮನ್ನಾ ಯೋಜನೆಯನ್ನು ಯುಪಿಎ ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿತ್ತು. ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ರೈತರಿಗಾಗಿ 79 ಸಾವಿರ ಕೋಟಿ ರೂ. ಮೌಲ್ಯದ ಸಾಲಮನ್ನಾ ಜಾರಿ ಮಾಡಿದ್ದೇವೆ. ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗವಿದೆ. ಹಾಗಿದ್ದಾಗ ಮಾತ್ರ ಅಸಾಧ್ಯವಾದದ್ದು ಸಾಧ್ಯವಾಗುತ್ತದೆ. ಅದುವೇ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಇರುವ ವ್ಯತ್ಯಾಸ.

(ಸಂದರ್ಶನ ಕೃಪೆ: ದ ಹಿಂದುಸ್ತಾನ್‌ ಟೈಮ್ಸ್‌)

– ಜ್ಯೋತಿರಾಧಿತ್ಯ ಸಿಂಧಿಯಾ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.