ಪ್ರಧಾನಿ ವಿರುದ್ಧ ದ್ವೇಷವಿಲ್ಲ; ಪ್ರೀತಿ: ರಾಹುಲ್‌


Team Udayavani, Apr 6, 2019, 6:00 AM IST

e-28

ಪ್ರಧಾನಿ ಮೋದಿ ವಿರುದ್ಧ ತಮಗೆ ದ್ವೇಷವಿಲ್ಲ; ಪ್ರೀತಿಯಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಪುಣೆಯಲ್ಲಿ ವಿದ್ಯಾರ್ಥಿಗಳ ಜತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ಪಕ್ಷದ ಪ್ರಣಾ ಳಿಕೆ ದೇಶದ ಜನರಿಂದ ಸ್ವೀಕರಿಸಿದ ಸಲಹೆಯಾಗಿದೆ ಎಂದು ಹೇಳಿದ್ದಾರೆ. ಅದರಲ್ಲಿ ಘೋಷಣೆ ಯಾಗಿರುವಂತೆ ಬಡ ಕುಟುಂಬಗಳಿಗೆ ಪ್ರತಿ ವರ್ಷ 72 ಸಾವಿರ ರೂ. ನೀಡುವ ಯೋಜನೆ ಬಗ್ಗೆ ಆತಂಕ ಪಡಬೇಕಾಗಿಲ್ಲ. ಚಂದ್ರಾಪುರದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ನಾಯಕ ಎಲ್‌.ಕೆ.ಅಡ್ವಾಣಿಗೆ ಪ್ರಧಾನಿ ಮೋದಿ ಅಗೌರವ ತೋರಿಸಿದ್ದಾರೆ ಎಂದರು.

ಎಚ್ಡಿಕೆ ಮಾದರಿಯಲ್ಲಿ ನಾಯ್ಡು ಪ್ರತಿಭಟನೆ
ಕರ್ನಾಟಕದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದನ್ನು ಖಂಡಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿನಲ್ಲಿರುವ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಅದೇ ಮಾದರಿಯನ್ನು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅನುಸರಿಸಿದ್ದಾರೆ. ಟಿಡಿಪಿ ನಾಯಕ ಸಿ.ಎಂ. ರಮೇಶ್‌, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್‌ ಮಂಡಳಿ ಅಧ್ಯಕ್ಷ ಪುಟ್ಟ ಸುಧಾಕರ್‌ ಯಾದವ್‌ ನಿವಾಸದ ಮೇಲೆ ಗುರುವಾರ ನಡೆದ ದಾಳಿ ಖಂಡಿಸಿ ವಿಜಯವಾಡದಲ್ಲಿ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಐಟಿ ದಾಳಿಗೆ ಪ್ರಧಾನಿ ಮೋದಿಯವರೇ ಕಾರಣ. ದೇಶದ ಸಾಂವಿಧಾನಿಕ ಸಂಸ್ಥೆಗಳು ಇಂದು ಅಪಾಯಕಾರಿ ಸ್ಥಿತಿಯಲ್ಲಿವೆ. ಆದಾಯ ತೆರಿಗೆ ಇಲಾಖೆ ಹಾಗೂ ಚುನಾವಣಾ ಆಯೋಗಗಳನ್ನು ಮೋದಿ ತಮ್ಮ ಆಣತಿಯಂತೆ ಕುಣಿಸುತ್ತಿದ್ದಾರೆ. ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವೂ ಬಿಜೆಪಿಗೆ ಕೈ ಜೋಡಿಸಿದ್ದು, ಇದರ ಪರಿಣಾಮವಾಗಿ, ಟಿಡಿಪಿ ನಾಯಕರ ನಿವಾಸಗಳ ಮೇಲೆ ರೈಡ್‌ಗಳಾಗುತ್ತಿವೆ. ಇಂಥ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ ಎಂದು ಹೇಳಿದ್ದಾರೆ.

ಒಂದೇ ಕ್ಷೇತ್ರದಲ್ಲಿ ಪತಿ-ಪತ್ನಿ ನಾಮಪತ್ರ!
ಮಹಾರಾಷ್ಟ್ರದ ಅಹ್ಮದ್‌ನಗರ್‌ನಿಂದ ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಹಾರಾಷ್ಟ್ರದ ಕಾಂಗ್ರೆಸ್‌ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್‌ ಅವರ ಪುತ್ರ ಸುಜವ್‌ ವಿಖೆ ಪಾಟೀಲ್‌, ತಮ್ಮ ನಾಮಪತ್ರ ಸಲ್ಲಿಸಿ ಎರಡು ವಾರಗಳಾಗಿದೆಯಷ್ಟೆ. ಅದೇ ಕ್ಷೇತ್ರದಲ್ಲಿ ಅವರ ಪತ್ನಿಯೂ ಸಹ ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ಹಾಗಂತ, ಪತಿಯ ವಿರುದ್ಧವೇ ಪತ್ನಿ ಕಣಕ್ಕಿಳಿದಂತಲ್ಲ. ಇದೊಂದು ಮುನ್ನೆಚ್ಚರಿಕೆಯ ನಡೆ ಎಂದು ಸುಜಯ್‌ ಕುಟುಂಬದ ಮೂಲಗಳು ತಿಳಿಸಿವೆ. ಒಂದೊಮ್ಮೆ, ಸುಜಯ್‌ರವರ ನಾಮಪತ್ರ ತಿರಸ್ಕೃತವಾದರೆ ಪತ್ನಿಯನ್ನಾದರೂ ಗೆಲ್ಲಿಸುವ ಆಲೋಚನೆ ಅವರ ಕುಟುಂಬದ್ದು ಎಂದು ಹೇಳಲಾಗಿದೆ.

“ಹೂವಿನ ಹಾಸಿಗೆ ಆಗಿರಲಿಲ್ಲ’
ಬಿಜೆಪಿ ನಾಯಕಿ, ಮಥುರಾ ಸಂಸದೆ ಹೇಮಮಾಲಿನಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಸ್ವಕ್ಷೇತ್ರಕ್ಕೆ 250 ಬಾರಿ ಭೇಟಿ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ತಮ್ಮ ಜೀವನದಲ್ಲಿ ಯಾವ ವಿಚಾರವೂ ಹೂವಿನ ಹಾಸಿಗೆ ಆಗಿರಲಿಲ್ಲ ಎಂದು ಹೇಳಿಕೊಂಡಿರುವ ಅವರು, ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಮೊತ್ತ ವಿನಿಯೋಗ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ರಾಹುಲ್‌ ಹೆಸರಿನಲ್ಲಿ ಮತ್ತಿಬ್ಬರು ನಾಮಪತ್ರ
ವಯನಾಡ್‌ನಿಂದ ಕಣಕ್ಕೆ ಇಳಿದಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೂ ಅದೇ ಸಮಸ್ಯೆ ಉಂಟಾಗಿದೆ. ಕೇರಳ ವಿವಿಯಲ್ಲಿ ಸಂಶೋಧನ ವಿದ್ಯಾರ್ಥಿ ರಾಹುಲ್‌ ಗಾಂಧಿ ಕೆ.ಇ. ಎಂಬುವರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಅಖೀಲ ಇಂಡಿಯಾ ಮಕ್ಕಳ್‌ ಖಡಕಮ್‌ ಎಂಬ ಪಕ್ಷ ರಾಹುಲ್‌ ಗಾಂಧಿ ಕೆ. ಎಂಬುವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು, ಇವ ರೆ ಲ್ಲರ ಜತೆಗೆ ಕೆ.ಎಂ.ಶಿವಪ್ರಸಾದ ಗಾಂಧಿ ಎಂಬುವರೂ ನಾಮಪತ್ರ ಸಲ್ಲಿಸಿದ್ದಾರೆ.

10ಕ್ಕೆ ರಾಹುಲ್‌, 11ಕ್ಕೆ ಸೋನಿಯಾ ನಾಮಪತ್ರ
ವಯನಾಡ್‌ನ‌ಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದ ಬಳಿಕ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅಮೇಠಿ ಯಿಂದ ಏ.10ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಎ. 11ರಂದು ರಾಯ್‌ಬರೇಲಿಯಿಂದ ನಾಮಪತ್ರ ಸಲ್ಲಿಸಲಿದ್ದಾರೆ.

ಭೋಪಾಲದಲ್ಲಿ ಅಡ್ವಾಣಿ ಪುತ್ರಿಗೆ ಟಿಕೆಟ್‌?
ಮಧ್ಯಪ್ರದೇಶದ ಭೋಪಾಲದಲ್ಲಿ ಕಾಂಗ್ರೆಸ್‌ ವತಿಯಿಂದ ಸ್ಪರ್ಧಿಸಿರುವ ಮಾಜಿ ಸಿಎಂ ದಿಗ್ವಿಜಯ ಸಿಂಗ್‌ ವಿರುದ್ಧ ಬಿಜೆಪಿ ನಾಯಕ ಎಲ್‌.ಕೆ.ಅಡ್ವಾಣಿ ಪುತ್ರಿ ಪ್ರತಿಭಾ ಅಡ್ವಾಣಿ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿದೆ. ಗುರು ವಾರ ಅಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ಗಾಂಧಿನಗರದಲ್ಲಿ ಟಿಕೆಟ್‌ ನೀಡದೇ ಇರುವ ಬಗ್ಗೆ ಬೇಸರದ ದನಿಯಲ್ಲಿ ಬರೆದುಕೊಂಡ ನಂತರ ಈ ವಿಚಾ ರ ಮುನ್ನೆಲೆಗೆ ಬಂದಿದೆ. 2014 ರಲ್ಲೇ ಅಡ್ವಾಣಿಗೆ ಭೋಪಾಲದಲ್ಲಿ ಸ್ಪರ್ಧಿಸುವಂತೆ ಮುಖಂಡರು ಸಲಹೆ ನೀಡಿದ್ದರು. ಆದರೆ ಅವರು ನಿರಾಕರಿಸಿ, ಗಾಂಧಿ ನಗರದಲ್ಲೇ ಕಣಕ್ಕಿಳಿದಿದ್ದರು. 1989ರಿಂದಲೂ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತಾ ಬಂದಿದೆ. ಪ್ರತಿಭಾ ಅಡ್ವಾಣಿ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಬಿಜೆ ಪಿ ಯಲ್ಲಿ ಕೊಂಚ ಅಸ ಮಾ ಧಾ ನ ವಿದ್ದು, ಇವರ ಬದ ಲಿಗೆ ಮ.ಪ್ರ ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಮಾಜಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಸೇರಿದಂತೆ ಹಲವರ ಹೆಸರು ಕೇಳಿಬಂದಿದೆ.

ಮುಸ್ಲಿಂ ಲೀಗ್‌ ವೈರಸ್‌ ಎಂದ ಯೋಗಿ
ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ಪಕ್ಷವನ್ನು ವೈರಸ್‌ ಎಂದು ಕರೆದಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಕಾಂಗ್ರೆಸ್‌ಗೆ ಈ ಮುಸ್ಲಿಂ ಲೀಗ್‌ ವೈರಸ್‌ ಬಾಧಿಸಿದೆ ಎಂದಿದ್ದಾರೆ. ಮುಸ್ಲಿಂ ಲೀಗ್‌ ಎಂಬ ವೈರಸ್‌ನಿಂದ ಬಾಧಿತರಾದವರು ಯಾರೂ ಉಳಿಯುವುದಿಲ್ಲ. ಕಾಂಗ್ರೆಸ್‌ಗೆ ಈ ವೈರಸ್‌ ಅಂಟಿಕೊಂಡಿದೆ. ಅವರು ಗೆದ್ದರೆ ಇಡೀ ದೇಶಕ್ಕೆ ಈ ವೈರಸ್‌ ಹರಡುತ್ತದೆ ಎಂದು ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌, ವಯನಾಡ್‌ನ‌ಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಸಿಕ್ಕ ಪ್ರಚಾರದಿಂದ ಸಿಟ್ಟಾಗಿ ಈ ಹೇಳಿಕೆ ನೀಡಿದ್ದಾರೆ ಎಂದಿದೆ.

ಬಾಂಡ್‌ಗೆ ಮಧ್ಯಂತರ ತಡೆ ಇಲ್ಲ
ಕೇಂದ್ರ ಸರಕಾರ ಜಾರಿ ಮಾಡಿದ ಚುನಾವಣಾ ಬಾಂಡ್‌ಗಳನ್ನು ರದ್ದು ಮಾಡುವ ಬಗ್ಗೆ ಮಧ್ಯಂತರ ಆದೇಶ ಕೊಡಬೇಕು ಎಂಬ ಮನವಿ ಪುರಸ್ಕರಿಸಲು ಸುಪ್ರೀಂಕೋರ್ಟ್‌ ಶುಕ್ರವಾರ ನಿರಾಕರಿಸಿದೆ. ಈ ಬಗ್ಗೆ ಎನ್‌ಜಿಒ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ನೀಡಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ನ್ಯಾಯಪೀಠ ಏ.10ರಂದು ವಿಚಾರಣೆ ಕೈಗೆತ್ತಿಕೊಳ್ಳಲಾಗುತ್ತದೆ. ಹೀಗಾಗಿ ಸಮರ್ಪಕ ರೀತಿಯಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿತು.

ಪ್ರಧಾನಿ ಮೋದಿ ಬೆದರಿಕೆ ಹಾಕುವ ವ್ಯಕ್ತಿ. ರಾಬರ್ಟ್‌ ವಾದ್ರಾ ಅವರನ್ನು ಜೈಲಿಗೆ ಹಾಕುವುದಾ ಗಿ ಸೋನಿಯಾ ಗಾಂಧಿಗೆ ಬೆದರಿಕೆ ಒಡ್ಡುವ ಮೂಲಕ ಕಾಂಗ್ರೆಸ್‌ ಜತೆಗೆ ಇತರ ಪಕ್ಷಗಳು ಮೈತ್ರಿ ಮಾಡಿಕೊಳ್ಳದಂತೆ ನೋಡಿಕೊಳ್ಳುತ್ತಿದ್ದಾರೆ.
ಪ್ರಕಾಶ್‌ ಅಂಬೇಡ್ಕರ್‌, ದಲಿತ ಮುಖಂಡ

ಟಾಪ್ ನ್ಯೂಸ್

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.