ನಮಗೂ ಬೇಕು ಕ್ಷೇಮಾಭಿವೃದ್ಧಿ ಮಂಡಳಿ
Team Udayavani, Apr 6, 2019, 10:54 AM IST
ಬೆಂಗಳೂರು: “ನಮಗೂ ಮತದಾನದ ಹಕ್ಕಿದೆ. ಆದರೂ, ನಮ್ಮ ಗೋಳನ್ನು ಸರ್ಕಾರ, ರಾಜಕೀಯ ಮುಖಂಡರು ಕೇಳಿಸಿಕೊಳ್ಳುವುದಿಲ್ಲ. ನಮಗೂ ಕ್ಷೇಮಾಭಿವೃದ್ಧಿ ಮಂಡಳಿ ಬೇಕು.ನಿಖರವಾದ ಸಂಖ್ಯೆ ತಿಳಿಯುವ ಸಂಬಂಧ ಸರ್ವೇಯಾಗಬೇಕು’. ಇದು ನಗರದ ತೃತೀಯ ಲಿಂಗಿಗಳ ಒಕ್ಕೊರಲ ಕೂಗು.
ದೇಶದ ಎಲ್ಲಾ ರಾಜ್ಯಗಳಲ್ಲೂತೃತೀಯ ಲಿಂಗಿಗಳ ಕ್ಷೇಮಾಭಿವೃದ್ಧಿ
ಮಂಡಳಿ ಇರಬೇಕು ಎಂದು 2014 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ, ಪಶ್ಚಿಮ ಬಂಗಾಳ, ಕೇರಳ ಬಿಟ್ಟರೆ, ಬೇರಾವ ರಾಜ್ಯದಲ್ಲೂ ಮಂಡಳಿ ಸ್ಥಾಪನೆಯಾಗಿಲ್ಲ. ಕರ್ನಾಟಕ ಸೇರಿದಂತೆ ಎಲ್ಲಾ
ರಾಜ್ಯಗಳಲ್ಲೂ ತೃತೀಯ ಲಿಂಗಿಗಳ ಅಭಿವೃದ್ಧಿಗಾಗಿ ಕಾನೂನು ಜಾರಿಗೆ
ಬರಬೇಕು. ಜತೆಗೆ ಜಿಲ್ಲಾ ಕೇಂದ್ರಗಳಲ್ಲೂ ಸೆಲ್‌ಗಳು ರಚನೆಯಾಗಬೇಕು.
ಉದ್ಯೋಗ ಮತ್ತು ವಸತಿ ಸೌಲಭ್ಯದ ಮೂಲಕ, ಗೌರವಯುತ ಬದುಕು
ಕಟ್ಟಿಕೊಳ್ಳಲು ಅವಕಾಶ ಸಿಗಬೇಕು.
ಇವೆಲ್ಲವೂ ಸಿಗಬೇಕಾದರೆ ರಾಷ್ಟ್ರೀಯ ಪ್ರಾಧಿಕಾರ ರಚನೆಯಾಗಬೇಕು ಎಂದು ಜೆ.ಪಿ.ನಗರದ ಮಾರೇನಹಳ್ಳಿ ನಿವಾಸಿ ಕಾಂಚನ ಹೇಳುತ್ತಾರೆ.
ಮಾರ್ಗಸೂಚಿ ಜಾರಿಯಾಗಬೇಕು: ತೃತೀಯ ಲಿಂಗಿಗಳ ಬಗ್ಗೆ ಈವರೆಗೆ
ಯಾವುದೇ ವೈದ್ಯಕೀಯ ಮಾರ್ಗಸೂಚಿ ಜಾರಿಯಾಗಿಲ್ಲ. ಈ ಬಗ್ಗೆ ಕೇಂದ್ರ
ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗಮನ
ಹರಿಸಬೇಕು. ಒಬ್ಬ ವ್ಯಕ್ತಿಯ ಹೃದಯಕ್ಕೆ ಸಂಬಂಧಿಸಿದ ಚಿಕಿತ್ಸೆ ನಡೆಯಬೇಕಾದರೆ ಒಂದು ಮಾರ್ಗಸೂಚಿ ಇರುತ್ತದೆ. ಅದೇ
ರೀತಿ, ಹೆಣ್ಣು ಗಂಡಾಗಿ ಅಥವಾ ಗಂಡು ಹೆಣ್ಣಾಗಿ ಪರಿವರ್ತನೆಯಾಗುವ
ಸಂಬಂಧ ಮಾರ್ಗಸೂಚಿಯೊಂದನ್ನು ಸರ್ಕಾರ ರೂಪಿಸಬೇಕು ಎಂದು ಸಂಗಮ ಸಂಸ್ಥೆಯ ನಿಶಾ ಗುಳ್ಳೂರು ಹೇಳುತ್ತಾರೆ.
“ಉದಯವಾಣಿ’ ಜನತೆ ಮಾತನಾಡಿದ ನಿಶಾ, 2018ರಲ್ಲಿ ಕೇಂದ್ರ
ಸರ್ಕಾರ ತೃತೀಯ ಲಿಂಗಿಗಳ ಮಸೂದೆ ಜಾರಿಗೆ ತಂದಿದ್ದು, ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ರಾಜ್ಯಸಭೆಯಲ್ಲಿ ಈಗಾಗಲೇ ಮಂಡನೆಯಾಗಿರುವ ಈ ಮಸೂದೆಗೆ ಲೋಕಸಭೆಯಲ್ಲಿ ಅಂಗೀ
ಕಾರ ದೊರೆಯಬೇಕಿದೆ. ಭಿಕ್ಷಾಟನೆ ಅಪ ರಾಧ, ಕುಟುಂಬದಲ್ಲೇ ಇರಬೇಕು, ಸ್ನೇಹಿ ತರ ಮತ್ತು ಹಿರಿಯರ ಜತೆ ಇರಬಾರದು ಎಂಬುದೂ ಸೇರಿ ಹಲವು ಷರತ್ತುಗಳು ಇದರಲ್ಲಿವೆ. ಯಾವುದೇ ಕಾರಣಕ್ಕೂ ಈ ಬಿಲ್ ಜಾರಿಯಾಗಬಾರದು ಎಂದು ಒತ್ತಾಯಿಸುತ್ತಾರೆ.
ಸರ್ವೇ ನಡೆಯಬೇಕು: ತೃತೀಯ ಲಿಂಗಿಗಳು ಎಷ್ಟು ಸಂಖ್ಯೆಯಲ್ಲಿದ್ದಾರೆ
ಎಂಬ ಬಗ್ಗೆ ಇಲ್ಲಿಯವರೆಗೂ ಯಾವುದೇ ಸರ್ವೇ ನಡೆದಿಲ್ಲ. ಕೆಲವರು
ಕುಟುಂಬದವರಿಗೆ ಹೆದರಿ ಮತದಾರರ ಪಟ್ಟಿಯಲ್ಲಿ ಗಂಡಾಗಿ, ಇನ್ನೂ ಕೆಲವರು ಹೆಣ್ಣಾಗಿ ಉಳಿದಿದ್ದಾರೆ. ಹೀಗಾಗಿ, ಈಬಗ್ಗೆ ನಿಖರ ಮಾಹಿತಿ ಸಿಗುತ್ತಿಲ್ಲ. ನಿಖರ ಸಂಖ್ಯೆ ತಿಳಿಯಲು ಒಂದು ಸರ್ವೇ ನಡೆಸಬೇಕು ಎಂಬ ಒಕ್ಕೂರಲ ಆಗ್ರಹ ಕೇಳಿ ಬಂದಿದೆ.
ಎಲ್ಲೆಲ್ಲಿ ಎಷ್ಟು ಇದ್ದಾರೆ?
ಚುನಾವಣಾ ಆಯೋಗ ನೀಡಿರುವ2019, ಜನವರಿ 16ರ ಅಂಕಿ
-ಅಂಶಗಳ ಪ್ರಕಾರ, ಬೆಂಗಳೂರು ನಗರದಲ್ಲಿ 326 ಮಂದಿ ತೃತೀಯಲಿಂಗಿ ಮತದಾರರಿದ್ದಾರೆ. ಬಿಬಿಎಂಪಿಯ ಕೇಂದ್ರ ಭಾಗದಲ್ಲಿ
169, ಉತ್ತರ ಭಾಗದಲ್ಲಿ 417, ಹಾಗೂ ದಕ್ಷಿಣ ಭಾಗದಲ್ಲಿ 326
ಮಂದಿ ಮತದಾರರ ಗುರುತು ಚೀಟಿ ಹೊಂದಿದ್ದಾರೆ.
ನಿಮ್ಮ ಅಭಿಮತ ಮತ್ತೂಂದು ಸಾರ್ವತ್ರಿಕ ಚುನಾವಣೆಗೆ ದಿನಗಣನೆ
ಆರಂಭವಾಗಿದೆ. ಆದರೆ, ಎಂದಿನಂತೆ ಈಗಲೂ ನಗರದ ಕೆಲವು ವರ್ಗಗಳು ಮತದಾನ ಪ್ರಕ್ರಿಯೆಯಿಂದ ದೂರವೇ ಉಳಿದಿವೆ. ಅವರನ್ನು
ಮತಗಟ್ಟೆಗಳಿಗೆ ತರುವ ಪ್ರಯತ್ನವನ್ನು ವಿವಿಧ ಸಂಘಟನೆಗಳು ಸದ್ದಿಲ್ಲದೆ ನಡೆಸು ತ್ತಿವೆ. ಮತದಾರರ ಪಟ್ಟಿಗೆ ಸೇರಿಸುವ, ಮತದಾನಕ್ಕೆ
ಪ್ರೇರೇಪಿಸುವ, ಅದರ ಮಹತ್ವವನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ವಿನೂತನ ಮಾದರಿಯ ಜಾಗೃತಿ ಅಭಿಯಾನ ಗಳು ನಡೆಯುತ್ತಿವೆ. ಆ ಪ್ರಯತ್ನಗಳಿಗೆ “ಉದಯವಾಣಿ’ ಪೂರಕ ವೇದಿಕೆ ಕಲ್ಪಿಸುತ್ತಿದೆ. ವಿನೂತನ ಜಾಗೃತಿ ಅಭಿಯಾನಗಳು, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿ ಸುವಲ್ಲಿ
ಇರುವ ಸಮಸ್ಯೆಗಳು, ಮತದಾರರ ಬೇಡಿಕೆಗಳು ಸೇರಿದಂತೆ ಯಾವುದೇ ಅಂಶಗಳನ್ನು ಓದುಗರು ವಾಟ್ಸ್ ಆ್ಯಪ್ ಸಂಖ್ಯೆ 88611 96369 ಅಥವಾ
ಇ-ಮೇಲ್: [email protected] ಇಲ್ಲಿಗೆ ಕಳುಹಿಸಬಹುದು. ಅವುಗಳನ್ನು ಉದಯವಾಣಿ ಪ್ರಕಟಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.