ಟೋಲ್‌ ಬದಲು ಟ್ರೋಲ್‌ ರಾಜಕೀಯ

Team Udayavani, Apr 4, 2019, 9:33 AM IST

troll

ಸಾಂದರ್ಭಿಕ ಚಿತ್ರ

ಕುಂದಾಪುರ: ಎರಡು ಜಿಲ್ಲೆಗಳಲ್ಲಿ ವಾಹನ ಸವಾರರ ಪಾಲಿಗೆ ಸಮಸ್ಯೆಯಾಗಿರುವ ಟೋಲ್‌ ಗೇಟ್‌ ಕುರಿತು ಯಾರೊಬ್ಬರೂ ಮಾತನಾಡುತ್ತಿಲ್ಲ. ಆದರೆ ಅಭ್ಯರ್ಥಿಗಳು ಮಾತಾಡಿದ್ದೆಲ್ಲ ಟ್ರೋಲ್‌ ಆಗುತ್ತಿದೆ!

ಅಭ್ಯರ್ಥಿಗಳಾದ ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ, ಮಿಥುನ್‌ ರೈ ಅತಿಹೆಚ್ಚು ಟ್ರೋಲ್‌ಗೆ ಒಳಗಾದವರು. ಪ್ರಮೋದ್‌ ಈ ಪ್ರಮಾಣದ ಟ್ರೋಲ್‌ಗೆ ಸಿಲುಕಿಕೊಳ್ಳಲಿಲ್ಲ. “ನಿಖೀಲ್‌ ಎಲ್ಲಿದ್ದಿಯಪ್ಪಾ?’ ಕರಾವಳಿಯಲ್ಲಿ ಸಂಚಲನ ಮೂಡಿಸಿದ ಟ್ರೋಲ್‌. ಈ ಮಾತಿಗೆ ತುಳು ಚಲನಚಿತ್ರ ನಟರ ಚಿತ್ರಗಳನ್ನು, ಚಲನಚಿತ್ರಗಳ ತುಣುಕುಗಳನ್ನು ಸೇರಿಸಿ ಟ್ರೋಲ್‌ ಮಾಡಲಾಗಿತ್ತು. ನಾಟಕ, ಯಕ್ಷಗಾನದಲ್ಲೂ ಪ್ರಚಾರ ಆಯಿತು.

ಫ್ಲೈಓವರ್‌ ತಮಾಷೆ
ಇದರೊಂದಿಗೆ ಪಂಪ್‌ವೆಲ್‌ ಫ್ಲೈಓವರ್‌ನ ಅರೆ ಕಾಮಗಾರಿಯ ಚಿತ್ರಗಳನ್ನು ನಳಿನ್‌ ಜತೆ, ಕುಂದಾಪುರ ಫ್ಲೈ ಓವರ್‌ನ ಅರೆ ಕಾಮಗಾರಿಯ ಚಿತ್ರಗಳನ್ನು ಶೋಭಾ ಜತೆ ಹಾಕಿ ಟ್ರೋಲ್‌ ಮಾಡಲಾಗಿದೆ. ಸಂಸದರ ವಿರುದ್ಧ ಟ್ರೋಲ್‌ ಬಂದಾಗ ಅದಕ್ಕೆ ಉತ್ತರವಾಗಿ ಅವರ ಬೆಂಬಲಿಗರು ಒಂದೊಂದೇ ತುಣುಕುಗಳನ್ನು ಹರಡಿಸಿದರು.

“ತದನಂತರ’ ವೈರಲ್‌
ಮಿಥುನ್‌ ರೈ ಅವರ ಭಾಷಣದ ತುಣುಕುಗಳು ಸಾಕಷ್ಟು ಟ್ರೋಲ್‌ ಆಯಿತು. ಬಿಜೆಪಿಯವರಿಗೆ ಇದೇ ಪ್ರಚಾರದ ಅಸ್ತ್ರವಾಯಿತು. ತದನಂತರ, ಮಗದೊಮ್ಮೆ, ಎಂಕೋಸ್ಕರ (ನನಗೋಸ್ಕರ) ಎನ್ನುವ ಶಬ್ದಗಳನ್ನು ಬಳಸಿ ಭಾಷಣ ಮಾಡಿದ ಮಿಥುನ್‌ ಮಾತುಗಳನ್ನು ಬಿಜೆಪಿಯು ಮೋದಿ ಮೋದಿ ಘೋಷಣೆಗೆ (ತದನಂತರ ಮೋದಿ, ಮಗದೊಮ್ಮೆ ಮೋದಿ) ಬಳಸಿಕೊಂಡದ್ದು ತೀರಾ ಈಚಿನ ಬೆಳವಣಿಗೆ. ವಿಜಯ ಬ್ಯಾಂಕನ್ನು ನಳಿನ್‌ ಗುಜರಾತ್‌ಗೆ ಮಾರಿದರು, ಮಂಗಳೂರು ವಿಮಾನ ನಿಲ್ದಾಣವನ್ನು ನಳಿನ್‌ ಅದಾನಿಗೆ ಮಾರಿದರು ಎಂದು ಕಾಂಗ್ರೆಸ್‌ ಅಭಿಮಾನಿಗಳು ಚಿತ್ರಗಳನ್ನು ಬಳಸಿ ಟ್ರೋಲ್‌ ಮಾಡಿದ್ದಾರೆ.

ಟ್ರೋಲ್‌ ಮಧ್ಯೆ ಮರೆತ ಟೋಲ್‌
ಬಿ.ಸಿ.ರೋಡ್‌, ತಲಪಾಡಿ, ಸುರತ್ಕಲ್‌, ಹೆಜಮಾಡಿ, ಸಾಸ್ತಾನ ಟೋಲ್‌ ಗೇಟ್‌ ಕುರಿತು ಅದೆಷ್ಟೋ ಪ್ರತಿಭಟನೆಗಳು ನಡೆದಿವೆ. ಸ್ಥಳೀಯರು ಈ ಟೋಲ್‌ನಿಂದ ಅನುಭವಿಸಿದಷ್ಟು ಸಮಸ್ಯೆ ಯಾರೂ ಅನುಭವಿಸಿರಲಿಕ್ಕಿಲ್ಲ. ಈ ಟೋಲ್‌ ಇಂದು ಮುಚ್ಚುತ್ತದೆ, ನಾಳೆ ಮುಚ್ಚುತ್ತದೆ ಎಂದು ಅಧಿಕಾರದಲ್ಲಿದ್ದವರು ಭರವಸೆ ಕೊಟ್ಟಿದ್ದರು. ಸ್ಥಳೀಯರಿಗೆ ಟೋಲ್‌ ರದ್ದಾಗುತ್ತದೆ ಎಂದು ಮೆಚ್ಚಿಸಿದ್ದರು. ಆದರೆ ಯಾವುದೂ ಆಗಿಲ್ಲ. ಟೋಲ್‌ ಸುಂಕ ನಿರಂತರವಾಗಿದೆ. ಲಕ್ಷಾಂತರ ರೂ. ತೆರಿಗೆ ನೀಡಿ ವಾಹನ ಖರೀದಿಸಿದವರು ಅರೆಬರೆ ಕಾಮಗಾರಿಯ, ಅಲ್ಲಲ್ಲಿ ಬ್ಯಾರಿಕೇಡ್‌ ಹಾಕಿ ವೇಗನಿಯಂತ್ರಣಗೊಳಿಸಿದ ರಸ್ತೆಯಲ್ಲಿ ಸಾಗಲು ಹಣ ಕಟ್ಟಬೇಕಾದ ಸ್ಥಿತಿ ಇದೆ. ವರ್ಷವೂ ಟೋಲ್‌ ದರ ಹೆಚ್ಚಾಗುತ್ತಲೇ ಇದೆ.

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಡಾಮಕ್ಕಿ ಗ್ರಾ.ಪಂ. ಆಸ್ತಿಗೆ ಹಾನಿ: ದೂರು ದಾಖಲು

ಮಡಾಮಕ್ಕಿ ಗ್ರಾ.ಪಂ. ಆಸ್ತಿಗೆ ಹಾನಿ: ದೂರು ದಾಖಲು

11

Missing Case: ಪತಿ ನಾಪತ್ತೆ; ಪತ್ನಿಯ ದೂರು

Gangolli: ಸ್ಕೂಟರ್‌ಗೆ ಕಾರು ಢಿಕ್ಕಿ ; ಮೂವರಿಗೆ ಗಾಯ

Gangolli: ಸ್ಕೂಟರ್‌ಗೆ ಕಾರು ಢಿಕ್ಕಿ ; ಮೂವರಿಗೆ ಗಾಯ

9

Kota: ಶಿರಿಯಾರ; ಅಕ್ರಮ ಗಣಿಗಾರಿಕೆಗೆ ದಾಳಿ

POlice

Gangolli: ಅಕ್ರಮ ಕೆಂಪು ಕಲ್ಲು ಸಾಗಾಟ; ಪ್ರಕರಣ ದಾಖಲು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.