ಮೈತ್ರಿಗಾಗಿ ತುಮಕೂರು ಕ್ಷೇತ್ರ ತ್ಯಾಗ


Team Udayavani, Apr 8, 2019, 6:13 AM IST

DCM

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡ ನಂತರ ಪಕ್ಷದಲ್ಲಿ ಎದ್ದಿರುವ ಆಂತರಿಕ ಭಿನ್ನಮತ, ಮೈತ್ರಿ ಪಕ್ಷದೊಂದಿಗಿನ ಗೊಂದಲ ಹಾಗೂ ಸ್ವ ಕ್ಷೇತ್ರ ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕಾರಣವೇನು? ಲೋಕಸಭೆ ಚುನಾವಣೆಯ ನಂತರ ಮೈತ್ರಿ ಸರ್ಕಾರದ ಭವಿಷ್ಯ ಏನಾಗುತ್ತದೆ ಎನ್ನುವ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ “ಉದಯವಾಣಿ’ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ.

ಡಿಸಿಎಂ ಆಗಿ ನಿಮ್ಮ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿ ಉಳಿಸಿಕೊಳ್ಳಲು ಆಗ್ಲಿಲ್ವಲ್ಲಾ ನಿಮಗೆ ?
ನೋಡಿ, ನಾವು ಈ ಸಂದರ್ಭದಲ್ಲಿ ಪಕ್ಷದ ಹಿತ ನೋಡಬೇಕೇ ವಿನ: ನಮ್ಮ ವೈಯಕ್ತಿಕ ಆಸೆಗಳಿಗೆ ಹೆಚ್ಚು ಆದ್ಯತೆ ಕೊಡಬೇಕಿಲ್ಲ. ಸೀಟು ಹಂಚಿಕೆಗೂಮೊದಲು ನಾನು ರಾಹುಲ್‌ ಗಾಂಧಿ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡುವ ಸಂದರ್ಭದಲ್ಲಿಯೇ ತುಮಕೂರು ಬಿಟ್ಟು ಕೊಡಬಾರದು. ಅದು ಗೆಲ್ಲುವ ಕ್ಷೇತ್ರ ಎಂದು ಹೇಳಿದ್ದೆ. ಆದರೆ, ಅಂತಿಮವಾಗಿ ರಾಹುಲ್‌ ಗಾಂಧಿಯವರು ಜೆಡಿಎಸ್‌ ನಾಯಕರ ಜೊತೆ ಮಾತುಕತೆ ನಡೆಸಿ, ತುಮಕೂರನ್ನು ಬಿಟ್ಟು ಕೊಟ್ಟಾಗ ನಾವು ಅದನ್ನು ಒಪ್ಪಲೇಬೇಕು. ಪರಮೇಶ್ವರ್‌ ಒಂದು ಕ್ಷೇತ್ರ ಪಡೆಯಲಾರದಷ್ಟು ಅಸಹಾಯಕರಾಗಿದ್ದಾರೆ ಎಂಬ ಮಾತು ಸಾಮಾನ್ಯವಾಗಿ ಕೇಳಿ ಬಂದಿರಬಹುದು. ನಾನು ಇದನ್ನು ವಿಶಾಲ ದೃಷ್ಟಿಯಿಂದ ನೋಡುತ್ತೇನೆ. ಇಲ್ಲಿ ವೈಯಕ್ತಿಕ ಪ್ರತಿಷ್ಠೆಗೆ ಹೆಚ್ಚಿನ ಆದ್ಯತೆ ನೀಡಬಾರದು.

ಮೈತ್ರಿಯಿಂದ ಕಾಂಗ್ರೆಸ್‌ಗೆ ಹೆಚ್ಚು ನಷ್ಟವಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆಯಲ್ಲಾ?
ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ನವರು ಅವರ ಶಕ್ತಿಯನ್ನು ನಮ್ಮ ಅಭ್ಯರ್ಥಿಗಳಿಗೆ ವರ್ಗಾವಣೆ ಮಾಡಬೇಕು. ನಮ್ಮ ಶಕ್ತಿಯನ್ನು ಅವರ ಅಭ್ಯರ್ಥಿ ಸ್ಪರ್ಧೆ ಮಾಡಿದ ಕ್ಷೇತ್ರದಲ್ಲಿ ಹಾಕುತ್ತೇವೆ. ಕೆಲವು ಕ್ಷೇತ್ರಗಳಲ್ಲಿ ಸಣ್ಣ ಪುಟ್ಟ ಅಸಮಾಧಾನ ಇದೆ. ಅದನ್ನು ಬಗೆಹರಿಸುವ ಕೆಲಸ ನಡೆಯುತ್ತಿದೆ. ಹತ್ತಾರು ವರ್ಷಗಳಿಂದ ನಾವುಜೆಡಿಎಸ್‌ ಜೊತೆಗೆ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಹೀಗಾಗಿ, ನಮ್ಮ ನಡುವೆ ಹೊಂದಾಣಿಕೆ ಆಗಿದ್ದರೂ, ಕಾರ್ಯಕರ್ತರಲ್ಲಿ ಹೊಂದಾಣಿಕೆ ಆಗುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ.

ಮಂಡ್ಯ, ಹಾಸನದಲ್ಲಿ ಪಕ್ಷ ಉಳಿಸಲು ಹೋರಾಟ ಮಾಡುತ್ತಿದ್ದೇವೆ ಎಂದು ನಿಮ್ಮ ಕಾರ್ಯಕರ್ತರು ಹೇಳುತ್ತಿದ್ದಾರಲ್ಲಾ ?
ಅವರು ಪಕ್ಷ ಉಳಿಸಲು ಹೋರಾಡುತ್ತಿರಬಹುದು. ಆದರೆ, ಹೈಕಮಾಂಡ್‌ ಆದೇಶವನ್ನು ಪಾಲಿಸಬೇಕು. ಪಕ್ಷದ ನಾಯಕತ್ವ ಬಿಟ್ಟು ಪಕ್ಷ ಉಳಿಸುತ್ತೇನೆ ಎನ್ನುವುದು ಸಮಂಜಸವಲ್ಲ. ಅದರಿಂದ ಪಕ್ಷಸುಭದ್ರವಾಗಿ ಉಳಿಯುವುದಿಲ್ಲ.

ಜೆಡಿಎಸ್‌ ಅಸ್ಥಿತ್ವ ಇಲ್ಲದ ಕಡೆ ಟಿಕೆಟ್‌ ಪಡೆದಿರುವ ಬಗ್ಗೆ ನಿಮ್ಮ ಪಕ್ಷದಲ್ಲಿ ಅಸಮಾಧಾನ ಇದೆಯಲ್ಲಾ ?
ಅವರು ಗೆಲ್ಲುವ ಕ್ಷೇತ್ರಗಳನ್ನಷ್ಟೇ ಕೇಳಿಲ್ಲ. ಬಿಜೆಪಿ ಸತತವಾಗಿ ಮೂರು ನಾಲ್ಕು ಬಾರಿ ಗೆದ್ದಿರುವಕ್ಷೇತ್ರಗಳನ್ನೂ ಬಿಟ್ಟು ಕೊಡಿ ಎಂದು ಕೇಳಿದ್ದರು. ಇಬ್ಬರೂ ಸೇರಿಯೇ ಬಿಜೆಪಿಯನ್ನು ವಿರೋಧಿಸೋಣ ಎಂದು ಅವರಿಗೆ ಉತ್ತರ ಕನ್ನಡ,ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳನ್ನು ಬಿಟ್ಟು ಕೊಟ್ಟಿದ್ದೇವೆ.

ಮಂಡ್ಯದಲ್ಲಿ ಕಾಂಗ್ರೆಸ್‌ನವರು ಪಕ್ಷೇತರಅಭ್ಯರ್ಥಿಗೆ ಬೆಂಬಲಿಸುತ್ತಿದ್ದಾರೆಂದು ಸಿಎಂ ಆರೋಪ ಮಾಡಿದ್ದಾರಲ್ಲಾ ?
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಪರವಾಗಿರುವವರೇ ಕಾಂಗ್ರೆಸ್‌ ಧ್ವಜ ಹಿಡಿದುಕೊಂಡು ಪ್ರಚಾರ ಮಾಡುತ್ತಿದ್ದಾರೆ. ಅದು ಮುಖ್ಯಮಂತ್ರಿಗೆ ಕಾಂಗ್ರೆಸ್‌ನವರೇ ಎಂಬ ಭಾವನೆ ಮೂಡಿರಬಹುದು. ಆದರೆ, ನಮ್ಮ ಒರಿಜನಲ್‌ ಕಾಂಗ್ರೆಸ್‌ನವರು ನಮ್ಮ ಜೊತೆಗೆ ಇದ್ದಾರೆ ಎಂದು ಕುಮಾರಸ್ವಾಮಿಯೇ ಹೇಳಿದ್ದಾರೆ. ಅವರು ಚಲುವರಾಯಸ್ವಾಮಿ ಅವರನ್ನು ಗುರಿಯಾಗಿಟ್ಟುಕೊಂಡು ಹೇಳಿರಬಹುದು.ಆದರೆ, ಮಂಡ್ಯದಲ್ಲಿ ನಮ್ಮ ಮೂಲ ಕಾಂಗ್ರೆಸ್ಸಿಗರು ಮೈತ್ರಿ ಪಕ್ಷದ ಅಭ್ಯರ್ಥಿ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ.

ಏರ್‌ ಸ್ಟ್ರೈಕ್‌ ಬಿಜೆಪಿಗೆ ಅನುಕೂಲ ಆಗುತ್ತಾ ?
ಬಿಜೆಪಿಯವರು ಆ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಅನುಕೂಲ ಆಗುವುದಿಲ್ಲ. ಅವರು ಅದನ್ನು ಮಾರ್ಕೆಟಿಂಗ್‌ ಮಾಡಿಕೊಳ್ಳುತ್ತಿದ್ದಾರೆ. ಜನರು ಅದನ್ನು ನಂಬುವುದಿಲ್ಲ. ಈ ಬಾರಿ ಅವರ ಮಾರ್ಕೆಟಿಂಗ್‌ ಕೆಲಸ ಮಾಡುವುದಿಲ್ಲ.

ಬಲಿಷ್ಠ ರಾಷ್ಟ್ರಕ್ಕಾಗಿ ಮೋದಿ ಮತ್ತೂಮ್ಮೆ ಎಂದು ಬಿಜೆಪಿಯವರು ಹೇಳುತ್ತಿದ್ದಾರಲ್ಲಾ ?
ಅವರು ಮೋದಿಯನ್ನು ಮಾರ್ಕೆಟ್‌ ಮಾಡಿಕೊಳ್ಳಲು ಆ ರೀತಿಯ ಪದಗಳನ್ನು ಬಳಕೆಮಾಡುತ್ತಾರೆ. ದೇಶದಲ್ಲಿ ಹಿಂದೆ ಯಾರೂ ಬಲಿಷ್ಠರಿರಲಿಲ್ಲವಾ? 70 ವರ್ಷ ಮೋದಿಯೇ ಇದ್ದರಾ? ಹಿಂದೆ ಬಿಜೆಪಿಯ ಅಟಲ್‌ ಬಿಹಾರಿ ವಾಜಪೆಯಿ ಅವರೇ ಇದ್ದರಲ್ಲಾ. ಅವರು ಫೋಕ್ರಾನ್‌ನಲ್ಲಿ ಅಣುಬಾಂಬ್‌ ಪ್ರಯೋಗಿಸಿ ಶಕ್ತಿ ಪ್ರದರ್ಶಿಸಿದ್ದರು. ಅವರು ಬಲಿಷ್ಠರಾಗಿರಲಿಲ್ಲವೇ?ಮೋದಿ ಬಿಟ್ಟರೇ ಭಾರತ ಬಲಿಷ್ಠವಾಗಿರುವುದಿಲ್ಲವೇ? ದೇಶಕ್ಕೆ ಯಾರೂ ಅನಿವಾರ್ಯವಲ್ಲ. ಮೋದಿನೂ ದೇಶಕ್ಕೆ ಅನಿವಾರ್ಯವಲ್ಲಾ.

ರಾಹುಲ್‌ ಉತ್ತರದಲ್ಲಿ ಸೋಲುವ ಭಯ ದಿಂದ ದಕ್ಷಿಣಕ್ಕೆ ಬಂದಿದ್ದಾರೆ ಎಂಬ ಆರೋಪ ಇದೆ ?
ಆಥರಾ ಏನಿಲ್ಲ. ರಾಷ್ಟ್ರೀಯ ವಿಷಯ ತೆಗೆದುಕೊಂಡಾಗ ರಾಷ್ಟ್ರೀಯ ನಾಯಕರೆಲ್ಲಾ ಉತ್ತರದಲ್ಲಿಯೇ ಸ್ಪರ್ಧೆ ಮಾಡುತ್ತಾರೆ. ದಕ್ಷಿಣಕ್ಕೆ ಬರುವುದಿಲ್ಲ ಎಂಬ ಮಾತುಗಳಿವೆ. ಅದೇ ಕಾರಣಕ್ಕೆ ರಾಹುಲ್‌ ಗಾಂಧಿ ದಕ್ಷಿಣಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ. ಕಳೆದ ಚುನಾವಣೆಯಲ್ಲಿಯೇ ಸ್ಮತಿ ಇರಾನಿಯವರು ರಾಹುಲ್‌ ಗಾಂಧಿಯನ್ನು ಸೋಲಿಸುತ್ತಾರೆ ಎಂದು ಹೇಳಿದ್ದರು. ಆದರೆ, ರಾಹುಲ್‌ ಗಾಂಧಿ ಗೆದ್ದು ಬಂದಿದ್ದರು. ಈ ಬಾರಿಯೂ ಅಮೇಥಿಯಲ್ಲಿ ರಾಹುಲ್‌ ಗಾಂಧಿ ಗೆಲ್ಲುತ್ತಾರೆ. ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯ. ನಾವು ಹೋರಾಟ ಮಾಡಬೇಕು,
ಮಾಡುತ್ತೇವೆ.

ಮೈತ್ರಿ ಪಕ್ಷಗಳು ರಾಜ್ಯದಲ್ಲಿ ಡಬಲ್‌ ಡಿಜಿಟ್‌ ದಾಟುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ?
ನೊ…ನೊ..ನಾವು 20 ಸ್ಥಾನ ಗೆಲ್ಲುತ್ತೇವೆ. ಯಾವ ಕಾರಣಕ್ಕೂ ನಾವು ಕಡಿಮೆ ಆಗುವುದಿಲ್ಲ.

ಚುನಾವಣೆಯ ನಂತರ ಮೈತ್ರಿ ಸರ್ಕಾರ ಪತನಗೊಳ್ಳುತ್ತದೆ ಎಂಬ ಮಾತಿದೆ ?
ಯಾವುದೇ ಕಾರಣಕ್ಕೂ ಇಲ್ಲ. ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬರುತ್ತದೆ.ರಾಹುಲ್‌ ಗಾಂಧಿ ಪ್ರಧಾನಿ ಅಗುತ್ತಾರೆ. ನಾವು ಪ್ರತಿ ರಾಜ್ಯದಲ್ಲಿ ಲೆಕ್ಕ ಹಾಕಿ ಸೀಟು ಹೊಂದಾಣಿಕೆಮಾಡಿಕೊಂಡಿದ್ದೇವೆ. ಇದು ತಪ್ಪಾಗಲು ಸಾಧ್ಯವೇ ಇಲ್ಲ. ಯುಪಿಯಲ್ಲಿ ಬಿಜೆಪಿ ಈ ಬಾರಿ 15ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ಕಷ್ಟ. ಅಲ್ಲೇ ಐವತ್ತು ಸ್ಥಾನ ಕಳೆದುಕೊಂಡ್ರೆ ಅವರ ಶಕ್ತಿ ಕುಂದುತ್ತದೆ. ಕಳೆದ ಬಾರಿ ತಮಿಳುನಾಡಿನಲ್ಲಿ ಎಐಎಡಿಎಂಕೆ 30 ಸ್ಥಾನ ಗೆದ್ದಿದ್ದರು. ಈ ಬಾರಿ ಡಿಎಂಕೆ ಮೂವತ್ತು ಸ್ಥಾನ
ಗೆಲ್ಲುತ್ತದೆ. ಹೀಗಾಗಿ, ನಮ್ಮ ಶಕ್ತಿ ದೊಡ್ಡದಾಗುತ್ತದೆ.

ಕಾಂಗ್ರೆಸ್‌ ಏಕಾಂಗಿಯಾಗಿ ಎಷ್ಟು ಸ್ಥಾನ ಗೆಲ್ಲುವ ಸಾಧ್ಯತೆ ಇದೆ ?
ನಾವು ಏಕಾಂಗಿಯಾಗಿ ಕನಿಷ್ಠ 125 ಸ್ಥಾನ ಗೆಲ್ಲುತ್ತೇವೆ. ನಮ್ಮ ಮಿತ್ರ ಪಕ್ಷಗಳು ಸೇರಿ 283 ದಾಟಬೇಕಲ್ಲಾ. ಅದಕ್ಕಿಂತ ಹೆಚ್ಚು ಸ್ಥಾನ ಪಡೆಯುವ ವಿಶ್ವಾಸ ಇದೆ.

ತುಮಕೂರನ್ನು ನಾವು ಕೇಳಿಯೇ ಇರಲಿಲ್ಲ ಎಂದು ದೇವೇಗೌಡರು ಹೇಳಿದ್ದಾರಲ್ಲಾ ?
ರಾಹುಲ್‌ ಗಾಂಧಿ ಹಾಗೂ ದೇವೇಗೌಡರು ಅಂತಿಮವಾಗಿ ಯಾವ ರೀತಿ ತೀರ್ಮಾನ ಮಾಡಿದ್ದಾರೊ ಗೊತ್ತಿಲ್ಲ.ಮೈಸೂರು ಹಾಗೂ ತುಮಕೂರಿನ ಲೆಕ್ಕಾಚಾರ ನೋಡಿ, ಪಟ್ಟಿ ಪ್ರಕಟವಾದಾಗ, ಅದನ್ನು ನೋಡಿದ ಮೇಲೆಯೆ ನಮಗೆ ತುಮಕೂರನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗಿದೆ ಎಂದು ಗೊತ್ತಾಯಿತು.

– ಶಂಕರ ಪಾಗೋಜಿ

ಟಾಪ್ ನ್ಯೂಸ್

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.