ಉಡುಪಿ – ಚಿಕ್ಕಮಗಳೂರು: ಪ್ರಬಲ ಅಭ್ಯರ್ಥಿಗಳು, ಹೆಚ್ಚು ಮತದಾರರು
Team Udayavani, Apr 1, 2019, 9:48 AM IST
ಉಡುಪಿ: ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಮತದಾರರ ಪಾಲು ಮಾತ್ರ ಹೆಚ್ಚಲ್ಲ, ಅಭ್ಯರ್ಥಿಗಳೂ ಹೆಚ್ಚು.
ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 14,94,444. ಈ ಪೈಕಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 7,68,231 ಇದ್ದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 7,26,213 ಮತದಾರರಿದ್ದಾರೆ. ಮತಗಟ್ಟೆಗಳು ಮಾತ್ರ ಉಡುಪಿ ಜಿಲ್ಲೆಗಿಂತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿಗೆ ಇವೆ. ಉಡುಪಿ ಜಿಲ್ಲೆಯಲ್ಲಿ 865 ಮತಗಟ್ಟೆಗಳು, ಚಿಕ್ಕಮಗಳೂರು ಜಿಲ್ಲೆಯಲ್ಲಿ 972 ಇವೆ.
ಈ ಬಾರಿ 12 ಅಭ್ಯರ್ಥಿಗಳು ಕಣ ದಲ್ಲಿದ್ದರೆ ಇವರಲ್ಲಿ 6 ಮಂದಿ ಉಡುಪಿ ಜಿಲ್ಲೆಯವರು. ಶೋಭಾ ಅವರನ್ನು ದ.ಕ. ಜಿಲ್ಲೆಯವರೆಂದು ಪರಿಗಣಿಸಿದರೆ ಒಟ್ಟು 7 ಮಂದಿ ಉಡುಪಿ ಜಿಲ್ಲೆಯವರು, 5 ಮಂದಿ ಚಿಕ್ಕಮಗಳೂರು ಜಿಲ್ಲೆಯವರು. ಉಡುಪಿ ತಾಲೂಕಿನವರಾದ ಪ್ರಮೋದ್ ಮಧ್ವರಾಜ್ (ಜೆಡಿಎಸ್-ಕಾಂಗ್ರೆಸ್), ಪಿ. ಗೌತಮ್ ಪ್ರಭು (ಶಿವಸೇನೆ), ಸುರೇಶ ಕುಂದರ್ (ಉ. ಪ್ರ.ಪಾರ್ಟಿ), ಶೇಖರ ಹಾವಂಜೆ (ಆರ್‌ಪಿಐ), ಅಮೃತ್ ಶೆಣೈ (ಪಕ್ಷೇತರ) ಹಾಗೂ ಕಾಪು ತಾಲೂಕಿನ ಅಬ್ದುಲ್ ರೆಹಮಾನ್ ಉಡುಪಿ ಜಿಲ್ಲೆಯ ಅಭ್ಯರ್ಥಿಗಳು. ಚಿಕ್ಕಮಗಳೂರು ತಾಲೂಕಿನ ಪಿ. ಪರಮೇಶ್ವರ (ಬಿಎಸ್‌ಪಿ), ವಿಜಯಕುಮಾರ್ (ಸಿಪಿಐ ಎಂಎಲ್ ರೆಡ್‌ಸ್ಟಾರ್); ನರಸಿಂಹರಾಜಪುರ ತಾಲೂಕಿನ ಎಂ.ಕೆ. ದಯಾನಂದ (ಪ್ರೌಟೆಸ್ಟ್ ಸರ್ವ ಸಮಾಜ), ಕೆ.ಪಿ. ಪ್ರಕಾಶ್; ಮೂಡಿಗೆರೆ ತಾಲೂಕಿನ ಎಂ.ಕೆ. ಗಣೇಶ ಚಿಕ್ಕಮಗಳೂರು ಜಿಲ್ಲೆಯವರು. ಪ್ರಬಲ ಪೈಪೋಟಿ ಒಡ್ಡಬಲ್ಲ ಅಭ್ಯರ್ಥಿಗಳು ಚಿಕ್ಕಮಗಳೂರು ಜಿಲ್ಲೆಯ ಮೂಲದಿಂದ ಕಂಡುಬರುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.