ದಕ್ಷಿಣ ಕನ್ನಡ, ಉಡುಪಿ: ಚುನಾವಣೆಗೆ ಉಭಯ ಜಿಲ್ಲಾಡಳಿತ ಸಂಪೂರ್ಣ ಸಜ್ಜು


Team Udayavani, Apr 17, 2019, 6:30 AM IST

chunavanege-sajju

ಮಂಗಳೂರು/ ಉಡುಪಿ: ಲೋಕಸಭಾ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಜ್ಜುಗೊಂಡಿದ್ದು ಮತದಾನವು ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಯಲು ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಶಶಿಕಾಂತ ಸೆಂಥಿಲ್‌ ಮತ್ತು ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಎ. 18ರ ಬೆಳಗ್ಗೆ 7ರಿಂದ ಸಂಜೆ 6 ಗಂಟೆ ವರೆಗೆ ಮತದಾನ ನಡೆಯಲಿದ್ದು ಬೆಳಗ್ಗೆ 6ರಿಂದ 7 ಗಂಟೆವರೆಗೆ ಅಭ್ಯರ್ಥಿಗಳ ಏಜೆಂಟರ ಸಮ್ಮುಖ ಅಣಕು ಮತದಾನ ನಡೆಯಲಿದೆ ಎಂದರು.

ದ.ಕ.: 8,920 ಮತಗಟ್ಟೆ ಸಿಬಂದಿ
ಮಂಗಳೂರು: 2,230 ಮತ ಗಟ್ಟೆಯ ಅಧ್ಯಕ್ಷಾಧಿಕಾರಿಗಳು, 2,230 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ 4,460 ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು 8,820 ಸಿಬಂದಿಯನ್ನು ನಿಯೋಜಿಸಲಾಗುತ್ತಿದೆ. ಸಿಬಂದಿಗೆ ನಿಯೋಜಿತ ವಿಧಾನಸಭಾ ಕ್ಷೇತ್ರ ಗಳಿಗೆ ತೆರಳಲು 79 ಬಸ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಅಲ್ಲಿಂದ ಸಂಬಂಧಪಟ್ಟ ಮತಗಟ್ಟೆಗಳಿಗೆ ತೆರಳಲು 668 ವಾಹನಗಳಿವೆ.

ಕಟ್ಟುನಿಟ್ಟಿನ ನಿಗಾ
300 ಮಂದಿ ಮೈಕ್ರೋ ವೀಕ್ಷಕ ರಿದ್ದು ಅವರು ಸೂಕ್ಷ್ಮ ನಿಗಾ ಇರಿಸು ತ್ತಾರೆ. 110 ಮತಗಟ್ಟೆಗಳನ್ನು ವೆಬ್‌ಕಾಸ್ಟಿಂಗ್‌ಗೆ ಗುರುತಿಸಲಾಗಿದೆ. ಕ್ಲಿಷ್ಟಕರ ಎಂದು ಗುರುತಿಸಲಾಗಿರುವ ಮತಗಟ್ಟೆಗಳ ಪೈಕಿ ಅತಿಸೂಕ್ಷ್ಮ ಎಂದು ಪರಿಗಣಿಸಲಾಗಿರುವ ಮತ ಗಟ್ಟೆಗಳಲ್ಲಿ ಹ್ಯಾಂಡ್‌ ಕೆಮರಾ ಮೂಲಕ ವೀಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಗಡಿಭಾಗದಲ್ಲಿ ಅಂತಾ ರಾಜ್ಯ ಚೆಕ್‌ಪೋಸ್ಟ್‌ ಗಳನ್ನು ಸ್ಥಾಪಿಸಲಾಗಿದ್ದು ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಮತ ಗಟ್ಟೆಗಳಿಗೆ ಜಿಪಿಎಸ್‌ ವ್ಯವಸ್ಥೆ ಅಳವಡಿಸಲಾ ಗುತ್ತಿದೆ. ಫ್ಲೆಯಿಂಗ್‌ ಸ್ಕಾ Ìಡ್‌ಗಳು ಕಾರ್ಯಾ ಚರಿಸುತ್ತವೆ.

ಜಿಲ್ಲೆಯಲ್ಲಿ 17,24,460 ಮತದಾರರಿದ್ದಾರೆ. ಸಿಬಂದಿಗೆ ಚುನಾವಣ ಕರ್ತವ್ಯ ದೃಢಪತ್ರಿಕೆ (ಇಡಿಸಿ) ನೀಡಲಾಗಿದ್ದು ಇದನ್ನು ತೋರಿಸಿ ಅವರು ಕರ್ತವ್ಯದಲ್ಲಿರುವ ಮತಗಟ್ಟೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. 9,000 ಇಡಿಸಿಗಳನ್ನು ನೀಡಲಾಗಿದೆ.

ನೀತಿ ಸಂಹಿತೆ ಉಲ್ಲಂಘನೆಗಾಗಿ 1,08,75,000 ರೂ. ಮೊತ್ತದ 15 ವಾಹನಗಳನ್ನು, 94,55,496 ರೂ. ಮೊತ್ತದ ಮದ್ಯ ವಶಪಡಿಸಿ ಕೊಳ್ಳ ಲಾಗಿದೆ. ಸೂಕ್ತ ದಾಖಲೆಗಳಿಲ್ಲದ 31,00,495 ರೂ. ವಶಪಡಿಸಿದ್ದು ದಾಖಲೆ ಪತ್ರಗಳನ್ನು ನೀಡಿದ ಬಳಿಕ ಇವುಗಳನ್ನು ಹಿಂದಿರುಗಿಸಲಾಗಿದೆ. ಅಬಕಾರಿ ಕಾಯ್ದೆ ಉಲ್ಲಂಘನೆ ಪ್ರಕರಣಗಳಲ್ಲಿ 587 ಎಫ್‌ಐಆರ್‌, ಚುನಾವಣ ವೆಚ್ಚಕ್ಕೆ ಸಂಬಂಧಿಸಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಮಂಗಳವಾರ ಸಂಜೆ 6ರಿಂದ ಶುಕ್ರ ವಾರ ಸಂಜೆ 6 ಗಂಟೆಯವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಗೊಳಿಸಲಾಗಿದೆ. ಮಂಗಳವಾರ ಸಂಜೆ 6 ಗಂಟೆಯಿಂದ ಗುರುವಾರ ಮಧ್ಯ ರಾತ್ರಿಯವರೆಗೆ ಮದ್ಯ ಮಾರಾಟಕ್ಕೆ ನಿಷೇಧವಿರುತ್ತದೆ. ಇದು ಗಡಿಭಾಗದ ಕೇರಳದ 5 ಕಿ.ಮೀ. ವರೆಗೂ ಜಾರಿ ಯಲ್ಲಿರುತ್ತದೆ ಎಂದು ಸೆಂಥಿಲ್‌ ವಿವರಿಸಿದರು. ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ ಉಪಸ್ಥಿತರಿದ್ದರು.

ವೆಲ್ಫೆರ್‌ ಕಿಟ್‌
ಚುನಾವಣೆ ಸಿಬಂದಿಗೆ ವೆಲ್ಫೆàರ್‌ ಕಿಟ್‌ ನೀಡಲಾಗುತ್ತಿದೆ. ಇದು ಟೂಥ್‌ಪೇಸ್ಟ್‌, ಸಾಬೂನು, ತೆಂಗಿನ ಎಣ್ಣೆ, ಸೊಳ್ಳೆ ನಿರೋಧಕ ಪೇಪರ್‌ ಕಾಯಿಲ್‌, ಬಾಚಣಿಗೆ, ಬೆಂಕಿನ ಪೊಟ್ಟಣ ಒಳಗೊಂಡಿದೆ. ಇದಲ್ಲದೆ ಆವಶ್ಯಕ ಔಷಧಗಳನ್ನು ಒಳಗೊಂಡ ವೈದ್ಯಕೀಯ ಕಿಟ್‌ ಕೂಡ ಇರುತ್ತದೆ.

ಭದ್ರತಾ ಸಿಬಂದಿ
ದ.ಕ. ಜಿಲ್ಲೆಯಲ್ಲಿ ಪೊಲೀಸರು, ಕೇಂದ್ರ ಸಶಸ್ತ್ರ ಪಡೆಗಳು ಸೇರಿದಂತೆ ಒಟ್ಟು 1,800 ಭದ್ರತಾ ಸಿಬಂದಿಯನ್ನು ಚುನಾವಣಾ ಸಂದರ್ಭದಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದೆ. ಇದರ ಹೊರತಾಗಿ ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲಿ 1,500 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್‌ ಅಧೀಕ್ಷಕ ಬಿ.ಎಂ. ಲಕ್ಷ್ಮೀಪ್ರಸಾದ್‌ ತಿಳಿಸಿದರು.

ಉಡುಪಿ: 6,489 ಸಿಬಂದಿ ನೇಮಕ
ಉಡುಪಿ: ಮತದಾನ ಕರ್ತವ್ಯಕ್ಕಾಗಿ 206 ಮೈಕ್ರೋ ಆಬ್ಸರ್ವರ್‌ ಸೇರಿದಂತೆ 6,489 ಸಿಬಂದಿ ನೇಮಿಸಲಾಗಿದೆ. ಮತದಾರರಿಗೆ ಶೇ. 99.5 ಮತದಾರರ ವಿವರವಿರುವ ವೋಟರ್‌ ಸ್ಲಿಪ್‌ಗ್ಳನ್ನು ವಿತರಿಸಲಾಗಿದೆ. ಆದರೆ ಮತದಾನಕ್ಕೆ ಆದ್ಯತೆಯಲ್ಲಿ ಮತದಾರರ ಗುರುತಿನ ಚೀಟಿಯನ್ನು ಬಳಸಬೇಕು. ಇಲ್ಲವಾದರೆ ಇತರ ಮಾನ್ಯತೆ ಹೊಂದಿರುವ ಗುರುತುಚೀಟಿಯನ್ನು ತೋರಿಸಬೇಕು ಎಂದು ಹೆಪ್ಸಿಬಾ ರಾಣಿ ಹೇಳಿದರು.

ಜಿಪಿಎಸ್‌ ಅಳವಡಿಸಿದ ವಾಹನ
ಕರ್ತವ್ಯಕ್ಕೆ ನಿಯೋಜಿಸಿರುವ ಸಿಬಂದಿಗಾಗಿ ಜಿಪಿಎಸ್‌ ಅಳವಡಿಸಿರುವ 244 ವಾಹನಗಳನ್ನು ವ್ಯವಸ್ಥೆ ಮಾಡಿದೆ. ಮತಯಂತ್ರಗಳನ್ನು ವಿಧಾನ ಸಭಾ ಕ್ಷೇತ್ರದ ಭದ್ರತಾ ಕೊಠಡಿಯಿಂದ ಸೈಂಟ್‌ ಸಿಸಿಲಿಸ್‌ ಶಿಕ್ಷಣ ಸಂಸ್ಥೆಯ ಮತ ಎಣಿಕಾ ಕೇಂದ್ರಕ್ಕೆ ತರುವ ಕಂಟೈನರ್‌ ಲಾರಿ ಗಳಿಗೆ ಜಿಪಿಎಸ್‌ ಅಳವಡಿಸಲಾಗಿದ್ದು, ಸೂಕ್ತ ಭದ್ರತ ಬೆಂಗಾವಲಿ ನಲ್ಲಿ ಭದ್ರತಾ ಕೊಠಡಿಗೆ ತರಲಾಗು ವುದು.

ಮತಯಂತ್ರಗಳ ಸಿದ್ಧತೆ
ಎಲ್ಲ ಇವಿಎಂ, ವಿವಿ ಪ್ಯಾಟ್‌ಗಳನ್ನು ಪರೀಕ್ಷಿಸಲಾಗಿದ್ದು, ರಾಜಕೀಯ ಪಕ್ಷಗಳು, ಅಭ್ಯರ್ಥಿ ಗಳ ಮಾಹಿತಿ ನೀಡಿ, ಅವರ ಪ್ರತಿ ನಿಧಿಗಳ ಸಮ್ಮುಖದಲ್ಲಿ ಮತಪತ್ರಗಳ ಜೋಡಣೆ ನಡೆಸಲಾ ಗಿದೆ. 1,379 ಬ್ಯಾಲೆಟ್‌ ಯೂನಿಟ್‌, 1,280 ಕಂಟ್ರೋಲ್‌ ಯೂನಿಟ್‌ ಮತ್ತು 1,477 ವಿವಿ ಪ್ಯಾಟ್‌ಗಳನ್ನು ಉಪಯೋ ಗಿಸಲಾ ಗುತ್ತಿದೆ. ಮತಯಂತ್ರಗಳ ನಿರ್ವ ಹಣೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2 ಬಿಇಎಲ್‌ ಎಂಜಿನಿಯರ್‌ಗಳನ್ನು ನಿಯೋಜಿಸಲಾಗಿದೆ. ಲೋಕಸಭಾ ವ್ಯಾಪ್ತಿಯ 54 ಮತ ಗಟ್ಟೆಗಳಿಗೆ ವೆಬ್‌ ಕೆಮರಾ ವ್ಯವಸ್ಥೆ ಮಾಡ ಲಾಗಿದ್ದು, 15 ಮತಗಟ್ಟೆಗಳಿಗೆ ವೀಡಿಯೋ ಗ್ರಾಫ‌ರ್‌, 21 ಮತಗಟ್ಟೆಗಳಿಗೆ ಕೇಂದ್ರೀಯ ಭದ್ರತಾ ಪಡೆ ಸಿಬಂದಿ ನೇಮಿಸ ಲಾಗಿದೆ. ಜಿಲ್ಲೆಯಲ್ಲಿ 25 ಸಖೀ, 2 ವಿಶೇಷ ಚೇತನರ ಮತಗಟ್ಟೆ, 1 ಬುಡಕಟ್ಟು ಜನರ ಮತಗಟ್ಟೆ ತೆರೆಯಲಾಗುವುದು. ವಿಶೇಷಚೇತನ ಮತದಾರರಿಗೆ ಗಾಲಿಕುರ್ಚಿ, ಭೂತ ಕನ್ನಡಿ, ಬ್ರೆçಲ್‌ ಮಾದರಿ ಮತಪತ್ರ, ಆದ್ಯತೆ ಮೇಲೆ ಪ್ರವೇಶ, ರ್‍ಯಾಂಪ್‌, ಕೋರಿಕೆ ಮೇರೆಗೆ ವಾಹನ ವ್ಯವಸ್ಥೆ ಒದಗಿಸಲಾಗುವುದು.

ಚುನಾವಣ ಕರ್ತವ್ಯದಲ್ಲಿರುವ ಅಧಿಕಾರಿ/ಸಿಬಂದಿ, ಪೊಲೀಸ್‌/ ವಾಹನ ಚಾಲಕರಿಗೆ ಒಟ್ಟು 584 ಅಂಚೆ ಮತಪತ್ರ, 3,619 ಇಡಿಸಿ ವಿತರಿಸಲಾಗಿದ್ದು, 575 ಸೇವಾ ಮತದಾರರಿಗೆ ಇಟಿಪಿಬಿಎಸ್‌ ಮೂಲಕ ಅಂಚೆ ಮತಪತ್ರ ಕಳುಹಿ
ಸಲಾಗಿದೆ. ಚುನಾವಣ ವೆಚ್ಚ ವೀಕ್ಷಕರ ಮಾರ್ಗ ದರ್ಶನದಲ್ಲಿ ಅಭ್ಯರ್ಥಿಗಳ ಖರ್ಚು ವೆಚ್ಚಗಳ ವಹಿಯನ್ನು 3 ಬಾರಿ ಪರಿಶೀಲಿಸಲಾಗಿದೆ.

ಹಣ, ಮದ್ಯ ವಶ
ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಅನಂತರ ಇದುವರೆಗೆ 25,30,910 ರೂ. ನಗದು ಜಫ್ತಿ ಮಾಡಿದ್ದು, ಈ ಪೈಕಿ ದಾಖಲೆಯ ಪರಿಶೀಲನೆ ಅನಂತರ 23,50,920 ರೂ. ಹಿಂದಿರುಗಿಸಲಾಗಿದೆ. ಅಬಕಾರಿ ಇಲಾಖೆಯಿಂದ 64.38 ಲ.ರೂ. ಮೌಲ್ಯದ 15,853.69 ಲೀ. ಮದ್ಯ ವಶಪಡಿಸಿಕೊಂಡಿದ್ದು 3 ಟ್ರಕ್‌ ಹಾಗೂ 4 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ಸಂಶಯ ಬಂದರೆ ತಿಳಿಸಿ
ಮಾದರಿ ನೀತಿಸಂಹಿತೆ ಅನುಷ್ಠಾನಕ್ಕೆ ರಚಿಸಲಾ ಗಿರುವ ಫ್ಲೈಯಿಂಗ್‌ ಸ್ವಾ$Rಡ್‌, ಸೆಕ್ಟರ್‌ ಅಧಿಕಾರಿ ಮತ್ತು ಇತರ ತಂಡಗಳಿಗೆ ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಮತದಾ ರರಿಗೆ ಆಮಿಷ ವೊಡ್ಡಿ ಸೆಳೆಯುವ ಯತ್ನಗಳು ನಡೆ ಯುವ ಸಾಧ್ಯತೆಯಿರುವುದರಿಂದ ಯಾವುದೇ ಸಂಶಯಾತ್ಮಕ ಚಟುವಟಿಕೆ ಕಂಡು ಬಂದಲ್ಲಿ ಪರಿಶೀಲಿಸಿ ಕೂಡಲೇ ಕ್ರಮ ಜರಗಿಸಲು ಸೂಚಿಸಿದೆ. ಮತದಾನದ ದಿನ ಯಾವುದೇ ಅಕ್ರಮ ಕಂಡುಬಂದಲ್ಲಿ ಸೀವಿಜಿಲ್‌ ಮೂಲಕ ಅಥವಾ ಸಹಾಯವಾಣಿ ಸಂಖ್ಯೆ 1950ಗೆ ದೂರು ನೀಡುವಂತೆ ತಿಳಿಸಿದರು.

180 ಸೂಕ್ಷ್ಮ ಮತಗಟ್ಟೆ
ಎಸ್ಪಿ ನಿಶಾ ಜೇಮ್ಸ್‌ ಮಾತನಾಡಿ, ಜಿಲ್ಲೆಯ 865 ಮತಗಟ್ಟೆಗಳಲ್ಲಿ 180 ಸೂಕ್ಷ್ಮ ಎಂದು ಗುರುತಿಸಲಾಗಿದೆ. 685 ಸಾಮಾನ್ಯ ಮತ ಗಟ್ಟೆಗಳಿವೆ. 36 ನಕ್ಸಲ್‌ ಪೀಡಿತ ಮತಗಟ್ಟೆಗಳಿದ್ದು, ಈ ಪ್ರದೇಶದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್‌ ಸಿಬಂದಿಯೊಂದಿಗೆ ಕಾರಾಗೃಹ ಇಲಾಖೆ, ಹೋಂಗಾರ್ಡ್‌, ಫಾರೆಸ್ಟ್‌ ಗಾರ್ಡ್‌ಗಳು, 4 ಕೆಎಸ್‌ಆರ್‌ಪಿ ತುಕಡಿ, 2 ಐಟಿಡಿಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ನಕ್ಸಲ್‌ ಪೀಡಿತ ಪ್ರದೇಶದಲ್ಲಿ 8 ಬಾರಿ ಜಂಟಿ ಶೋಧ ನಡೆಸಲಾಗಿದೆ. ಚುನಾವಣೆಗೆ ಅಡ್ಡಿಪಡಿ ಸುವಂತಹ 148 ಮಂದಿಯನ್ನು ಗುರುತಿಸಿದ್ದು, ಈ ಪೈಕಿ 127 ಜನರಿಂದ ಮತ್ತು 1,324 ರೌಡಿ ಶೀಟರ್‌ಗಳಿಂದ ಮುಚ್ಚಳಿಕೆ ಪಡೆದುಕೊಳ್ಳಲಾಗಿದೆ. 3,696 ಮಂದಿಯಿಂದ ಶಸ್ತ್ರಾಸ್ತ್ರ ಠೇವಣಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.