ಎರಡೂ ಪಕ್ಷಗಳಿಗೆ ಮತದಾರನ ಮಣೆ
Team Udayavani, Mar 22, 2019, 6:36 AM IST
ಕ್ಷೇತ್ರದ ವಸ್ತುಸ್ಥಿತಿ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ಎಂದು ಕರೆಸಿಕೊಳ್ಳುವ ಗಾಂಧಿನಗರ, ಕಳೆದೆರಡು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ಗೆ ಮಣೆ ಹಾಕುವ ಮತದಾರರನ್ನು ಹೊಂದಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಒಟ್ಟು 1,16,251 (ಶೇ.55.85) ಮತಗಳು ಚಲಾವಣೆಯಾಗಿದ್ದು,
-ಈ ಪೈಕಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ 35,102 (ಶೇ.30.4)ಮತಗಳು ಪಿ.ಸಿ.ಮೋಹನ್ ಪರ 73,247 (ಶೇ.63.5)ಮತಗಳು ಚಲಾವಣೆಯಾಗಿವೆ. 2009ರಲ್ಲಿಯೂ ಈ ಕ್ಷೇತ್ರದಲ್ಲಿ ಪಿ.ಸಿ.ಮೋಹನ್ ಅವರಿಗೆ 18 ಸಾವಿರ ಮತಗಳ ಮುನ್ನಡೆ ಸಿಕ್ಕಿತ್ತು. ಸಂಸದ ಪಿ.ಸಿ.ಮೋಹನ್, 2013ರಲ್ಲಿ ಗಾಂಧಿನಗರ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಸುಮಾರು 22 ಸಾವಿರ ಮತಗಳ ಅಂತರದಲ್ಲಿ ಸೋಲುಂಡಿದ್ದರು.
ಇನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 7 ಬಿಬಿಎಂಪಿ ವಾರ್ಡ್‌ಗಳಿದ್ದು, ಈ ಪೈಕಿ 5 ರಲ್ಲಿ ಕಾಂಗ್ರೆಸ್, 2ರಲ್ಲಿ ಬಿಜೆಪಿ ಕಾರ್ಪೊರೇಟರ್‌ಗಳಾಗಿದ್ದಾರೆ. ಗಾಂಧಿನಗರ ಬೆಂಗಳೂರಿನ ಹೃದಯ ಭಾಗ. ವ್ಯಾಪಾರ ವಹಿವಾಟು, ಸಿನಿಮಾ ಚಟುವಟಿಕೆಗೆ ಈ ಕ್ಷೇತ್ರ ಪ್ರಸಿದ್ಧಿ ಪಡೆದಿದೆ. ತಮಿಳುನಾಡು ಹಾಗೂ ಉತ್ತರ ಭಾರತ ವಲಸಿಗರೇ ಹೆಚ್ಚಿರುವ ಕ್ಷೇತ್ರ ಇದಾಗಿದ್ದು, ಇಲ್ಲಿ ಕನ್ನಡಿಗರೆ ಅಲ್ಪಸಂಖ್ಯಾತರು ಎನ್ನುಬಹುದು.ಹೀಗಾಗಿ ಇಲ್ಲಿನ ಚುನಾವಣೆಯಲ್ಲಿ ತಮಿಳುನಾಡಿನಿಂದ ಬಂದ ವಲಸಿಗ ಕಾರ್ಮಿಕರು ಹಾಗೂ ಉತ್ತರಭಾರತ ಮೂಲದ ವ್ಯಾಪಾರಿಗಳು ಪ್ರಮುಖ ಪಾತ್ರವಹಿಸುತ್ತಾರೆ.
ಸಂಸದರಿಂದ ಬಂದ ಪ್ರಮುಖ ಕೊಡುಗೆಗಳು
-ಒಟ್ಟಾರೆ ನೀಡಿದ ಅನುದಾನ 2.7 ಕೋಟಿ
-22 ಕುಡಿಯುವ ನೀರಿನ ಯೋಜನೆ
-11.5 ಲಕ್ಷ ಅನುದಾನದಲ್ಲಿ ಲಕ್ಷ್ಮಣ್‌ರಾವ್ ಉದ್ಯಾನ ಅಭಿವೃದ್ಧಿ. ಆರ್ಯ ವೈಶ್ಯ ವಿದ್ಯಾರ್ಥಿ ನಿಲಯಕ್ಕೆ 25 ಲಕ್ಷ ಅನುದಾನ
ನಿರೀಕ್ಷೆಗಳು
-ಸ್ಮಾರ್ಟ್‌ಸಿಟಿಯಡಿ ಗಾಂಧಿನಗರ ವಾರ್ಡ್ ಅಭಿವೃದ್ಧಿ ಕೊಳಚೆ ಪ್ರದೇಶಗಳ ಅಭಿವೃದ್ಧಿ ವ್ಯಾಪಾರ ವಹಿವಾಟಿಗೆ ಅತ್ಯಾಧುನಿಕ ಮಾರುಕಟ್ಟೆ
-ವಾರ್ಡ್‌ಗಳು- 7
-ಬಿಜೆಪಿ- 2
-ಕಾಂಗ್ರೆಸ್- 5
-ಜನಸಂಖ್ಯೆ- 3,61,096
-ಮತದಾರರ ಸಂಖ್ಯೆ- 2,19,884
-ಪುರುಷರು – 1,13,860
-ಮಹಿಳೆಯರು – 1,06,024
2014ರ ಚುನಾವಣೆಯಲ್ಲಿ ಚಲಾವಣೆಯಾದ ಮತಗಳು- 1,16,251(ಶೇ.55.85)
-ಬಿಜೆಪಿ ಪಡೆದ ಮತಗಳು – 73,247 (ಶೇ.63.5)
-ಕಾಂಗ್ರೆಸ್ ಪಡೆದ ಮತಗಳು – 35,102 (ಶೇ.30.4)
-ಜೆಡಿಎಸ್ ಪಡೆದ ಮತಗಳು – 2,299 (ಶೇ.2)
2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ದಿನೇಶ್ ಗುಂಡೂರಾವ್ ಕಾಂಗ್ರೆಸ್ ಶಾಸಕ
-ಪಾಲಿಕೆಯಲ್ಲಿ ಬಿಜೆಪಿ ಸದಸ್ಯರು- 2
-ಕಾಂಗ್ರೆಸ್ ಸದಸ್ಯರು -5
ಮಾಹಿತಿ: ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.