ವಯನಾಡ್ ಅಥವಾ ಅಮೇಠಿ: ಯಾವುದು ಸೇಫ್?
Team Udayavani, Apr 14, 2019, 6:00 AM IST
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯವರು ಸ್ಪರ್ಧೆಗಾಗಿ ಎರಡು ಕ್ಷೇತ್ರ ಗಳನ್ನು ಆಯ್ಕೆ ಮಾಡಿಕೊಂಡಿರುವುದು, ಇದರ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳಿರುವುದು ಗೊತ್ತೇ ಇದೆ.
ವಯನಾಡ್ ಅನ್ನು ರಾಹುಲ್ ಅವರು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಗುಸುಗುಸು ಹಬ್ಬು
ತ್ತಿದ್ದಂತೆ, ಅಮೇಠಿಯಲ್ಲಿ ಅವರ ಗೆಲುವು ಖಚಿತವಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದಕ್ಕೆ ಕಾರಣ 2014ರಲ್ಲಿ ಅವರ ಗೆಲುವು ದೊಡ್ಡ ಪ್ರಮಾಣದ್ದೇನೂ ಆಗಿರಲಿಲ್ಲ. ಶೇಕಡಾವಾರು ಮತಗಳಿಕೆಯಲ್ಲಿ ಬಿಜೆಪಿ ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ಒಡ್ಡಿತ್ತು.
ಸೋತರೂ ಸಂಪರ್ಕ
ಬಿಜೆಪಿ ಅಮೇಠಿಯಲ್ಲಿ ಕಳೆದ ಬಾರಿ ಸೋತರೂ, ಅದರ ಲಕ್ಷ್ಯ 2019ರದ್ದಾಗಿತ್ತು. ಚುನಾವಣೆಯಲ್ಲಿ ಸೋತ ಬಳಿಕ ಸೋತ ಅಭ್ಯರ್ಥಿ ಸ್ಮತಿ ಇರಾನಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಇದರರ್ಥ ಮುಂದಿನ ಬಾರಿಯಾದರೂ ಗಾಂಧಿ ಕುಟುಂಬದ ಕೋಟೆ ಯಂತಿದ್ದ ಅಮೇಠಿಯನ್ನು ರಾಹುಲ್ ಕೈಯಿಂದ ತಪ್ಪಿಸು ತ್ತಿದ್ದೇವೆ ಎಂಬ ಪ್ರಬಲ ಸಂದೇಶವನ್ನು ನೀಡಲಾಗಿತ್ತು. ಅದಕ್ಕೆ ತಕ್ಕಂತೆ ಅಮೇಠಿಯಲ್ಲಿ ತಳಮಟ್ಟದ ಸಂಪರ್ಕ, ಪಕ್ಷ ಕಟ್ಟುವ ಕೆಲಸವನ್ನು ಬಿಜೆಪಿ ಇನ್ನಿಲ್ಲದಂತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಇನ್ನೊಂದು ಕ್ಷೇತ್ರದಲ್ಲಿ ಕಣಕ್ಕಿಳಿಸುವ ಬಗ್ಗೆ ತೀರ್ಮಾನ ಮಾಡಿತ್ತು.
ಅಮೇಠಿಯಲ್ಲಿ ಏನಾಗಿತ್ತು?
1970ರಿಂದಲೂ ಅಮೇಥಿ ಗಾಂಧಿ ಕುಟುಂಬದ ಭದ್ರ ಕೋಟೆ. 1998ರಲ್ಲಿ ಒಂದು ಬಾರಿ ಮಾತ್ರ ಬಿಜೆಪಿ ಪಾಲಾಗಿತ್ತು. ಅದನ್ನು ಹೊರತು ಪಡಿಸಿದರೆ 2004ರಿಂದ ರಾಹುಲ್ ಗಾಂಧಿಯವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2009ರಲ್ಲಿ ರಾಹುಲ್ ಅವರು ಶೇ.71.8ರಷ್ಟು ಮತ ಪಡೆದಿದ್ದರು. ಈ ಸಂದರ್ಭ ಬಿಜೆಪಿ ನಾಲ್ಕನೇ ಸ್ಥಾನಕ್ಕೆ ಕುಸಿದಿತ್ತು. ಆದರೆ 2014ರಲ್ಲಿ ಇದು ಸಂಪೂರ್ಣ ಬದಲಾಗಿತ್ತು. ರಾಹುಲ್ ಅವರ ಶೇಕಡಾವಾರು ಮತಗಳಿಕೆ ಶೇ. 46.2ಕ್ಕೆ ಕುಸಿದಿದ್ದು, ಅವರ ಪ್ರತಿಸ್ಪರ್ಧಿ, ಬಿಜೆಪಿಯ ಸ್ಮತಿ ಇರಾನಿ ಮತಗಳಿಕೆ ಶೇ.34.4ರಷ್ಟಕ್ಕೆ ಏರಿತ್ತು. ಅಂದರೆ ಐದೇ ವರ್ಷದಲ್ಲಿ ಶೇ.28.1ರಷ್ಟು ಮತವನ್ನು ರಾಹುಲ್ ಕಳೆದುಕೊಂಡಿದ್ದರು. 2009ರಿಂದ 2014ರ ವೇಳೆಗೆ ಬಿಜೆಪಿ ಮತಗಳಿಕೆಯನ್ನು ಶೇ.28.5ರಷ್ಟು ಏರಿಸಿಕೊಂಡಿತ್ತು.
2009ರಲ್ಲಿ 3 ಲಕ್ಷ ಮತದ ಅಂತರದಲ್ಲಿ ಗೆದ್ದಿದ್ದ ರಾಹುಲ್ ಅವರು 2014ರ ವೇಳೆಗೆ ಮತದ ಅಂತರ ಒಂದು ಲಕ್ಷದ ಆಜುಬಾಜಿಗೆ ಇಳಿದಿತ್ತು. ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲೂ ಫಲಿತಾಂಶ ಕಾಂಗ್ರೆಸ್‌ಗೆ ಆಶಾದಾಯಕವಾಗಿರಲಿಲ್ಲ. ಅಮೇಠಿಯ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಿತ್ತು.
ವಯನಾಡ್‌ನಲ್ಲಿ ಏನಾಗಿತ್ತು?
2009ರ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳಿಕೆ ಪ್ರಮಾಣ ಶೇ. 50ರಷ್ಟಿದ್ದರೆ, ಸಿಪಿಐ ಮತಗಳಿಕೆ ಶೇ. 31ರಷ್ಟಿತ್ತು. ಇತರರದ್ದು ಶೇ. 15 ಮತ್ತು ಬಿಜೆಪಿ ಶೇ. 4ರಷ್ಟಿತ್ತು. 2014ರ ಹೊತ್ತಿಗೆ ಕಾಂಗ್ರೆಸ್ ಮತಗಳಿಕೆ ಶೇ. 41ರಷ್ಟಕ್ಕೆ ಇಳಿದಿದ್ದು, ಸಿಪಿಐನದ್ದು ಶೇ.39ಕ್ಕೇರಿತ್ತು. ಅಂದರೆ ಕಾಂಗ್ರೆಸ್ ಮತಗಳಿಕೆ ಶೇ. 10ರಷ್ಟು ಇಳಿದಿದ್ದು, ಸಿಪಿಐನದ್ದು ಶೇ. 8ರಷ್ಟು ಏರಿತ್ತು. ಕಾಂಗ್ರೆಸ್, ಸಿಪಿಐ ಮತಗಳಿಕೆ ವ್ಯತಾಸ ಶೇ. 2.3 ಆಗಿತ್ತು. ಹಾಗೆಯೇ ಬಿಜೆಪಿ ಮತಗಳಿಕೆ ಗಮನಾರ್ಹವಾಗಿ ಶೇ. 8.8ಕ್ಕೇರಿತ್ತು. 2016ರ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳಿಕೆ ವಯನಾಡ್‌ನಲ್ಲಿ ಶೇ. 41.2ರಿಂದ ಶೇ. 44.7ಕ್ಕೆ ಏರಿತ್ತು. ಸಿಪಿಐನದ್ದು ಶೇ. 38.9ರಿಂದ ಶೇ. 43.1ಕ್ಕೇರಿತ್ತು. ಇಲ್ಲೂ ಎಡಪಕ್ಷಗಳು ಕಾಂಗ್ರೆಸ್‌ಗೆ ನೇರ ಸ್ಪರ್ಧೆಯನ್ನು ನೀಡಿವೆ. ಆದ್ದರಿಂದ ಫಲಿತಾಂಶಗಳನ್ನು ಗಮನಿಸಿದಾಗ ಅಮೇಠಿ ಗಿಂತ ವಯನಾಡ್‌ನ ಚುನಾವಣೆ ಫಲಿತಾಂಶ ರಾಹುಲ್ ಗಾಂಧಿಯವರ ಪಾಲಿಗೆ ಬಹಳ ಸಿಹಿಯಾಗಿರಬಹುದು ಎಂದು ಹೇಳುವಂತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.