![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 24, 2019, 6:00 AM IST
ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಭರಾಟೆ ಶುರುವಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಎಲ್ಲೆಡೆ ಕೇಳಿ ಬರುವುದು “ಬಿ-ಫಾರಂ’ ಹೆಸರು. ಟಿಕೆಟ್ ಗಿಟ್ಟಿಸಿಕೊಳ್ಳುವ ಅಭ್ಯರ್ಥಿಗಳು ಬಿ ಫಾರಂ ಪಡೆದುಕೊಳ್ಳಲು ಕಸರತ್ತು ಮತ್ತು ಲಾಬಿ ನಡೆಸಬೇಕಾಗುತ್ತದೆ. ಈ ಬಿ ಫಾರಂ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ರಾಜಕೀಯ ಪಕ್ಷಗಳಿಂದ ಅಧಿಕೃತವಾಗಿ ನೇಮಿಸಲ್ಪಟ್ಟ ಅಥವಾ ಗುರುತಿಸಲ್ಪಟ್ಟ ಅಭ್ಯರ್ಥಿಯು ತನ್ನ ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾಧಿಕಾರಿಗಳಿಗೆ ಸಲ್ಲಿಸುವ ಹಲವು ಅರ್ಜಿ ನಮೂನೆಗಳಲ್ಲಿ ಬಿ ಫಾರಂ ಸಹ ಒಂದು. ಇದರಲ್ಲಿ ಪಕ್ಷದ ಅಧ್ಯಕ್ಷರು, ಕಾರ್ಯದರ್ಶಿ ಅಥವಾ ವಿಶೇಷ ಅಧಿಕಾರ ನೀಡಲ್ಪಟ್ಟ ಪದಾಧಿಕಾರಿಯ ಸಹಿ ಇರುತ್ತದೆ. ಆ ಸಹಿ ಇದ್ದಾಗ ಮಾತ್ರ ಅದು ಅಧಿಕೃತವೆನಿಸಿಕೊಳ್ಳುತ್ತದೆ. ಬಿ ಫಾರಂ ಮೂಲಕ ರಾಜಕೀಯ ಪಕ್ಷವೊಂದು ಇವರೇ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಚುನಾವಣಾಧಿಕಾರಿಗಳಿಗೆ ದೃಢೀಕರಣ ಕೊಡುತ್ತದೆ.ಬಿ ಫಾರಂನಲ್ಲಿ ಐದು ಭಾಗಗಳಿದ್ದು, ಅದೆಲ್ಲವನ್ನೂ ಭರ್ತಿ ಮಾಡಬೇಕು. ಜತೆಗೆ ಯಾವ ಕ್ಷೇತ್ರದ ಚುನಾವಣೆ ನಾಮಪತ್ರದ ಜೊತೆಗೆ ಬಿ ಫಾರಂ ಸಲ್ಲಿಸಲಾಗಿರುತ್ತದೋ, ಆ ಕ್ಷೇತ್ರದ 10 ಮಂದಿ ಮತದಾರರುಸೂಚಕರಾಗಿರಬೇಕು. ಒಂದು ಪಕ್ಷದಿಂದ ಕೆಲವು ಸಂದರ್ಭಗಳಲ್ಲಿ ಒಂದೇ ಬಿ ಫಾರಂನಲ್ಲಿ ಇಬ್ಬರು ಅಭ್ಯರ್ಥಿಗಳ ಹೆಸರು ನಮೂದು ಮಾಡಲಾಗಿರುತ್ತದೆ. ಒಂದನೇ ಅಭ್ಯರ್ಥಿ ಅಧಿಕೃತ, ಎರಡನೇ ಅಭ್ಯರ್ಥಿಯನ್ನು “ಡಮ್ಮಿ ಕ್ಯಾಂಡಿಡೆಟ್’ ಎಂದು ಕರೆಯಲಾಗುತ್ತದೆ.
ಒಂದು ವೇಳೆ ಅಧಿಕೃತ ಅಭ್ಯರ್ಥಿಯ ನಾಮಪತ್ರ ಯಾವುದೋ ಕಾರಣಕ್ಕೆ ತಿರಸ್ಕೃತವಾದರೆ, ಡಮ್ಮಿ ಅಭ್ಯರ್ಥಿ ಅಧಿಕೃತ ಅಭ್ಯರ್ಥಿ ಆಗುತ್ತಾನೆ. ಬಿ ಫಾರಂ ಇಲ್ಲದೇ ನಾಮಪತ್ರ ಸಲ್ಲಿಸಬಹುದು. ಆದರೆ, ನಾಮಪತ್ರ ಸಲ್ಲಿಕೆಗೆ ನಿಗದಿಪಡಿಸಿರುವ ಕೊನೆಯ ದಿನಾಂಕದ 3 ಗಂಟೆಯೊಳಗೆ ಬಿ ಫಾರಂ ಸಲ್ಲಿಸಬೇಕು. ಬಿ ಫಾರಂ ಸಲ್ಲಿಸದೇ ಇದ್ದಾಗ, ಹತ್ತು ಮಂದಿ ಸೂಚಕರು ಇಲ್ಲದಿದ್ದಾಗ, ನಾಮಪತ್ರ ಅಪೂರ್ಣ ಆದಾಗ ನಾಮಪತ್ರ ತಿರಸ್ಕೃತಗೊಳ್ಳುತ್ತದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.