ರೆಡ್ಡಿ ಜತೆಗಿದ್ದಿದ್ದರೆ ಶಕ್ತಿ ಹೆಚ್ಚುತ್ತಿತ್ತು
ಮತ ಮಾತು
Team Udayavani, Apr 15, 2019, 3:00 AM IST
ಬೆಂಗಳೂರು: ಆಪ್ತಮಿತ್ರ, ಜನಾರ್ದನ ರೆಡ್ಡಿಯವರು ಜತೆಯಲ್ಲಿ ಇದ್ದಿದ್ದರೆ ಇನ್ನಷ್ಟು ಶಕ್ತಿ ಹೆಚ್ಚುತ್ತಿತ್ತು. ಆದರೂ, ಪ್ರಧಾನಿ ಮೋದಿಯವರ ಅಲೆ ಜೋರಾಗಿದ್ದು, ರಾಜ್ಯದಲ್ಲಿ ಬಳ್ಳಾರಿ ಸೇರಿ 22ರಿಂದ 24 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ಹಿರಿಯ ನಾಯಕ ಬಿ.ಶ್ರೀರಾಮುಲು ಹೇಳಿದ್ದಾರೆ. ರಾಜ್ಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿರುವ ಶ್ರೀರಾಮುಲು, ಪ್ರಚಾರ, ಪಕ್ಷದ ಗೆಲುವಿನ ಬಗ್ಗೆ “ಉದಯವಾಣಿ’ ಜತೆ ಮಾತನಾಡಿದ್ದಾರೆ.
* ರಾಜ್ಯದ ಚುನಾವಣಾ ಕಣದಲ್ಲಿ ರಾಜಕೀಯ ವಾತಾವರಣ ಬಿಜೆಪಿಗೆ ಹೇಗಿದೆ?
ರಾಜ್ಯದಲ್ಲಿ ಬಿಜೆಪಿಗೆ ಪೂರಕ ವಾತಾವರಣವಿದೆ. ಬಳ್ಳಾರಿ ಸೇರಿ ಹೈದರಾಬಾದ್-ಕರ್ನಾಟಕ ಭಾಗದ ಆರು ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಲಿದೆ. ಎಲ್ಲೆಡೆ ಜನ ಬಿಜೆಪಿಗೆ ಬೆಂಬಲ ನೀಡುತ್ತಿರುವುದು ಪ್ರಚಾರದ ವೇಳೆ ಕಾಣುತ್ತಿದೆ.
* ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿ ಸ್ಥಿತಿ ಹೇಗಿದೆ? ಅನ್ಯ ಪಕ್ಷ ನಾಯಕರ ನೆರವಿನ ನಿರೀಕ್ಷೆಯಲ್ಲಿದ್ದೀರಾ?
ಬಳ್ಳಾರಿ ಕ್ಷೇತ್ರದಲ್ಲಿ ಈ ಬಾರಿ ಖಂಡಿತ ಗೆಲ್ಲುತ್ತೇವೆ. ಕಳೆದ ಉಪಚುನಾವಣೆಯಲ್ಲಿ ಗೆಲುವಿಗೆ ಸಾಕಷ್ಟು ಶ್ರಮ ವಹಿಸಲಾಗಿತ್ತು. ಆದರೆ, ಬೇರೆ, ಬೇರೆ ಕಾರಣಗಳಿಂದಾಗಿ ಹಿನ್ನಡೆ ಅನುಭವಿಸಬೇಕಾಯಿತು. ಈ ಬಾರಿ ದೇವರ ಆಶೀರ್ವಾದದಿಂದ ಗೆದ್ದು, ಕ್ಷೇತ್ರವನ್ನು ಮತ್ತೆ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುತ್ತೇವೆ. ಬಳ್ಳಾರಿ ಕ್ಷೇತ್ರದಲ್ಲಿ ಅನ್ಯ ಪಕ್ಷಗಳ ನಾಯಕರ ಸಹಕಾರ ಪಡೆಯುವ ಲೆಕ್ಕಾಚಾರ ಏನೂ ಇಲ್ಲ. ಕ್ಷೇತ್ರದಲ್ಲಿ ಸಂಘಟನೆ ಉತ್ತಮವಾಗಿದೆ. ಬಿಜೆಪಿ ಪರ ಅಲೆಯೂ ಇದೆ. ನಮ್ಮದೇ ಸ್ವಂತ ಪ್ರಯತ್ನ, ಪರಿಶ್ರಮದಿಂದ ಗೆಲ್ಲುವ ವಿಶ್ವಾಸವಿದೆ.
* ಕ್ಷೇತ್ರದಲ್ಲಿ ಹಾಲಿ ಸಂಸದರು, ಅಭ್ಯರ್ಥಿಗಳಿಗೆ ವರ್ಚಸ್ಸಿಲ್ಲವೇ?
ದೇಶದಲ್ಲಿರುವಂತೆ ರಾಜ್ಯದಲ್ಲೂ ಮೋದಿ ಅಲೆ ಜೋರಾಗಿದೆ. ಮೋದಿ ಅಲೆ ಶೇ.90ರಷ್ಟಿದ್ದರೆ, ಅಭ್ಯರ್ಥಿಗಳ ವರ್ಚಸ್ಸು, ಕಾರ್ಯ ಸಾಧನೆ, ನಾಯಕತ್ವ ಗುಣ ಸೇರಿ ಇತರ ಅಂಶಗಳು ಶೇ.10ರಷ್ಟಿದೆ. ಹಾಗಾಗಿ, ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವುದು ಶೇ.100ರಷ್ಟು ಖಚಿತ.
* 22 ಸ್ಥಾನಗಳಲ್ಲಿ ಗೆಲುವು ಆತ್ಮವಿಶ್ವಾಸವೋ? ಅತಿಶಯೋಕ್ತಿಯೋ?
ಪಕ್ಷದ ರಾಜ್ಯಾಧ್ಯಕ್ಷರು ಸೇರಿ ಹಲವು ನಾಯಕರು ರಾಜ್ಯದಲ್ಲಿ 22 ಸ್ಥಾನ ಗೆಲ್ಲುತ್ತೇವೆಂದು ಹೇಳುತ್ತಿರಬಹುದು. ನನ್ನ ಲೆಕ್ಕಾಚಾರದಲ್ಲಿ ಇನ್ನೂ ಎರಡು ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ. ಹಾಗಾಗಿ, ಇದು ಅತಿಶಯೋಕ್ತಿ ಗುರಿ ಎನಿಸದು.
* ಬಿಜೆಪಿ ಸ್ಟಾರ್ ಪ್ರಚಾರಕರಾಗಿ ಎಲ್ಲೆಲ್ಲಿ ಪ್ರಚಾರ ನಡೆಸಲಿದ್ದೀರಿ?
ಚಾಮರಾಜನಗರ, ಮೈಸೂರು-ಕೊಡಗು, ಚಿಕ್ಕಬಳ್ಳಾಪುರ, ಕೋಲಾರ, ಹಾವೇರಿ, ಗದಗ, ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗದಲ್ಲಿ ಪ್ರಚಾರ ನಡೆಸುತ್ತಿದ್ದೇನೆ. ಹೆಚ್ಚಾಗಿ ರೋಡ್ ಶೋ ಮೂಲಕವೇ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದೇನೆ.
* ಸಂವಿಧಾನ ಕುರಿತು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ನೀಡಿದ ಹೇಳಿಕೆ ಬಗ್ಗೆ ಪಕ್ಷದ ಪರಿಶಿಷ್ಟ ಪಂಗಡದವರಲ್ಲಿದ್ದ ಬೇಸರ ತಗ್ಗಿದೆಯೇ?
ಅನಂತ ಕುಮಾರ್ ಹೆಗಡೆ ಅವರ ಹೇಳಿಕೆಯನ್ನು ತಪ್ಪಾಗಿ ಅಥೆìçಸಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿಯವರೇ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ, ಅವರ ಹೇಳಿಕೆ ಬಗ್ಗೆ ಸಮುದಾಯದ ಜನರಲ್ಲಿ ಯಾವುದೇ ರೀತಿಯ ಅಸಮಾಧಾನವಿಲ್ಲ.
* “ಲೋಕಾ’ ಫಲಿತಾಂಶ ಸಮ್ಮಿಶ್ರ ಸರ್ಕಾರದ ಫಲಿತಾಂಶದ ಮೇಲೆ ಪರಿಣಾಮ ಬೀರುವುದೇ?
ಖಂಡಿತ ಪರಿಣಾಮ ಬೀರಲಿದೆ. ಮುಖ್ಯಮಂತ್ರಿಯವರ ಪುತ್ರ ಹಾಗೂ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಚುನಾವಣೆಯಲ್ಲಿ ಸೋಲಲಿದ್ದು, ಜೆಡಿಎಸ್ ನಾಯಕರು ಹತಾಶೆಗೆ ಒಳಗಾಗುತ್ತಾರೆ. ಕಾಂಗ್ರೆಸ್ ಕೂಡ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗದ ಕಾರಣ ಭಿನ್ನಾಭಿಪ್ರಾಯ ಭುಗಿಲೆದ್ದು, ಸಮ್ಮಿಶ್ರ ಸರ್ಕಾರದ ಅಸ್ತಿತ್ವವೇ ಅಲ್ಲಾಡಲಿದೆ.
* ಸಮ್ಮಿಶ್ರ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಹೇಳಿದರೂ ಅವರ ಪ್ರಚಾರದಲ್ಲಿ ಜನ ಸೇರುತ್ತಿದ್ದಾರಲ್ಲಾ?
ಚುನಾವಣಾ ಪ್ರಚಾರ ಸಭೆ, ರ್ಯಾಲಿಗಳಿಗೆ ಜನ ಬರಬಹುದು. ಪ್ರಚಾರ ಸಭೆಗಳಿಗೆ ಎಲ್ಲ ಪಕ್ಷದವರು ಜನರನ್ನು ಸೇರಿಸುತ್ತಾರೆ. ಆದರೆ, ಬಂದವರೆಲ್ಲಾ ಮತ ಹಾಕಬೇಕಲ್ಲ. ಜನ ಮತ ಹಾಕುವಾಗ ದೇಶದ ಅಭಿವೃದ್ಧಿ, ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿಯವರನ್ನು ಬೆಂಬಲಿಸುವ ವಿಶ್ವಾಸವಿದೆ.
* ಮಾಜಿ ಸಚಿವ ಜನಾರ್ದನ ರೆಡ್ಡಿ ಚುನಾವಣೆಯಲ್ಲಿ ಸಕ್ರಿಯರಾಗದಿರುವುದು ಹಿನ್ನಡೆಗೆ ಕಾರಣವೇ?
ಆಪ್ತಮಿತ್ರ, ಜನಾರ್ದನ ರೆಡ್ಡಿಯವರು ಕೆಲ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಕಾನೂನು ಹೋರಾಟದಲ್ಲಿ ಸಕ್ರಿಯರಾಗಿದ್ದು, ತಮ್ಮದೇ ಕೆಲಸ ಕಾರ್ಯಗಳಲ್ಲಿ ಬಿಜಿಯಾಗಿದ್ದಾರೆ. ಅವರು ಜತೆಯಲ್ಲಿದ್ದಿದ್ದರೆ ನಮ್ಮ ಶಕ್ತಿ ಇನ್ನಷ್ಟು ಹೆಚ್ಚಾಗುತ್ತಿತ್ತು. ಏನೂ ಮಾಡಲಾಗದು.
* “ಆಪರೇಷನ್ ಕಮಲ’ದ ಕಳಂಕ ಇನ್ನೂ ಮಾಸಿಲ್ಲ, ಅದರಿಂದ ತಮಗೂ ಹಿನ್ನಡೆಯಾಗಿದೆಯೇ?
“ಆಪರೇಷನ್ ಕಮಲ’ವೂ ಇಲ್ಲ. ನಮಗೆ ಯಾವುದೇ ಹಿನ್ನಡೆಯೂ ಆಗಿಲ್ಲ. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮೈತ್ರಿ ಪಕ್ಷಗಳ ನಾಯಕರೇ ಕಿತ್ತಾಡಿಕೊಂಡು ಹೊರ ಬರುತ್ತಾರೆ. ಹೀಗಿರುವಾಗ “ಆಪರೇಷನ್ ಕಮಲ’ ಎಂದು ಅನಗತ್ಯವಾಗಿ ಆರೋಪ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಬಹುತೇಕ ಕಡೆ ನೆಲ ಕಚ್ಚಿದ್ದು, ಚುನಾವಣೆ ಬಳಿಕ ರಾಹುಲ್ ಗಾಂಧಿ ವರ್ಚಸ್ಸು ಇನ್ನಷ್ಟು ಕಳೆಗುಂದಲಿದೆ.
* ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
MUST WATCH
ಹೊಸ ಸೇರ್ಪಡೆ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
ನ.8 ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.