ರಾಯಚೂರಲ್ಲಿ ಮಹಿಳೆಯರೇ ನಿರ್ಣಾಯಕರು!


Team Udayavani, Mar 23, 2019, 1:46 AM IST

4.jpg

ರಾಯಚೂರು: ನಿರೀಕ್ಷಿತ ಮಟ್ಟದ ಸ್ಥಾನಮಾನ ಪಡೆಯದ ಮಹಿಳೆಯರು ಮತದಾರರ ಪಟ್ಟಿಯಲ್ಲಿ ಮುಂದಿರುವುದು ರಾಯಚೂರು ಲೋಕಸಭೆ ಕ್ಷೇತ್ರದ ವಿಶೇಷತೆ. ಒಟ್ಟಾರೆ ಮತದಾರರಲ್ಲಿ ಪುರುಷರಿಗೆ ಹೋಲಿಸಿದರೆ 13,705 ಮಹಿಳಾ ಮತದಾರರು ಹೆಚ್ಚಿರುವುದು ಗಮನಾರ್ಹ.

ರಾಯಚೂರು ಜಿಲ್ಲೆಯ ಐದು ಹಾಗೂ ಯಾದಗಿರಿ ಜಿಲ್ಲೆಯ ಮೂರು ಸೇರಿ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡ ಕ್ಷೇತ್ರ ಇದಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ 16,61,606 ಮತದಾರರಿದ್ದರೆ, ಈ ಬಾರಿ 2.21 ಲಕ್ಷ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಅಂದರೆ 9,39,752 ಪುರುಷ, 9,53,457 ಮಹಿಳಾ ಮತದಾರರು ಸೇರಿ ಒಟ್ಟು 18,93,576 ಮತದಾರರಿದ್ದಾರೆ. ಹೀಗಾಗಿ ಯಾವುದೇ ಪಕ್ಷಗಳು ಮಹಿಳಾ ಮತದಾರರನ್ನು ಒಲಿಸಿಕೊಳ್ಳದೆ ಗೆಲ್ಲುವುದು ಸುಲಭದ ಮಾತಲ್ಲ. ಹೊಸ ಮತದಾರರ ಪೈಕಿ ಸುರಪುರ ವಿಧಾನಸಭೆ ಕ್ಷೇತ್ರದಲ್ಲೇ ಅತಿ ಹೆಚ್ಚು ಅಂದರೆ 53 ಸಾವಿರ ಹೊಸ ಮತದಾರರು ಸೇರಿದ್ದಾರೆ.

ಸುರಪುರ ದೊಡ್ಡ ಕ್ಷೇತ್ರ: ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭೆ ಕ್ಷೇತ್ರ ಜನಸಂಖ್ಯೆಯಲ್ಲಿದೊಡ್ಡದಾ ಗಿದ್ದು 1,37,504 ಪುರುಷರು, 1,36,080 ಮಹಿಳೆಯರು, 20 ಇತರೆ ಮತದಾರರು ಸೇರಿ ಒಟ್ಟು 2.73,604 ಮತದಾರರನ್ನು ಹೊಂದಿದ್ದು, ದೊಡ್ಡ ಕ್ಷೇತ್ರ ಎನಿಸಿಕೊಂಡಿದೆ. ಲಿಂಗಸುಗೂರು ಕ್ಷೇತ್ರದಲ್ಲಿ 1,20,396 ಪುರುಷ, 1,21,599 ಮಹಿಳೆ, 9 ಇತರೆ ಮತದಾರರು ಸೇರಿ 2,42,004 ಮತದಾರರಿದ್ದಾರೆ.

ಶಹಾಪುರ ಕ್ಷೇತ್ರದಲ್ಲಿ 1,13,422 ಪುರುಷ, 1,12,779 ಮಹಿಳೆ ಹಾಗೂ 25 ಇತರೆ ಸೇರಿ 2,26,226 ಮತದಾರರಿದ್ದಾರೆ. ಇನ್ನು ಯಾದಗಿರಿ ಕ್ಷೇತ್ರದಲ್ಲಿ 1,16,705 ಪುರುಷ, 1,18,018 ಮಹಿಳೆ ಹಾಗೂ 24 ಇತರೆ ಮತದಾರರು ಸೇರಿ 2,34,747 ಮತದಾರರಿದ್ದಾರೆ. ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 1,13,403 ಪುರುಷರು, 1,17,822 ಮಹಿಳೆಯರು ಹಾಗೂ 70 ಇತರೆ ಮತದಾರರು ಸೇರಿ
ಒಟ್ಟು 2,31,295 ಮತದಾರರಿದ್ದಾರೆ.

ನಗರ ಕ್ಷೇತ್ರದಲ್ಲಿ 1,08,747 ಪುರುಷರು,1,08,419 ಮಹಿಳೆಯರು ಹಾಗೂ 121 ಇತರೆ ಮತದಾರರು ಸೇರಿ 2,17,287 ಮತದಾರರಿದ್ದಾರೆ. ಮಾನ್ವಿ ಕ್ಷೇತ್ರದಲ್ಲಿ 1,17,951 ಪುರುಷರು, 1,23,592 ಮಹಿಳೆಯರು ಹಾಗೂ 74 ಇತರೆ ಸೇರಿ ಒಟ್ಟು 2,41,617 ಮತದಾರರಿದ್ದಾರೆ. ದೇವದುರ್ಗದಲ್ಲಿ 1,11,624 ಪುರುಷರು, 1,15,148 ಮಹಿಳೆಯರು,24 ಇತರೆ ಮತದಾರರು ಸೇರಿ 2,26,796 ಮತದಾರರಿದ್ದಾರೆ.

ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಮಹಿಳೆಯರ ಶಿಕ್ಷಣ ಪ್ರಮಾಣ ಕಡಿಮೆ ಇದೆ. ಬಹುತೇಕರು ಅಶಿಕ್ಷಿತರೇ ಹೆಚ್ಚು. ಕಳೆದ ಚುನಾವಣೆಯಲ್ಲಿ ಸುಮಾರು 4 ಲಕ್ಷಕ್ಕೂ ಅ ಧಿಕ ಮತಗಳು ಚಲಾವಣೆಗೊಂಡಿರಲಿಲ್ಲ. ಇನ್ನು ಈ ಭಾಗದಲ್ಲಿ ಬೇಸಿಗೆ ಬಂದರೆ ಸಾಕು ಬರ ಆವರಿಸಿ ಕೆಲಸವಿಲ್ಲದೇ ಜನ ಗುಳೆ ಹೋಗುವುದು ಸಾಮಾನ್ಯ. ದೇವದುರ್ಗ, ಲಿಂಗಸುಗೂರು ತಾಲೂಕುಗಳಲ್ಲಿನ  ತಾಂಡಾಗಳು ಈ ಹೊತ್ತಿಗೆ ಬಣಗುಟ್ಟುತ್ತಿರುತ್ತವೆ. ಇರುವಮಹಿಳೆಯರು ಕೂಡ ಮತದಾನ ದಿನ ಕೂಲಿಗೆ ಹೋಗಿರುವವರೇ ಜಾಸ್ತಿ. ಹೀಗಾಗಿ ಲೆಕ್ಕಕ್ಕೆ ಇದ್ದರೂ ಮಹಿಳೆಯರ ಹಕ್ಕು ಮತಗಳಾಗಿ ಪರಿವರ್ತನೆಗೊಳ್ಳುವುದು ಬಹಳ ಕಷ್ಟಕರ. ಹಕ್ಕು ಚಲಾಯಿಸಿದ ಮತದಾರರು ಇನ್ನು ಕಳೆದ ಚುನಾವಣೆಯ ಅವಲೋಕನ ಮಾಡುವುದಾದರೆಒಟ್ಟು 16,61,606 ಮತದಾರರಲ್ಲಿ 9,68,513 ಮತದಾರರು ಮಾತ್ರ ಹಕ್ಕು ಚಲಾಯಿಸಿದ್ದರು. ಅದರಲ್ಲಿ 13,334 ಮತಗಳು ತಿರಸ್ಕೃತಗೊಂಡಿದ್ದವು. 5,01,122 ಪುರುಷರು, 4,67,391 ಮಹಿಳೆಯರು ಹಕ್ಕು ಚಲಾಯಿಸಿದ್ದರು. ಅಂದರೆ 6,93,093 ಮತದಾರರು ತಮ್ಮ ಹಕ್ಕು ಚಲಾಯಿಸಿರಲಿಲ್ಲ. ವಿಜೇತ ಅಭ್ಯರ್ಥಿ ಬಿ.ವಿ ನಾಯಕ 4,43,659, ಪರಾಜಿತ ಅಭ್ಯರ್ಥಿ ಕೆ.ಶಿವನಗೌಡ ನಾಯಕ 4,42,160 ಮತಗಳನ್ನು ಪಡೆದಿದ್ದರು.

ಸಿದ್ದಯ್ಯ ಸ್ವಾಮಿ ಕುಕುನೂರು 

ಟಾಪ್ ನ್ಯೂಸ್

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

7-r-ashok

Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್‌. ಅಶೋಕ್‌

6-delhi-pollution

Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್‌, ಬಸ್‌ಗಳಿಗೆ ನಿರ್ಬಂಧ

5-subrahmanya

Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.