ನಾನಿಟ್ಟ ಹೆಜ್ಜೆಯಿಂದ ಹಿಂದೆ ಸರಿಯಲಾರೆ: ಸುಮಲತಾ
Team Udayavani, Mar 2, 2019, 2:40 AM IST
ಕಿಕ್ಕೇರಿ (ಮಂಡ್ಯ): ಅಂಬರೀಶ್ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದು, ಕಾಂಗ್ರೆಸ್ ನಿಂದ ಸ್ಪರ್ಧಿಸಲು ತಾವು ಸಿದ್ಧ ಎಂದು ಸುಮಲತಾ ಪುನರುಚ್ಚರಿಸಿದ್ದಾರೆ. ಇಲ್ಲಿಗೆ ಸಮೀಪದ ಸಾಸಲು ಗ್ರಾಮದಲ್ಲಿರುವ ಬಯಲು ಸೀಮೆಯ ಕುಕ್ಕೆ ಸುಬ್ರಹ್ಮಣ್ಯ ಖ್ಯಾತಿಯ ಸೋಮೇಶ್ವರ ದೇಗುಲಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು. ಬಳಿಕ ಮಾತನಾಡಿ, “ಜಿಲ್ಲೆಯ ಸೊಸೆ ನಾನಾಗಿದ್ದು, ನನ್ನ ಋಣ ಜಿಲ್ಲೆಯಲ್ಲಿದೆ. ಅಭಿಮಾನಿಗಳ ಆಸೆ ತೀರಿಸಲು ನಾನಿಂದು ರಾಜಕೀಯ ಪ್ರವೇಶ ಮಾಡುತ್ತಿರುವೆ’ ಎಂದು ತಿಳಿಸಿದರು.
ಅಂಬಿಯವರ ರಾಜಕೀಯ ಪ್ರವೇಶ ಕಾಂಗ್ರೆಸ್‌ನಿಂದಾಗಿದೆ. ಪಕ್ಷಕ್ಕಾಗಿ ನನ್ನ ಯಜಮಾನರು ಎಲ್ಲಾ ತ್ಯಾಗ ಮಾಡಿದ್ದಾರೆ. ಹೀಗಾಗಿಯೇ, ಕಾಂಗ್ರೆಸ್, ನನ್ನ ಮೊದಲ ಆದ್ಯತೆಯಾಗಿದೆ.ನಾನಿಂದು ರಾಜಕೀಯಕ್ಕೆ ಧುಮಕಲು ಸಜ್ಜಾಗಿದ್ದೇನೆ. ಏನೇಆಗಲಿ, ನಾನು ಇಟ್ಟಿರುವ ಹೆಜ್ಜೆಯಿಂದ ಹಿಂದೆ ಸರಿಯಲಾರೆ.
ದೇವರ, ಅಭಿಮಾನಿಗಳ ದರ್ಶನ ನನಗೆ ಸ್ಫೂರ್ತಿ ನೀಡಿದೆ. ಅಭಿಮಾನಿಗಳ ಆಸೆಗೆ ತಣ್ಣೀರು ಎರಚುವ ಕೆಲಸ ಮಾಡಲಾರೆ. ಅಭಿಮಾನಿಗಳತೀರ್ಮಾನವೇ ನನ್ನ ಅಂತಿಮ ತೀರ್ಮಾನ’
ಎಂದರು.
ಸುಮಲತಾ ಅಂಬರೀಶ್ ಅವರು ಮಂಡ್ಯ,ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಸೇರಿದಂತೆ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವುದು ಪಕ್ಷದ ಆಂತರಿಕ ವಿಚಾರ. ಅವರು ಚುನಾವಣೆಗೆ ಸ್ಪರ್ಧಿಸಿದರೆ ಮಂಡ್ಯದಿಂದಲೇ ಎಂದು ಹೇಳಿದ್ದಾರೆ.ಜೆಡಿಎಸ್ ಜೊತೆಗೆ ಸೀಟು ಹಂಚಿಕೆ ಇನ್ನೂ ಮುಕ್ತಾಯ ವಾಗಿಲ್ಲ. ಯಾರಿಗೆ, ಯಾವ ಕ್ಷೇತ್ರ ಬರಲಿದೆ ಎನ್ನುವುದು ಗೊತ್ತಿಲ್ಲ. ಅಲ್ಲದೆ, ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಬಗ್ಗೆಯೂ ತೀರ್ಮಾನವಾಗಿಲ್ಲ. ಹೀಗಾಗಿ, ಅವರು ಪಕ್ಷೇತರರಾಗಿ ನಿಲ್ಲುವ ಬಗ್ಗೆ ಮಾತನಾಡುವುದು ಸರಿಯಲ್ಲ.
●ದಿನೇಶ್ ಗುಂಡೂರಾವ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.