ಚುನಾವಣ ಸಿಬ್ಬಂದಿಗೆ ವಾರದ ರಜೆರಹಿತ ಕೆಲಸದೊತ್ತಡ
Team Udayavani, Apr 5, 2019, 9:58 AM IST
ಉಡುಪಿ: ಚುನಾವಣೆ ಯನ್ನು ಸುಲಲಿತವಾಗಿ ನಿರ್ವಹಿಸಲು ಜಿಲ್ಲಾಡಳಿತ 24*7 ಕೆಲಸ ಮಾಡುತ್ತಿದೆ. ಸುಮಾರು ಎರಡು ತಿಂಗಳಿಂದ ರಜೆಯನ್ನೂ ಪಡೆಯದೆ ಚುನಾವಣ ಸಿಬಂದಿ ಕೆಲಸ ಮಾಡುತ್ತಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸುಮಾರು 200 ಅಧಿಕಾರಿಗಳು, ಸಿಬಂದಿ ಈ ತೆರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚುನಾವಣ ನೀತಿ ಸಂಹಿತೆ ಜಾರಿಗೊಂಡ ಬಳಿಕ ಜಿಲ್ಲಾಡಳಿತ ರಚಿಸಿದ ಸ್ಕ್ವಾಡ್, ಫ್ಲೈಯಿಂಗ್ ಸ್ಕ್ವಾಡ್‌ನ 45 ಸಿಬಂದಿ, 92 ಸೆಕ್ಷನ್ ಅಧಿಕಾರಿಗಳು, ಚೆಕ್‌ಪೋಸ್ಟ್‌ಗಳಿಗೆ ನಿಯೋಜನೆಗೊಂಡ 24 ಸಿಬಂದಿ, ಜಿಲ್ಲೆಗೊಬ್ಬರು ಎನ್‌ಸಿಸಿ ತಂಡದ ನೋಡಲ್ ಅಧಿಕಾರಿ, 5 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಬ್ಬರು, 23 ನೋಡಲ್ ಅಧಿಕಾರಿಗಳು ಕಾರ್ಯಗಳಲ್ಲಿ ತೊಡಗಿದ್ದಾರೆ.
ಮಾಧ್ಯಮಗಳಲ್ಲಿ ಬರುವ ಸುದ್ದಿಗಳು, ಜಾಹೀರಾತುಗಳನ್ನು ಅವಲೋಕಿಸಲು ತಂಡವಿದೆ. ವೆಚ್ಚ ಪರಿಶೀಲನ ತಂಡದಲ್ಲಿ ತಾಲೂಕಿಗೆ ಇಬ್ಬರಂತೆ ಒಟ್ಟು 10 ಮಂದಿ ಇದ್ದಾರೆ. ವೆಚ್ಚ ವೀಕ್ಷಕರು ಐವರು, ಜಿಲ್ಲೆಗೊಬ್ಬರು, ನೋಡಲ್ ಅಧಿಕಾರಿಗಳು ಹತ್ತು ಮಂದಿ ಇದ್ದಾರೆ. ನೀತಿ ಸಂಹಿತೆ ಬಳಿಕ ಸುಮಾರು 300 ಜನರು ರವಿವಾರದ ರಜೆ ಇಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾ.ಪಂ. ಸಿಬಂದಿ ಸ್ವೀಪ್ ಇತ್ಯಾದಿ ಕೆಲಸಗಳಲ್ಲಿ ತೊಡಗಿದ್ದಾರೆ.
ಚುನಾವಣೆ ವೇಳೆ ಕರ್ತವ್ಯ ನಿರ್ವಹಿಸುವ ಪೊಲೀಸ್ ಇಲಾಖೆಯ ಸಿಬಂದಿ ಪ್ರತ್ಯೇಕ. ಇವರ ಸಂಖ್ಯೆಯೂ ಸುಮಾರು ಸಾವಿರವಿದೆ. ಇವರು ಚುನಾವಣ ಸಮಯವಲ್ಲದೆ ಇತರ ದಿನಗಳಲ್ಲಿಯೂ ವಾರದ ರಜೆಯನ್ನು ಪಡೆಯದ ಸ್ಥಿತಿಯಲ್ಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.