ಓಟಿನ ಮೂಲಕ ಅಮ್ಮನ ವಿರೋಧಿಗಳಿಗೆ ಏಟು ಕೊಡಿ
ಅಂಬರೀಶ್ ಅಭಿಮಾನಿಗಳಿಗೆ ಯಶ್, ದರ್ಶನ್ ಮನವಿ
Team Udayavani, Apr 4, 2019, 6:06 AM IST
ಮಂಡ್ಯ: ಮಂಡ್ಯದಲ್ಲಿ ಚುನಾವಣಾ ಪ್ರಚಾರದ ಕಾವು ಜೋರಾಗಿದ್ದು, ಬುಧವಾರವೂ ಸುಮಲತಾ ಪರ ನಟರಾದ ಯಶ್ ಮತ್ತು ದರ್ಶನ್ ಪ್ರಚಾರ ಕಾರ್ಯ ನಡೆಸಿದರು. ಇದೇ ವೇಳೆ, ಅನಿತಾ ಕುಮಾರಸ್ವಾಮಿಯವರು ಪುತ್ರ ನಿಖೀಲ್ ಪರವಾಗಿ ಮತ ಯಾಚಿಸಿದರು.
ಮಂಡ್ಯ, ಮದ್ದೂರು ತಾಲೂಕಿನ ವಿವಿಧೆಡೆ ಪ್ರಚಾರ ನಡೆಸಿದ ಸುಮಲತಾ ಸಿಎಂ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದರು. ಅಂಬರೀಶ್‌ಗೆ ಅಭಿಮಾನಿಗಳು ನೀಡಿರುವ ಬೆಳ್ಳಿ ಗದೆ, ಚಿನ್ನದ ಕಿರೀಟಗಳನ್ನು ಮಾರಾಟ ಮಾಡಿ ಆ ಹಣದಿಂದ ಸುಮಲತಾ ಆಭರಣ ಮಾಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ನಮ್ಮದು ದಾನಶೂರ ಕರ್ಣನ ಮನೆ. ಅಂಬರೀಶ್‌ಗೆ ಕೊಟ್ಟ ಗದೆ, ಚಿನ್ನದ ಕಿರೀಟಗಳನ್ನು ಮಾರಿಕೊಳ್ಳುವಷ್ಟು ದರಿದ್ರ ನಮಗೆ ಬಂದಿಲ್ಲ. ಅಂಬರೀಶ್ ಬದುಕಿದ್ದಾಗಲೇ ಅವುಗಳನ್ನು ಶ್ರೀ ಆಂಜನೇಯಸ್ವಾಮಿ, ಶ್ರೀ ಶಿರಡಿ ಸಾಯಿಬಾಬ ಮಂದಿರಗಳಿಗೆ ದಾನವಾಗಿ ನೀಡಿದ್ದಾರೆಎಂದರು.
ಸುಮಲತಾಗೆ 10 ಸಾವಿರ ರೂ. ದೇಣಿಗೆ:
ಮದ್ದೂರಿನ ಶಿವಪುರದಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡುವ ವೇಳೆ ಸ್ಥಳೀಯ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು, ಪುರಸಭೆ ಸದಸ್ಯರು ಸೇರಿ 10 ಸಾವಿರ ರೂ.ಗಳ ದೇಣಿಗೆ ನೀಡಿ ಅಂಬರೀಶ್ ಹಾಗೂ ಸುಮಲತಾ ಪರ ಘೋಷಣೆ ಕೂಗಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ರಾಕಿ ಬಾಯ್ ಪ್ರಚಾರ:
ಈ ಮಧ್ಯೆ, ಪಾಂಡವಪುರ, ಶ್ರೀರಂಗಪಟ್ಟಣ ಸುತ್ತಮುತ್ತ ಯಶ್ ಪ್ರಚಾರ ನಡೆಸಿ, ಅಮ್ಮ ಸುಮಲತಾ ನಮ್ಮ ಜಿಲ್ಲೆಯ ಸೊಸೆ ಎಂದು ಹೆಮ್ಮೆಯಿಂದ ಮತ ಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ ಸಾಥ್ ನೀಡಿದರು. ಗಂಜಾಂನಲ್ಲಿ ಮಹಿಳೆಯೊಬ್ಬರು ಯಶ್ ಇದ್ದ ವಾಹನಕ್ಕೆ ಆರತಿ ಬೆಳಗಿದರೆ, ಯುವಕರು ಮೈಸೂರು ಪೇಟ ತೊಡಿಸಿದರು.
ಅಮ್ಮ ಸುಮಲತಾಗೆ ಜಯಮಾಲೆ ತೊಡಿಸಿ:
ಕೆ.ಆರ್.ಪೇಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಮ್ಮ ಸುಮಲತಾಗೆ ಮತ ನೀಡಿ ಜಯಮಾಲೆ ತೊಡಿಸುವ ಮೂಲಕ ವಿರೋಧಿಗಳಿಗೆ ತಕ್ಕ ಪಾಠ ಕಲಿಸಿ ಎಂದು ಮನವಿ ಮಾಡಿದರು. ದರ್ಶನ್ ರೋಡ್ ಶೋನಲ್ಲಿ ಹಲವು ಸ್ಥಳೀಯ ಕಾಂಗ್ರೆಸ್ ಮುಖಂಡರು ಪಾಲ್ಗೊಂಡರು.
ಜೋಡೆತ್ತಿನ ಗಾಡಿ ಓಡಿಸಿದ ನಿಖೀಲ್:
ಇದೇ ವೇಳೆ, ಮಂಡ್ಯ ತಾಲೂಕಿನ ವಿವಿಧೆಡೆ ನಿಖೀಲ್ ಕುಮಾರಸ್ವಾಮಿಯವರು ಬೈಕ್ ಹಾಗೂ ಜೋಡೆತ್ತಿನ ಗಾಡಿ ಓಡಿಸುವ ಮೂಲಕ ಮತದಾರರ ಗಮನ ಸೆಳೆದರು. ಸಚಿವ ಪುಟ್ಟರಾಜು, ಸ್ಥಳೀಯ ಜೆಡಿಎಸ್ ಮುಖಂಡರು ಸಾಥ್ ನೀಡಿದರು. ಹೊಳಲುವಿನಲ್ಲಿ ಪ್ರಚಾರ ನಡೆಸುತ್ತಿದ್ದ ನಿಖೀಲ್‌ಗೆ ಅಭಿಮಾನಿಯೊಬ್ಬ ಮುತ್ತು ಕೊಟ್ಟಿದ್ದು ವಿಶೇಷವಾಗಿತ್ತು. ಮದ್ದೂರು ತಾಲೂಕಿನ ವಿವಿಧೆಡೆ ಪುತ್ರನ ಪರ ಪ್ರಚಾರ ನಡೆಸಿದ ಅನಿತಾ ಕುಮಾರಸ್ವಾಮಿ, ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿಗೆ ನಿಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿರುವಂತೆ ನಿಖೀಲ್‌ಗೂ ಸ್ಥಾನ ನೀಡಬೇಕೆಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.