ಜಾತಿ ರಾಜಕಾರಣದಿಂದ ಜಿಲ್ಲೆಯನ್ನು ಆಳಲಾಗದು

ತಾಲೂಕಿನ ವಿವಿಧೆಡೆ ಸುಮಲತಾ ಪರ ನಟ ಯಶ್‌ ರೋಡ್‌ ಶೋ

Team Udayavani, Apr 11, 2019, 12:57 PM IST

yash-

ಮದ್ದೂರು: ಜಾತಿ ರಾಜಕಾರಣ ಮಾಡಿಕೊಂಡು ಜಿಲ್ಲೆಯ ಜನರನ್ನು ಎಂದಿಗೂ ಆಳಲು ಸಾಧ್ಯವಿಲ್ಲ ಎಂದು ಚಿತ್ರನಟ ಯಶ್‌ ಹೇಳಿದರು.

ತಾಲೂಕಿನ ಮಲ್ಲನಕುಪ್ಪೆ, ಚಿಕ್ಕರಸಿನಕೆರೆ, ದೊಡ್ಡರಸಿನಕೆರೆ ಗ್ರಾಮಗಳಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ಜಾತಿಯನ್ನು ಮುಂದಿಟ್ಟುಕೊಂಡು ಯಾರೂ ರಾಜಕಾರಣ ಮಾಡಬಾರದು.

ಜನಪ್ರತಿನಿಧಿಗಳಾಗುವವರಿಗೆ ಜಾತಿ ಮುಖ್ಯವಲ್ಲ. ಬದ್ಧತೆ ಮುಖ್ಯ. ಸುಮಲತಾ ಅನ್ಯಜಾತಿಗೆ ಸೇರಿದವರು ಎಂದೇಳುವ ನಾಯಕರ ಹೇಳಿಕೆ ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಚುನಾವಣೆಯಲ್ಲಿ ಜಾತಿಯನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲು ಹೊರಟವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಅಂಬರೀಶ್‌ ಕೊಡುಗೆ ಏನು ಎಂದು ಕೇಳುವವರಿಗೆ ಮಂಡ್ಯ ಜಿಲ್ಲೆಯ ಪ್ರತಿ
ಗ್ರಾಮದಲ್ಲೂ ಸಾಕ್ಷಿ ಸಿಗಲಿದೆ. ಅದನ್ನು ನೋಡುವ ಕಣ್ಣು ಬೇಕು. ಇನ್ನು ಸುಮಲತಾ ಅವರಿಗಿರುವ ಅರ್ಹತೆ ಮೇಲೆ ಜಿಲ್ಲೆಯ ಅಭಿವೃದ್ಧಿ ಪರವಾಗಿ ಮತ ಕೇಳುತ್ತಿದ್ದಾರೆ. ಜನರ ಸೇವೆ ಮಾಡುವುದಕ್ಕೆ ಅವರಿಗೆ ಅವಕಾಶ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂಬರೀಶ್‌ ಬಗ್ಗೆ ಗೌರವವಿದ್ದ ಕಾರಣಕ್ಕೆ ಅಂಬರೀಶ್‌ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅಂಬರೀಶ್‌ ಇಂಡಿಯಾದಲ್ಲಿ ಪ್ರಸಿದ್ಧಿಯಾಗಿರುವುದಕ್ಕೆ ಇದು ಸಾಕ್ಷಿ ಎಂದ ಯಶ್‌, ಮೂರ್‍ನಾಲ್ಕು ಸುಮಲತಾ ಅವರನ್ನು ಕಣಕ್ಕಿಳಿಸಿ ಜನರನ್ನು ಮೂರ್ಖರನ್ನಾಗಿ ಮಾಡಲು ಮುಂದಾಗಿರುವವರಿಗೆ ಜನರೇ ಉತ್ತರ ನೀಡುವರು ಎಂದರು.

ಪ್ರಚಾರದಲ್ಲಿ ಮುಖಂಡರಾದ ಅಂಕರಾಜು, ಗಿರೀಶ್‌, ರಾಜೇಶ್‌, ನವೀನ್‌, ಕಾಂಗ್ರೆಸ್‌ ಮುಖಂಡರಾದ ಕೆ.ಟಿ.ರಾಜಣ್ಣ, ಹೊನ್ನಲಗೆರೆ ಪುಟ್ಟಸ್ವಾಮಿ, ಎಂ.ಪಿ.ಅಮರ್‌ಬಾಬು, ಅರುಣ ಇತರರಿದ್ದರು

ಮಂಡ್ಯದ ಗಂಡು ಅಂಬಿ, ಮಂಡ್ಯದ ಗೌಡ್ತಿ ಸುಮಕ್ಕ
ದೇಶದಲ್ಲಿ ಎಲ್ಲೇ ಹೋದರೂ ಮದ್ದೂರು ವಡೆ ಫೇಮಸ್‌. ಫೈವ್‌ ಸ್ಟಾರ್‌ ಹೋಟೆಲ್‌ಗ‌ಳಲ್ಲೂ ಮದ್ದೂರು ವಡೆ ಅಂತ ಬೋರ್ಡ್‌ ಹಾಕಿದ್ದಾರೆ. ಅದಕ್ಕೆ ಕಾರಣ ನಮ್ಮತನ. ಅದೇ ರೀತಿ ಅಂಬರೀಶಣ್ಣ ಮಂಡ್ಯದಿಂದ ಇಂಡಿಯಾವರೆಗೆ ಫೇಮಸ್‌ ಆಗಿದ್ದಾರೆ. ನಮ್ಮತನವನ್ನು ಬಿಟ್ಟು μಜ್ಜಾ, ಬರ್ಗರ್‌ ಆಸೆಗೆ ಬಿದ್ದರೆ ನಮ್‌ ಕಥೆ ಮುಗೀತು. ಮದ್ದೂರು ವಡೆ ಮಾದರಿಯಲ್ಲೇ ಮಂಡ್ಯದ ಗಂಡು ಅಂಬರೀಶ್‌, ಮಂಡ್ಯದ ಗೌಡ್ತಿ ಸುಮಕ್ಕ ನಮ್ಮ ಸ್ವಾಭಿಮಾನ ಎನ್ನುವುದನ್ನು ಯಾರೂ ಮರೆಯಬಾರದು ಎಂದು ನಟ ಯಶ್‌ ಹೇಳಿದರು.

ಸುಮಲತಾ ಗೌಡ್ತಿನೇ ಅಲ್ಲ, ಹೊರಗಿನವರು ಎಂಬು ಬಿಂಬಿಸಲು ಹೊರಟರೆ ಜನರು ಮೂರ್ಖರಲ್ಲ. ಧೈರ್ಯ ಮಾಡಿ ಹೆಣ್ಣು ಮಗಳೊಬ್ಬಳು ಚುನಾವಣೆಗೆ ಸ್ಪರ್ಧಿಸಲು ಮುಂದೆ ಬಂದಿದ್ದಾರೆ. ಅವರನ್ನು ಬೆಂಬಲಿಸಿ ಪ್ರೋತ್ಸಾಹಿಸಬೇಕೇ ಹೊರತು ಕೀಳುಮಟ್ಟದ ಹೇಳಿಕೆ ನೀಡಬಾರದು ಎಂದರು.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.