ತಿರುವನಂತಪುರದಲ್ಲಿ ಯಾರ ಪರ ತೀರ್ಪು?

Team Udayavani, Apr 22, 2019, 6:06 AM IST

Thiruvananthapuram

ಕೇರಳದಲ್ಲಿ ಈ ಬಾರಿ ರಾಹುಲ್‌ ಗಾಂಧಿ ಸ್ಪರ್ಧಿಸಿರುವ ವಯನಾಡು ಕ್ಷೇತ್ರದಷ್ಟೇ ತಿರುವನಂತಪುರ ಲೋಕಸಭಾ ಕ್ಷೇತ್ರ ಕೂಡ ಮಹತ್ವ ಪಡೆದಿದೆ. ಕ್ಷೇತ್ರದ ಸಂಸದರಾಗಿರುವ ಶಶಿ ತರೂರ್‌ ಹ್ಯಾಟ್ರಿಕ್‌ ಗೆಲುವಿಗೆ ಹವಣಿಸುತ್ತಿದ್ದರೆ, ಈ ಬಾರಿ ಕಮಲ ಅರಳಿಸಲೇಬೇಕೆಂಬ ಪಣ ತೊಟ್ಟು ಬಿಜೆಪಿ ಅಖಾಡಕ್ಕಿಳಿದಿದೆ. ಆಡಳಿತರೂಢ ಎಲ್‌ಡಿಎಫ್ ಸಹ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಹೀಗಾಗಿ ಈ ಬಾರಿ ತಿರುವನಂತಪುರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ.

ಎಲ್ಲಕ್ಕಿಂತ ಮುಖ್ಯವಾಗಿ ಶಬರಿಮಲೆ ದೇವಸ್ಥಾನ ವಿವಾದ, ಭಾವನಾತ್ಮಕ ವಿಷಯಗಳು ಈ ಚುನಾವಣೆ ವಿಷಯಗಳಾಗಿವೆ.ಶಶಿ ತರೂರ್‌ ಪ್ಲಸ್‌ ಪಾಯಿಂಟ್‌: ಶಶಿ ತರೂರ್‌ ಹೊರಗಿ ನವರಾಗಿದ್ದರೂ ತಿರುವನಂತಪುರದಲ್ಲಿ ಸತತ ಎರಡು ಬಾರಿ ಸಂಸದರಾಗಿದ್ದಾರೆ. ದೇಶದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ತರೂರ್‌ ಸಭ್ಯ, ವಿದ್ಯಾವಂತ ರಾಜಕಾರಣಿ ಎಂಬ ಖ್ಯಾತಿ ಪಡೆದಿದ್ದಾರೆ.

ಕೆಲ ವಿವಾದಿತ ಹೇಳಿಕೆಗಳ ಹೊರತಾಗಿ ರಾಷ್ಟ್ರ, ಅಂತಾರಾಷ್ಟ್ರೀಯ ವಿಷಯಗಳನ್ನು ತಮ್ಮದೇ ಆದ ಧಾಟಿಯಲ್ಲಿ ವಿಶ್ಲೇಷಣೆ ಮಾಡುತ್ತಾ ರಾಷ್ಟ್ರ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಹೈಕಮಾಂಡ್‌ ಮಟ್ಟದಲ್ಲಿ ಪ್ರಭಾವ ಹೊಂದಿದ್ದಾರೆ. “ಇಂತಹ ರಾಜಕಾರಣಿ ತಮ್ಮ ಕ್ಷೇತ್ರ ಪ್ರತಿನಿಧಿಸುತ್ತಿರುವುದೇ ಗೌರವ, ಹೆಮ್ಮೆಯ ಸಂಗತಿ, ಹೀಗಾಗಿ ಅವರಿಗೆ ನ‌ಮ್ಮ ಓಟು’ ಎನ್ನುತ್ತಾರೆ ಸ್ಥಳೀಯ ಮತದಾರರು.

ಬಿಜೆಪಿ ಪ್ಲಸ್‌ ಪಾಯಿಂಟ್‌: ಕಳೆದ ಚುನಾವಣೆಯಲ್ಲಿ ಶಶಿ ತರೂರ್‌ ವಿರುದ್ಧ ಬಿಜೆಪಿ ಅಭ್ಯರ್ಥಿ ರಾಜಗೋಪಾಲ್‌ ಕೇವಲ 15 ಸಾವಿರ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ಈ ಬಾರಿ ಕುಮ್ಮಾನಂ ರಾಜಶೇಖರನ್‌ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮಿಜೋರಾಂ ರಾಜ್ಯಪಾಲರಾಗಿದ್ದ ಇವರು, ಶಬರಿಮಲೆ ದೇವಸ್ಥಾನ ವಿವಾದದಲ್ಲಿ ಹಿಂದೂಪರ ಸಂಘಟನೆಗಳ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.

ಹಿಂದು ಮತಗಳನ್ನು ಕ್ರೋಡಿಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾವನಾತ್ಮಕ ವಿಷಯ ಈ ಬಾರಿ ಚುನಾವಣೆಯ ವಿಷಯವಾಗಿರುವುದರಿಂದ ಬಿಜೆಪಿ ಪರ ಹಿಂದುಗಳ ಒಲವು ಕಂಡು ಬರುತ್ತಿದೆ. ಸಾಂಪ್ರದಾಯಿಕ ನಾಯರ್‌ ಮತಗಳು ಈ ಬಾರಿ ಬಿಜೆಪಿ ಪಾಲಾಗುವ ಸಾಧ್ಯತೆ ಇದೆ. ಜತೆಗೆ ಮೋದಿ ಅಲೆ ಕೂಡ ಇದೆ. ಅಲ್ಲದೇ ಆರ್‌ಎಸ್‌ಎಸ್‌ ಕಾರ್ಯಕರ್ತರು ಮತಬೇಟೆಗೆ ಮನೆ ಮನೆ ಭೇಟಿ ನೀಡುತ್ತಿದ್ದಾರೆ. ಕಳೆದ ಬಾರಿ ಅಲ್ಪ ಮತಗಳ ಅಂತರದಿಂದ ಸೋತಿದ್ದ ರಾಜಗೋಪಾಲ್‌ ಇದೀಗ ತಿರುವನಂತಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನಿನೋಮ್‌ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಹೊಂದಿದ್ದಾರೆ.

ಎಲ್‌ಡಿಎಫ್ ಪ್ಲಸ್‌ ಪಾಯಿಂಟ್‌: ಕೇರಳದಲ್ಲಿ ಆಡಳಿತಾರೂಢ ಎಲ್‌ಡಿಎಫ್ ಅಭ್ಯರ್ಥಿ ಸಿ.ದಿವಾಕರನ್‌ ಸ್ಥಳೀಯರಾಗಿದ್ದು, ಟ್ರೇಡ್‌ ಯೂನಿಯನ್‌ ನಾಯಕರಾಗಿ ರಾಜ್ಯವ್ಯಾಪಿ ಹಲವಾರು ಕಾರ್ಮಿಕ ಹೋರಾಟಗಳಲ್ಲಿ ತೊಡಗಿಸಿಕೊಂಡು ಜನರಿಗೆ ಚಿರಪರಿಚಿತರಾಗಿದ್ದಾರೆ. ಸ್ಥಳೀಯ ಸಮಸ್ಯೆಗಳು, ಜನರ ನಾಡಿಮಿಡಿತವನ್ನು ಚೆನ್ನಾಗಿ ಅರಿತಿದ್ದಾರೆ. “ಕಳೆದ ಹತ್ತು ವರ್ಷಗಳಲ್ಲಿ ಶಶಿ ತರೂರ್‌ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ಷೇತ್ರ ಅಭಿವೃದ್ಧಿಪಡಿಸುವ ಭರವಸೆ ಹುಸಿಯಾಗಿದೆ’ ಎನ್ನುತ್ತಾ ಶಶಿ ತರೂರ್‌ ವೈಫ‌ಲ್ಯಗಳನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರಕ್ಕಿಳಿದಿದ್ದಾರೆ. ಹೈಕಮಾಂಡ್‌ ಸಂಪರ್ಕ ಹೊಂದಿರುವ ಶಶಿ ತರೂರ್‌ ಸ್ಥಳೀಯ ನಾಯಕರು, ಕಾರ್ಯಕರ್ತರ ವಿಶ್ವಾಸ ಪಡೆದಿಲ್ಲ. ಈ ಭಿನ್ನಮತ ಎಲ್‌ಡಿಎಫ್ಗೆ ಅನುಕೂಲವಾಗುವ ಸಂಭವ ಇದೆ. ಜತೆಗೆ ಕ್ಷೇತ್ರದಲ್ಲಿ ಎಡರಂಗ ತಮ್ಮದೇ ಆದ ಹಿಡಿತ ಹೊಂದಿದೆ.

ತಿರುವನಂತಪುರ
ಹಾಲಿ ಸಂಸದ – ಶಶಿ ತರೂರ್‌
2014ರ ಫ‌ಲಿತಾಂಶ
ಶಶಿ ತರೂರ್‌(ಕಾಂಗ್ರೆಸ್‌) 2,97,806
ಒ.ರಾಜಗೋಪಾಲ್‌(ಬಿಜೆಪಿ) 2,82,336
ಬೆನ್ನೆಟ್‌ ಅಬ್ರಾಹಂ (ಸಿಪಿಐ) 2,48,941

ಟಾಪ್ ನ್ಯೂಸ್

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

lead

ವಾರಾಣಸಿಯತ್ತ ದೇಶದ ಗಮನ, ಮತ್ತೆ ಮೋದಿಗೇ ಕಾಶಿವಾಸಿಗಳ ನಮನ?

Ravi-Shankar-Prasad,-Shatrughan-Sinha

ಪಾಟ್ನಾಗೆ ಯಾರು ಸಾಹೇಬ್‌?

kankana-1

ಸಿಂಧಿಯಾಗೆ ಜೈ ಅನ್ನುತ್ತಾ ಗುಣಾ?

38

ಸ್ಲಂ, ಅನಧಿಕೃತ ಕಾಲನಿಗಳಲ್ಲೇ ಕದನ

28

ವಾಯವ್ಯ ದೆಹಲಿಯಲ್ಲಿ ಯಾರ ಪರ ಒಲವು?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.