ಮತ ಚಲಾಯಿಸಿ, ದೇಶ ಬದಲಿಸಿ;ನಾವು ಯಾಕೆ ಮತ ಹಾಕಬೇಕು?


Team Udayavani, Mar 27, 2019, 6:30 AM IST

vote-1

“ನಾವು ಯಾಕೆ ಮತ ಹಾಕಬೇಕು’ ಇದು ಯುವ ಹಾಗೂ ಉಳಿದ ಎಲ್ಲ ಅರ್ಹ ಮತದಾರರನ್ನು ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು/ ತರುಣ ಮತದಾರರು ಮತದಾನದ ಮಹತ್ವದ ಕುರಿತು ಬರೆಯುತ್ತಿದ್ದಾರೆ.
ಬನ್ನಿ ಪ್ರಜಾತಂತ್ರವನ್ನು ಬೆಂಬಲಿಸೋಣ, ಮತದಾನ ಮಾಡೋಣ.

ಮತವನ್ನು ಮಾರಿಕೊಳ್ಳದಿರಿ
18 ವರ್ಷ ಮೇಲ್ಪಟ್ಟ ಎಲ್ಲರೂ ಈ ಮಹಾ ಕಾರ್ಯದಲ್ಲಿ ಭಾಗಿಯಾಗಬೇಕು. ಚುನಾವಣೆಯ ಉದ್ದೇಶವೇ ನಮ್ಮ ಪ್ರತಿನಿಧಿಯನ್ನು ಈ ಮುಲಕ ಆರಿಸಿ ಕಳುಹಿಸುವುದಾಗಿದೆ. ಸಂವಿಧಾನ ನಮಗೆ ಹಲವು ಅವಕಾಶಗಳನ್ನು ನೀಡಿದೆ. ಅವುಗಳಲಲಿ ಚುನಾವಣೆಯಲ್ಲಿ ಹಕ್ಕುಗಳಾಗಿ ನೀಡಲಾಗಿದೆ. ಚುನಾವಣೆಯ ಸಂದರ್ಭ ಮತವನ್ನು ಮಾರಿಕೊಳ್ಳುವ ಪ್ರಸಂಗಗಳು ಎದುರಾಗದಿರಲಿ.
– ರಶ್ಮಿಕಾ ಹಾಲಾಡಿ, ಕುಂದಾಪುರ ಸಿವಿಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ

ವ್ಯವಸ್ಥೆಯನ್ನು ಬದಲಾಯಿಸಬಹುದು
ನಾವು ಮತದಾನ ಮಾಡುವುದರಿಂದ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವುದರ ಮೂಲಕ ಸಾಮಾಜಿಕ ವ್ಯವಸ್ಥೆಯನ್ನು ಬದಲಾಯಿಸಬಹುದು. ಆ ಮೂಲಕ ದೇಶದ ವ್ಯವಸ್ಥೆಯನ್ನೂ ಬದಲಾ ಯಿಸಲು ಕೊಡುಗೆ ನೀಡಿದಂತಾಗುತ್ತದೆ. ಮತ್ತು ದೇಶವನ್ನು ಭ್ರಷ್ಟಾಚಾರ ಮುಕ್ತ ವಾಗಿಸಲು ಸಾಧ್ಯ.
– ಸಂಕೇತ್‌ ಶೆಟ್ಟಿ, ಎಂ.ಐ.ಟಿ. ಕಾಲೇಜು, ಮೂಡ್ಲಕಟ್ಟೆ, ಕುಂದಾಪುರ

ಮತದಾನದಲ್ಲಿ ತಾತ್ಸಾರ ಬೇಡ
ಹೇಗೆ ಹನಿ ಹನಿ ಗೂಡಿದರೆ ಹಳ್ಳವೋ… ಹಾಗೆಯೇ ಒಂದೊಂದು ಮತ ಕೂಡಿದರೆ ದೇಶದ ಅಭಿವೃದ್ಧಿಯಾಗುವುದು ಸಾಧ್ಯ. ಆದರಿಂದ ನಮ್ಮ ಒಂದು ಮತದಿಂದ ಏನು ಆಗುವುದಿಲ್ಲವೆಂಬ ತಾತ್ಸಾರ ಭಾವನೆಯನ್ನು ಮಾಡದೇ ನಮ್ಮ ದೇಶದ ಅಭಿವೃದ್ಧಿಯನ್ನು ಯಾವ ಪಕ್ಷದ ಮಾತಿಗೆ ಕಿವಿ ಕೊಡದೇ ನಮ್ಮ ಸ್ವಂತ ಇಚ್ಛೆಯಿಂದ ಉತ್ತಮ ಅಭ್ಯರ್ಥಿಗೆ
ನಮ್ಮ ಮತವನ್ನು ಚಲಾಯಿಸಿ ದೇಶದ ಅಭಿವೃದ್ಧಿಗೆ ಸಹಕರಿಸೋಣ.
– ಪ್ರಣೀತಾ, ಮಿಲಾಗ್ರೀಸ್‌ ಕಾಲೇಜು, ಕಲ್ಯಾಣಪುರ

ಮತ ಚಲಾಯಿಸಿ, ದೇಶ ಬದಲಿಸಿ
ನಮ್ಮ ದೇಶದ ಸಮಗ್ರ ಅಭಿವೃದ್ಧಿಗೆ ಕಡ್ಡಾಯವಾಗಿ ಮತದಾನ ಮಾಡಿ, ರಾಷ್ಟ್ರಕ್ಕೆ ಸಮರ್ಥ ನಾಯಕನನ್ನು ಆಯ್ಕೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮತವು ಬಹಳ ಪ್ರಾಮುಖ್ಯ ಹೊಂದಿದೆ.ಬಡವರ, ಮಹಿಳೆಯರ, ಶ್ರೀಸಾಮಾನ್ಯರ ಜೀವನ ಮಟ್ಟ ಸುಧಾರಿಸುವಲ್ಲಿ ಮತವು ದಿಕ್ಸೂಚಿ ಆಗಬೇಕಿದೆ. ರಾಷ್ಟ್ರದ ಚಿತ್ರಣ ಬದಲಿಸಲು ಪ್ರತಿಯೊಬ್ಬರೂ ಮತದಾನ ಮಾಡಬೇಕು.
– ಪ್ರತೀಕ್ಷಾ ಶೆಟ್ಟಿ, ಆಜ್ರಿ, ಸ.ಪ್ರ.ದ. ಕಾಲೇಜು ಶಂಕರನಾರಾಯಣ

ಮತದಾನ ಪ್ರಮಾಣ ಜಾಸ್ತಿಯಾಗಲಿ
ನಮ್ಮ ದೇಶದ 136 ಕೋಟಿ ಜನಸಂಖ್ಯೆಯಲ್ಲಿ ಶೇ. 65 ಕ್ಕಿಂತಲೂ ಹೆಚ್ಚು 18- 24 ವರ್ಷ ದೊಳಗಿನ ಮತದಾರರು ನೋಂದಣಿಯೇ ಮಾಡಿಲ್ಲ. ಕಾರಣ ಏನು…? ನಮ್ಮಲ್ಲಿ ಸೂಕ್ತ ಅಭ್ಯರ್ಥಿಯೇ ಇಲ್ಲ, ಯಾಕೆ ಮತ ಹಾಕೆºàಕು ಅಂತ ಅವರೇ ನಿರ್ಧರಿಸಿ ಕೊಂಡಿರ್ತಾರೆ. ಅಂಕಿ ಅಂಶಗಳ ಪ್ರಕಾರ ಕೇವಲ ಶೇ.54 ಜನರು ಮಾತ್ರ ಮತದಾನ ಮಾಡುತ್ತಿದ್ದಾರೆ. ನ್ಯಾಯಯುತ, ಶಾಂತಿಯುತ‌ ಸಮಾಜಕ್ಕಾಗಿ ಮತದಾನ ಮಾಡೋಣ.
– ರಸಿಕ್‌ ಶೆಟ್ಟಿ ,, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ

ಉತ್ತಮ ನಾಯಕ‌ರಿಗೆ ನನ್ನ ಮತ
ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಪ್ರಜೆಗಳು ಪ್ರಭುಗಳು, ಅಂದರೆ ತಮಗೆ ಬೇಕಾದ ನಾಯಕರನ್ನು ಮತದಾನದ ಮೂಲಕ ತಾವೇ ಆರಿಸುವುದು, ಮತ ಚಲಾಯಿಸುವುದು ನನ್ನ ಹಕ್ಕು ಮಾತ್ರವಲ್ಲ ಕರ್ತವ್ಯ ಕೂಡಾ. ಅಭಿವೃದ್ಧಿಯನ್ನು ಮಾಡುವ ಮನಸ್ಸುಳ್ಳ ಉತ್ತಮ ನಾಯಕ‌ರನ್ನು ಆರಿಸಲು ಮತ ಹಾಕಬೇಕು.
– ಮಂಜುನಾಥ ಎಂ., ಸರಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು

ದೇಶದ ಅಸ್ತಿತ್ವವೂ ಅಡಗಿದೆ
ಮತದಾನ ಮಾಡುವುದು ನಮ್ಮ ಅಸ್ತಿತ್ವದ ಪ್ರತೀಕ. ಈ ಮೂಲಕ ಒಬ್ಬ ಒಳ್ಳೆಯ ಅಭ್ಯರ್ಥಿ ಚುನಾಯಿತನಾದರೆ ದೇಶದ ಅಸ್ತಿತ್ವವೂ ಉಳಿದಂತೆ. ಈ ಮತದಾನದಲ್ಲಿ ನಮ್ಮ ಅಸ್ತಿತ್ವದ ಜೊತೆಗೆ ದೇಶದ ಅಸ್ತಿತ್ವವೂ ಅಡಗಿದೆ. ಇದರಿಂದ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವಲ್ಲಿ ಸಹಕರಿಸಿದಂತಾಗುತ್ತದೆ.
– ಚೇತನಾ ಎಸ್‌. ಶೆಟ್ಟಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ

ಕಡ್ಡಾಯ ಮತದಾನ ಜಾಗೃತಿ ಮೂಡಿಸೋಣ
ಮತದಾನ ಪ್ರಜಾಪ್ರಭುತ್ವದ ಜೀವನಾಡಿಯಾಗಿದೆ. ತಮ್ಮ ಒಳಿತನ್ನು ಬಯಸುವ ಜನಪರ ನಾಯಕನನ್ನು ಆಯ್ಕೆ ಮಾಡಿ ಕಳಿಸಲು ನಾವು ಕಡ್ಡಾಯವಾಗಿ ಮತದಾನ ಮಾಡಲೇಬೇಕು.ಮತದಾನದ ಪ್ರಾಮುಖ್ಯ ಮತ್ತು ಜಾಗೃತಿ ಮೂಡಿಸಲು ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.
– ಗಾಯತ್ರಿ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

VOTE1

ನಮ್ಮ ಮತ ಉತ್ತಮ ನಾಯಕನಿಗೆ; ಪಕ್ಷಕ್ಕಲ್ಲ

vote

ಮತದಾನಕ್ಕೆ ಹಿಂದೇಟು ಹಾಕದಿರಿ

vote

ನಮ್ಮ ಆಡಳಿತವನ್ನು ನಾವೇ ರೂಪಿಸೋಣ

vote

ಸದೃಢ ಭಾರತ, ರಾಷ್ಟ್ರ ರಕ್ಷಣೆಗಾಗಿ ಮತದಾನ

vote

ಜನರ ಹಿತಕ್ಕಾಗಿ ಮತದಾನ ಮಾಡೋಣ: ನಾವು ಯಾಕೆ ಮತ ಹಾಕಬೇಕು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.