ಬಿಹಾರ ರಾಜಕೀಯ ರಂಗು: ಮೂವರು ಸ್ಟಾರ್ ನಾಯಕರು… ಅಟಲ್ ಮೇಲಿನ ಕೋಪಕ್ಕೆ ಎಲ್ ಜೆಪಿ ಸ್ಥಾಪನೆ

ಯಾದವ್ ಅವರು ಮುಸ್ಲಿಂ, ಯಾದವ್ ಕ್ಷೇತ್ರಗಳನ್ನಾಗಿ ವಿಂಗಡಿಸಿಕೊಂಡು ಜಾತಿ ರಾಜಕೀಯಕ್ಕೆ ಇಳಿದಿದ್ದರು.

ನಾಗೇಂದ್ರ ತ್ರಾಸಿ, Oct 15, 2020, 3:07 PM IST

ಬಿಹಾರ ರಾಜಕೀಯ ರಂಗು: ಮೂವರು ಸ್ಟಾರ್ ನಾಯಕರು… ಅಟಲ್ ಮೇಲಿನ ಕೋಪಕ್ಕೆ ಎಲ್ ಜೆಪಿ ಸ್ಥಾಪನೆ

ಮಣಿಪಾಲ: ಸಾಮಾಜಿಕ ನ್ಯಾಯ ಹೋರಾಟದ ಮುಂಚೂಣಿಯಲ್ಲಿದ್ದ ಮೂವರು ನಾಯಕರು ಮಾತ್ರ ಈಗ ಜೀವಂತಾಗಿದ್ದಾರೆ, ಏತನ್ಮಧ್ಯೆ ರಾಮ್ ವಿಲಾಸ್ ಪಾಸ್ವಾನ್ ವಿಧಿವಶರಾಗಿದ್ದಾರೆ. ಇದೀಗ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಮಾತ್ರ ಸಕ್ರಿಯವಾಗಿದ್ದಾರೆ. ಲಾಲುಪ್ರಸಾದ್ ಯಾದವ್ ಜೈಲಿನಲ್ಲಿದ್ದು, ಶರದ್ ಯಾದವ್ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಹಾರದ ರಾಜ್ಯ ರಾಜಕಾರಣ ಜಾತಿ ರಾಜಕೀಯ ಇವರನ್ನು ಪತ್ಯೇಕಿಸುವವರೆಗೂ ಅವಿಭಜಿತ ಜನತಾದಳದ ಸ್ಟಾರ್ ನಾಯಕರಾಗಿದ್ದರು. ನವತರುಣರಾಗಿದ್ದ ಮೂವರು ಜನತಾಪಕ್ಷದ ಟಿಕೆಟ್ ಮೂಲಕ 1970ರ ದಶಕದಲ್ಲಿ ಲೋಕಸಭೆ ಪ್ರವೇಶಿಸಿದ್ದರು. ಶರದ್ ಯಾದವ್ ಅವರು 1974ರಲ್ಲಿ ಜಬಲ್ಪುರ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1977ರಲ್ಲಿ ಲಾಲು ಪ್ರಸಾದ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಲೋಕಸಭೆಗೆ ಪ್ರವೇಶಿಸಿದ ವೇಳೆ ಶರದ್ ಸಂಸದರಾಗಿ ಪುನರಾಯ್ಕೆಗೊಂಡಿದ್ದರು.

ನಿತೀಶ್ ಕುಮಾರ್ ಅವರ ಜತೆ ದಿವಂಗತ ಪಾಸ್ವಾನ್ ಅವರ ವೈಯಕ್ತಿಕ ಸಂಬಂಧ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಲು ಈ ಪುಟ್ಟ ಇತಿಹಾಸವನ್ನು ತಿಳಿದುಕೊಳ್ಳಬೇಕಾದ ಅಗತ್ಯವಿದೆ. 1969ರಲ್ಲಿ ಪಾಸ್ವಾನ್ ಮೊದಲ ಬಾರಿ ವಿಧಾನಸಭೆಯನ್ನು ಪ್ರವೇಶಿಸಿದ್ದರು. ಆದರೆ 1977 ಮತ್ತು 1980ರಲ್ಲಿ ನಿತೀಶ್ ಕುಮಾರ್ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿದ್ದರು. ನಂತರ 1980ರಲ್ಲಿ ಕುಮಾರ್ ಮೇಲ್ಮನೆ ಸದಸ್ಯರಾಗಿ ನೇಮಕವಾಗಿದ್ದರು.

ಇದನ್ನೂ ಓದಿ:ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ವಿವೇಕ್ ಒಬೆರಾಯ್ ಮನೆಗೆ ಸಿಸಿಬಿ ದಾಳಿ

ಆರಂಭಿಕ ಚುನಾವಣಾ ಯಶಸ್ಸು ತನಗೆ ಕುಮಾರ್ ಗಿಂತ ಮೊದಲು ಪ್ರಾಮುಖ್ಯತೆ ತಂದುಕೊಟ್ಟಿರುವುದಾಗಿ ಪಾಸ್ವಾನ್ ಹೇಳಿದ್ದರು. ಪಾಸ್ವಾನ್ ಸಮುದಾಯದ ಮೇಲಿನ ಹಿಡಿತದಿಂದಾಗಿ ಅವರು ತಮ್ಮ ವೈಯಕ್ತಿಕ ಇಮೇಜ್ ಅನ್ನು ಹೆಚ್ಚಿಸಿಕೊಂಡಿದ್ದರು. ಇದಕ್ಕೆ ಕಾರಣವಾಗಿದ್ದು, ರಾಜ್ಯದಲ್ಲಿ ಶೇ.6ರಷ್ಟು ಪಾಸ್ವಾನ್ ಸಮುದಾಯದ ಮತದಾರರಿದ್ದದ್ದು.

ಪಾಸ್ವಾನ್ ಗೆ ವಾಜಪೇಯಿ ಅಡ್ಡಗಾಲು!

2000ನೇ ಇಸವಿಯಲ್ಲಿ ನಡೆದ ಚುನಾವಣೆಯಲ್ಲಿ ರಾಮ್ ವಿಲಾಸ್ ಪಾಸ್ವಾನ್ ಎನ್ ಡಿಎ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತವಾಗಿದ್ದರು. ಆದರೆ ಅಂದು ಯಾರಿಗೂ ಪೂರ್ಣ ಬಹುಮತ ಲಭಿಸದೇ ಅತಂತ್ರ ಫಲಿತಾಂಶ ಬಂದಿದ್ದು, ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿದ್ದರು. ಈ ಚುನಾವಣೆಯಲ್ಲಿ ಆರ್ ಜೆಡಿ 124ಸ್ಥಾನ, ಎನ್ ಡಿಎ 121, ಕಾಂಗ್ರೆಸ್ 23 ಸ್ಥಾನ ಪಡೆದಿತ್ತು. 2000ನೇ ಇಸವಿ ಫೆ.27ರಂದು ಎನ್ ಡಿಎ ಸಮತಾಪಕ್ಷದ ನಿತೀಶ್ ಕುಮಾರ್ ಅವರನ್ನು ಸಿಎಂ ಆಗಿ ಘೋಷಿಸಿತ್ತು. ನಿತೀಶ್ ಅವರ ಬಳಿ ಸರ್ಕಾರ ರಚಿಸುವಂತೆ ರಾಜ್ಯಪಾಲ ವಿಸಿ ಪಾಂಡೆ ಆಹ್ವಾನ ನೀಡಿದ್ದರು. ಏತನ್ಮಧ್ಯೆ ಆರ್ ಜೆಡಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಒತ್ತಾಯಿಸಿತ್ತು. ಮಾರ್ಚ್ 5ರಂದು ಆರ್ ಜೆಡಿ ಬಂದ್ ಕರೆಯಿಂದ ಹಿಂಸಾಚಾರ ನಡೆದಿತ್ತು.

ಮಾರ್ಚ್ 9ರಂದು ಸೋಲಿನ ಭೀತಿಯಿಂದ ಎನ್ ಡಿಎ ಬಹುಮತ ಸಾಬೀತುಪಡಿಸುವ ಸಾಹಸದಿಂದ ಹಿಂದೆ ಸರಿದ ನಂತರ ಕಾಂಗ್ರೆಸ್ ಸದಾನಂದ್ ಸಿಂಗ್ ಅವರನ್ನು ಸ್ಪೀಕರ್ ಆಗಿ ನೇಮಕ ಮಾಡಿತ್ತು. ಮಾರ್ಚ್ 10ರಂದು ನಿತೀಶ್ ಕುಮಾರ್ ಕೇವಲ 7 ದಿನದ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್ ಜೆಡಿ ಪುನಃ ಅಧಿಕಾರದ ಗದ್ದುಗೆ ಏರಿತ್ತು.

ಅಸಮಾಧಾನಗೊಂಡ ಪಾಸ್ವಾನ್ ಹೊಸ ಪಕ್ಷ ರಚಿಸಿದ್ರು:

ಸಿಎಂ ಅಭ್ಯರ್ಥಿ ಎಂದು ಘೋಷಿಸಿಯೂ ಅವಮಾನ ಮಾಡಿದ್ದಾರೆಂದು ಆರೋಪಿಸಿ ರಾಮ್ ವಿಲಾಸ್ ಪಾಸ್ವಾನ್ ಲೋಕ್ ಜನಶಕ್ತಿ ಪಕ್ಷವನ್ನು (ಎಲ್ ಜೆಪಿ) ಸ್ಥಾಪಿಸಿದ್ದರು. 2005ರಲ್ಲಿ ನಿತೀಶ್ ಕುಮಾರ್ ಅವರು ಸಿಎಂ ಆದ ಮೇಲೂ ಪಾಸ್ವಾನ್ ಅಸಮಾಧಾನಕ್ಕೊಳಗಾಗಿದ್ದರು. ನಿತೀಶ್ ಅವರು ವಾಜಪೇಯಿ ಅವರ ಕೇಂದ್ರ ಸಚಿವ ಸಂಪುಟದಲ್ಲಿ ರೈಲ್ವೆ ಸಚಿವರಾಗಿ ಮುಂದುವರಿಯಲಿ ಎಂಬ ನಿರೀಕ್ಷೆ ಹೊಂದಿದ್ದರು.

ಪಾಸ್ವಾನ್ ಮತ್ತು ನಿತೀಶ್ ನಡುವೆ ಹೆಚ್ಚು ವ್ಯತ್ಯಸವಿರಲಿಲ್ಲವಾಗಿತ್ತು. ಯಾಕೆಂದರೆ ಕುರ್ಮಿ ಜಾತಿ ಹೆಚ್ಚು ವಿರೋಧಿಯಾಗಿರಲಿಲ್ಲವಾಗಿತ್ತು. ಲಾಲು ಪ್ರಸಾದ್ ಯಾದವ್ ಅವರು ಮುಸ್ಲಿಂ, ಯಾದವ್ ಕ್ಷೇತ್ರಗಳನ್ನಾಗಿ ವಿಂಗಡಿಸಿಕೊಂಡು ಜಾತಿ ರಾಜಕೀಯಕ್ಕೆ ಇಳಿದಿದ್ದರು. ನಿತೀಶ್ ಕುಮಾರ್ ಅವರ ಸಾಮಾಜಿಕ ತಂತ್ರಗಾರಿಕೆಯಿಂದಾಗಿ ಲಾಲೂ ಪ್ರಸಾದ್ ಯಾದವ್ ಅವರಂತೆ ಪಾಸ್ವಾನ್ ಅವರ ಜಾತಿ ಲೆಕ್ಕಾಚಾರವನ್ನು ಸೀಮಿತಗೊಳಿಸಿಬಿಟ್ಟಿತ್ತು.  ದಲಿತರು ಮತ್ತು ಪಾಸ್ವಾನ್ ಒಂದಕ್ಕೊಂದು ಪ್ರಭಾವಿ ಜಾತಿಯಾಗಿದ್ದವು. ಯಾದವರು ಹಾಗೂ ಇತರ ಹಿಂದುಳಿದ ವರ್ಗ ಒಂದು ಕಡೆಯಾಗಿತ್ತು. ನಿತೀಶ್ ಕುಮಾರ್ ಅದನ್ನು ಸಾಮಾಜಿಕ ನ್ಯಾಯದ ಅಡಿಯಲ್ಲಿ ಜಾತಿಯನ್ನು ವಿಭಾಗಿಸಿಬಿಟ್ಟಿದ್ದರು. ಎಲ್ ಜೆಪಿ ಮತ್ತು ಆರ್ ಜೆಡಿ ಪಾಸ್ಮಾಂಡಾ ಮುಸ್ಲಿಮ್ಸ್, ಮಹಾದಲಿತರು ಮತ್ತು ಆತಿ ಪಿಚಾದಾಸ್ ಸಮುದಾಯವನ್ನು ರಾಜಕೀಯ ನೆಲೆಗಟ್ಟಿನಲ್ಲಿ ಅವರ ಒಲವು ಗಳಿಸಿಕೊಂಡಿದ್ದರು.

ಇದನ್ನೂ ಓದಿ:ಅ.17ರಿಂದ ನವರಾತ್ರಿ ವೈಭವ; ದೇಶಾದ್ಯಂತ ಸಂಭ್ರಮ, ಎಲ್ಲೆಲ್ಲಿ ಹೇಗೆ ಆಚರಣೆ ನಡೆಯುತ್ತೆ

ಚಿರಾಗ್ ಪಾಸ್ವಾನ್ ಸ್ವಯಂಘೋಷಿತವಾಗಿ ನಿತೀಶ್ ಕುಮಾರ್ ಜತೆ ಸೈದ್ದಾಂತಿಕ ಭಿನ್ನಾಭಿಪ್ರಾಯ ಹೊಂದುವ ಮೂಲಕ ಜೆಡಿಯು ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಒಂದು ಸಂದರ್ಭದಲ್ಲಿ ಚಿರಾಗ್ ತಂದೆ ಪಾಸ್ವಾನ್ ಅವರು ವಾಜಪೇಯಿ ಆಡಳಿತಾವಧಿಯಲ್ಲಿ (2002) ಗುಜರಾತ್ ಗಲಭೆ ನಡೆದಿರುವುದನ್ನು ವಿರೋಧಿಸಿ ವಾಜಪೇಯಿ ಸರ್ಕಾರವನ್ನು ತೊರೆದಿರುವ ನಿದರ್ಶನ ಕಣ್ಮುಂದೆ ಇದೆ. ಅಷ್ಟೇ ಲೋಕಸಭೆಯಲ್ಲಿ ಬಿಜೆಪಿಯ ಗೋ ಮಾತೆ ರಕ್ಷಣೆಯನ್ನು ಅಣಕಿಸಿ ಮಾತನಾಡಿದ್ದ ಪಾಸ್ವಾನ್, ನೀವು ಗೋವನ್ನು ಮಾತೆ ಎಂದು ಹೇಳುತ್ತೀರಿ, ಆದರೆ ಅದರ ಜತೆ ದಲಿತರು ಬೇಕು ಯಾಕೆಂದರೆ ಅದರ ಸಗಣಿ ಬಾಚಲು ಎಂದು ತಿರುಗೇಟು ನೀಡಿದ್ದರು. ಇದೆಲ್ಲದರ ನಡುವೆ ಪಾಸ್ವಾನ್ ಅವರು ನರೇಂದ್ರ ಮೋದಿ ಅವರ ಸಂಪುಟ ಸೇರುವ ಮೊದಲ ಅವಕಾಶಕ್ಕೆ ಜಾತ್ಯತೀತ ನಿಲುವಿಗೆ ಎಳ್ಳುನೀರು ಬಿಟ್ಟಿದ್ದರು. ನಿತೀಶ್ ಕುಮಾರ್ ಕೂಡಾ ಇದಕ್ಕೆ ಹೊರತಾಗಿಲ್ಲ. 2017ರಲ್ಲಿ ಆರ್ ಜೆಡಿ ಮೈತ್ರಿ ಬಿಟ್ಟು ಬಿಜೆಪಿ ಜತೆ ಸೇರಿದ್ದರು.

ಇದೀಗ ನಿತೀಶ್ ಆಡಳಿತವನ್ನು ವಿರೋಧಿಸುತ್ತಿರುವ ಚಿರಾಗ್ ಪಾಸ್ವಾನ್ ಅವರ ಸವಾಲನ್ನು ನಂಬಬೇಕಾಗುತ್ತದೆ. ಇದಕ್ಕೆ ಕಾರಣ ಬಿಜೆಪಿ ಪರೋಕ್ಷವಾಗಿ ಎಲ್ ಜೆಪಿಯನ್ನು ಪ್ರೋತ್ಸಾಹಿಸುತ್ತಿದೆ ಎಂಬುದನ್ನು ಗಮನಿಸಬೇಕಾಗಿದೆ. ನಿತೀಶ್, ತೇಜಸ್ವಿ ಯಾದವ್, ಪಾಸ್ವಾನ್ ಹೋರಾಟದಲ್ಲಿ ನಿತೀಶ್ ಕುಮಾರ್ ಅವರ ಗೆಲುವಿನ ನಿರೀಕ್ಷೆ ಹೆಚ್ಚಿದೆ, ಆದರೆ ಅವರು ಸಿಎಂ ಆಗುವ ಸಂಖ್ಯೆಯ ಕೊರತೆ ಎದುರಿಸಬೇಕಾಗಬಹುದು. ಯಾಕೆಂದರೆ ಬಿಹಾರದಲ್ಲಿ ಚಿರಾಗ್, ಒವೈಸಿ, ಯಾದವರು, ದಲಿತರು ಸೇರಿದಂತೆ ಹಲವು ಜಾತಿ ಸಮೀಕರಣ ಯಾವ ಮಟ್ಟದಲ್ಲಿ ಯಾರ ಕೈ ಹಿಡಿಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಚೋಟಾ ಮೋದಿ”:ಡಿಸಿಎಂ ಹುದ್ದೆಗೆ ರಾಜೀನಾಮೆ, ರಾಜ್ಯಸಭೆಗೆ ಬಿಜೆಪಿಯಿಂದ ಸುಶೀಲ್ ಮೋದಿ ಆಯ್ಕೆ

“ಚೋಟಾ ಮೋದಿ”:ಡಿಸಿಎಂ ಹುದ್ದೆಗೆ ರಾಜೀನಾಮೆ, ರಾಜ್ಯಸಭೆಗೆ ಬಿಜೆಪಿಯಿಂದ ಸುಶೀಲ್ ಮೋದಿ ಆಯ್ಕೆ

ಇದೇ ಕೊನೆಯ ಚುನಾವಣೆ ಎಂದು ಹೇಳಿಯೇ ಇಲ್ಲ: ನಿತೀಶ್ ಕುಮಾರ್

ಇದೇ ಕೊನೆಯ ಚುನಾವಣೆ ಎಂದು ಹೇಳಿಯೇ ಇಲ್ಲ: ನಿತೀಶ್ ಕುಮಾರ್

ತೇಜಸ್ವಿ ಒಳ್ಳೆಯ ಹುಡುಗ, ಆದರೆ RJD ಅಧಿಕಾರದ ಗದ್ದುಗೆ ಏರಿದ್ದರೆ…ಉಮಾಭಾರತಿ ಹೇಳಿದ್ದೇನು

ತೇಜಸ್ವಿ ಒಳ್ಳೆಯ ಹುಡುಗ, ಆದರೆ RJD ಅಧಿಕಾರದ ಗದ್ದುಗೆ ಏರಿದ್ದರೆ…ಉಮಾಭಾರತಿ ಹೇಳಿದ್ದೇನು?

ನಿತೀಶ್ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್: ಬಿಜೆಪಿ-ಜೆಡಿಯು ನಡುವೆ ಸಂಪುಟ ಕಸರತ್ತು ಆರಂಭ

ನಿತೀಶ್ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್: ಬಿಜೆಪಿ-ಜೆಡಿಯು ನಡುವೆ ಸಂಪುಟ ಕಸರತ್ತು ಆರಂಭ

ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿ, ಇದು ನಮ್ಮ ಬದ್ಧತೆ: ಭಾರತೀಯ ಜನತಾ ಪಕ್ಷ

ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿ, ಇದು ನಮ್ಮ ಬದ್ಧತೆ: ಭಾರತೀಯ ಜನತಾ ಪಕ್ಷ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.