Blindness that does not hinder achievement
ಸಾಧನೆಗೆ ಅಡ್ಡಿಯಾಗದ ಅಂಧತ್ವ: ಉದಯವಾಣಿಯಲ್ಲಿ 'ಮಾನವ ಕಂಪ್ಯೂಟರ್’
Team Udayavani, Dec 22, 2022, 6:30 PM IST
ಮಾಹಿತಿಗ ಳನ್ನು ಕ್ಷಣಾರ್ಧದಲ್ಲಿ ತಿಳಿಯಲು ಕಂಪ್ಯೂಟರ್ ಮೊರೆ ಹೋಗುವುದೇ ಹೆಚ್ಚು. ಈ ಜ್ಞಾನ ಮನುಷ್ಯರಿಗೆ ಸಿದ್ಧಿಸಿದರೆ ಹೇಗಾಗಬೇಡ…? ಇಂತಹದ್ದೇ ಒಂದು ಜ್ಞಾನ ಭಂಡಾರ ಇರುವುದು ಬೆಳಗಾವಿ ಜಿಲ್ಲೆ ಅಥಣಿಯ ಬಸವರಾಜ ಶಂಕರ ಉಮ್ರಾಣಿ ಅವರಿಗೆ.
ಉದಯವಾಣಿಯ ಮಣಿಪಾಲ ಕೇಂದ್ರ ಕಚೇರಿಗೆ ಆಗ ಮಿಸಿದ್ದ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಹುಟ್ಟು ಕುರುಡರಾದ ಇವರ ಸಾಧನೆಗೆ ಅದು ಯಾವತ್ತೂ ಅಡ್ಡಿ ಎನಿಸಿದ್ದೇ ಇಲ್ಲವಂತೆ!
28 ವರ್ಷದ ಇವರು ಎಂಎ, ಬಿಎಡ್ ಪದವೀಧರರು. ಬೆಂಗಳೂರಿನ ಆದರ್ಶ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. 1900ರಿಂದ 2100ರ ವರೆಗಿನ ಯಾವುದೇ ವರ್ಷದ ಕ್ಯಾಲೆಂಡರ್ ದಿನವನ್ನು ಕ್ಷಣಾರ್ಧದಲ್ಲಿ ಹೇಳಬಲ್ಲರು. ಹುಟ್ಟಿದ ದಿನಾಂಕ, ದಿನ ಕೂಡ!
ಗಣಿತ ವಿಚಾರಗಳೆಲ್ಲವೂ ಲೀಲಾಜಾಲ. 30 ಅಂಕಿಗಳನ್ನು ಒಟ್ಟಿಗೆ ಹೇಳಿದರೂ ಅದನ್ನು ಏರಿಕೆ ಮತ್ತು ಇಳಿಕೆ ಕ್ರಮದಲ್ಲಿ ಹೇಳಬಲ್ಲರು. ಗಡಿಯಾರದ ಸಹಾಯವಿಲ್ಲದೆ ನಿಖರವಾಗಿ ಸಮಯ ಹೇಳುವ ನೈಪುಣ್ಯ ಇವರದ್ದು. ಬೇರೆ ಬೇರೆ ಮೌಲ್ಯದ ಕರೆನ್ಸಿ ನೋಟುಗಳನ್ನು ಕೈಯಲ್ಲಿ ಸ್ಪರ್ಶಿಸಿಯೇ ಅವುಗಳ ಒಟ್ಟು ಮೌಲ್ಯವನ್ನು ತಿಳಿಸುವ ಚಾತುರ್ಯ ಇವರಿಗಿದೆ. ಎಂದೋ… ಎಲ್ಲೋ ಕೇಳಿದ ದೂರವಾಣಿ ಸಂಖ್ಯೆಯನ್ನು ಹಾಗೂ ಭೇಟಿಯಾದ ದಿನಾಂಕ ಸಮಯವನ್ನೂ ಹೇಳಬಲ್ಲರು.
More Videos More
Top News
Latest Additions
Mangaluru Lit Fest to be held on Jan 11 and 12
Udupi: Paryaya Shripada initiates Abhigya Anand into Koti Gita Lekhana Yajna
Notorious thief runs out of ‘time’, gets caught with 24 expensive watches, three iPhones
Namma Yatri launches operation in Mysuru
Mangaluru: Over 10 dangerous junctions on Airport Road