Discover the Beauty and History of Kamalashile Temple
ಕಮಲಶಿಲೆ ದೇವಸ್ಥಾನ ನೋಡಬನ್ನಿ
Team Udayavani, Apr 12, 2023, 12:00 PM IST
ಭರತ ಖಂಡದ ಪುಣ್ಯಶಕ್ತಿ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಶ್ರೀ ಬ್ರಾಡ್ಮಿ ದುರ್ಗಾಪರಮೇಶ್ವರಿಯು ಲಿಂಗರೂಪಿಣಿಯಾಗಿ ನೆಲೆಸಿ ನಂಬಿದ ಭಕ್ತರನ್ನು ಬೆಂಬಿಡದೆ ಸಲಹುತ್ತಿರುವ ವಿಷಯ ಸರ್ವ ವಿದಿತ. ಕುಂದಾಪುರ ತೀರ್ಥಹಳ್ಳಿ ರಾಜ್ಯ ಹೆದ್ದಾರಿಯಲ್ಲಿ ಸಿದ್ಧಾಪುರದಿಂದ 6 ಕಿ.ಮೀ. ದೂರದ (ಸಿದ್ಧಾಪುರ, ಹಳ್ಳಿಹೊಳೆ, ಜಡ್ಕಲ್, ಕೊಲ್ಲೂರು ರಸ್ತೆ) ಮಲೆನಾಡಿನ ಮೂಲೆಯಲ್ಲಿ ತೆಂಗು ಕಂಗುಗಳ ಮಧ್ಯ ಪವಿತ್ರವಾದ ಪುಣ್ಯ ಕ್ಷೇತ್ರ ಕಮಲಶಿಲೆಯು ಕಂಗೊಳಿಸುತ್ತಿದೆ. ಕಮಲವೂ, ಶಿಲೆಯೂ ಒಂದಾದಿ ಕಮಲಶಿಲೆಯಾಗಿ ದುಷ್ಟನಿಗ್ರಹ ಶಿಷ್ಟಪರಿಪಾಲನ ಕಾರ್ಯ ಇಲ್ಲಿ ನಡೆಯುತ್ತದೆ. ಕುಂದಾಪುರ ತಾಲೂಕಿನ ಗ್ರಾಮೀಣ ಪ್ರದೇಶವಾದ ಕಮಲಶಿಲೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರನ್ನು ತನ್ನೆಡೆಗೆ ಆಕರ್ಷಿಸುವ ಪ್ರಸಿದ್ಧ ಕ್ಷೇತ್ರವಾಗಿದ್ದು ಭಕ್ತರು ಭಕ್ತಿ ಧ್ಯಾನದಿಂದ ಆರಾಧಿಸಿ ಹರಕೆ ಸಲ್ಲಿಸಿ ಭಕ್ತಿ ಪರವಶತೆಯಿಂದ ಪೂಜಿಸುತ್ತಾರೆ. ತಮ್ಮ ಇಷ್ಟಾರ್ಥ ನೆರವೇರಿದಾಗ ಕೃತಾರ್ಥರಾಗಿ ಧನ್ಯತಾ ಭಾವದಿಂದ ಹಿಂದಿರುಗುತ್ತಾರೆ. ಪ್ರಾಕೃತಿಕವಾಗಿ ವಿಶಿಷ್ಟ ಸ್ಥಾನವನ್ನು ಪಡೆದ ತಾಯಿಯು ಪ್ರಕೃತಿ ಪ್ರಿಯಳಾಗಿ ಇಲ್ಲಿ ಹುಟ್ಟಿ ಬಂದಿದ್ದಾಳೆ. ಸುತ್ತಲೂ ದಟ್ಟವಾದ ಅರಣ್ಯ ಪ್ರದೇಶದ ಮಧ್ಯದಲ್ಲಿ ಕುಬ್ಬಾ ನದಿ ಹಾಗೂ ನಾಗತೀರ್ಥಗಳ ಸಂಗಮದಲ್ಲಿ ಪಾತಾಳದಿಂದ ಲಿಂಗ ರೂಪಿಣಿಯಾಗಿ ನೆಲೆ ನಿಂತಿದ್ದಾಳೆ. ಹುಟ್ಟಿದ್ದು ನೀರಿನಲ್ಲಿ, ರೂಪ ಕಲ್ಲು, ಆಭರಣವೇ ಮಣ್ಣು. ಇದರಿಂದ ಆ ತಾಯಿಯ ಅದ್ಭುತ ಶಕ್ತಿ ಏನೆಂಬುದರ ಅರಿವಾಗುತ್ತದೆ. ‘ಬ್ರಾಹೀ’ ಶಕ್ತಿಯ ಸಂಕೇತ. ಭಕ್ತಿಯ ಉಗಮ. ಪರಮೇಶ್ವರನ ಮಡದಿ ಆದಿ ಶಕ್ತಿ ಪರಮೇಶ್ವರಿಯಾಗಿ, ಜಗತ್ತಿಗೆ ಬಂದ ಕಷ್ಟಗಳನ್ನು ಪರಿಹರಿಸಿ ದುರ್ಗೆಯಾಗಿ, ಬ್ರಹ್ಮಾಣೀ ಶಕ್ತಿ ಐಕ್ಯವಾದ್ದರಿಂದ ಬ್ರಾಡ್ಮಿಯಾಗಿ ಹೀಗೆ ಶ್ರೀ ಬ್ರಾಹ್ಮ ದುರ್ಗಾಪರಮೇಶ್ವರಿಯಾಗಿ ಜಗತ್ತಿನ ಏಕೈಕ ಬ್ರಾಹ್ಮ ಕ್ಷೇತ್ರವಾಗಿದೆ. ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತ್ಯಾತ್ಮಕ ಮಹಾಕಾಳಿ ಮಹಾಲಕ್ಷ್ಮೀ ಮಹಾಸರಸ್ವತಿ ಸ್ವರೂಪಿಣಿಯಾಗಿ ತ್ರಿಶಕ್ತಾತ್ಮಕವಾದ ಅದ್ಭುತ ಶಕ್ತಿ ಇಲ್ಲಿ ಅಡಗಿದೆ. ಇಂತಹ ಮಹಾ ಶಕ್ತಿ ಮಾತೆಯ ಮಹಿಮೆಯನ್ನು ವರ್ಣಿಸುವುದು. ನನ್ನ ಪಾಲಿನ ಮಹಾ ಭಾಗ್ಯ ಪೂಜನೀಯ ದಿವಂಗತ ಕಮಲಶಿಲೆ ಸೀತಾರಾಮ ಭಟ್ಟರು 1976ರಲ್ಲಿ ರಚಿಸಿದ ‘ಶ್ರೀ ಕಮಲಶಿಲೆ ಕ್ಷೇತ್ರ ಮಹಾತ್ಮ’ಯ ಆಧಾರದಲ್ಲಿ ಈ ಕೃತಿಯನ್ನು ರಚಿಸಿರುತ್ತೇನೆ. ಅವರಿಗೆ ಚಿರಋಣಿಯಾಗಿರುತ್ತೇನೆ. ಆಗಾಗ ಪತ್ರಿಕೆಗಳಿಗೆ ಸ್ಥಳ ಪುರಾಣದ ಕುರಿತು ಲೇಖನಗಳನ್ನು ಬರೆಯುತ್ತಿದ್ದೆ. ಶ್ರೀ ಕ್ಷೇತ್ರದ ಪ್ರಗತಿಯ ಮುಂಚೂಣಿಯ ರೂವಾರಿ ಆನುವಂಶಿಕ ಆಡಳಿತ ಧರ್ಮದರ್ಶಿ ಶ್ರೀ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರರು ಸ್ಥಳ ಪುರಾಣ ಬರೆದು ಕೊಡುವಂತೆ ಒತ್ತಾಯಿಸುತ್ತಿದ್ದರು. ಅವರ ಸ್ಫೂರ್ತಿಯಿಂದ ಮತ್ತು ಶ್ರೀ ಕಮಲಾಶಿಲಾಂಬೆಯ ಪ್ರೇರಣೆಯಿಂದ ಅಲ್ಪಜ್ಞನಾದ ನನ್ನಿಂದ ಈ ಕಿರುಹೊತ್ತಗೆ ಹೊರಬಂದಿದೆ. ಶ್ರೀ ಕ್ಷೇತ್ರದ ಆಡಳಿತ ಮಂಡಳಿಯವರಿಗೂ ಅಂದವಾಗಿ ಮುದ್ರಿಸಿಕೊಟ್ಟ ಸಿದ್ಧಾಪುರದ ಕರಾವಳಿ ಪ್ರಿಂಟರ್ ನವರಿಗೂ ಕೃತಜ್ಞತೆಗಳು. ಭಕ್ತಾಭೀಷ್ಟ ಪ್ರದಾಯಿಸಿಯಾದ ಶ್ರೀ ಬ್ರಾಹ್ಮ ದುರ್ಗಾಪರಮೇಶ್ವರಿ ದೇವಿಯು ಸಕಲರಿಗೂ ಒಳಿತನ್ನುಂಟು ಮಾಡಲಿ ಎಂದು ಹಾರೈಸುತ್ತೇನೆ. ಇತ್ಯಂಬಾರಾಧಕ ಕಮಲಶಿಲೆ ಶ್ರೀಧರ ಅಡಿಗ ಶ್ರೀ ಕ್ಷೇತ್ರ ಕಮಲಶಿಲೆ D05 02-04-2010 ಮುಂದಿನ ಪ್ರಕಟಣೆಗಳು 1. ಶ್ರೀ ಕಮಲಶಿಲಾಂಬಾ ಭಜನಾವಳಿ (ಎರಡನೇ ಮುದ್ರಣ) 2. ಶ್ರೀ ಬ್ರಾಹೀ ಸ್ತೋತ್ರ ಮಂಜರಿ 3. ಶ್ರೀ ಬ್ರಾಹೀ ದುರ್ಗಾಪರಮೇಶ್ವರಿ ಮಹಿಮೆಗಳ ಸಂಕಲನ (ಭಕ್ತರಿಂದ ಸಂಗ್ರಹಿಸಿದ ಸತ್ಯಕತೆಗಳ ವಿವರ)
More Videos More
Top News
Latest Additions
Mangaluru Lit Fest to be held on Jan 11 and 12
Udupi: Paryaya Shripada initiates Abhigya Anand into Koti Gita Lekhana Yajna
Notorious thief runs out of ‘time’, gets caught with 24 expensive watches, three iPhones
Namma Yatri launches operation in Mysuru
Mangaluru: Over 10 dangerous junctions on Airport Road