ಅಪ್ಪನ ನೆನಪು: ಸ್ವಾಭಿಮಾನದ ಬದುಕು ಕಲಿಸಿ ಕೊಟ್ಟ ನನ್ನ ಅಪ್ಪ ಎಂದಿಗೂ ನನಗೆ ಆದರ್ಶ…
ಸೂಕ್ಷ್ಮಾತಿಸೂಕ್ಷ್ಮ ಗಳೆಲ್ಲ ಅರಿತಾಗ ನನ್ನ ಶತ್ರುವೇ ನನಗೆ ಒಂದೊಳ್ಳೆಯ ಹೀರೋ ಆದ
Team Udayavani, Jun 21, 2020, 10:02 AM IST
ಇಂದ,
ಸುಪ್ರೀತಾ ಶೆಟ್ಟಿ
ಡಾ// ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ
ಗೆ,
ಭಾಸ್ಕರ್ ಶೆಟ್ಟಿ
ಚಿತ್ತೂರು
ವಿಷಯ: ಅಪ್ಪನಿಗೊಂದು ಪತ್ರ.
ಪ್ರೀತಿಯ ಅಪ್ಪನಲ್ಲಿ ನಿಮ್ಮ ಮಗಳು ಸುಪ್ರೀತಾ ಬೇಡುವ ಆಶೀರ್ವಾದಗಳು . ವೇಗ ಗತಿಯಲ್ಲಿ ಓಡುತ್ತಿರುವ ಪ್ರಪಂಚದಲ್ಲಿ ಸಂಬಂಧಗಳ ಬಂಧವೇ ಕಳಚುತ್ತಿರುವಾ ಇಂದಿನ ದಿನಮಾನದಲ್ಲಿ ಒಮ್ಮೆಯೂ ಹುಸಿಯಾಗದ ಬಂಧವೇ ಅಪ್ಪ – ಮಗಳು . ಅಪ್ಪಾ ನೀ ತೋರಿದ ದಾರಿ ,ಮಾರ್ಗದರ್ಶನ , ನಿನ್ನ ನಡೆ ಎಲ್ಲವೂ ನನಗೆ ಮಾದರಿ. ನೀ ನನ್ನೆದುರು ಎಷ್ಟು ಒರಟನಂತೆ ಕಂಡರೂ ನಿನ್ನ ಮನಸ್ಸು ಮುಗ್ದ ಹೆಂಗರಳು ಏನ್ನುದು ನನಗೆ ಗೊತ್ತು ಅಪ್ಪ….
ನನ್ನ ಬಾಲ್ಯದ ದಿನದಲ್ಲಿ ನಿನ್ನನ್ನು ಅತಿ ಹೆಚ್ಚು ದ್ವೇಷಿಸಿದವಳೆ ನಾನು. ನಿನ್ನ ಆ ಸಿಟ್ಟು , ಒರಟುತನ ಎಲ್ಲವೂ ನನಗೆ ಹಿಂಸೆ ಅನ್ನಿಸುತಿತ್ತು . ಆದರೆ ಕಾಲಕ್ರಮೇಣ ನನಗೆ ಬುದ್ಧಿ ಬಲಿತಾಗ ನೀ ನನ್ನ ತಂದೆ ಎನ್ನಲು ತುಂಬಾ ಸಂತೋಷವಾಗುತ್ತಿತ್ತು. ನನ್ನ ವಿದ್ಯಾಭ್ಯಾಸದ ಸಮಯದಲ್ಲಿ ಒಮ್ಮೆಯೂ ನೀ ನನ್ನ ಬಗ್ಗೆ ವಿಚಾರಿಸಲು ಶಾಲೆಗೆ ಬರದಾಗ ಆದ ದುಃಖ ಅದೆಷ್ಟೋ? .
ಪ್ರತಿಭಾ ಕಾರಂಜಿ , ಸ್ಕೂಲ್ಡೇ ಗಳಲ್ಲಿ ನನ್ನ ನೃತ್ಯ , ಹಾಡು , ಕುಣಿತವನ್ನು ವೇದಿಕೆಯ ಮುಂಭಾಗದ ಕೊನೆಯ ಸೀಟಿನಲ್ಲಿ ಕುಳಿತುಕೊಂಡು ನೋಡಿ ಹೋಗುತ್ತಿರುವುದನ್ನು ಕಂಡು ನಾನೆಷ್ಟು ಖುಷಿ ಪಟ್ಟಿದ್ದೆನೋ ನಾ ಅರಿಯೇ… ನೀ ಎಂದಿಗೂ ನನ್ನ ಮುಂದೆ ಒಮ್ಮೆಯೂ ಹೊಗಳಿಲ್ಲ , ಎಲ್ಲರ ಮುಂದೆ ಒರಟನಂತೆ ಬೈಗುಳದ ದಾರೆ ಚೆಲ್ಲಿರುವೆ . ಅರಿಯದ ವಯಸ್ಸಿಗೆ ಇದಾವುದೂ ನನಗೆ ಅರ್ಥವಾಗದೆ ನಿನ್ನನು ಶತ್ರುವಿನಂತೆ ಕಾಣುತ್ತಿದ್ದೆ …
ಕಾಲ ಕ್ರಮೇಣ ಅರಿಯದ ಸೂಕ್ಷ್ಮಾತಿಸೂಕ್ಷ್ಮ ಗಳೆಲ್ಲ ಅರಿತಾಗ ನನ್ನ ಶತ್ರುವೇ ನನಗೆ ಒಂದೊಳ್ಳೆಯ ಹೀರೋ ಆದ. ನಾ ವೇದಿಕೆಯ ಮೇಲೆ ಮೈಕ್ ಹಿಡಿದಾಗ ನಿನ್ನ ಮುಖದಲ್ಲಿ ಮೂಡಿದ ಮಂದಹಾಸ ಇನ್ನೂ ನನ್ನ ಕಣ್ಣೆದುರಿಗಿದೆ ಎಂದು ನನ್ನ ಬಳಿ ಬಾಯ್ಬಿಟ್ಟು ಹೇಳದಿದ್ದರೂ ನಿನ್ನ ಆ ಕಣ್ಣಲ್ಲಿರುವ ಕಾಳಜಿ ಪ್ರೀತಿ ನನಗರಿವಿದೆ. ಪದವಿ ಹಂತದಲ್ಲಿನ ಪ್ರತಿಭಾ ಪ್ರದರ್ಶನದಲ್ಲಿ ನಿರೂಪಣೆ ಗೈದಾಗ ಎಲ್ಲರಿಂದ ದೊರೆತ ಪ್ರಶಂಸೆ, ಮೆಚ್ಚುಗೆಯ ಮಾತುಗಳು ಯಾವುದು
ನೀ ನನ್ನ ಮುಂದೆ ವ್ಯಕ್ತಪಡಿಸಿಲ್ಲ , ಎಲ್ಲದಕ್ಕೂ, ಎಲ್ಲದರಲ್ಲೂ ನನ್ನ ತಪ್ಪನ್ನ ಹುಡುಕುತ್ತ ಬಂದೆ. ಆದರೆ ಯಾರದೋ ಮುಂದೆ ನನ್ನ ಬಗ್ಗೆ ಹೇಳಿ ‘ಆಕೆ ನನ್ನ ಮಗಳೆಂದು’ ಹೆಮ್ಮೆ ವ್ಯಕ್ತಪಡಿಸಿದಾಗ ನಿಜಕ್ಕೂ ಜೀವನ ಸಾರ್ಥಕವೆನಿಸಿತು. ನೀ ನನ್ನ ಮುಂದೆ ಒರಟನಂತೆ ಇದ್ದರೂ ನಿನ್ನ ಮನಸಲ್ಲಿ ನನ್ನ ಬಗ್ಗೆ ಪ್ರೀತಿ, ಕಾಳಜಿ, ಹೆಮ್ಮೆ ಇರುವುದು ನನಗೆ ತಿಳಿದಿದೆ ಅಪ್ಪಾ…ಕಷ್ಟದ ನೆರಳೆ ತೋರಿಸದೆ , ಸ್ವಾಭಿಮಾನಿಯಾಗಿ ಬದುಕುದನ್ನ ತೋರಿಸಿದ
ನನ್ನ ಅಪ್ಪಾ ಎಂದಿಗೂ ನನಗೆ ಆದರ್ಶ……
ನಿಮ್ಮ ಪ್ರೀತಿಯ ಮಗಳು
ಸುಪ್ರೀತಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.