2023 Recap: ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ CNG ಕಾರುಗಳು
Team Udayavani, Dec 31, 2023, 11:00 AM IST
ಭಾರತೀಯ ಮಾರುಕಟ್ಟೆಯಲ್ಲಿ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG) ನಲ್ಲಿ ಚಲಿಸುವ ಕಾರುಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಕಳೆದ ಹಣಕಾಸು ವರ್ಷದಲ್ಲಿ ಈ ಮಾದರಿಗಳ ಬೆಲೆಯಲ್ಲಿ ಶೇ.49ರಷ್ಟು ಹೆಚ್ಚಳವಾಗಿದ್ದರೂ, ಸಿಎನ್‌ಜಿ ವಾಹನಗಳ ಮಾರಾಟದಲ್ಲಿ ಶೇ.40.7ರಷ್ಟು ಏರಿಕೆಯಾಗಿದೆ. ಪ್ರಸ್ತುತ, ಸಿಎನ್‌ಜಿ ವಾಹನಗಳು ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಸುಮಾರು 12 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿವೆ. 2023 ರಲ್ಲಿ ಏಳು ಸಿಎನ್‌ಜಿ ಕಾರುಗಳನ್ನು ಬಿಡುಗಡೆ ಮಾಡಲಾಗಿದ್ದು ಯಾವೆಲ್ಲಾ ಕಾರು ಬಿಡುಗಡೆಯಾಗಿದೆ ಎಂಬುದನ್ನು ನೋಡೋಣ.
1. ಟಾಟಾ ಆಲ್ಟ್ರೋಜ್ ಸಿಎನ್‌ಜಿ
ಟಾಟಾ ಮೋಟಾರ್ಸ್ ಹೊಸ ಅವಳಿ-ಸಿಲಿಂಡರ್ ಸಿಎನ್‌ಜಿ ತಂತ್ರಜ್ಞಾನದೊಂದಿಗೆ ಮೇ 2023 ರಲ್ಲಿ ಆಲ್ಟ್ರೋಜ್ ಹ್ಯಾಚ್‌ಬ್ಯಾಕ್ ಸಿಎನ್‌ಜಿ ಕಾರನ್ನು ಬಿಡುಗಡೆ ಮಾಡಿದೆ. ಸನ್‌ರೂಫ್‌ನೊಂದಿಗೆ ಬಂದಿರುವ ಮೊದಲ ಸಿಎನ್‌ಜಿ ಹ್ಯಾಚ್‌ಬ್ಯಾಕ್ ಕಾರು ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಇದು ಟಾಟಾದ ಸಿಎನ್‌ಜಿ ತಂತ್ರಜ್ಞಾನದೊಂದಿಗೆ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ. ಇದು ಗರಿಷ್ಠ 77bhp ಪವರ್ ಮತ್ತು 103Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಎಕ್ಸ್ ಶೋ ರೂಂ ಬೆಲೆ ರೂ.7.55 ಲಕ್ಷದಿಂದ ರೂ.10.55 ಲಕ್ಷ ರೂ ಆಗುತ್ತದೆ.
2. ಟಾಟಾ ಟಿಯಾಗೊ/ಟಿಗೊರ್ ಸಿಎನ್‌ಜಿ
ಟಾಟಾ ಮೋಟಾರ್ಸ್ ಹೊಸ ಟ್ವಿನ್ ಸಿಲಿಂಡರ್ ಸಿಎನ್‌ಜಿಯೊಂದಿಗೆ ಟಿಯಾಗೊ ಹ್ಯಾಚ್‌ಬ್ಯಾಕ್ ಮತ್ತು ಟಿಗೊರ್ ಕಾಂಪ್ಯಾಕ್ಟ್ ಸೆಡಾನ್ ಅನ್ನು ಪರಿಚಯಿಸಿದೆ. ಇದರ ಎಕ್ಸ್ ಶೋ ರೂಂ ಬೆಲೆ ಕ್ರಮವಾಗಿ ರೂ.6.55 ಲಕ್ಷದಿಂದ ರೂ.8.20 ಲಕ್ಷ. ಎರಡೂ ಸಿಎನ್‌ಜಿ ಕಾರುಗಳು 1.2ಲೀ, ಮೂರು-ಸಿಲಿಂಡರ್ ಪೆಟ್ರೋಲ್ ಮೋಟಾರ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದರ ವಿನ್ಯಾಸವು ಗ್ರಾಹಕರಿಗೆ ಹೇಳಿ ಮಾಡಿಸಿದಂತಿದೆ.
3. ಟಾಟಾ ಪಂಚ್ ಸಿಎನ್‌ಜಿ
ಟಾಟಾ ಪಂಚ್ ಮಾದರಿ ಶ್ರೇಣಿಯು ಐದು ಸಿಎನ್‌ಜಿ ರೂಪಾಂತರಗಳನ್ನು ಒಳಗೊಂಡಿದೆ; ಪ್ಯೂರ್, ಅಡ್ವೆಂಚರ್, ಅಡ್ವೆಂಚರ್ ರಿದಮ್, ಅಕಾಂಪ್ಲಿಶ್ಡ್ ಮತ್ತು ಅಕಮ್ಪ್ಲಿಶ್ಡ್ ಡ್ಯಾಝಲ್ ಎಸ್ – ಎಕ್ಸ್ ಶೋರೂಂ ಬೆಲೆ ಕ್ರಮವಾಗಿ ರೂ.7.10 ಲಕ್ಷ, ರೂ.7.85 ಲಕ್ಷ, ರೂ.8.20 ಲಕ್ಷ, ರೂ.8.85 ಲಕ್ಷ ಮತ್ತು ರೂ.9.68 ಲಕ್ಷ. ಇದು ಸಿಎನ್‌ಜಿ ಕಿಟ್‌ನೊಂದಿಗೆ 1.2 ಲೀಟರ್, ಮೂರು ಸಿಲಿಂಡರ್ ಹೊಂದಿರುವ ಪೆಟ್ರೋಲ್ ಎಂಜಿನ್ ಹೊಂದಿದೆ.
4. ಮಾರುತಿ ಬ್ರೆಝಾ ಸಿಎನ್‌ಜಿ
ಮಾರುತಿ ಸುಜುಕಿಯ ಬ್ರೆಝಾ ಸಿಎನ್‌ಜಿಯೊಂದಿಗೆ ಬರುವ ಭಾರತದ ಮೊದಲ ಕಾಂಪ್ಯಾಕ್ಟ್ SUV ಕಾರು ಆಗಿದೆ. ಮಾರ್ಚ್ 2023 ರಲ್ಲಿ ಮಾರುಕಟ್ಟೆ ಪ್ರವೇಶಿಸಿದ ಈ ಕಾರು ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಎಕ್ಸ್ ಶೋ ರೂಂ ಬೆಲೆಗಳು ಕ್ರಮವಾಗಿ 9.24 ಲಕ್ಷ, 10.59 ಲಕ್ಷ, 11.99 ಲಕ್ಷ ಮತ್ತು 12.15 ಲಕ್ಷ ರೂ. ಈ ಕಾಂಪ್ಯಾಕ್ಟ್ SUV 1.5L K15C ಡ್ಯುಯಲ್ಜೆಟ್ ಎಂಜಿನ್ ಹೊಂದಿದೆ.
5. ಮಾರುತಿ ಗ್ರ್ಯಾಂಡ್ ವಿಟಾರಾ ಸಿಎನ್‌ಜಿ
ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಸಿಎನ್‌ಜಿಯನ್ನು ಈ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಲಾಗಿದ್ದು. ಇದರ ಎಕ್ಸ್ ಶೋರೂಂ ಬೆಲೆ 12.85 ಲಕ್ಷದಿಂದ 14.84 ಲಕ್ಷದ ವರೆಗೆ ಇರಲಿದೆ, ಅದರ ಡೆಲ್ಟಾ ಮತ್ತು ಝೀಟಾ ಸಿಎನ್‌ಜಿ ರೂಪಾಂತರಗಳು ಕ್ರಮವಾಗಿ ರೂ.13.05 ಲಕ್ಷ ಮತ್ತು ರೂ.14.86 ಲಕ್ಷ. ಈ SUV ಯಲ್ಲಿ ಸಿಎನ್‌ಜಿ ಕಿಟ್‌ನೊಂದಿಗೆ 1.5L K15 ಪೆಟ್ರೋಲ್ ಎಂಜಿನ್ ಅನ್ನು ಬಳಸಲಾಗಿದೆ.
6. ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಸಿಎನ್‌ಜಿ
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಜನವರಿಯಲ್ಲಿ 13.23 ಲಕ್ಷದ ಆರಂಭಿಕ ಬೆಲೆಯಲ್ಲಿ ಹೈರೈಡರ್ ಸಿಎನ್‌ಜಿಯನ್ನು ಪರಿಚಯಿಸಿತು, ಇದು ಎಸ್ ಮತ್ತು ಜಿ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದು 1.5L, 4-ಸಿಲಿಂಡರ್ ಕೆ12ಸಿ ಎಂಜಿನ್ ಅನ್ನು ಹೊಂದಿದೆ, ಇದು ಪೆಟ್ರೋಲ್ ಮೋಡ್‌ನಲ್ಲಿ 136Nm ಜೊತೆಗೆ 103bhp ಮತ್ತು ಸಿಎನ್‌ಜಿ ಮೋಡ್‌ನಲ್ಲಿ 121.5Nm ಜೊತೆಗೆ 88bhp ಪವರ್ ಹೊಂದಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
2024ರಲ್ಲಿ ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟ ಟಾಪ್-10 ರೆಸಿಪಿ ಯಾವುದು ಗೊತ್ತಾ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.