2023 Recap: ಅಗಲಿದ ಸಿನಿ ರಂಗದ ಸಾಧಕ -ಸಾಧಕಿಯರು


Team Udayavani, Dec 30, 2023, 6:40 PM IST

Rewind 2023- ಅಗಲಿದ ಸಿನಿ ರಂಗದ ಸಾಧಕ -ಸಾಧಕಿಯರು

2023ರಲ್ಲಿ ಅಗಲಿದ ಸಿನಿ ರಂಗದ ಸಾಧಕ -ಸಾಧಕಿಯರು ಇಹಲೋಕದ ಯಾತ್ರೆ ಮುಗಿಸಿದ್ದು, ಆ ಪೈಕಿ ಪ್ರಮುಖ ಸಾಧಕರ ಕುರಿತು ಕಿರು ವರದಿ ಇಲ್ಲಿದೆ :

ಜನವರಿ-2023

ಸಾಕ್ಷಾತ್ಕಾರ ನಟಿ ಜಮುನಾ ನಿಧನ(27/01/2023)
“ಒಲವೇ ಜೀವನ ಸಾಕ್ಷಾತ್ಕಾರ ‘ ಎನ್ನುತ್ತಾ, ತಮ್ಮ ಮನೋಜ್ಞ ಅಭಿನಯದ ಮೂಲಕ ಕನ್ನಡಿಗರ ಮನಸ್ಸಲ್ಲಿ ಸ್ಥಾನ ಗಿಟ್ಟಿಸಿದ್ದ ಬಹುಭಾಷಾ ನಟಿ ಜಮುನಾ ಶುಕ್ರವಾರ ನಿಧನ ಹೊಂದಿದ್ದರು.

ತೆಲುಗು ಮೂಲದ ನಟಿಯಾಗಿದ್ದ ಜಮುನಾ, ಕನ್ನಡದ ಮೇರು ನಟ ಡಾಣ ರಾಜ್‌ ಕುಮಾರ್‌ ಅವರ ಜತೆಗೆ ಸಾಕ್ಷಾತ್ಕಾರ ಚಿತ್ರದಲ್ಲಿ ನಟಿಸಿ, ಕನ್ನಡ ಸಿನಿಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ತೆನಾಲಿ ರಾಮ ಕೃಷ್ಣ, ಭೂ ಕೈಲಾಸ, ರತ್ನಗಿರಿ ರಹಸ್ಯ ಸಹಿತ ಕನ್ನಡದ 8 ಚಿತ್ರಗಳಲ್ಲಿ ಅಭಿನಯಿಸಿದ್ದರು.

ಜಗತ್ತಿನ ಹಿರಿಯ ಡಿಜೆ ರೆನಾಲ್ಡೋ ನಿಧನ(13/01/2023)
ಜಗತ್ತಿನ ಅತ್ಯಂತ ಹಿರಿಯ ಡಿಸ್ಕೋ ಜಾಕಿ (ಡಿ.ಜೆ.) ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರೆನಾಲ್ಡೋ ಮಾರಿಯಾ ಕಾರ್ಡೆರೋ (98) ನಿಧನ ಹೊಂದಿದ್ದರು.

ಮಧುರವಾದ ಧ್ವನಿ, ಆತ್ಮೀಯ ಭಾವದ ಮಾತುಗಳೊಂದಿಗೆ ಸತತ 72 ವರ್ಷಗಳ ಕಾಲ ರೇಡಿಯೋ ಕಾರ್ಯಕ್ರಮಗಳ ಮೂಲಕ ಕೇಳುಗರ ಮನ ತಲುಪಿದ್ದರು. ಲೇಟ್‌ ನೈಟ್‌ ಹೆಸರಿನ ರೇಡಿಯೋ ಕಾರ್ಯಕ್ರಮದ ಮೂಲಕ ಜನರ ಮನಸೂರೆಗೊಂಡು, ಅಂಕಲ್‌ ರೇ ಎಂದೇ ಪ್ರಖ್ಯಾತರಾಗಿದ್ದವರು. 1950ರ ದಶಕದಲ್ಲೇ ತಮ್ಮ ತಡರಾತ್ರಿ ಕಾರ್ಯಕ್ರಮಗಳ ಮೂಲಕ ಜನಪ್ರಿಯ ಗೀತೆಗಳನ್ನು ಜನರಿಗೆ ಪರಿಚಯಿಸಿದ್ದರು. “ದಿ ವರ್ಲ್ಸ್ ಮೋಸ್ಟ್‌ ಡ್ಯೂ ರಬಲ್‌ ಡಿಜೆ’ ಎನ್ನುವ ಗಿನ್ನೆಸ್‌ ದಾಖಲೆ ಸೃಷ್ಟಿಸಿದ್ದಾರೆ.

ನಟ ಮನ್‌ದೀಪ್‌ ರಾಯ್‌ ನಿಧನ(29/01/2023)
ಕನ್ನಡ ಚಿತ್ರರಂಗದ ಹಿರಿಯ ನಟ ಮನ್‌ ದೀಪ್‌ ರಾಯ್‌ (75) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದರು.

ಕನ್ನಡದಲ್ಲಿ 500ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ಮನ್‌ ದೀಪ್‌ರಾಯ್‌, ಶಂಕರ್‌ ನಾಗ್‌ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು.

ಫೆಬ್ರವರಿ-2023

ಕಲಾ ತಪಸ್ವಿ ಕೆ.ವಿಶ್ವನಾಥ್‌ ನಿಧನ(02/02/2023)
ಟಾಲಿವುಡ್‌ನ‌ ಜನಪ್ರಿಯ ನಿರ್ದೇಶಕ, ಕಲಾ ತಪಸ್ವಿ, ಶಂಕರಾಭರಣಂ ಖ್ಯಾತಿಯ ಕೆ.ವಿಶ್ವನಾಥ್‌ (92) ವಿಧಿವಶರಾಗಿದ್ದರು.

ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಶಾಸ್ತ್ರೀಯ ಕಲೆಗಳನ್ನು ತಮ್ಮ ಕಥೆಗಳನ್ನಾಗಿ ಪರಿವರ್ತಿಸುವ ಮೂಲಕ ನಿರ್ದೇಶಕ ವಿಶ್ವನಾಥ್‌ ಕಲೆಯ ಮೇರು ಪ್ರತಿಭೆಯಾಗಿ ಮಿಂಚಿದ್ದರು.

ವಿಶ್ವನಾಥ್‌ ಅವರು ಅಕ್ಕಿನೇನಿಯವರ “ಆತ್ಮ ಗೌರವಂ’ ಚಿತ್ರದ ಮೂಲಕ ನಿರ್ದೇಶಕರಾದರು. ಶಂಕರಾಭರಣಂ ಅವರ ಸುಪ್ರಸಿದ್ಧ ಚಿತ್ರವಾಗಿದೆ. ಅದಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಲಭಿಸಿತ್ತು.

ಸಿನೆಮಾ ಕ್ಷೇತ್ರದಲ್ಲಿ ಅವರ ಕೊಡುಗೆಗಾಗಿ 2016ರಲ್ಲಿ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 1992ರಲ್ಲಿ ಪದ್ಮಶ್ರೀ ಗೌರವ ಪ್ರಾಪ್ತವಾಯಿತು. ಇದರ ಜತೆಗೆ ಏಳು ಬಾರಿ ನಂದಿ ಅವಾರ್ಡ್‌ ಮತ್ತು ದಕ್ಷಿಣ ಭಾರತಕ್ಕಾಗಿ ಇರುವ ಫಿಲ್ಮ್ ಫೇರ್‌ ಪ್ರಶಸ್ತಿಯನ್ನು ಏಳು ಬಾರಿ ತಮ್ಮದಾಗಿಸಿಕೊಂಡಿದ್ದರು.

ಜನಪ್ರಿಯ ಹಿನ್ನೆಲೆ ಗಾಯಕಿ ವಾಣಿ ಜಯರಾಂ ನಿಧನ(04/02/2023)

ಕನ್ನಡ, ಹಿಂದಿ ಸೇರಿದಂತೆ 19 ಭಾಷೆಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ ಜನಪ್ರಿಯ ಹಿನ್ನೆಲೆ ಗಾಯಕಿ ವಾಣಿ ಜಯರಾಂಬಾರದ ಲೋಕಕ್ಕೆ ಪಯಣಿಸಿದ್ದಾರೆ.

ತೆಲುಗು ನಟ ತಾರಕರತ್ನ ನಿಧನ(18/02/2023)
ಟಾಲಿವುಡ್‌ ನಟ ಹಾಗೂ ರಾಜಕಾರಣಿ ತಾರಕರತ್ನ (39) ಶನಿವಾರ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ನಿಧನ ಹೊಂದಿದ್ದರು. 1983ರ ಫೆ. 23ರಂದು ಹೈದರಾಬಾದ್‌ನಲ್ಲಿ ಜನಿಸಿದ್ದ ತಾರಕರತ್ನ, 2012ರಲ್ಲಿ ಅಲೇಖ್ಯಾ ರೆಡ್ಡಿಯನ್ನು ಪ್ರೇಮವಿವಾಹವಾಗಿದ್ದರು. ಈ ಸಿನೆಮಾ ಗೆದ್ದ ಬಳಿಕ ಸುಮಾರು 20ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದರು.

ಅನಂತರ ತಮ್ಮ ತೆಲಗುದೇಶಂ ಪಾರ್ಟಿ ಮೂಲಕ ರಾಜಕೀಯ ಪ್ರವೇಶಿಸಿದ ತಾರಕರತ್ನ ಪಕ್ಷದಲ್ಲಿ ಹಲವಾರು ಹುದ್ದೆ ನಿರ್ವಹಿಸಿದ್ದರು.

ಚಿತ್ರ ನಿರ್ದೇಶಕ ಎಸ್‌.ಕೆ.ಭಗವಾನ್‌ ಇನ್ನಿಲ್ಲ(20/02/2023)

“ಜೇಮ್ಸ್‌ ಬಾಂಡ್‌’ ಶೈಲಿಯ ಚಿತ್ರಗಳನ್ನು ಚಂದನವನಕ್ಕೆ ಪರಿಚಯಿಸಿದ್ದ ಹಿರಿಯ ಚಿತ್ರ ನಿರ್ದೇಶಕ ಎಸ್‌.ಕೆ.
ಭಗವಾನ್‌ (95) ಅವರು ಜಯದೇವ ಆಸ್ಪತ್ರೆಯಲ್ಲಿ ಕೊನೆ ಯುಸಿರೆಳೆದ್ದಾರೆ.

ಮಲಯಾಳಂ ಸಿನಿಮಾ ರಂಗದ ಖ್ಯಾತ ನಟಿ, ನಿರೂಪಕಿ ಸುಬಿ ಸುರೇಶ್‌ ನಿಧನ(22/02/2023)
ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂ ಸಿನಿಮಾ ರಂಗದ ಖ್ಯಾತ ನಟಿ, ನಿರೂಪಕಿ ಸುಬಿ ಸುರೇಶ್‌ (41) ನಿಧನರಾಗಿದ್ದಾರೆ.

‘ಗೃಹನಾಥನ್’, ‘ತಸ್ಕರ ಲಹಲಾ’, ‘ಎಲ್ಸಮ್ಮ ಎನ್ನ ಅಂಕುಟ್ಟಿ’, ʼಡ್ರಾಮಾʼ,ʼಕಾರ್ಯಸ್ಥಾನ್‌ʼ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು.

ಚೊಚ್ಚಲ ಸಿನೆಮಾ ಬಿಡುಗಡೆಗೂ ಮುನ್ನ ನಿರ್ದೇಶಕ ಜೇಮ್ಸ್‌ ನಿಧನ(24/02/2023)
ಮಲಯಾಳ ನಿರ್ದೇಶಕ ಜೋಸೆಫ್ ಮನು ಜೇಮ್ಸ್‌ ಕೇವಲ 31ನೇ ವರ್ಷದಲ್ಲಿ ನಿಧನ ಹೊಂದಿದ್ದರು.

ಜೋಸೆಫ್ ಮನು ಬಾಲನಟನಾಗಿ 2004ರಲ್ಲಿ ಚಿತ್ರರಂಗ ಪ್ರವೇಶಿಸಿದರು. ಅನಂತರ ಸಹಾಯಕ ನಿರ್ದೇಶಕನಾಗಿ ಮಲಯಾಳ, ಕನ್ನಡ, ಹಿಂದಿ ಸಿನೆಮಾಗಳಲ್ಲಿ ಕೆಲಸ ಮಾಡಿದ್ದರು. ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣದಲ್ಲಿ ನಿರ್ದೇಶನಕ್ಕೆ ಕೈಹಾಕಿದ್ದರು.

ಮಾರ್ಚ್ 2023

ಹೃದಯಾಘಾತ: ನಟ ಸತೀಶ್‌ ಕೌಶಿಕ್‌ ನಿಧನ(09/03/2023)

ಬಾಲಿವುಡ್‌ನ‌ ಖ್ಯಾತ ನಟ ಹಾಗೂ ನಿರ್ದೇಶಕರಾದ ಸತೀಶ್‌ ಕೌಶಿಕ್‌ (66) ಹೃದಯಾಘಾತದಿಂದ ಮೃತಪಟ್ಟಿದ್ದರು.

ಪರಿಣೀತ ನಿರ್ದೇಶಕ ಪ್ರದೀಪ್‌ ಸರ್ಕಾರ್‌ ನಿಧನ(24/03/2023)
ಬಾಲಿವುಡ್‌ನ‌ ಪ್ರಖ್ಯಾತ ನಿರ್ದೇಶಕ ದಾದಾ ಖ್ಯಾತಿಯ ಪ್ರದೀಪ್‌ ಸರ್ಕಾರ್‌ ಶುಕ್ರವಾರ ಅನಾರೋಗ್ಯ ದಿಂದ ನಿಧನ ಹೊಂದಿದ್ದರು.

“ಪರಿಣೀತ’, “ಮರ್ದಾನಿ’, “ಹೆಲಿಕಾಪ್ಟರ್‌ ಈಲಾ’ ಸಹಿತ ಹಲವಾರು ಖ್ಯಾತ ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರದೀಪ್‌ ಸರ್ಕಾರ್‌.

ಭೋಜ್‌ಪುರಿ ನಟಿ ಆಕಾಂಕ್ಷಾ ಆತ್ಮಹತ್ಯೆ(26/03/2023)
ಭೋಜ್‌ಪುರಿ ಚಿತ್ರರಂಗದ ಖ್ಯಾತ ನಟಿ, ಆಕಾಂಕ್ಷಾ ದುಬೆ ಜಾಲತಾಣದಲ್ಲಿ ಲೈವ್‌ ಬಂದು ಕಣ್ಣೀರಾಗಿ ಅನಂತರ ಸಾವಿಗೆ ಶರಣಾಗಿರುವ ಘಟನೆ ವರದಿಯಾಗಿದೆ.

ಮುಜೆ ಶಾದಿ ಕರೋಗಿ, ವೀರೋಂಕೆ ವೀರ್‌, ಫೈಟರ್‌ ಕಿಂಗ್‌ ಸಹಿತ ಭೋಜ್‌ಪುರಿ ಭಾಷೆಯ ಹಲವಾರು ಸಿನೆಮಾಗಳಲ್ಲಿ ನಟಿಸಿ, ಸೈ ಎನಿಸಿಕೊಂಡಿದ್ದ ಆಕಾಂಕ್ಷಾ, ಆಲ್ಬಂ ಸಾಂಗ್‌ಗಳ ಮೂಲಕವೂ ಚಿರಪರಿಚಿತರು.

ಖ್ಯಾತ ರಂಗಕರ್ಮಿ ಜಲಬಾಲ ನಿಧನ(09/04/2023)
ರಾಷ್ಟ್ರ ರಾಜಧಾನಿಯ ಖ್ಯಾತ ರಂಗಶಾಲೆ ಅಕ್ಷರ ಥಿಯೇಟರ್‌ನ ಸಹ ಸಂಸ್ಥಾಪಕಿ, ದಿಗ್ಗಜ ರಂಗಕರ್ಮಿ ಜಲಬಾಲಾ ಅವರು ಅನಾರೋಗ್ಯದಿಂದಾಗಿ ರವಿವಾರ ದಿಲ್ಲಿಯಲ್ಲಿ ಮೃತರಾಗಿದ್ದಾರೆ.

ಪತ್ರಕರ್ತೆ, ರಂಗಕರ್ಮಿಯಾಗಿ ಪ್ರಖ್ಯಾತರಾಗಿದ್ದ ಜಲಬಾಲಾ, ಸಂಗೀತ ನಾಟಕ ಅಕಾಡೆಮಿಯ ಟ್ಯಾಗೂರ್‌ ಪ್ರಶಸ್ತಿ, ದಿಲ್ಲಿ ನಾಟ್ಯ ಸಂಘ ಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. “ದಿ ರಾಮಾಯಣ’ ಎನ್ನುವ ನಾಟಕದಲ್ಲಿ 25 ಪಾತ್ರಗಳನ್ನೂ ಒಬ್ಬರೇ ಅಭಿನಯಿಸುವ ಮೂಲಕ ಪ್ರಪಂಚದಾದ್ಯಂತ ಕೀರ್ತಿ ಪಡೆದಿದ್ದರು.

ಮಲಯಾಳ ನಟ ಮಮ್ಮುಕ್ಕೋಯ ನಿಧನ(26/04/2023)
ಮಲಯಾಳ ಚಿತ್ರರಂಗದ ಹಿರಿಯ ನಟ ಮಮ್ಮುಕ್ಕೋಯ (76) ಅವರು ಹೃದಯಾಘಾತದಿಂದ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದ್ದರು.

“ಅನ್ಯಾರುದೇ ಭೂಮಿ’ ಚಿತ್ರದ ಮೂಲಕ 1979ರಲ್ಲಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದ ಮಮ್ಮುಕ್ಕೋಯ “ಪಟ್ಟಣಪ್ರವೇಶಂ’, “ನಾಡೋಡಿಕ್ಕಾಟ್ಟು’, “ಶ್ರೀಧರಂತೆ ಒಂದಂ ತಿರುಮುರಿವು’ದಂಥ ಪ್ರಸಿದ್ಧ ಸಿನೆಮಾಗಳಲ್ಲಿ ನಟಿಸಿದ್ದರು.

ಮೇ -2023

ತಮಿಳು ನಟ ಮನೋಬಲ ನಿಧನ(03/05/2023)
ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ, ನಿರ್ದೇಶಕ, ನಿರ್ಮಾಪಕ ಮನೋಬಲ ತಮ್ಮ 69ನೇ ವರ್ಷದಲ್ಲಿ ನಿಧನ ಹೊಂದಿದ್ದರು.

ತಮಿಳು ಚಿತ್ರರಂಗದಲ್ಲಿ 700ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿ, ತಮ್ಮ ವಿಶೇಷ ಹಾಸ್ಯಗಳ ಮೂಲಕ ಖ್ಯಾತರಾಗಿದ್ದಾರೆ. ಹಾಗೆಯೇ 40 ಚಿತ್ರಗಳನ್ನು ನಿರ್ದೇಶಿಸಿದ್ದಾರೆ.ವಿಷ್ಣುವರ್ಧನ್‌ ನಟಿಸಿರುವ “ಡಿಸೆಂಬರ್‌ 31′ ಚಿತ್ರವನ್ನು ನಿರ್ದೇಶಿಸಿದ್ದರು. ಸೇತು, ಪಿತಾಮಗನ್‌, ಊರ್ಕಾವಲನ್‌, ಕಾತ್ರಿನ್‌ ಮೊಝಿ, ಚಕ್ರ ಅವರ ಸ್ಮರಣಾರ್ಹ ಸಿನೆಮಾಗಳು. ತಮಿಳು ಚಿತ್ರರಂಗದ ಎಲ್ಲ ಪ್ರಮುಖ ನಟರು ಮತ್ತು ಹಾಸ್ಯನಟರಿಗೆ ನಿರ್ದೇಶನ ಮಾಡಿದ್ದಾರೆ.

ನಟ ಶರತ್‌ ಬಾಬು ಇನ್ನು ನೆನಪು ಮಾತ್ರ(22/05/2023)
ತೆಲುಗು ಚಿತ್ರರಂಗದ ಖ್ಯಾತ ನಟ, ಕನ್ನಡದಲ್ಲೂ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಶರತ್‌ ಬಾಬು (71) ನಿಧನ ಹೊಂದಿದ್ದರು.

ಶರತ್‌ ಬಾಬು ಈಗ ನೆನಪು ಮಾತ್ರ. ತಮ್ಮ 40 ವರ್ಷದ ಸಿನಿಜರ್ನಿಯಲ್ಲಿ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂನಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದವರು ಶರತ್‌ ಬಾಬು.

ಜೂನ್-2023

ಚೆಲುವ ಚಿತ್ರದಲ್ಲಿ ನಟಿಸಿದ್ದ ಕಜಾನ್‌ ನಿಧನ(12/06/2023)
ಕನ್ನಡದ “ನಾಗದೇವತೆ’, “ಚೆಲುವ’ “ಹಲೋ ಡ್ಯಾಡಿ’ ಸಹಿತ ದಕ್ಷಿಣ ಭಾರತದ ಪ್ರಮುಖ ಭಾಷೆಗಳಲ್ಲಿ ಖಳ ನಟರಾಗಿ ನಟಿಸಿದ ಕಜಾನ್‌ ಖಾನ್‌ (45) ನಿಧನ ಹೊಂದಿದ್ದರು.

ಮಲಯಾಳ ಸಿನೆಮಾಗಳಲ್ಲಿ ಭಾರೀ ಖ್ಯಾತಿ ಪಡೆದಿದ್ದ ಅವರು ತಮಿಳು, ತೆಲುಗು ಸಿನೆಮಾಗಳಲ್ಲಿ ನಟಿಸಿದ್ದರು. ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು.

50ಕ್ಕಿಂತಲೂ ಅಧಿಕ ಸಿನೆಮಾಗಳಲ್ಲಿ ನಟಿಸಿರುವ ಅವರು 1992ರಲ್ಲಿ ಸೆಂತಮೈ ಪಾಜ್ಜು ಎಂಬ ಸಿನೆಮಾ ಮೂಲಕ ಸಿನೆಮಾ ರಂಗ ಪ್ರವೇಶ ಮಾಡಿದ್ದರು.

ಜುಲೈ -2023

ಹಿರಿಯ ಚಿತ್ರ ನಿರ್ಮಾಪಕ, ಪ್ರದರ್ಶಕ ಮೋಹನ್‌ ನಿಧನ(02/07/2023)

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ಪ್ರದರ್ಶಕ ಕೆ.ಸಿ.ಎನ್‌. ಮೋಹನ್‌(63) ಅವರು ನಿಧನ ಹೊಂದಿದ್ದರು.

ಬೆಂಗಳೂರಿನ ಊರ್ವಶಿ, ನವರಂಗ್‌ ಚಿತ್ರ ಮಂದಿರಗಳ ಮಾಲಕರಾಗಿದ್ದ ಅವರು “ಜೂಲಿ’, “ರಾಮ ರಾಜ್ಯದಲ್ಲಿ ರಾಕ್ಷಸರು’, “ಜಯ ಸಿಂಹ’, “ಧರ್ಮಯುದ್ಧ’, “ಭಲೇ ಚತುರ’ ಸಿನೆಮಾಗಳನ್ನು ನಿರ್ಮಾಣ ಮಾಡಿದ್ದರು.

ಆಗಸ್ಟ್- 2023

ನಟ ವಿಜಯ ರಾಘವೇಂದ್ರ ಪತ್ನಿ ನಿಧನ(07/08/2023)
ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ ಹೊಂದಿದ್ದರು. ಸ್ಪಂದನಾ ಹಾಗೂ ವಿಜಯ ರಾಘವೇಂದ್ರ ಅವರು ಪ್ರೀತಿಸಿ ಮದುವೆಯಾಗಿದ್ದರು. ಪತಿಯ ಪ್ರತಿ ಸಿನೆಮಾ ಕಾರ್ಯಕ್ರಮಗಳಿಗೆ ಬಂದು ಪ್ರೋತ್ಸಾಹಿಸುತ್ತಿದ್ದ ಸ್ಪಂದನಾ, ರವಿಚಂದ್ರನ್‌ ಅವರ “ಅಪೂರ್ವ’ ಸಿನೆಮಾದಲ್ಲಿ ನಟಿಸಿದ್ದರು.

ಇಲ್ಲಿ ವಿಜಯ ರಾಘವೇಂದ್ರರ ಪತ್ನಿ ಆಗಿಯೇ ತೆರೆಮೇಲೆ ಬಂದಿದ್ದರು. ಜತೆಗೆ “ಕಿಸ್ಮತ್‌’ ಎಂಬ ಸಿನೆಮಾವನ್ನು ನಿರ್ಮಿಸಿದ್ದು, ಅದರಲ್ಲಿ ವಿಜಯ ರಾಘವೇಂದ್ರ ನಾಯಕರಾಗಿ ನಟಿಸಿದ್ದಲ್ಲದೆ, ನಿರ್ದೇಶನವನ್ನೂ ಮಾಡಿದ್ದರು. ದಂಪತಿಗೆ ಶೌರ್ಯ ಎಂಬ ಮಗನಿದ್ದಾನೆ. 2007 ಆಗಸ್ಟ್‌ 26ರಂದು ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ಮದುವೆ ನೆರವೇರಿತ್ತು.

ಸೆಪ್ಟೆಂಬರ್- 2023

ನಟ, ನಿರ್ದೇಶಕ ಮಾರಿಮುತ್ತು ನಿಧನ(08/09/2023)
ತಮಿಳಿನ ಖ್ಯಾತ ನಟ, ನಿರ್ದೇಶಕ ಜಿ.ಮಾರಿಮುತ್ತು ಹೃದಯಾಘಾತದಿಂದ ಚೆನ್ನೈಯಲ್ಲಿ ನಿಧನ ಹೊಂದಿದ್ದರು.

ಮಾರಿಮುತ್ತು ಅವರು ಎರಡು ಚಿತ್ರಗಳನ್ನು ನಿರ್ದೇಶಿಸಿದ್ದು,”ಜೈಲರ್‌’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದರು.

ನಟ ರಿಯೋ ಕಪಾಡಿಯಾ ನಿಧನ(14/09/2023)
“ದಿಲ್‌ ಚಾಹ್ತಾ ಹೈ’, “ಚಕ್‌ ದೇ! ಇಂಡಿಯಾ’, “ಹ್ಯಾಪಿ ನ್ಯೂ ಇಯರ್‌’ ಮುಂತಾದ ಸಿನೆಮಾಗಳ ಮೂಲಕ ಮನೆ ಮಾತಾಗಿದ್ದ ಬಾಲಿವುಡ್‌ ನಟ ರಿಯೋ ಕಪಾಡಿಯಾ(66) ನಿಧನ ಹೊಂದಿದ್ದರು.

ಸಿನೆಮಾಗಳು ಮಾತ್ರವಲ್ಲದೇ ಹಲವು ಧಾರಾವಾಹಿಗಳಲ್ಲೂ ಕಪಾಡಿಯಾ ಅವರು ಪೋಷಕ ಪಾತ್ರಗಳನ್ನು ಮಾಡಿದ್ದರು.

ತ್ರಿ ಈಡಿಯಟ್ಸ್‌ ನಟ ಅಖಿಲ್ ನಿಧನ(21/09/2023)
ಖ್ಯಾತ ಬಾಲಿವುಡ್‌ ನಟ ಆಮೀರ್‌ ಖಾನ್‌ ಅವರ ಜತೆಗೆ “ತ್ರೀ ಈಡಿಯಟ್ಸ್‌’ ಸಹ ನಟರಾಗಿ ಕೆಲಸ ಮಾಡಿದ್ದ ಅಖಿಲ್ ಮಿಶ್ರಾ (67) ಅವರು ನಿಧನ ಹೊಂದಿದ್ದರು.

ತ್ರಿ ಈಡಿಯಟ್ಸ್‌ ಚಿತ್ರದಲ್ಲಿ ಲೈಬ್ರೆರಿಯನ್‌ ಪಾತ್ರದಲ್ಲಿ ಅಭಿನಯಿಸಿದ್ದ ಮಿಶ್ರಾ.

ಹ್ಯಾರಿಪಾಟರ್‌ ನಟ ಗ್ಯಾಂಬೊನ್‌ ನಿಧನ(27/09/2023)
ಹಾಲಿವುಡ್‌ನ‌ ಖ್ಯಾತ ಹಿರಿಯ ನಟ ಮೈಕೆಲ್‌ ಗ್ಯಾಂಬೊನ್‌ ನಿಧನ ಹೊಂದಿದ್ದರು. ಮೈಕೆಲ್‌ ಗ್ಯಾಂಬೊನ್‌ ಅವರು “ಹ್ಯಾರಿ ಪಾಟರ್‌’ ಸರಣಿಯ ಸಿನೆಮಾಗಳಿಂದ ಖ್ಯಾತರಾಗಿದ್ದರು.

ಆ ಸಿನೆಮಾಗಳಲ್ಲಿ “ಪ್ರೊಣ ಡಂಬಲ್‌ ಡೋರ್‌’ ಪಾತ್ರದಿಂದ ಅವರು ಮನೆ ಮಾತಾಗಿದ್ದರು. ಸುಮಾರು ಐದು ದಶಕಗಳು ಹಾಲಿವುಡ್‌ ಸಿನೆ ಕ್ಷೇತ್ರದಲ್ಲಿ ಅವರು ಕೆಲಸ ಮಾಡಿದ್ದರು.

ಅಕ್ಟೋಬರ್- 2023

ಖ್ಯಾತ ನಟ ಮ್ಯಾಥ್ಯೂ ಪೆರ್ರಿ ನಿಧನ(28/10/2023)
ಟಿವಿ ಶೋ “ಫ್ರೆಂಡ್ಸ್‌’ ಖ್ಯಾತಿಯ ನಟ ಮ್ಯಾಥ್ಯೂ ಪೆರ್ರಿ ಅಮೆರಿಕದ ಲಾಸ್‌ ಏಂಜಲೀಸ್‌ನ ತಮ್ಮ ಮನೆಯಲ್ಲಿ ನಿಧನ ಹೊಂದಿದ್ದರು.

ಕೆನೆಡಿಯನ್‌ ಮತ್ತು ಅಮೆರಿಕನ್‌ ಪೋಷಕರಿಗೆ ಮಸ್ಯಾಚುಸೆಟ್ಸ್‌ನಲ್ಲಿ ಜನಿಸಿದ ಪೆರ್ರಿ, ಕೆನಡಾದಲ್ಲಿ ಬೆಳೆದು, ಅನಂತರ ಲಾಸ್‌ ಏಂಜೆಲೀಸ್‌ಗೆ ಬಂದು ನೆಲೆಸಿದ್ದರು. ಹತ್ತು ಸೀಸನ್‌ಗಳಲ್ಲಿ ಪ್ರಸಾರವಾದ ಟಿವಿ ಶೋ “ಫ್ರೆಂಡ್ಸ್‌’ನಿಂದ ಪೆರ್ರಿ ಪ್ರಸಿದ್ಧರಾಗಿದ್ದರು. ಈ ಶೋ 1994ರಿಂದ 2004ರ ವರೆಗೆ ಪ್ರಸಾರ ವಾಗಿತ್ತು. ಚಾಂಡ್ಲರ್‌ ಬಿಂಗ್‌ ಎಂಬ ಪಾತ್ರದಲ್ಲಿ ಇವರು ಕಾಣಿಸಿಕೊಂಡು ಮನೆ ಮಾತಾಗಿದ್ದರು.

ಮಲಯಾಳಂ ನಟಿ ನೇಣಿಗೆ ಶರಣು(30/10/2023)
ಮಲಯಾಳಂ ನಟಿ ರೆಂಜುಶಾ (35) ಮೆನನ್‌ ಅವರು ತಿರುವನಂತಪುರದ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು.

ಕೊಚ್ಚಿ ಮೂಲದ ರೆಂಜುಶಾ ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟು ಬಳಿಕ ಹಲವು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದರು. ಸಿನೆಮಾಗಳಲ್ಲೂ ಹಲವು ಪಾತ್ರಗಳಿಗೆ ಜೀವ ತುಂಬಿದ್ದ ಆಕೆ ಇತ್ತೀಚೆಗಷ್ಟೇ ಧಾರವಾಹಿಗಳ ನಿರ್ಮಾಪಕಿಯಾಗಿ ಹೆಜ್ಜೆ ಇರಿಸಿದ್ದರು.

ನವೆಂಬರ್-2023

ಮಲಯಾಳಂ ನಟಿ ಡಾ. ಪ್ರಿಯಾ ನಿಧನ(01/11/2023)

ಮಲಯಾಳಂ ನಟಿ ಡಾ. ಪ್ರಿಯಾ(35) ಹೃದಯಾಘಾತದಿಂದ ಬುಧವಾರ ನಿಧನ ಹೊಂದಿದ್ದರು. ಡಾ. ಪ್ರಿಯಾ ಅವರು ಹಲವು ಮಲಯಾಳಂ ಧಾರವಾಹಿಗಳಲ್ಲಿ ನಟಿಸುತ್ತಿದ್ದರು.

ಪೋಷಕ ನಟ ಚಂದ್ರಮೋಹನ್‌ ನಿಧನ(11/11/2023)
ತೆಲುಗು ಸಿನೆಲೋಕದ ಹಿರಿಯ ಪೋಷಕ ನಟ ಚಂದ್ರಮೋಹನ್‌ (84) ಹೃದಯಾಘಾತದಿಂದ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನ ಹೊಂದಿದ್ದರು.

ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸಿರಿಸಿರಿಮುವ್ವ, ಶಂಕರಾಭರಣಂ, ರಾಧಾಕಲ್ಯಾಣಂ ಸೇರಿದಂತೆ ಅನೇಕ ತೆಲುಗು ಸಿನೆಮಾಗಳಲ್ಲಿ ಪೋಷಕ ನಟರಾಗಿ ಚಂದ್ರಮೋಹನ್‌ ಅದ್ಭುತ ನಟನೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದರು.

ಧೂಮ್‌ ನಿರ್ದೇಶಕ ಗಡ್ವಿ ನಿಧನ(19/11/2023)
ಬಾಲಿವುಡ್‌ನ‌ “ಧೂಮ್‌’ ಖ್ಯಾತಿಯ ನಿರ್ದೇಶಕ ಸಂಜಯ್‌ ಗಡ್ವಿ ಮುಂಬಯಿಯ ತಮ್ಮ ನಿವಾಸದಲ್ಲಿ ರವಿವಾರ ಬೆಳಗ್ಗೆ ನಿಧನ ಹೊಂದಿದ್ದರು.

ಯಶ್‌ ರಾಜ್‌ ಫಿಲ್ಮ್ಸ್ ನಿರ್ಮಾಣದಲ್ಲಿ ಸಂಜಯ್‌ ಅವರು ನಿರ್ದೇಶಿಸಿದ್ದ “ಧೂಮ್‌’ ಮತ್ತು “ಧೂಮ್‌ 2′ ಸಿನೆಮಾಗಳು ಆಲ್‌ ಟೈಮ್‌ ಹಿಟ್‌ ಆಗಿದ್ದವು. 2000ರಲ್ಲಿ “ತೇರೆಲಿಯೆ’ ಸಿನೆಮಾದ ಮೂಲಕ ಸಂಜಯ್‌ ನಿರ್ದೇಶಕರಾಗಿ ಬಾಲಿವುಡ್‌ ಪ್ರವೇಶಿಸಿದರು.

ಡಿಸೆಂಬರ್-2023

ಹಿರಿಯ ನಟಿ ಲೀಲಾವತಿ ನಿಧನ(08/12/2023)
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಕನ್ನಡ ಚಿತ್ರರಂಗದ ಹಿರಿಯ ನಟಿ, 600ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದ ಲೀಲಾವತಿ (85) ಶುಕ್ರವಾರ ನಿಧನ ಹೊಂದಿದ್ದರು.

ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ನಾಯಕಿಯಾಗಿ ತನ್ನದೇ ಆದ ಛಾಪು ಮೂಡಿಸಿದ್ದ ಹಿರಿಯ ನಟಿ ಲೀಲಾವತಿ ಇನ್ನು ನೆನಪು ಮಾತ್ರ.

ಕನ್ನಡ ಚಿತ್ರರಂಗದ ಜತೆಗೆ ತಮಿಳು, ತೆಲುಗು, ಮಲಯಾಳ, ಹಿಂದಿ ಚಿತ್ರರಂಗಗಳಲ್ಲೂ ಗುರುತಿಸಿಕೊಂಡು ಬರೋಬ್ಬರಿ 650ಕ್ಕೂ ಅಧಿಕ ಸಿನೆಮಾಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಲೀಲಾವತಿ ಅವರದ್ದು. ಕಡು ಬಡತನದ ಬಾಲ್ಯದಲ್ಲೇ ಬಣ್ಣಲೋಕಕ್ಕೆ ಕಾಲಿಟ್ಟ ಲೀಲಾವತಿ ನಾಯಕ ನಟಿಯಿಂದ ಪೋಷಕ ನಟಿಯವರೆಗೆ ನೂರಾರು ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದ ಅಪರೂಪದ ಕಲಾವಿದೆ.

ಬಾಲಿವುಡ್‌ ನಟ ಜ್ಯೂ.ಮೆಹಮೂದ್ ನಿಧನ(08/12/2023)
ಜ್ಯೂನಿಯರ್‌ ಮೆಹಮೂದ್ ಎಂದೇ ಜನಪ್ರಿಯರಾಗಿದ್ದ ಬಾಲಿವುಡ್‌ ನಟ ನಯೀಮ್‌ ಸಯ್ಯದ್‌ ಕ್ಯಾನ್ಸರ್‌ನಿಂದ ನಿಧನ ಹೊಂದಿದ್ದರು.

ಕ್ಯಾರಾವಾನ್‌, ಮೇರಾ ನಾಮ್‌ ಜೋಕರ್‌ ಚಿತ್ರಗಳ ಮೂಲಕ ಜನಪ್ರಿಯರಾಗಿದ್ದರು.

ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್‌ ನಿಧನ(27/12/2023)
ಕನ್ನಡ ಸೇರಿದಂತೆ ದಕ್ಷಿಣ ಭಾರತದ ಸಿನಿರಂಗದಲ್ಲಿ ನೂರಾರು ಸಿನಿಮಾಗಳಲ್ಲಿ ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ್ದ ಜಾಲಿ ಬಾಸ್ಟಿನ್(57) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸಾಹಸ ನಿರ್ದೇಶನ ಹಾಗೂ ಸಾಹಸ ಕಲಾವಿದನಾಗಿ ಕನ್ನಡ ಮಾತ್ರವಲ್ಲದೆ, ತಮಿಳು, ಮಲಯಾಳಂ, ತೆಲುಗು ಹಾಗೂ ಹಿಂದಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡ ಅವರು ಸುಮಾರು 900 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

ತಮಿಳು ಚಿತ್ರರಂಗದ ಹಿರಿಯ ನಟ ವಿಜಯಕಾಂತ್ ವಿಧಿವಶ(28/12/2023)

ತಮಿಳು ಚಿತ್ರರಂಗದ ಸೂಪರ್ ಸ್ಟಾರ್, ಡಿಎಂಡಿಕೆ ನಾಯಕ ವಿಜಯಕಾಂತ್ (71) ಅವರು ಗುರುವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.  ಅವರು ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದು 154 ಚಿತ್ರಗಳಲ್ಲಿ ನಟಿಸಿದ್ದಾರೆ.

ಟಾಪ್ ನ್ಯೂಸ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರಾಧ ಜಗತ್ತಿನಲ್ಲಿ 2023ರ ತಲ್ಲಣ; ಸೈಬರ್‌ ವಂಚನೆಗಿಲ್ಲ ಕಡಿವಾಣ

ಅಪರಾಧ ಜಗತ್ತಿನಲ್ಲಿ 2023ರ ತಲ್ಲಣ; ಸೈಬರ್‌ ವಂಚನೆಗಿಲ್ಲ ಕಡಿವಾಣ

3–recap

2023 Recap: ವಿನೋದ-ವಿವಾದಗಳ ಸಾಗರ

2023 Recap: ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ CNG ಕಾರುಗಳು

2023 Recap: ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ CNG ಕಾರುಗಳು

2023 Flashback: ಭಾರತದಲ್ಲಿ ಬಿಡುಗಡೆಯಾದ ಅತ್ಯುತ್ತಮ ಎಲೆಕ್ಟ್ರಿಕ್ ಕಾರುಗಳಿವು…

2023 Flashback: ಭಾರತದಲ್ಲಿ ಬಿಡುಗಡೆಯಾದ ಅತ್ಯುತ್ತಮ ಎಲೆಕ್ಟ್ರಿಕ್ ಕಾರುಗಳಿವು…

2023 Recap; ಸಿಹಿ-ಕಹಿ ನೆನಪುಗಳ ಆಗರ

2023 Recap; ಸಿಹಿ-ಕಹಿ ನೆನಪುಗಳ ಆಗರ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.