2023 Recap: ವರ್ಷ ಕಾದರೂ ಥಿಯೇಟರ್‌ ದರ್ಶನ ನೀಡದ ಸೌತ್‌ ಸ್ಟಾರ್‌ ಗಳು!

ಗ್ಲೋಬಲ್ ‌ಲೆವೆಲ್ ನಲ್ಲಿ ರಾಮ್ ಚರಣ್ ಅವರ ಹೆಸರು ಕೇಳಿ ಬಂದಿತ್ತು

Team Udayavani, Dec 28, 2023, 7:01 PM IST

td-y-14

ಈ ವರ್ಷ ದಕ್ಷಿಣ ಸಿನಿರಂಗದಲ್ಲಿ ಬಾಕ್ಸ್ ಆಫೀಸ್ ವಿಚಾರದಲ್ಲಿ ಕೆಲ ಸಿನಿಮಾಗಳು ಸದ್ದು ಮಾಡಿವೆ. ರಜಿನಿಕಾಂತ್, ದಳಪತಿ ವಿಜಯ್ ಹೀಗೆ ಸೌತ್ ಸೂಪರ್ ಸ್ಟಾರ್ ಗಳ ಸಿನಿಮಾಗಳ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಕಾಣುವುದರ ಜೊತೆಗೆ ಸಿನಿ ರಸಿಕರ ಮನಗೆದ್ದಿದೆ.

ಆದರೆ ಈ ವರ್ಷ ಕೆಲ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗಿಲ್ಲ. ಅಭಿಮಾನಿಗಳು ಅವರ ಸಿನಿಮಾಗಳ ಅಪ್ಡೇಟ್ ಗಳನ್ನು ಕಾದು ಕಾದೇ ವರ್ಷವನ್ನೇ ಕಳೆದು ಬಿಟ್ಟಿದ್ದಾರೆ. ಹಾಗಾದರೆ ಬನ್ನಿ ಯಾವೆಲ್ಲ ಸ್ಟಾರ್ ಗಳು ಈ ವರ್ಷ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳದೆ ಇದ್ರು ಟ್ರೆಂಡ್ ನಲ್ಲಿದ್ದರು ಎನ್ನುವುದರ ಕಿರು ಚಿತ್ರಣ ಇಲ್ಲಿದೆ…

ಅಲ್ಲು ಅರ್ಜುನ್:

ಸ್ಟೈಲಿಸ್ಟ್ ಅಲ್ಲು ಅರ್ಜುನ್ ಅವರಿಗೆ ಈ ವರ್ಷ ವೃತ್ತಿ ಬದುಕಿನ ವಿಶೇಷ ವರ್ಷವಾಗಿದೆ. ‘ಪುಷ್ಪ’ ಸಿನಿಮಾದ ಬಳಿಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವುದು ಗೊತ್ತೇ ಇದೆ. ‘ಪುಷ್ಪ’ ಸಿನಿಮಾದಲ್ಲಿನ ಅವರ ನಟನೆಗೆ ರಾಷ್ಟ್ರ ಪ್ರಶಸ್ತಿ ಸಂದಿದ್ದು, ಈ ವರ್ಷ ಅವರನ್ನು ಟಾಕ್ ಆಫ್ ದಿ ಟೌನ್ ಆಗಿಸಿತ್ತು.

ಇದಲ್ಲದೆ ಅವರ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ‘ಪುಷ್ಪ-2’ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಹಾಗೂ ತ್ರಿವಿಕ್ರಮ್ ಶ್ರೀನಿವಾಸ್, ಅಟ್ಲಿ, ಸಂದೀಪ್ ವಂಗಾ ರೆಡ್ಡಿ  ಅವರೊಂದಿಗಿನ ಸಿನಿಮಾ ಮಾಡುತ್ತಾರೆ ಎನ್ನುವ ವಿಚಾರದಿಂದ ಈ ವರ್ಷ ಅಲ್ಲು ಅರ್ಜುನ್ ಯಾವ ಸಿನಿಮಾ ರಿಲೀಸ್ ಇಲ್ಲದೆಯೂ ಅಭಿಮಾನಿಗಳ ವಲಯದಲ್ಲಿ ಚರ್ಚೆಯಲ್ಲಿದ್ದರು.

ರಾಮ್ ಚರಣ್:

ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಅವರ ಯಾವ ಸಿನಿಮಾ ಕೂಡ ಈ ವರ್ಷ ರಿಲೀಸ್ ಆಗಿಲ್ಲ. ‘ಆರ್ ಆರ್ ಆರ್’ ಹಾಗೂ ‘ಆಚಾರ್ಯ’ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ಅವರ ಮುಂದಿನ ಸಿನಿಮಾದ ಚರ್ಚೆ ಟಾಲಿವುಡ್ ನಲ್ಲಿ ಕುತೂಹಲ ಹೆಚ್ಚಿಸಿದೆ. ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ರಾಮ್ ಚರಣ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಪೋಸ್ಟರ್ ಹಾಗೂ ಸಿನಿಮಾದ ಹಾಡು ರಿಲೀಸ್ ಆಗುವ ವಿಚಾರದಿಂದ ರಾಮ್ ಚರಣ್ ಸುದ್ದಿಯಲ್ಲಿದ್ದರು.

‘ನಾಟು ನಾಟು’ ಹಾಡಿಗೆ ಆಸ್ಕರ್ ಗೆದ್ದ ಬಳಿಕ ಗ್ಲೋಬಲ್ ‌ಲೆವೆಲ್ ನಲ್ಲಿ ರಾಮ್ ಚರಣ್ ಅವರ ಹೆಸರು ಕೇಳಿ ಬಂದಿತ್ತು.

ಸೂರ್ಯ:

ಈ ವರ್ಷ ನಟ ಸೂರ್ಯ ಅವರ ಯಾವ ಸಿನಿಮಾ ಕೂಡ ರಿಲೀಸ್ ಆಗಿಲ್ಲ. ಆದರೆ ಸೂರ್ಯ ತನ್ನ ‌ಮುಂದಿನ ಸಿನಿಮಾದಿಂದ ಇಂಟರ್ ನೆಟ್ ನಲ್ಲಿ ಸುದ್ದಿಯಲ್ಲಿದ್ದರು.

2022 ರಲ್ಲಿ ಸೂರ್ಯ ‘ ‘ಎತರ್ಕ್ಕುಂ ತೂನಿಂಧವನ್’ , ‘ರಾಕ್ರೆಟ್ರಿ ದಿ ನಂಬಿ ಎಫೆಕ್ಟ್’ ಹಾಗೂ ‘ವಿಕ್ರಮ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸೂರ್ಯ ವೃತ್ತಿ ಬದುಕಿನ ದೊಡ್ಡ ಸಿನಿಮಾವೆಂದು ಹೇಳಲಾಗುತ್ತಿರುವ ‘ಕಂಗುವ’ ಸಿನಿಮಾದ ಪೋಸ್ಟರ್ ನಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಸದ್ಯ ಇದರ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಜೂ.ಎನ್.ಟಿಆರ್:

ರಾಮ್ ಚರಣ್ ನಂತೆ‌ ‘ಆರ್ ಆರ್ ಆರ್’ ಮೂಲಕವೇ ಈ ವರ್ಷ ಜೂ. ಎನ್.ಟಿ.ಆರ್ ಸುದ್ದಿಯಲ್ಲಿದ್ದರು. ಇದು ಬಿಟ್ಟರೆ ಅವರ ಮುಂದಿನ ಸಿನಿಮಾ ‘ದೇವರ’ ಟಾಲಿವುಡ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ‘ದೇವರ’ ಎರಡು ಪಾರ್ಟ್ ಗಳಲ್ಲಿ ತೆರೆ ಕಾಣಲಿದೆ ಎನ್ನುವ ವಿಚಾರವನ್ನು ಚಿತ್ರತಂಡ ಈಗಾಗಲೇ ಅನೌನ್ಸ್ ಮಾಡಿದೆ.

ಜಾಹ್ನವಿ‌ ಕಪೂರ್ , ಸೈಫ್ ಆಲಿಖಾನ್ ಈ‌ ಸಿನಿಮಾದಲ್ಲಿ ‌ನಟಿಸುವ ಮೂಲಕ ಸೌತ್ ಗೆ ಎಂಟ್ರಿ ಕೊಡಲಿದ್ದಾರೆ. ಸದ್ಯ ಚಿತ್ರೀಕರಣ ನಡೆಯುತ್ತಿದ್ದು, ಏಪ್ರಿಲ್ 5 ಕ್ಕೆ ಮೊದಲ ಭಾಗ ರಿಲೀಸ್ ಆಗಲಿದೆ ಎನ್ನಲಾಗಿದೆ.

ಶೀಘ್ರದಲ್ಲಿ ‘ದೇವರ’ ಟೀಸರ್ ಬಿಡುಗಡೆ ಆಗಲಿದೆ‌ ಎನ್ನುವ ವಿಚಾರ ಟಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ.

ಮಹೇಶ್ ಬಾಬು:

ಅಂದುಕೊಂಡಂತೆ ಆಗಿದ್ದರೆ ಪ್ರಿನ್ಸ್ ಮಹೇಶ್ ಬಾಬು ಅವರ ‘ ‘ಗುಂಟೂರು ಕಾರಂ’ ಸಿನಿಮಾ ಇದೇ ವರ್ಷ ತೆರೆ ಕಾಣಬೇಕಿತ್ತು ಆದರೆ ಕಾರಣಾಂತರಗಳಿಂದ ಸಿನಿಮಾ ಮುಂದಿನ ವರ್ಷದ ಸಂಕ್ರಾಂತಿಗೆ ರಿಲೀಸ್ ಆಗುವುದಾಗಿ ಚಿತ್ರತಂಡ ಅನೌನ್ಸ್ ಮಾಡಿದೆ. ಅದರಂತೆ ಸಿನಿಮಾದ ಎರಡು ಹಾಡುಗಳನ್ನು ರಿಲೀಸ್ ಮಾಡಿ ಪ್ರೇಕ್ಷಕರ ಗಮನ ಸೆಳೆದಿದೆ. ‘ಓ‌ ಮೈ ಬೇಬಿ’ ಹಾಡು ಇಂಟರ್ ನೆಟ್ ನಲ್ಲಿ ಸಖತ್ ಸೌಂಡ್ ಮಾಡಿದೆ.

ತ್ರಿವಿಕ್ರಮ್ ಶ್ರಿನಿವಾಸ್ ಅವರ ಈ ಸಿನಿಮಾದಲ್ಲಿ ಮಹೇಶ್ ಬಾಬು, ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ಅವರಲ್ಲದೇ,  ಜಗಪತಿ ಬಾಬು, ರಮ್ಯಾ ಕೃಷ್ಣನ್, ಜಯರಾಮ್ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಾಗಾರ್ಜುನ್ :

ಟಾಲಿವುಡ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ್ ಈ ವರ್ಷ  ಬಿಗ್ ಬಾಸ್ ತೆಲುಗು ನಿರೂಪಣೆ ಮಾಡಿ ಅಭಿಮಾನಿಗಳ ವಲಯದಲ್ಲಿ ಟ್ರೆಂಡ್ ನಲ್ಲಿದ್ದರು. ಆದರೆ ಥಿಯೇಟರ್ ನಲ್ಲಿ ಅವರ ಯಾವ ಸಿನಿಮಾ ಕೂಡ ಈ ವರ್ಷ ತೆರೆ ಕಂಡಿಲ್ಲ. ಅವರ ಹುಟ್ಟುಹಬ್ಬದಂದು 99ನೇ ಸಿನಿಮಾ ಅನೌನ್ಸ್ ಆಗಿದೆ. ಈ‌ ಸಿನಿಮಾಕ್ಕೆ ‘ನಾ ಸಾಮಿ ರಂಗ’ ಎಂದು ಟೈಟಲ್ ಇಡಲಾಗಿದೆ. ಇದರ ಫಸ್ಟ್‌ ಲುಕ್ ಸಖತ್ ಗಮನ ಸೆಳೆದಿದೆ.

2024 ರ ಜನವರಿ 24 ರಂದು ಸಿನಿಮಾ ತೆರೆ ಕಾಣಲಿದೆ.

ಯಶ್ : 

ಸ್ಯಾಂಡಲ್ ವುಡ್ ಮಾತ್ರವಲ್ಲದೆ ‘ಕೆಜಿಎಫ್’ 1,2 ಬಳಿಕ ಪ್ಯಾನ್ ಇಂಡಿಯಾದ ಸಿನಿ ಪ್ರೇಕ್ಷಕರು ರಾಕಿಂಗ್ ಸ್ಟಾರ್ ಯಶ್ ಅವರ ‘ಯಶ್ 19’ ಸಿನಿಮಾಕ್ಕೆ ಕಾಯುತ್ತಿದ್ದರು. ಇಂದು ಬರುತ್ತದೆ ನಾಳೆ ಬರುತ್ತದೆ ಎಂದು 20 ತಿಂಗಳಿನಿಂದ ಕಾಯುತ್ತಾ ಕೂತ ಅಭಿಮಾನಿಗಳಿಗೆ ಅಂತೂ ರಾಕಿಂಗ್ ಸ್ಟಾರ್ ಈ ವರ್ಷವೇ ಬಿಗ್ ನ್ಯೂಸ್ ಕೊಟ್ಟಿದ್ದಾರೆ.

ವರ್ಷವಿಡೀ ಸಿನಿಮಾ ರಿಲೀಸ್ ಇಲ್ಲದೆ ಇದ್ರು, ‘ಯಶ್ 19’ ಆಗಾಗ ಟ್ರೆಂಡಿಂಗ್ ಆಗುತ್ತಲೇ ಅದರಂತೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಅವರೊಂದಿಗೆ ಯಶ್ ‘ಟಾಕ್ಸಿಕ್’ ಸಿನಿಮಾವನ್ನು ಮಾಡಲಿದ್ದಾರೆ. ಈ ಸಿನಿಮಾ ಏಪ್ರಿಲ್ 10, 2025 ರಂದು ರಿಲೀಸ್ ಆಗಲಿದೆ.

ಕಮಲ್ ಹಾಸನ್:

ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ಯಾವ ಸಿನಿಮಾನೂ ಈ ವರ್ಷ ರಿಲೀಸ್ ಆಗಿಲ್ಲ. ಆದರೆ ‘ಲಿಯೋ’ ಸಿನಿಮಾದಲ್ಲಿ ಅವರು ಹಿನ್ನೆಲೆ ಧ್ವನಿಯನ್ನು ‌ನೀಡಿದ್ದಾರೆ. 36 ವರ್ಷಗಳ ಬಳಿಕ ಮಣಿರತ್ನಂ ಅವರೊಂದಿಗೆ ಸಿನಿಮಾ ಮಾಡುತ್ತಿದ್ದು, ‘ಥಗ್ ಲೈಫ್’ ಎನ್ನುವ ಟೈಟಲ್ ಅನೌನ್ಸ್ ಮೆಂಟ್ ವಿಡಿಯೋ ವೈರಲ್ ಆಗಿತ್ತು.

ಇದರೊಂದಿಗೆ ಶಂಕರ್ ಅವರೊಂದಿಗೆ ಬಹು ನಿರೀಕ್ಷಿತ ‘ಇಂಡಿಯನ್ -2’ ಸಿನಿಮಾ ಕೂಡ ಚಿತ್ರೀಕರಣದ ಹಂತದಲ್ಲೇ ಗಮನ ಸೆಳೆಯುತ್ತಿದೆ.

ತಮಿಳು ಬಿಗ್ ಬಾಸ್ ನಡೆಸಿಕೊಡುವ ಮೂಲಕ ಕಮಲ್ ಹಾಸನ್ ಸುದ್ದಿಯಾಗಿದ್ದರು.

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

Food

2024ರಲ್ಲಿ ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟ ಟಾಪ್-10 ರೆಸಿಪಿ ಯಾವುದು ಗೊತ್ತಾ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.