Rewind: 2024ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುದು? ಓದಿ ವರದಿ

2024ರಲ್ಲಿ ಅಟೋಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ...

Team Udayavani, Dec 12, 2024, 1:37 PM IST

Year Ender: 2024 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುದು? ಓದಿ ವರದಿ

ಮೊನ್ನೆ ಮೊನ್ನೆಯಷ್ಟೇ 2024ರ ವರುಷವನ್ನು ಬರಮಾಡಿಕೊಂಡ ನಾವು ಇದೀಗ ವರ್ಷದ ಕೊನೆಯ ತಿಂಗಳಲ್ಲಿ ಇದ್ದೇವೆ ನೋಡ ನೋಡುತ್ತಿದ್ದಂತೆ ದಿನಗಳು, ವಾರಗಳು, ತಿಂಗಳು ಉರುಳಿದ್ದೇ ಗೊತ್ತಾಗಲಿಲ್ಲ ಇದರ ನಡುವೆ ಈ ವರ್ಷದಲ್ಲಿ ಏನೇನೆಲ್ಲಾ ಪ್ರಮುಖ ಘಟನೆಗಳು ನಡೆದಿದೆ ಎಂಬುದು ನಮಗೆ ಗೊತ್ತಿರುವ ವಿಚಾರ ಆದರೂ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳುವುದು ಅಗತ್ಯ. 2024ರಲ್ಲಿ ಅಟೋಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ ಜೊತೆಗೆ ಹೊಸ ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ, ಇದರ ಜೊತೆಗೆ ಈ ಹಿಂದೆ ಇದ್ದ ಕೆಲ ಕಾರುಗಳೇ ಹೊಸ ವಿನ್ಯಾಸದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿ ಗ್ರಾಹಕರನ್ನು ಸೆಳೆಯುತ್ತಿದ್ದು ಈ ನಡುವೆ ರಸ್ತೆಗಳಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳು ಓಡಾಡುತ್ತಿವೆ.

ಭಾರತೀಯ ವಾಹನ ತಯಾರಕರು ಈ ವರ್ಷದ ನವೆಂಬರ್ ವರೆಗೆ ಮಾರಾಟವಾದ ಕಾರುಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ಬನ್ನಿ ಹಾಗಾದರೆ ಈ ವರ್ಷ(2024) ಮಾರುಕಟ್ಟೆಗೆ ಬಂದ ಕಾರುಗಳಲ್ಲಿ ಯಾವ ಕಾರು ಹೆಚ್ಚು ಮಾರಾಟವಾಗಿದೆ ಎಂಬುದರ ವಿವರ ತಿಳಿದುಕೊಂಡು ಬರೋಣ ಬನ್ನಿ …

1. ಮಾರುತಿ ಸುಜುಕಿ ಬಲೆನೋ (Maruti Baleno):
ಮಾರುತಿ ಸುಜುಕಿ ಬಲೆನೊ “ನವೆಂಬರ್ 2024 ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ” ಅಗ್ರಸ್ಥಾನ ಪಡೆದುಕೊಂಡಿದೆ ಎಂದು ಇತ್ತೀಚಿನ ಮಾರಾಟ ವರದಿ ಹೇಳುತ್ತದೆ. ಕಳೆದ 2 ತಿಂಗಳಿಂದ ನಿರಂತರವಾಗಿ ಹೆಚ್ಚು ಮಾರಾಟವಾಗುವ ಮೂಲಕ ಮೊದಲ ಸ್ಥಾನವನ್ನು ಅಲಂಕರಿಸಿಕೊಂಡಿದೆ.

ಮಾರುತಿ ಸುಜುಕಿ ಕಳೆದ ವರ್ಷ(2023) 12,961 ಕಾರುಗಳನ್ನು ಮಾರಾಟ ಮಾಡಿದ್ದು, ಈ ವರ್ಷ 16, 293 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಅದ್ಬುತ ಸಾಧನೆ ಮಾಡಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 3,332 ಹೆಚ್ಚು ಕಾರುಗಳನ್ನು ಮಾರಾಟ ಮಾಡಿವೆ.

2. ಹುಂಡೈ ಕ್ರೆಟಾ (Hyundai Creta)
ಮಾರುಕಟ್ಟೆಯಲ್ಲಿ ಮಾರಾಟವಾದ ಕಾರುಗಳಲ್ಲಿ ಹ್ಯುಂಡೈ ಕ್ರೆಟಾ ಎರಡನೇ ಸ್ಥಾನವನ್ನು ಅಲಂಕರಿಸಿದೆ, ಮಾರುತಿ ಸುಜುಕಿ ಕಳೆದ ವರ್ಷ(2023) 11, 814 ಕಾರುಗಳನ್ನು ಮಾರಾಟ ಮಾಡಿದ್ದು ಈ ವರ್ಷದ ನವೆಂಬರ್ ವೇಳೆಗೆ ಬರೋಬ್ಬರಿ 15, 452 ಕಾರುಗಳು ಮಾರಾಟವಾಗುವ ಮೂಲಕ ಎರಡನೇ ಸ್ಥಾನದಲ್ಲಿದೆ.

3. ಟಾಟಾ ಪಂಚ್ (Tata Punch)
ಕೇವಲ 6.13 ಲಕ್ಷಕ್ಕೆ ಸಿಗುವ ಸೇಫ್ಟಿ ಫೀಚರ್ಸ್‌ಗಳಿಂದ ಕೂಡಿದ ಟಾಟಾ ಪಂಚ್ ಒಟ್ಟು 15, 435 ಕಾರುಗಳನ್ನು ಮಾರಾಟ ಮಾಡುವುದರೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷ, ಪಂಚ್ ಸುಮಾರು 14, 383 ಯೂನಿಟ್ ಗಳನ್ನು ಮಾರಾಟ ಮಾಡಿತ್ತು.

4. ಟಾಟಾ ನೆಕ್ಸಾನ್ (Tata Nexon)
ಸುರಕ್ಷಿತ ಕಾರು ತಯಾರಿಕೆಗೆ ಹೆಸರುವಾಸಿಯಾದ ಟಾಟಾ ಮೋಟಾರ್ಸ್ ನ ನೆಕ್ಸಾನ್ ಕಾರು ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದು, ಈ ವರ್ಷ ಸುಮಾರು 15,329 ಕಾರುಗಳನ್ನು ಮಾರಾಟ ಮಾಡಿದೆ, ಸುರಕ್ಷತೆ, ತಂತ್ರಜ್ಞಾನವನ್ನು ಆಧರಿಸಿ ಕಾರು ಖರೀದಿಸುವವರಿಗೆ ನೆಕ್ಸಾನ್ ಸೂಕ್ತ ಆಯ್ಕೆಯಾಗಿದೆ.

5. ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga)
ಭಾರತದಲ್ಲಿ ಮಾರಾಟವಾದ ಕಾರುಗಳಲ್ಲಿ ಮಾರುತಿ ಸುಜುಕಿ ಎರ್ಟಿಗಾ ಐದನೇ ಸ್ಥಾನದಲ್ಲಿದ್ದು ಕಳೆದ ವರ್ಷ 12,857 ಕಾರುಗಳನ್ನು ಮಾರಾಟ ಮಾಡಿದ್ದು, ಈ ವರ್ಷ 15,150 ಕಾರುಗಳನ್ನು ಮಾರಾಟ ಮಾಡಿದೆ. ಅದರಂತೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 2,293 ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ. ಅಲ್ಲದೆ ಏಳು ಜನ ಪ್ರಯಾಣಿಸಲು ಹೇಳಿ ಮಾಡಿಸಿದ ವಾಹನವಾಗಿದೆ.

6. ಮಾರುತಿ ಸುಜುಕಿ ಬ್ರೆಝಾ (Maruti Suzuki Brezza)
ಭಾರತೀಯ ವಾಹನ ತಯಾರಕರು ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಮಾರುತಿ ಸುಜುಕಿ ಬ್ರೆಝಾ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 13, 393 ಕಾರುಗಳನ್ನು ಮಾರಾಟ ಮಾಡಿದ್ದ ಮಾರುತಿ ಸುಜುಕಿ ಈ ವರ್ಷ 14, 918 ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ.
8. 34 ಲಕ್ಷದಿಂದ ಆರಂಭವಾಗುವ ಕಾರು ವಿವಿಧ ಮಾದರಿಯಲ್ಲಿ ಲಭ್ಯವಿದೆ.

7. ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx)
SUV ಮಾದರಿಯ ಕಾರುಗಳಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ ಕಾರು ಮಾರುಕಟ್ಟೆಯಲ್ಲಿ ಹೆಚ್ಚು ಸುದ್ದಿ ಮಾಡುತ್ತಿದ್ದು ಮಾರುಕಟ್ಟೆಯಲ್ಲಿ ಏಳನೇ ಸ್ಥಾನವನ್ನು ಅಲಂಕರಿಸಿದೆ. ಆಕರ್ಷಕ ವಿನ್ಯಾಸ, ಕಡಿಮೆ ನಿರ್ವಹಣೆ ವೆಚ್ಚ, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿರುವ ಫ್ರಾಂಕ್ಸ್ ಕಳೆದ ವರ್ಷ(2023) ಕೇವಲ 9,867 ಕಾರುಗಳನ್ನು ಮಾರಾಟ ಮಾಡಿದ್ದ ಮಾರುತಿ ಸುಜುಕಿ ಈ ವರ್ಷ (2024) 14, 882 ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಮುಂದುವರೆಯುತ್ತಿದೆ.

8. ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift)
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾರುತಿ ಸುಜುಕಿ ಸ್ವಿಫ್ಟ್ ಕಡಿಮೆ ಮಾರಾಟವಾಗಿದ್ದರೂ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಕಳೆದ ವರ್ಷ 15, 311 ಕಾರುಗಳನ್ನು ಮಾರಾಟ ಮಾಡಿದ್ದ ಮಾರುತಿ ಸುಜುಕಿ ಈ ವರ್ಷದ ನವೆಂಬರ್ ವೇಳೆಗೆ 14, 737 ಕಾರುಗಳನ್ನು ಮಾರಾಟ ಮಾಡಿದೆ.

9. ಮಾರುತಿ ಸುಜುಕಿ ವ್ಯಾಗನ್ ಆರ್ (Maruti Suzuki Wagon R)
ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ವ್ಯಾಗನ್ ಆರ್ ಒಂಬತ್ತನೇ ಸ್ಥಾನವನ್ನು ಅಲಂಕರಿಸಿದೆ. ಈ ವರ್ಷ 13, 982 ಕಾರುಗಳನ್ನು ಮಾರಾಟ ಮಾಡಿದೆ, ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ.

10. ಮಹೀಂದ್ರ ಸ್ಕಾರ್ಪಿಯೋ (Mahindra Scorpio)
ಏಳು ಅಥವಾ ಒಂಬತ್ತು ಮಂದಿ ಕುಳಿತು ಪ್ರಯಾಣಿಸಬಹುದಾದ ಮಹೀಂದ್ರಾ ಸ್ಕಾರ್ಪಿಯೊ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನವನ್ನು ಪಡೆದಿದ್ದು, ಇದು ಈ ವರ್ಷದ ನವೆಂಬರ್ ವೇಳೆಗೆ 12,704 ಕಾರುಗಳನ್ನು ಮಾರಾಟ ಮಾಡಿದೆ.

ಟಾಪ್ ನ್ಯೂಸ್

AAP: ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2100 ರೂ.. ಚುನಾವಣಾ ಪೂರ್ವ ಭರವಸೆ

AAP: ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2100 ರೂ… ಕೇಜ್ರಿವಾಲ್ ಘೋಷಣೆ

Keerthy Suresh: ಗೆಳೆಯನ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ; ಇಲ್ಲಿದೆ ಫೋಟೋಸ್..

Keerthy Suresh: ಗೆಳೆಯನ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ; ಇಲ್ಲಿದೆ ಫೋಟೋಸ್..

Sanju Weds Geetha-2: ತೆರೆಗೆ ಬರಲು ಸಿದ್ದವಾಯ್ತು ಸಂಜು ವೆಡ್ಸ್‌ ಗೀತಾ-2

Sanju Weds Geetha-2: ತೆರೆಗೆ ಬರಲು ಸಿದ್ದವಾಯ್ತು ಸಂಜು ವೆಡ್ಸ್‌ ಗೀತಾ-2

6-muddebihala

Muddebihal: ಮುಖ್ಯ ಶಿಕ್ಷಕನ ಶವ ಪತ್ತೆ: ಕೊಲೆ ಶಂಕೆ

Sai Pallavi: ʼರಾಮಾಯಣʼಕ್ಕಾಗಿ ಸಸ್ಯಹಾರಿಯಾದರೆ ಸಾಯಿ ಪಲ್ಲವಿ?: ನಟಿ ಗರಂ ಆಗಿದ್ದೇಕೆ?

Sai Pallavi: ʼರಾಮಾಯಣʼಕ್ಕಾಗಿ ಸಸ್ಯಹಾರಿಯಾದರೆ ಸಾಯಿ ಪಲ್ಲವಿ?: ನಟಿ ಗರಂ ಆಗಿದ್ದೇಕೆ?

Year Ender: 2024 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುದು? ಓದಿ ವರದಿ

Rewind: 2024ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುದು? ಓದಿ ವರದಿ

vijay

Belagavi: ಲಾಠಿ ಪ್ರಹಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಕ್ಷಮೆ ಕೇಳಲಿ: ವಿಜಯೇಂದ್ರ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Year Ender: 10 ಗೆಲುವು.., ಒಂದಷ್ಟು ಸೋಲು..: ಇಲ್ಲಿದೆ ಬಾಲಿವುಡ್‌ ಬಾಕ್ಸಾಫೀಸ್‌ ರಿಪೋರ್ಟ್

Year Ender: 10 ಗೆಲುವು.., ಒಂದಷ್ಟು ಸೋಲು..: ಇಲ್ಲಿದೆ ಬಾಲಿವುಡ್‌ ಬಾಕ್ಸಾಫೀಸ್‌ ರಿಪೋರ್ಟ್

3

Most Searched Movies‌& Shows:ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ಸಿನಿಮಾ ‍ಹಾಗೂ ಶೋಗಳಿವು

1

2024 Year End:ಟೀಮ್‌ ಇಂಡಿಯಾ ವಿಶ್ವಕಪ್‌ ಗೆಲುವು, ರಾಮಮಂದಿರ..ಜಾಗತಿಕ ವಿದ್ಯಮಾನಗಳ ಘಟನೆ

Rewind 2024: What happened in the world of cricket this year? Here’s a look back

Rewind 2024: ಈ ವರ್ಷ ಕ್ರಿಕೆಟ್‌ ಲೋಕದಲ್ಲಿ ನಡೆದಿದ್ದೇನು? ಇಲ್ಲಿದೆ ಹಿನ್ನೋಟ

12

Year Ender: ಮಾಸಿದ ಬದುಕಿನ ಬಣ್ಣ.. ಈ ವರ್ಷ ಇಹಲೋಕ ತ್ಯಜಿಸಿದ ಕನ್ನಡದ ಕಲಾವಿದರಿವರು..

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

8

Manipal: ಜಿಲ್ಲೆಗಿರುವುದು ಒಬ್ಬರೇ ಸರಕಾರಿ ಮನೋವೈದ್ಯರು!

7

Surathkal: ಬೇಡಿಕೆಯಾಗಿಯೇ ಉಳಿದ ಬಸ್‌ ನಿಲ್ದಾಣ!

6

Kadri ಕಂಬಳ-ಕದ್ರಿ ಮೈದಾನ ರಸ್ತೆ ಅವ್ಯವಸ್ಥೆ

5

Kundapura: ಮೊದಲ ಬಾರಿಗೆ ಹೊನಲು ಬೆಳಕಿನ ವ್ಯವಸ್ಥೆಯಲ್ಲಿ ಹೊಸೂರು ಕಂಬಳ

4(1

Koteshwara: ಕೊಡಿ ಹಬ್ಬಕ್ಕೆ ಸಜ್ಜಾಗುತ್ತಿದೆ ಕೋಟಿಲಿಂಗೇಶ್ವರ ದೇಗುಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.