ಹೊಸ ತೇಜಿಗೆ ನಾಂದಿಯಾಗಲಿ ವಿಘ್ನ ವಿನಾಶಕನ ಚತುರ್ಥಿ
Team Udayavani, Aug 22, 2020, 5:01 AM IST
ಮಣಿಪಾಲ: ಭಾದ್ರಪದ ಶುಕ್ಲ ಚತುರ್ಥಿ ಮತ್ತೆ ಬಂದಿದೆ. ಬಾಲಗಂಗಾಧರ ತಿಲಕರು ಸಾರ್ವಜನಿಕವಾಗಿ ವಿಜೃಂಭಣೆಯಿಂದ ಗಣೇಶ ಚತುರ್ಥಿಯ ಆಚರಣೆಯನ್ನು ಆರಂಭಿಸಿದ್ದು ಸಾಂಸ್ಕೃತಿಕ ಮತ್ತು ಧಾರ್ಮಿಕ ಜನಜೀವನಕ್ಕೆ ಹೊಸ ತೇಜಿ, ಚೈತನ್ಯವನ್ನು ಒದಗಿಸುವುದಕ್ಕಾಗಿ. ಅಂದಿನಿಂದ ಇಂದಿನ ವರೆಗೆ ವಿಘ್ನವಿನಾಶಕನ ಚತುರ್ಥಿಯ ಆಚರಣೆಯು ಆ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತ ಬಂದಿದೆ. ದೇಶದ ಉದ್ದಗಲಕ್ಕೆ ಚೌತಿಯ ಸಂಭ್ರಮವು ಹಲವು ವಾರಗಳ ಕಾಲ ಜನಜೀವನಕ್ಕೆ, ಸಂಸ್ಕೃತಿಗೆ ಮಾತ್ರವಲ್ಲದೆ ಆರ್ಥಿಕತೆಗೂ ವೇಗವನ್ನು ನೀಡುವಂಥದ್ದು.
ಪ್ರಸ್ತುತ ಕೊರೊನಾ ಸಂಕಷ್ಟವು ಹಲವು ತಿಂಗಳುಗಳಿಂದ ಹಲವು ಆಯಾಮಗಳಲ್ಲಿ ಜನರ ಬದುಕು, ಆರ್ಥಿಕತೆ, ಆರೋಗ್ಯ, ಸಹಜತೆಗಳನ್ನು ಬಾಧಿಸಿದೆ. ಅದು ಸಂಪೂರ್ಣವಾಗಿ ಮಾಯವಾಗುವ ಲಕ್ಷಣಗಳಿಲ್ಲ. ನಾವೇ ಅದಕ್ಕೆ ಹೊಂದಿಕೊಂಡು ಹೊಸತಾದ ಒಂದು ಜೀವನ ಮಾದರಿಯನ್ನು ರೂಪಿಸಿಕೊಳ್ಳಬೇಕಿದೆ. ನಿಧಾನವಾಗಿ ಆ ಹೊಸ ಸಹಜತೆಯು ನಮ್ಮ ಬದುಕಿನೊಳಕ್ಕೆ ಪ್ರವೇಶ ಪಡೆಯುತ್ತಿರುವುದನ್ನೂ ಇತ್ತೀಚೆಗಿನ ದಿನಗಳಲ್ಲಿ ನಾವು ಗಮನಿಸುತ್ತಿದ್ದೇವೆ. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಕೈ ತೊಳೆದುಕೊಳ್ಳುವುದು ಇತ್ಯಾದಿಗಳನ್ನು ಪಾಲಿಸಿಕೊಂಡೇ ದಿನಚರಿಗಳಲ್ಲಿ ತೊಡಗಿಕೊಳ್ಳುವುದು, ಕಚೇರಿಗಳಲ್ಲಿ ಉದ್ಯೋಗ ನಿರ್ವಹಣೆ, ವ್ಯಾಪಾರ – ವ್ಯವಹಾರಗಳನ್ನು ಕೈಗೊಳ್ಳುವುದು, ಹಬ್ಬಗಳನ್ನು ಸಂಭ್ರಮಿಸುವುದು ನಮಗೆ ರೂಢಿಯಾಗುತ್ತಿದೆ.
ಗಣಪತಿಯು ವಿಘ್ನ ನಿವಾರಕನೆಂದು ಪ್ರಸಿದ್ಧ. ಹಿಂದೆಂದೂ ಕಂಡಿರದ ಕೊರೊನಾದಂತಹ ಸಾಂಕ್ರಾಮಿಕದ ನಡುವೆಯೇ ಸಹಜ ಜನಜೀವನವನ್ನು ಕಂಡುಕೊಳ್ಳಲು, ಆರ್ಥಿಕ ತೇಜಿಯು ಮರುಕಳಿಸಲು, ವ್ಯಾಪಾರ ವ್ಯವಹಾರಗಳ ವೇಗವರ್ಧಿಸಲು ಇಂದಿನ ಗಣೇಶ ಚತುರ್ಥಿಯು ನಾಂದಿಯಾಗಲಿ ಎಂಬುದು ಉದಯವಾಣಿ ಕಳಕಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.