ಗಣಪನ ಮೂರ್ತಿ ಉಚಿತ ವಿತರಣೆ: ಕೇಳೋರಿಲ್ಲ ತಯಾರಕರ ಬವಣೆ


Team Udayavani, Aug 29, 2022, 4:09 PM IST

tdy-16

ಭಾರತೀನಗರ: ಕಳೆದ ಮೂರು ವರ್ಷಗಳಿಂದಲೂ ಕೊರೊನಾದಿಂದಾಗಿ ಕುಂಬಾರರು ತಯಾರಿಸಿದ ಗಣಪತಿ ಮೂರ್ತಿಗಳು ಮಾರಾಟವಾಗದೇ, ಪೆಟ್ಟು ಬಿದ್ದರೆ, ಈಗ, ರಾಜಕೀಯ ಮುಖಂಡರು ಉಚಿತವಾಗಿ ಗಣಪನ ಮೂರ್ತಿಗಳನ್ನು ಹಂಚುತ್ತಿದ್ದು ಸಣ್ಣ ಪ್ರಮಾಣದ ತಯಾರಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈಗಾಗಲೇ ಪ್ಲಾಸ್ಟಿಕ್‌, ಸಿಲ್ವರ್‌ ಪಾತ್ರೆಗಳಿಂದ ಮಣ್ಣಿನ ಮಡಕೆಗಳಿಗೆ ಬೇಡಿಕೆ ಕಡಿಮೆಯಾಗಿದ್ದು ಹಲವರು ಕುಲಕಸುಬಗಳನ್ನೇ ಮರೆಯುತ್ತಿದ್ದಾರೆ. ಇನ್ನು ಗಣಪನ ಹಬ್ಬದಲ್ಲಿ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳೋಣವೆಂದರೂ ಮೂರ್ತಿಗಳ ಉಚಿತ ವಿತರಣೆ ಪೆಟ್ಟು ನೀಡಿದೆ.

ವ್ಯಾಪಾರವಾಗದೇ ಸಂಕಷ್ಟ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು ಹಲವು ರಾಜಕೀಯ ಮುಖಂ ಡರು ಗಣಪನ ಮೂರ್ತಿಗಳನ್ನು ಕಾರ್ಯಕರ್ತರಿಗೆ ಉಚಿತವಾಗಿ ಹಂಚುತ್ತಿದ್ದಾರೆ. ಇದರಿಂದಾಗಿ ಸಣ್ಣ ಪ್ರಮಾಣದ ಮೂರ್ತಿ ತಯಾರಕರಿಗೆ ವ್ಯಾಪಾರವಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ.

ಅಲ್ಪ ಲಾಭ: ಇದಕ್ಕೆ ತಾಜಾ ಉದಾಹರಣೆ ಎಂದರೆ, ಮೆಣಸಗೆರೆ ಗ್ರಾಮದ ವೆಂಕಟೇಶ್‌ಶೆಟ್ಟಿ ಎಂಬವರು ವೃತ್ತಿಯಲ್ಲಿ ಕುಂಬಾರರಾದರೂ ಮಣ್ಣಿನ ಮಡಕೆಗಳನ್ನು ಕೇಳುವವರಿಲ್ಲದೇ, ಗಾರೆ ಕೆಲಸ ಮಾಡುತ್ತಿದ್ದರು. ಗಣಪತಿ ಹಬ್ಬ ಬಂತೆಂದರೆ, ಮೂರ್ತಿಗಳನ್ನು ತಯಾರಿಸುತ್ತಾರೆ. 2 ಅಡಿಯಿಂದ 8 ಅಡಿಯ ಮೂರ್ತಿಗಳನ್ನು ಪತ್ನಿಯೊಂದಿಗೆ ದಿನವಿಡೀ ತಯಾರಿಸುತ್ತಾರೆ. ವರ್ಷಕ್ಕೆ ಇವರು ಸುಮಾರು 100 ರಿಂದ 150 ಗಣಪತಿ ಮೂರ್ತಿಗಳನ್ನು ಮಾತ್ರ ತಯಾರು ಮಾಡುತ್ತಾರೆ. ಇವರು, ತಯಾರಿಸುವ ಗಣಪನ ಮೂರ್ತಿಗಳು ನೈಸರ್ಗಿಕವಾಗಿದ್ದು ಪರಿಸರಕ್ಕೂ ಯಾವುದೇ ಹಾನಿಯಿಲ್ಲ. ನೈಸರ್ಗಿಕ ಗಣಪತಿ ಮೂರ್ತಿಗಳ ಮಾರಾಟದಿಂದಲೇ ಬರುವ ಅಲ್ಪ ಲಾಭದಿಂದ ಬದುಕು ಕಟ್ಟಿಕೊಂಡಿದ್ದಾರೆ. ಮೂರ್ತಿ

ತಯಾರಕರಿಗೆ ಪುಕ್ಕಟ್ಟೆ  ವಿತರಣೆ ಪೆಟ್ಟು : ಮುಂದಿನ ಏಳೆಂಟು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಕೆಲವು ರಾಜಕಾರಣಿಗಳು, ಮುಖಂಡರು, ಸಮಾಜ ಸೇವಕರು ಕ್ಷೇತ್ರದಲ್ಲಿ ಗಣಪತಿ ಮೂರ್ತಿಗಳನ್ನು ಪುಕ್ಕಟ್ಟೆ ನೀಡಲು ಸಿದ್ಧತೆ ಕೈಗೊಂಡಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಗ್ರಾಮದವರು ಗಣಪತಿ ಮೂರ್ತಿಯನ್ನು ಕೂರಿಸಲು ಇಚ್ಚೆ ಪಡು ವಂತಹವರು ಹೆಸರು ನೋಂದಾಯಿಸಿ ಗಣಪತಿ ಮೂರ್ತಿಯನ್ನು ಪಡೆಯಬಹುದಾಗಿದೆ. ಒಂದು ಗ್ರಾಮದಲ್ಲಿ ಎಷ್ಟು ಗಣಪತಿಗಳನ್ನಾದರೂ ಕೂರಿಸಬಹುದು. ಜತೆಗೆ ಅರ್ಕೇಸ್ಟ್ರಾ ವ್ಯವಸ್ಥೆ ಮಾಡಿಕೊಡಲು ನಾಯಕರು ಮುಂದಾಗಿದ್ದಾರೆ. ಇಂತಹ ಸಂಸ್ಕೃತಿಗೆ ನಾವು ಜಾರಿಹೋಗುತ್ತಿದ್ದೇ ವೆಂದು ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಬೆಳವಣಿಗೆಗಳಿಂದ ಸಣ್ಣಕಲಾವಿದರಿಗೆ ದೊಡ್ಡಪೆಟ್ಟು ಬಿದ್ದು ವ್ಯಾಪಾರಕ್ಕೂ ಕಂಟಕವಾಗುತ್ತಿರುವುದು ಸುಳ್ಳಲ್ಲ.

ಪರಿಸರ ಸ್ನೇಹಿ ಗಣಪತಿಯನ್ನು ಕಳೆದ 3 ವರ್ಷಗಳಿಂದ ತಯಾರು ಮಾಡಲು ನನ್ನ ಪತ್ನಿಯೊಂದಿಗೆ ಮುಂದಾಗಿದ್ದೇನೆ. ಆದರೆ, ಕ್ಷೇತ್ರದಲ್ಲಿ ಕೆಲವು ನಾಯಕರು ಪ್ರತಿ ಗ್ರಾಮಗಳಿಗೂ ಉಚಿತವಾಗಿ ಗಣಪತಿಮೂರ್ತಿಗಳನ್ನು ನೀಡುತ್ತಿರುವುದರಿಂದ ನಮ್ಮಂತಹ ಸಣ್ಣ ಕಲಾವಿದರಿಗೆ ದೊಡ್ಡ ಪೆಟ್ಟು ಬೀಳುತ್ತಿದೆ. – ವೆಂಕಟೇಶ್‌ಶೆಟ್ಟಿ, ಮೂರ್ತಿ ತಯಾರಕ

 

– ಅಣ್ಣೂರು ಸತೀಶ್‌

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-14

ಹಬ್ಬದ ಮೂಡ್‌ನ‌ಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

tdy-7

ಗಂಗಾವತಿಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಸಡಗರದ ಗಣೇಶ ಚತುರ್ಥಿ ಆಚರಣೆ

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.