ಗಣೇಶೋತ್ಸವ: ಹೂವು, ಕಬ್ಬು ಖರೀದಿ; ಪುತ್ತೂರು/ಸುಳ್ಯ ತಾಲೂಕುಗಳಲ್ಲಿ ಮಾರುಕಟ್ಟೆ ಚೇತರಿಕೆ
Team Udayavani, Aug 21, 2020, 10:51 PM IST
ಪುತ್ತೂರಿನ ಕೋರ್ಟ್ ರಸ್ತೆ ಬಳಿ ಹೂವಿನ ಸ್ಟಾಲ್.
ಪುತ್ತೂರು/ಸುಳ್ಯ: ಕೋವಿಡ್ ಕಾರಣದಿಂದ ಈ ಬಾರಿ ಸರಳವಾಗಿ ಗಣೇಶೋತ್ಸವ ಆಚರಣೆ ಹಿನ್ನೆಲೆಯಲ್ಲಿ ಪುತ್ತೂರು-ಸುಳ್ಯದ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿಯಲ್ಲಿ ನಾಗರಪಂಚಮಿ, ಶ್ರೀಕೃಷ್ಣ ಜನ್ಮಾಷ್ಟಮಿಗಿಂತ ಅಲ್ಪ ಚೇತರಿಕೆ ಕಂಡಿತ್ತು.
ಹೂವು, ಕಬ್ಬು, ಮೂಡೆ, ಸಿಯಾಳ ಸಹಿತ ಅಗತ್ಯ ವಸ್ತುಗಳ ಸಂಗ್ರಹ ಉಭಯ ಪೇಟೆಗಳ ಅಲ್ಲಲ್ಲಿ ಕಂಡು ಬಂದರೂ ಖರೀದಿಸುವ ಗ್ರಾಹಕ ಪ್ರಮಾಣ ತುಸು ಕಡಿಮೆ ಇತ್ತು. ಮನೆ ಮನೆಗಳಲ್ಲಿ ಸರಳ ಶ್ರೀ ಗಣೇಶೋತ್ಸವ ಆಚರಿಸುವ ನಿಟ್ಟಿನಲ್ಲಿ ಅಗತ್ಯ ವಸ್ತುಗಳನ್ನು ಮಾತ್ರ ಖರೀದಿಸಿದ್ದು ಕಂಡು ಬಂತು.
ಹೂವಿನ ಮಾರುಕಟ್ಟೆ ಮಾತ್ರವಲ್ಲದೆ ನಗರದ ಪ್ರಮುಖ ಜನಸಂದಣಿ ಪ್ರದೇಶ ಗಳಲ್ಲಿ ಹೂವಿನ ಸ್ಟಾಲ್‌ಗಳು ಕಂಡು ಬಂದಿತ್ತು.
ಅಗತ್ಯ ವಸ್ತು ಖರೀದಿ
ಕಡಬ: ಕೊರೊನಾ ಆತಂಕದ ಕಾರಣದಿಂದಾಗಿ ಈ ಬಾರಿ ಸರಳ ರೀತಿಯಲ್ಲಿ ಗಣೇಶೋತ್ಸವ ಆಚರಿಸಲಾಗುತ್ತಿರುವುದರಿಂದ ಕಡಬ ಪೇಟೆಯಲ್ಲಿ ಹಬ್ಬದ ಖರೀದಿಯ ಭರಾಟೆ ತುಸು ಕಡಿಮೆ ಇತ್ತು. ಸಾರ್ವಜನಿಕವಾಗಿ ವಿಜೃಂಭಣೆಯ ಗಣೇಶೋತ್ಸವಗಳು ಇಲ್ಲದೆ ಇರುವುದರಿಂದಾಗಿ ಹೂವಿನ ವ್ಯಾಪಾರಿಗಳಿಗೂ ಹೆಚ್ಚಿನ ವ್ಯಾಪಾರ ಇರಲಿಲ್ಲ. ಸರಳವಾಗಿ ಮನೆಗಳಲ್ಲಿ ಹಬ್ಬದ ಆಚರಣೆ ಮಾಡುವ ಜನರು ಮಾತ್ರ
ತಮ್ಮ ಅಗತ್ಯಕ್ಕೆ ಬೇಕಾದಷ್ಟು ಹೂವು-ಹಣ್ಣುಗಳನ್ನು ಖರೀದಿಸುತ್ತಿರುವುದು ಕಂಡುಬಂತು. ಹೂವುಗಳ ಧಾರಣೆಯಲ್ಲಿಯೂ ಹೆಚ್ಚಿನ ಏರಿಕೆ ಇರಲಿಲ್ಲ. ತರಕಾರಿ ಮಾರುಕಟ್ಟೆಯಲ್ಲಿಯೂ ಗ್ರಾಹಕರು ಹಬ್ಬದ ಖರೀದಿ ಮಾಡಿದರು. ಆದರೂ ತರಕಾರಿ ಧಾರಣೆಯಲ್ಲಿ ಮಾತ್ರ ಏರಿಕೆ ಕಂಡುಬಂದಿದೆ.
ಒಂದು ಕಬ್ಬಿಗೆ 50 ರೂ.
ಕಬ್ಬಿನ ರಾಶಿ ಬಂದಿದೆ. ಗ್ರಾಹಕರು ಹೆಚ್ಚಿಲ್ಲ. ಒಂದು ಕಬ್ಬಿಗೆ 50 ರೂ.ನಂತೆ ಮಾರಾಟ ಮಾಡುತ್ತಿದ್ದೇವೆ.
-ಸೀತಾ, ವ್ಯಾಪಾರಿ, ಪುತ್ತೂರು
ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ
ಚೌತಿ ಸಂದರ್ಭ ಹೂವಿಗೆ ಸಾಕಷ್ಟು ಬೇಡಿಕೆ ಇರುತ್ತಿತ್ತು. ಕೋವಿಡ್ ಕಾರಣದಿಂದ ಕಡಿಮೆ ತಂದಿದ್ದೇವೆ. ಬೇಡಿಕೆ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ.
-ಮಹೇಶ್, ವ್ಯಾಪಾರಿ, ಸುಳ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.