ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ
Team Udayavani, Aug 31, 2022, 3:15 PM IST
ಕುಷ್ಟಗಿ: ಕುಷ್ಟಗಿ ಪಟ್ಟಣದಲ್ಲಿ ಹಿಂದೂ- ಮುಸ್ಲಿಂ ಬಾಂಧವರು ಸೌಹಾರ್ದಯುತವಾಗಿ ಆಚರಿಸಿಕೊಂಡು ಬಂದಿರುವ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ.
ವಾಣಿಜ್ಯ ವಹಿವಾಟು ಮಾರುಕಟ್ಟೆಯ ಕುಷ್ಟಗಿಯ ಮೂಲ ಕೇಂದ್ರವಾಗಿದ್ದ ಸಂದರ್ಭದಲ್ಲಿ ಹಿಂದೂ- ಮುಸ್ಲಿಂ ಗೆಳೆಯರ ಬಳಗದವರು ಗಣೇಶೋತ್ಸವ ಆರಂಭಿಸಿದ್ದರು.1982 ರಲ್ಲಿ ಪ್ರಥಮ ಬಾರಿಗೆ ಗಣೇಶೋತ್ಸವ ಆರಂಭಿಸಿದ್ದು ನಿರಂತರವಾಗಿ ಆಚರಿಸಿಕೊಂಡು ಹಿಂದು-ಮುಸ್ಲಿಂ ಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದೆ.
ಅತಿವೃಷ್ಟಿ, ಅನಾವೃಷ್ಟಿ, ಇತ್ತೀಚಿನ ಲಾಕಡೌನ್ ಸಂದರ್ಭದಲ್ಲಿ ತಪ್ಪದೇ ಆಚರಿಸಿಕೊಂಡು ಬಂದಿರುವುದು ಇತಿಹಾಸ. ಪ್ರತಿವರ್ಷವು ಪ್ರತಿಷ್ಠಾಪಿತ ಗಣೇಶ ಮೂರ್ತಿ ಒಂದು ವರ್ಷದಂತೆ ಇನ್ನೊಂದು ವರ್ಷದಲ್ಲಿ ವಿಭಿನ್ನವಾಗಿ ವಿವಿಧ ಅವತಾರಗಳಲ್ಲಿ ವೈವಿದ್ಯಮಯವಾಗಿ ಆಚರಿಕೊಂಡು ಬಂದಿರುವುದು ವಿಶೇಷ.
ಹಿಂದಿನ ಕೆಲ ವರ್ಷಗಳ ಹಿಂದೆ ತೆಂಗಿನ ಕಾಯಿ, ಯಡೆಯೂರು ಸಿದ್ದಲಿಂಗೇಶ, ಪುಟ್ಟರಾಜ ಕವಿ ಗವಾಯಿಗಳ ಮೂರ್ತಿಗಳಿಂದ ಹಳೆ ಬಜಾರ ಗಣಪ ಎಂದರೆ ಪ್ರತಿ ವರ್ಷ ಏನಾದ್ರೂ ವಿಶೇಷ ಇರಲೇಬೇಕು. ಅದೇ ಪ್ರೀತಿ, ಅದೇ ವಿಶ್ವಾಸ ಮೇಳೈಸಿದ್ದು ಅದರಲ್ಲೂ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆಯಲ್ಲು ವಿಶೇಷತೆ ಉಳಿಸಿಕೊಂಡಿದೆ.
ಈ ಬಾರಿ 40ನೇ ವರ್ಷದ ಜ್ಞಾಪಕಾರ್ಥವಾಗಿ ನೇಗಿಲ ಯೋಗಿ ರೈತ ಸ್ವರೂಪದಲ್ಲಿ ಗಣೇಶ ಮೂರ್ತಿ ಅವತಾರ ಎತ್ತಿದ್ದಾನೆ. ಜೋಡೆತ್ತುಗಳೊಂದಿಗೆ ಗಣೇಶ ಬೇಸಾಯ ಮಾಡುತ್ತಿರುವ ಗಣೇಶ ರೈತ ಸಂಕುಲವನ್ನು ಪ್ರತಿನಿಧಿಸಿರುವುದು ಗಮನಾರ್ಹ ಎನಿಸಿದೆ.
ಶ್ರೀಧರ ಬಾಬು ಘೋರ್ಪಡೆ, ಕುಡತಿನಿ ಬಸವರಾಜ, ಅನ್ವರ್ ಅತ್ತಾರ, ಸೋಮಶೇಖರ ಮಳಿಮಠ, ಬಂದಗಿಸಾಬ್ ಕಾಯಗಡ್ಡಿ, ಕಾಶಪ್ಪ ಚಟ್ಟೇರ್, ಶಾಂತಯ್ಯ ಸರಗಣಾಚಾರ, ಈಶಪ್ಪ ಬಳ್ಳೊಳ್ಳಿ ಮೊದಲಾದ ಸ್ನೇಹಿತ ಗಣೇಶೋತ್ಸವ ಆಚರಣೆ ಪರಂಪರೆಯನ್ನು ಸಂಪ್ರದಾಯ ಬದ್ದವಾಗಿ ಆಚರಿಸುವ ಮೂಲಕ ಭಾವೈಕ್ಯತೆ ಸಂಭ್ರಮ ಬೆಸೆದುಕೊಂಡಿದೆ.
-ಮಂಜುನಾಥ ಮಹಾಲಿಂಗಪುರ ಕುಷ್ಟಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.